ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ಗಿನ್ನಿಸ್ ದಾಖಲೆ ..!!...:(((....(ಹಾಸ್ಯ)
ಬೆಳಗ್ಗೆ ಎದ್ದು ಅಕ್ಕ ಪಕ್ಕದ ಮನೆಯ ಹಯವದನ ರಾವ್- ಗುಲ್ಲಯ್ಯ-ದೊಡ್ಡಣ್ಣ ಅವರು ತಮ್ಮ ದೈನಂದಿನ ಪ್ರಾತ ಕಾಲದ ಜಾಗಿಂಗ್ ಹೋಗಿ ವಾಪಾಸು ಲೋಕಾಭಿರಾಮವಾಗಿ ಮಾತಾಡುತ್ತ ಬರುವಾಗ ದಾರಿಯಲ್ಲಿ ಜನರ ರಶ್ಯೋ... ರಶ್ಯು....!!
ಕೈನಲ್ಲಿ ಚೀಲಗಳು....
ಹಯವದನ ರಾವ್-
ಗುಲ್ಲಯ್ಯ-
ದೊಡ್ಡಣ್ಣ
ಮೂವರೂ ಹಿರಿಯ ನಾಗರೀಕರು , ಸರಕಾರೀ ನೌಕರಿಯಿಂದ ನಿವೃತ್ತರಾಗಿ ಕೈ ತುಂಬಾ ಬರುವ ಪಿಂಚಣಿಯಲ್ಲಿ ಆರಾಮವಾಗಿ ಜೀವನ ಸಾಗಿಸುತ್ತಿರುವವರು..ಮೂವರ ಮಕ್ಕಳು ವಿದ್ಯಾವಂತರಾಗಿ ನೌಕರಿ ಹಿಡಿದು ಮದುವೇನೂ ಆಗಿ ಮಕ್ಕಳೂ ಇವೆ... ಬೆಳಗ್ಗೆ ಜಾಗಿಂಗ್ ಮಾಡೋದು 'ಜಗದ' ಎಲ್ಲ ವಿಷಯದ ಕುರಿತು ಮಾತಾಡೋದು ಚರ್ಚೆ ಮಾಡೋದು ಕೊನೆಗೆ ಅಡಿಗ ಹೋಟೆಲ್ ಗೆ ಹೋಗಿ ಕಾಫೀ ಕುಡಿದು ಮನೆಗೆ ಬಂದು ಅಂದಿನ ಪತ್ರಿಕೆ ತೆಗೆದು ಓದಿ , ತಿಂಡಿ ತಿಂದು ಕಂಪ್ಯೂಟರ್ ಆನ್ ಮಾಡಿ 'ಸಂಪದ' ನೋಡೋದು ಅದರಲ್ಲಿ ಬರಹ ಬರೆಯೋದು ಪ್ರತಿಕ್ರಿಯಿಸೋದು ಈ ಮೂವರ ರೂಡಿಗತ ಅಭ್ಯಾಸ...
ಈ ಮೂವರ ಇನ್ನೊಂದು ವಿಶೇಷತೆ ಏನು ಗೊತ್ತೇ...???
ಮೂವರಲ್ಲಿ ಯಾರೂ ಚಿಕ್ಕಾಸೂ ಬಿಚ್ಹೊರಲ್ಲ..
ಅರ್ಥಾತ್ ಜಿಪುಣಾಗ್ರೇಸರು..!!
ಜನರ ಆ ಪರಿ ರಶ್ಹ್ಯು ಕೈನಲ್ಲಿ ಚೀಲಗಳು ಕಂಡು ತಮ್ಮಲ್ಲೇ ಹೇಳಿಕೊಂಡರು:
೨೦೧೨ ಹತ್ತಿರ ಬರುತ್ತಿದ್ದಂತೆ ದಿನವೂ ಭಯದಲ್ಲೇ ಜೀವನ ಸಾಗಿಸುತ್ತ 'ಏನೂ' ಆಗೋಲ್ಲ ಬಿಡು ಅಂತ ಸಮಾಧಾನ ಪಡುತ್ತಾ ಬದುಕುತ್ತಿರುವರು ಜನರು.. ಒಂದೆಡೆ
ಇವರಿಗೆ ಆ ಚಿಂತೆಯೇ ಇಲ್ಲ..!!
ಕೇಂದ್ರ ಸರಕಾರದವರು ನಿವೃತ್ತರ ಪಿಂಚಣಿ ಖಾತೆ ಗೆ ಇನ್ನು ಹೆಚ್ಚಿನ ಬಡ್ಡಿ ಕೊಡುವರು ಎಂಬ 'ಸಿಹಿ ಸುದ್ಧಿ' ಏನಾರ ಈ ಬೆಳ್ಳಂಬೆಳಗ್ಗೆ ಜಾಹೀರಾಯಿತೆ?
ಅದಿರಲಿಕ್ಕಿಲ್ಲ, ಅದೇ ಆಗಿದ್ದರೆ ಆ ಟೀ ವೀ ೯ ನವರು ಆ ಸುದ್ಧಿಯನ್ನ ಸ್ಫೋಟಿಸಿಬಿಡುತ್ತಿದ್ದರಲ್ಲ.. .:())
ಬನ್ನಿ ಹತ್ತಿರ ಹೋಗಿ ಕೇಳೋಣ ಎಂದು ಮೂವರು ಲಗುಬಗೆಯಿಂದ ಹೆಜ್ಜೆ ಹಾಕಿದರು..
ತಮಗೆದುರಾಗಿ ಕೈ ನಲ್ಲಿ ಚೀಲ ಹಿಡಿದು ಓಡುತ್ತ ಬರುತ್ತಿದ್ದ ಮಧ್ಯ ವಯಸ್ಕ ವ್ಯಕ್ತಿಯನ್ನ್ ಕೈ ಹಿಡಿದು ನಿಲ್ಲಿಸಿ , ಯಾಕೆ ಈ ಧಾವಂತ? ಏನು ಈ ಜನರ ರಶ್ ಗೆ ಕಾರಣ ? ಎಂದು ಪ್ರಶ್ನಿಸಿದರೆ
ಅವನು ಕೈ ಬಿಡಿಸ್ಕೊಂದು ಇವರನ್ನ ವಿಚಿತ್ರವಾಗಿ ನೋಡಿ, ಸುದ್ಧಿ ಕೇಳಿಲ್ಲವೇ? ಟೀ ವೀ ನೋಡಿಲ್ಲವೇ?
ಅನ್ನುತ್ತಲೇ ಓಡಿ ಹೋದ..!!
ಇದೇನು ಧಾವಂತ? ಏನು ಜನಾನಪ್ಪ..!! ಸ್ವಲ್ಪ ನಿಂತು ಮಾತಾಡಲೇ ಸಮಯವಿಲ್ಲವೇ?
ಇನ್ನೊಬ್ಬರು ಎದುರು ಬಂದಾಗ ಅವರನ್ನು ನಿಲ್ಲಿಸಿ ಕೇಳಿದಾಗ,
ದೇಶದಲ್ಲಿ ಈರುಳ್ಳಿ ದಾಸ್ತಾನು ಕಡಿಮೆ ಆಗಿದೆಯಂತೆ....!!
ನಾಳೆಯೊಳಗೆ ಕೇ ಜೀ ಈರುಳ್ಳಿ ೧೦೦೦ ರುಪಾಯೀ ತಲುಪಬಹುದಂತೆ :(((
ಅದಕ್ಕೆ ಇವತ್ತು ಮಾರುಕಟ್ಟೆಗೆ ಹೋಗಿ ಸಾಧ್ಯ ಆದಸ್ತು ಈರುಳ್ಳಿ ತರುವೆ.. ಅನ್ನುತ್ತಲೇ ಹೋದ..
ಎಂಥ ಕಾಲ ಬಂತಪ್ಪ..!!
ಸಿಹಿ ಸುದ್ಧಿ ಅಂದರೆ ಕಹಿ ಸುದ್ಧಿ ಬಂತೆ..?? ಅಂತಾ
ಮೂವರೂ ಚಿಂತಾಕ್ರಾಂತರಾಗಿ ತಮ್ಮ ತಮ್ಮ ಮನೆಗೆ ಹೋದರು...
ಐದೇ ನಿಮಿಷದಲ್ಲಿ ಜೇಬು ತುಂಬಾ ಕಾಸು ಇಟ್ಟುಕೊಂಡು ಕೈ ಚೀಲ ಸಮೇತ ರೇಸ್ ಗೆ ಬಿದ್ದವರಂತೆ ಮಾರುಕಟ್ಟೆಗೆ ಹೋಗಿ ಅಲ್ಲಿ ನೋಡಿದರೆ....????
ಇರುವೆ ನುಸುಳಲು ಆಗದಸ್ಟು ಜನ..!!
ಒಹ್..!! ದೇವರೇ ಒಂದು ಕೇ ಜೀ ಈರುಳ್ಳಿ ಆದರೂ ಸಿಗುವ ಹಾಗೆ ಮಾಡಪ್ಪಾ.. !!
ಹಾಗೂ ಹೀಗೂ ಒಂದು ಕಡೆ ನಿಂತು ಕೇ ಜೀ ಎಷ್ಟು? ಎಂದಾಗ, ಅಂಗಡಿಯವನು ಬರೀ ೭೦೦ ರುಪಯ್ಯೀ ಸ್ಸಾರ್ ಅಂದಾಗ, ಜೀವವೇ ಬಾಯಿಗೆ-ಅಲ್ಲಲ್ಲ ಕಾಸು ಕೊಡುವ ಕೈಗೆ ಬಂದ ಹಾಗಾಯ್ತು..:()))
ಅಲ್ಲಪ್ಪ ನಾ ಕೇಳಿದ್ದು ಒಂದು ಕೇ ಜಿ ಗೆ ಒಂದು ಮೂಟೆಗೆ ಅಲ್ಲ..!! ಎನ್ನಲು, ರ್ರೀ ಹಿರೀರೆ ನಾ ಹೇಳಿದ್ದು ಕೇ ಜಿ ರೇಟೆ- ಮೂಟೆ ರೇಟು ಅಲ್ಲ :(((
ನಂಗೆ ನಂಗೆ ಅಂತ ಜನ ಮುಗಿ ಬಿದ್ದು ಈರುಳ್ಳಿಯನ್ನು ಕಣ್ಣೀರು ಸುರಿಸುತ್ತ ತೆಗೆದುಕೊಳ್ಳುವಾಗ, ಜೇಬಲ್ಲಿ ಕಾಸು ಇಟ್ಟುಕೊಂಡು ಈರುಳ್ಳಿ ಹೊಯ್ಯದೆ ಇದ್ರೆ ನನ ಪ್ರೆಸ್ಟೀಜ್ ಗೆ ಅವಮಾನ..!! ಅಂತ ಯೋಚಿಸುವಾಗಲೇ ಬಹುತೇಕ ಅಂಗಡಿಗಳಲ್ಲಿ ಈರುಳ್ಳಿ ದಾಸ್ತಾನು ಖಾಲಿ ಆಗಿ ಹೋದಾಗ ದಾಸ್ತಾನು ಇರುವ ಕಡೆ ಜನರ ರಸ್ಶ್ಯು ಹೆಚ್ಚಾಯಿತು..
ಯೋಚನೆಯಲ್ಲೇ ನಿರತರಾಗಿದ್ದ ಮೂವರಿಗೂ ಈಗ ಒಂದೇ ಯೋಚನೆ ಕನಿಸ್ಟ ೧೦ ಗ್ರಾಂ ಈರುಳ್ಳಿಯಾದರೂ ಒಯ್ಯದಿದ್ದರೆ ...???
ಹಂಗೂ ಹಿಂಗೂ ಕಷ್ಟ ಪಟ್ಟು ಮೈ ಕೈ ನೋವು ಮಾಡಿಕೊಂಡು ಒಂದೊಂದು ಕೇ ಜಿ ಈರುಳ್ಳಿ ಖರೀದಿಸಿ, ಹೊರಗೆ ಬಂದು ಉಸ್ಸಪ್ಪ ...!! ಅಂತ ನಿಟ್ಟುಸಿರು ಬಿಟ್ಟು, ಅಲ್ಲಿ ಕಟ್ಟೆ ಒಂದರ ಮೇಲೆ ಕುಳಿತು ಜೇಬಲ್ಲಿ ಇನ್ನು ಎಷ್ಟು ಕಾಸು ಉಳಿದಿದೆ ಅಂತ ನೋಡಲು ಮಿ: ಹಯವದನ ರಾವ್ ಅವರು ಕೈ ಹಾಕಿದರೆ ......?????
ಅವರ ದುಗುಡ ಕಂಡು ಗುಲ್ಲಯ್ಯ ಮತ್ತು ದೊಡ್ಡಣ್ಣ ಏನಾಯ್ತು? ಎಂದು ಕೇಳಿದಾಗ ತಮ್ಮ ಹರಿದ ಜೇಬು ತೋರಿಸಿದರು....
ಆಗ ಗುಲ್ಲಯ್ಯ ಮತ್ತು ದೊಡ್ಡಣ್ಣ ನಗುತ್ತ ಇರಲು ಪೆಚ್ಚಾದರೂ ಹಯವದನ ರಾವ್, , ಅದಕ್ಕೆ ನೋಡಿ ಯಾವಾಗಲೂ ಹುಷಾರ್ ಆಗಿರಬೇಕು , ನಾ ನೋಡಿ ಯಾವಾಗಲೂ ಹೊಳಗದೆಯೇ ಕಾಸು ಇಕ್ಕೊದು ಅಂತ ತಮ್ಮ ಬನಿಯನ್ ಹೊಳ್ಗಡೆಯ ಸೀಕ್ರೆಟ್ ಜೇಬು ಮುಟ್ಟಿದರು ಗುಲ್ಲಯ್ಯ ...??
ಏನಿದೆ ಅಲ್ಲಿ...???
ಕ್ಲೀನ್ ಕೃಷ್ಣಪ್ಪ ..!!
ಅವರ ಪೆಚ್ಚಾದ ಮುಖ ನೋಡಿದ ಹಯವದನ ರಾವ್ ಮತ್ತು ದೊಡ್ಡಣ್ಣ ಅವರಿಗೆ ಗೊತ್ತಾಯ್ತು 'ಏನೋ' ಆಗಿದೆ..
ಈಗ ಅನುಮಾನ ಬಂದು ದೊಡ್ಡಣ್ಣ ತಮ್ಮ ಚಿಕ್ಕ ಬ್ಯಾಗಿಗೆ ಕೈ ಹಾಕಿದರೆ ಅಲ್ಲಿ..???
ಒಂದು ಈರುಳ್ಳಿ.....:()))
ಜನರ ರಶ್ಹ್ಯು ಹಲವು ಜೇಬು ಗಳ್ಳರಿಗೆ ವರವಾಗಿ .......:())))))
ಮೂವರ ಜೇಬನ್ನು ನೀಟ್ ಆಗಿ ಕತ್ತರಿಸಿ ಕಾಸು ಎಗರಿಸಿದ್ದರು...
:((((]
:((((
:(((({
ಪೆಚ್ಚಾಗಿ- ಆದರೂ ಮನದಲ್ಲಿ ನನ್ನೊಬ್ಬನದೆ ಅಲ್ಲವಲ್ಲ... ಅವನದೂ ಹೋಗಿದೆ..!! ಅಂತ ಪೆಕರು ನಗೆ ನಗುತ್ತ ಇರಲು, ಹೊರ ಬಂದ ಜನರೆಲ್ಲಾ 'ಸಾಮೂಹಿಕ' ಜೇಬು ಖಾಲಿ ಗೆ ಒಳಗಾಗಿದ್ದರು ಅಂತ ಗೊತ್ತಾಯ್ತು.. ಎಲ್ಲರಿಗೂ ಒಂದೇ ಸಮಾಧಾನ- ನನ್ನೊಬ್ಬನದೆ ಅಲ್ಲವಲ್ಲ, ಅವರದೂ ಹೋಗಿದೆ..:())
ಮನೆಗೆ ಹೋಗುವಾಗ ಎಲ್ಲರ ಮನದಲ್ಲಿ ಮೌನವೇ ಮನೆ ಮಾಡಿತ್ತು,....:()))
ಮನೆಗೆ ಹೋಗಿ ಕೈ ಚೀಲ ಕೊಟ್ಟು ಕೈ ಕಾಲು ತೊಳೆದು ಕಾಫೀ ಕುಡಿದು ಟೀ ವೀ ಹಾಕಿದರೆ ಅಲ್ಲಿ ಟೀ ವೀ ೯ ನಲ್ಲಿ ಸ್ಫೋಟಕ ಸುದ್ಧಿ.... ಎಂಬಲ್ಲಿ ಬರುತ್ತಿದ್ದುದ್ ನೋಡಿ ತಮ್ಮ ತಮ್ಮ ಮನೆಯಲ್ಲಿ ಕುಳಿತು ಟೀ ವೀ ನೋಡುತ್ತಿದ್ದ ಈ ಮೂವರೂ ಮತ್ತು ಮಹಾನಗರದ ಇನ್ನಸ್ಟು ಜನ
ಕುಳಿತಲ್ಲೇ ಮಿಸುಕಾಡಿದರು, ತಮ್ಮನ್ನ ತಾವೇ ಹಳಿದುಕೊಂಡರು...
ಅಲ್ಲಿ ಬರುತ್ತಿದ್ದ ಸ್ಫೋಟಕ ಸುದ್ಧಿ ಏನು????
ಮಹಾನಗರದಲ್ಲಿ ಜನರಿಗೆ 'ಸುಳ್ಳು ಸುದ್ಧಿ' ಹಬ್ಬಿಸಿ ಈರುಳ್ಳಿ ರೇಟು ಹೆಚ್ಚಿಸಿದ 'ಗಿನ್ನಿಸ್' ವೀರ.......!!
ಈ ಸುದ್ಧಿ ನಂತರ ನಮ್ಮ ಈ ಬಗೆಗಿನ ವಿಶೇಷ ಕಾರ್ಯಕ್ರಮ ನೋಡಿ 'ಇಂಗು ತಿಂದ ಮಂಗ :(('
ಆ ನಂತರ ತಿಳಿದು ಬಂದದ್ದು :
ಈ ಸದರಿ ಗಿನ್ನಿಸ್ ವೀರ -ಹಿಂದೆಯೊಮ್ಮೆ ಇದೇ ಈರುಳ್ಳಿ ವಿಷಯದಲ್ಲಿ ಮುಂಬೈನಲ್ಲಿ -ದಿಲ್ಲಿಯಲ್ಲಿ ಈರುಳ್ಳಿ ರೇಟು ಹೆಚ್ಚಾಗುವಂತೆ ಸುಳ್ಳು ಸುದ್ಧಿ ಹಬ್ಬಿಸಿ , ವ್ಯಾಪಕ ರಶ್ ಆಗಿ ಲೋಡುಗಟ್ಟಲೆ ಈರುಳ್ಳಿ ಮಾರುಕಟ್ಟೆಯಿಂದ ನಾಪತ್ತೆ ಆಗಿ ಕಳ್ಳ ಮಾರುಕಟ್ಟೆ ಮತ್ತು ದಲ್ಲಾಳಿಗಳ ಗೋದಾಮು ಸೇರಿ ಕೆಲವು ಜನ ದುಬಾರಿ ರೇಟು ಕೊಟ್ಟು ೧೦-೫೦-೧೦೦ ಗ್ರಾಂ ಈರುಳ್ಳಿ ಖರೀದಿಸ ಒಯ್ದು ತಮ್ಮ ಮನೆಯಲ್ಲಿ ಗುಪ್ತ ನಿಧಿ ಹೂತು ಇಡುವ ಹಾಗೆ ಇಟ್ಟು, ಮನೆಗೆ ಬಂದವರು ಎಲ್ಲಿ ಈರುಳ್ಳಿ ಕೇಳಲೇ ಬಂದಿರುವರೋ? ಅಂತ ಭಯ ಪಡುತ್ತಲೇ ಸಾಗ ಹಾಕಿದ್ದು ಉಂಟು..!!
ಆ ಮಧ್ಯೆ ಜನರ ಈ ರಶ್ಯು - ಹಾಹಾಕಾರ - ಈರುಳ್ಳಿ ಧಂಗೆ ಕಂಡು ಸರ್ಕಾರ ಥಟ್ಟನೆ ಕುಂಬಕರ್ಣ ನಿದ್ದೆಯಿಂದ ಎಚ್ಚೆತ್ತು ಈ ಬಗ್ಗೆ ತನಿಖೆ ನಡೆಸುವ ಜಾವಬ್ಧಾರಿಯನ್ನ ಸೀ ಬೀ ಆಯ ನವರಿಗೆ ವಹ್ಸಿತ್ತು , ಅವರು ಎಲ್ಲೆಡೆ ೧೦- ೫೦-೧೦೦ ಗ್ರಾಂ ಈರುಳ್ಳಿ ಹೊಂದಿದ್ದವರ ಮಾಹಿತಿಯನ್ನ ಗುಟ್ಟಾಗಿ ಕಲೆ ಹಾಕಿ ಧಿಡೀರ್ ಧಾಳಿ ಅದೂ ಮಧ್ಯ ರಾತ್ರಿ- ಬೆಳ್ಳಂಬೆಳಗ್ಗೆ ನಡೆಸಿ ೧೦-೫೦-೧೦೦ ಗ್ರಾಂ ಈರುಳ್ಳಿ ವಶ ಪಡಿಸಿಕೊಂಡು ಪೇಪರ್ನಲ್ಲಿ ಮಿಂಚಿದ್ದರು, ಬಂಧನಕ್ಕೆ ಒಳಗಾದವರು ಕಳ್ಳ ಮಾಲು -ಧಂಗೆಗೆ ಪ್ರಚೋದನೆ ಕೇಸಿನಡಿ ಶ್ರೀ ಕೃಷ್ಣ ಜನ್ಮ ಸ್ಥಾನ ಸೇರಿ ೧-೨-೩- ..ಅಂತ ಎಣಿಸುತ್ತಿದ್ದರು ...!!ಆದರೆ ಅಪ್ಪಿ ತಪ್ಪಿಯೂ ಎಲ್ಲಿಯೂ ಯಾವುದೇ ಆಡಳಿತ ಪಕ್ಷ- ಮತ್ತು ವಿರೋಧ ಪಕ್ಷದ ಯಾವೊಬ್ಬ ಮಂತ್ರಿಯೂ ಶಾಸಕನೂ ಅವರ ಹಿಮ್ಬಾಲಕರೂ ಸಿಕ್ಕಿ ಹಾಕಿಕೊಳ್ಳಲಿಲ್ಲ..:(((
ಅಷ್ಟರ ಮಟ್ಟಿಗೆ ಆಡಳಿತ -ವಿರೋಧ ಪಕ್ಷದವರು ನೀ ಎಂಗಾದರೆ- ನಾ ನಿಮಗೆ ಅಂತ ಅದ್ಭುತ ಹೊಂದಾಣಿಕೆ ಮಾಡಿಕೊಂಡಿದ್ದರು..!!
ಆಮೇಲೆ ಬೆಲೆಯೂ ನಿಯಂತ್ರಣಕ್ಕೆ ಬಂದು, ಮಾರುಕಟ್ಟೆಗೆ ಈರುಳ್ಳಿ ದಾಸ್ತಾನು ಬಂತು ಎನ್ನಿ.. ಈ ಮಧ್ಯೆ ಈರುಳ್ಳಿ
ರೇಟ್ ಇನ್ನು ಹೆಚ್ಚಾಗಬಹುದ . ಆದೀತು ಅಂತ ಅದ್ಯಾವುದೋ 'ಜಾತಕ ಪಕ್ಷಿ' ತರಹ ಕಾಯುತ್ತ ಕಾಯುತ್ತ
ಕೆಲವು ಗೋದಾಮುಗಳ ಈರುಳ್ಳಿ ಕೊಳೆತು 'ನಾತ' ಹೊಡೆದರೆ ಅದನ್ನು ಶೇಖರಿಸಿಟ್ಟು ಕಾಸು ಗಳಿಸಬೇಕು, 'ಸ್ವಿಸ್ಸ್ ಬ್ಯಾಂಕ'ಲ್ಲಿ ಖಾತೆ ತೆಗೆಯಬೇಕು ಅಂದುಕೊಂಡವರು ಪಾಪರ್ ಆಗಿ ಅಧ್ರುಸ್ಟಕ್ಕೆ 'ಲೊಟ್ಟೆ 'ಹೊಡೆದು ಲಾಟರಿ ಹೊಡೆಯುತ್ತ.. ಇವನಿಗೆ ಹಿಡಿ ಶಾಪ ಹಾಕಿದ್ದರು..!!
ಆಮೇಲೆ ಸೀ ಬೀ ಅಯ್ ನೋರು ವರ್ಷಘಟ್ಟಲೇ ಈ ಕೇಸಿನ ತನಿಖೆ ನಡೆಸಿದರು ಮತ್ತ್ತು ಕೊನೆಗೊಮ್ಮೆ ಇವನನ್ನು ಕಂಡು ಹಿಡಿದು ಈರುಳ್ಳಿ ರೇಟು ಹೆಚ್ಚಾಗಲು- ಈರುಳ್ಳಿ ಧಂಗೆ ಉಂಟಾಗಲು ಇವನು ಹಬ್ಬಿಸಿದ ಒಂದು 'ಸುಳ್ಳು' ಸುದ್ಧಿಯೇ ಇದಕ್ಕೆ ಕಾರಣ ಅಂತ ಗೊತ್ತಾಗಿ ಜೈಲಿಗೆ ಅಟ್ಟಿದ್ದರು..!!
ಬಿಡುಗಡೆ ಆಗಿ ಬಂದು ಹೀಗೆಯೇ ಮೂರು ನಾಲ್ಕು ಕಡೆ ಮಾಡಿ ಮಾಡಿ ಈ 'ಸಾಹಸಕಾಗಿಯೇ' ಅವನ ಹೆಸರು ಗಿನ್ನ್ನಿಸ್ ದಾಖಲೆ ವೀರರ ಪಟ್ಟಿಯಲ್ಲಿ ಸೇರಿತ್ತು..:((
ಆದರೆ ಆ ಗಿನ್ನಿಸ್ ದಾಖಲೆಯನ್ ಯಾರು ತಾನೇ ನೆನಪಲ್ಲಿ ಇಟ್ಟುಕೊಳ್ಳುವರು
???
ಮತ್ತೆ ಮತ್ತೆ ಬರುವ ಅದೇ ಹಳಸಲು ಜನ ಪ್ರತಿನಿಧಿಗಳಿಗೆ ಕಣ್ಣು ಮುಚ್ಚಿ ಓಟು ಹಾಕುವ ದೇಶದಲ್ಲಿ ಈ ಗಿನ್ನಿಸ್ ದಾಖಲೆ ಯಾರಿಗೆ ನೆನಪಿದ್ದೀತು..??
ಬೇರೆ ಯಾವುದೋ ದೇಶದಲ್ಲಿ ತನ್ ದಾಖಲೆ ಯಾರೋ ಮುರಿದರು ಅಂತ ಗೊತ್ತಾಗಿ ಅತಿ 'ಹೆಚ್ಚು ' ಸಾರಿ ದಾಖಲೆ ಗಳಿಸಿದವರ ಪಟ್ಟಿಯಲ್ಲಿ ತಾ ಇರಬೇಕು -ತಾ ಒಬ್ಬನೇ ಅಂತ, ಮತ್ತೂಮ್ಮೆ ಅದೇ ದಾರಿ ಹಿಡಿದಿದ್ದ..!!
ಆದರೆ ಪದೇ ಪದೇ ಈರುಳ್ಳಿ ರೇಟು ಹೆಚ್ಚಿಸುವ ಈ ಸುಳ್ಳು ಸುದ್ದ್ಧಿಯೇ ಯಾಕೆ? ಎಂಬ ಪ್ರಶ್ನೆಗೆ ಅವನು ನಗುತ್ತ.....
ಈರುಳ್ಳಿ ಬಡವರು ಮಧ್ಯಮ ವರ್ಗದವರು ಶ್ರೀಮಂತ ಜನ ತಪ್ಪದೆ ಅವಶ್ಯವಾಗಿ ದೈನಂದಿನ ಜೀವನದಲ್ಲಿ ಉಪಯೋಗಿಸುವ ಅತ್ಯವಶ್ಯಕ ಅಡುಗೆ ಪದಾರ್ಥ , ಯಾವುದಕ್ಕೆ ತಲೆ ತಲೆ ಕೆಡಿಸಿ ಕೊಳ್ಳದಿದ್ದರೂ ,ಜನ ಈ ಈರುಳ್ಳಿ ವಿಚಾರದಲ್ಲಿ ಧಂಗೆ ಏಳುವದು ಖಾತ್ರಿ..!!
ಅಲ್ಲದೆ ಈರುಳ್ಳಿ ಇಲ್ಲದೆ ಅದೆಸ್ಟು ಅಡುಗೆ ಮಾಡಲು ಎಷ್ಟು ದಿನ ಸಾಧ್ಯ ಆದೀತು..? ಎಂದು ಮರು ಪ್ರಶ್ನೆ ಹಾಕಿದವನನ್ನು ಮತ್ತೆ ಎಳೆದುಕೊಂಡು ಶ್ರೀ ಕೃಷ್ಣ ಜನ್ಮ ಸ್ಥಾನಕ್ಕೆ ಕಳಿಸಿರುವರು....
'ಜನಪ್ರಿಯ' ವ್ಯಕ್ತಿಯಂತೆ ಕೈ ಬೀಸುತ್ತ ಹೋಗುತ್ತಿದ್ದ ಅವನನ್ನು ನೋಡಿ ಟೀ ವೀ ನೋಡುತ್ತಿದ್ದ ಅಸ್ಟು ಜನ 'ಪೀಡಿತರು' ನೆಟಿಕೆ ಮುರಿದರು..:())
ಹಯವದನ ರಾವ್,
ಗುಲ್ಲಯ್ಯ,
ದೊಡ್ಡಣ್ಣ ಮನೆಯವರ ತೀಕ್ಷ್ಣ ನೋಟ ಎದುರಿಸಲಾಗದೆ ಮೆತ್ತಗೆ ತಮ್ಮ ಕೋಣೆ ಕಡೆಗೆ ಹೊರಟರು.. ಬಹುತೇಕ ಮನೆಗಳಲ್ಲಿ ಇದೇ ಸ್ತಿತಿ- ಪರಿಸ್ತಿತಿ ..:((((
ಪೊಲೀಸರು ಎಳೆದು ಒಯ್ಯುತ್ತಿರುವಾಗ ಮೈಕು ಹಿಡಿದು ಓಡಿ ಬರುತ್ತಿದ್ದ ಒಬ್ಬ ಬೆನ್ನು ಬಿಡದ ಬೇತಾಳ ಅರ್ತಾಥ್ ವರದಿ ಗಾರ್ತಿಗೆ 'ಅವನು' ಹೇಳಿದ...
ಚಿಂತಿಸದಿರಿ, ಮತ್ತೆ ಕೆಲವೇ ದಿನಗಳಲ್ಲಿ ನಾ ಹೊರಗೆ ಬರುವೆನು.....:(((
ಇರಿ
. ಇರಿ ಎಲ್ಲಿಗೆ ಹೊರಟಿರಿ???
-- ಇದು ನಾ ನಿಮಗೆ ಕೇಳುತ್ತಿರುವ ಪ್ರಶ್ನೆ..!!
ಮತ್ತೆ ಈರುಳ್ಳಿ ರೇಟು ಹೆಚ್ಚಾಗುವ ಸಂಭವ ಇದೇ ಅಂತ ನೀವ್ ಅದಾಗಲೇ ಚೀಲ ತೆಗೆದುಕೊಂಡು ಮಾರುಕಟ್ಟೆ ಕಡೆ ಹೊರಟಿರ ?...
ಇಲ್ಲ ಇಲ್ಲ . ಅಂತ ನೀವ್ ಹೇಳಿದರೂ ನಾ ನಂಬೋಲ್ಲ ..!!
ಬನ್ನಿ ಹೆಂಗೂ ನಾವೆಲ್ಲಾ ಮಾರುಕಟ್ಟೆಯಲ್ಲಿ ಸಿಗುವೆವು...:()))))
(((())))
,,,
,
,
,
,
,
--------------------------------------------------------------------------------------------------------------
ಅಂದ್ ಹಾಗೆ-
sampada.net/blog/%E0%B2%A5%E0%B2%9F%E0%B3%8D-%E0%B2%85%E0%B2%82%E0%B2%A4-%E0%B2%B9%E0%B3%87%E0%B2%B3%E0%B2%BF-%E0%B2%B2%E0%B2%BF%E0%B2%AE%E0%B3%8D%E0%B2%95-%E0%B2%A6%E0%B2%BE%E0%B2%96%E0%B2%B2%E0%B3%86/16/05/2012/36722#comment-165876
ಥಟ್ ಅಂತ ಹೇಳಿ - ಲಿಮ್ಕಾ ದಾಖಲೆಗೆ ಬರಹವೂ , ಈ ನನ್ನ ಬರಹವೂ ಒಟ್ಟಿಗೆ ಕೆಲವೇ ನಿಮಿಷಗಳ ಅ0ತರದಲ್ಲಿ ಬಂದಿದ್ದಕ್ಕೆ ಯಾವುದೇ ಲಿಂಕ್ ಇಲ್ಲ...!!
ನಾ ಈ ಬಗ್ಗೆ ಮೊದಲೇ ಯೋಚಿಸಿದ್ದೆ ಟೈಪ್ ಮಾಡಿ ಎಡಿಟ್ ಮಾಡಿ ಸೇರಿಸುವುದೊರೊಳಗೆ ನಾ- ಸೋಮೇಶ್ವರ್ ಅವರ 'ದಾಖಲೆ'ಗೆ ಸೇರಿದ ಕಾರ್ಯಕ್ರಮ ಒಂದರ ಕುರಿತ ಬರಹ ಇಲ್ಲಿ ಪ್ರಕಟ ಆಗಬೇಕೆ..?
ಚಿತ್ರ ಮೂಲಗಳು....:
t1.gstatic.com/images
sphotos.xx.fbcdn.net/hphotos-
ash3/p480x480/528988_352033561518332_148009388587418_890106_1734628612_n.jpg
1.bp.blogspot.com/-pHqwsY6eykA/Te4rHabC3dI/AAAAAAAACUo/1sDm9a3uYSU/s1600/the-fool.jpeg
Comments
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
In reply to ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ... by Prathik Jarmalle
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
In reply to ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ... by kavinagaraj
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
In reply to ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ... by Prathik Jarmalle
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
In reply to ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ... by sathishnasa
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
In reply to ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ... by swara kamath
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
In reply to ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ... by nanjunda
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
In reply to ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ... by partha1059
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...
In reply to ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ... by ಗಣೇಶ
ಉ: ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ಕೇ ಜಿ ಮತ್ತು ಹೀಗೂ ಒಂದು ...