ದಲಿತ ಸೂರ್ಯ ಅಂಬೇಡ್ಕರ್ ------------ಪ್ರೀತಿಯಿಂದ ಪ್ರೀತಿಗಾಗಿ ಜಿ ವಿಜಯ್ ಹೆಮ್ಮರಗಾಲ
ದಲಿತ ಸೂರ್ಯ ಅಂಬೇಡ್ಕರ್
ಬಾ ಸೂರ್ಯನೇ ಮರಳಿ ಬಾ...
ಮತ್ತೇ ಹಿಡಿದಿದೆ ಜಾತಿ-ಜಾತಿಯ ಮರುಳು,
ಅರಳಿ ಬರಬೇಡ ಹೂವಾಗಿ
ಕೆರಳಿ ಬಾ... ಕೆಂಡವಾಗಿ...
ಅಗ್ನಿ-ಕುಂಡವಾಗಿ...
ಜಾತಿ-ಜಾತಿಯ ಬೀಜಾಸುರರ ಸುಡಲು
ಮನುಜರೆಲ್ಲಾ ಅನು-ಅನುಜರೆಂದೂ....!
ಸಮೈಕ್ಯ ಗೀತೆಯಾಡಲೂ...
ಬಾ ಸೂರ್ಯನೇ ಮರಳಿ ಬಾ...
ಮತ್ತೇ ಕಮರುತ್ತಿದೆ ಮಬ್ಬಾಳಿಕೆ,
ನನ್ನವರ ಮೇಲಿನ ದಬ್ಬಾಳಿಕೆ,
ಕೂರಬೇಡ ಮೌನದಲಿ ,
ಜಾತಿವಾದಿಗಳಿಗೆ ಕಟ್ಟಲೂ ಸಮಾಧಿ,
ಸಿಡಿದು ಬಾ ; ದಲಿತೋದ್ಧಾರಕೆ
ಸಾಕು ಸಾಕೆಮಗೆ ಗುಲಾಮತೆಯ ಗುಂಗು
ಆ ದಲಿತ ವಿರೋಧಿಗಳ ಹಂಗು
ಮತ್ತೇ ಬಾ ಪಿನಿಕ್ಸಾಗಿ,
ದಲಿತೋದ್ಧಾರಕೆ
ನನ್ನವರ ಕುಲಜರ ವಿರೋಧಿಗಳಿಗೆ
ಶಿವನ ತೃತೀಯ ಅಕ್ಷಿಯಾಗಿ
ಮರಳಿ ಬಾ... ಸೂರ್ಯನೇ...
ಕೆರಳಿ ಬಾ...
ಮತ್ತೇ
ತುಳಿತಕ್ಕೊಳಗಾದ ದಲಿತರು ನಾವು
ಬನ್ನಿ ಹಸಿದೆಬ್ಬುಲಿಯಾಗಿ ನೀವು
ಜಾತಿವಾದಿಗಲ್ ಕೊಂದು, ನೊಂದ ನಮಗೆ
ನುಡಿಯ ಬನ್ನಿ ಸಾಂತ್ವಾನದ ನಾಲ್ಕು ನುಡಿಯ
ಸಾಲದಾಗಿದೆ ನೀವು ಕೊಟ್ಟ ಸಂವಿಧಾನ...
ಎಚ್ಚರಗೊಳ್ಳುತ್ತಿಲ್ಲಾ ನನ್ನವರು
ಇನ್ನೂ ಉಳಿದಿದ್ದಾರೆ...!
ಆ ಜಾತಿಯ ಮಂಪರಿನಲ್ಲಿ ಈ ಮುಗ್ಧರು
ಮೇಲೇಳಲೂ ಬಿಡದು ಈ ಜಾತಿಯ ಕರಿ- ಕತ್ತಲೂ...
ನೀವೂ ತೆರಳಿದಿರಿ ಪಕ್ಕಕ್ಕೆ, ಆದರೆ
ಉಳಿದಿರಿ ನೀವೂ ಇನ್ನೂ ನಮ್ಮೊಳಗೆ
ನಮಗೆ ಸಮಾನವಾಗಲೆಂದು....
ಸಂವಿಧಾನವಾಗಲೆಂದೂ...
ನಿಮ್ಮ ಬರುವಿಗಾಗಿ ಕಾಯುತ್ತಿದ್ದೇವೆ...
ಮೊಕ ವೇದನೆಯ ಜಾತಕ ಪಕ್ಷಿಯಂತೆ....
ಪ್ರೀತಿಯಿಂದ ಪ್ರೀತಿಗಾಗಿ ಜಿ ವಿಜಯ್ ಹೆಮ್ಮರಗಾಲ
Comments
ಉ: ದಲಿತ ಸೂರ್ಯ ಅಂಬೇಡ್ಕರ್ ------------ಪ್ರೀತಿಯಿಂದ ಪ್ರೀತಿಗಾಗಿ ಜಿ ವಿಜಯ್ ಹೆಮ್ಮರಗಾಲ