ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ
ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ
ಅಂದವನು ನೋಡೋಣ ಬನ್ನಿ ನೀವು.
ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ
ಇತಿಹಾಸವೃತ್ತಗಳ ತನ್ನಿ ನೀವು.
ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ
ನಾಲಗೆಗೆ ಸವಿಯಿತ್ತ ಜೇನಿನಲ್ಲಿ.
ಹಣ್ಣುಗಳೊಳಗಿನಾ ಬೀಜಗಳ ಬಿತ್ತುತ್ತ
ತಿರುಳಗಳ ತಿನ್ನುವಾ ಹಕ್ಕಿಯಲ್ಲಿ.
ಕೀಟಗಳು ಹೆಣೆದಿರುವ ಬಲೆಯ ಮೇಲ್ಗಡೆಯಲ್ಲಿ
ಮುತ್ತಾಗಿ ಹೊಳೆದಿರುವ ಮಂಜಿನಲ್ಲಿ.
ಆಟವಾಡಲು ಬಳ್ಳಿ ಹಿಡಿದಿರುವ ವಾನರರ
ಚುರುಕುನೋಟದ ಕಣ್ಣ ಹೊಳಪಿನಲ್ಲಿ.
ಸತ್ತಿರುವ ಎಲೆಯೊಳಗಿನಾ ಅಂತಃಸತ್ತ್ವವನು
ಚಿಗುರೆಲೆಗೆ ಕಳುಹಿಸಿದಾ ಮಣ್ಣಿನಲ್ಲಿ.
ಮಣ್ಣಿನಾ ಸತ್ತ್ವವನು ತನ್ನೊಳಗೆ ಕಲೆಸುತ್ತ
ಬೇರೊಳಗೆ ಬೆರೆಸಿರುವ ನೀರಿನಲ್ಲಿ.
ನೀರಡಿಕೆ ನೀಗಿದ ಮುಗಿಲುಗಳಾ ಅಪ್ಪುಗೆಗೆ
ಮೈಚಾಚಿ ನಿಂತಿರುವ ಮರಗಳಲ್ಲಿ.
ಮುಗಿಲುಗಳ ತಾ ಹೊತ್ತು ಮರಗಳಾ ಬಳಿಯಿತ್ತು
ಒಪ್ಪಿಗೆಯನಿತ್ತಾ ತಂಗಾಳಿಯಲ್ಲಿ.
ಬಿರುಗಾಳಿಗೆದೆಯೊಡ್ಡಿ ಮುರಿದಿರುವ ರೆಂಬೆಗಳ
ಜೀವವನು ತಳೆದಿರುವ ಬೆಂಕಿಯಲ್ಲಿ.
ಭಾವಗಳನುಕ್ಕಿಸುವ ರೂಪಗಳೊಳಹೊಕ್ಕು
ಸಾವನರಿಯದಾ ಜೀವಜೀವಗಳಲಿ.
ಕಲ್ಪನೆಗೆ ಕಸುವಿಟ್ಟ ಕವಿಗಳಾ ನುಡಿಗಳಲಿ
ಹುದುಗಿರುವ ಭಾವಗಳ ನೆನಪಿನಲ್ಲಿ.
ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ
ಇತಿಹಾಸವೃತ್ತಗಳ ತನ್ನಿ ನೀವು.
Rating
Comments
ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ
In reply to ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ by venkatb83
ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ
In reply to ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ by nanjunda
ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ:@ನಂಜುಂಡ ಅವ್ರೆ
ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ
In reply to ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ by kavinagaraj
ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ