ಬೋಫೋರ್ಸ್ ಹಗರಣ

ಬೋಫೋರ್ಸ್ ಹಗರಣ

ವಿಶ್ವದ ಕುಪ್ರಸಿದ್ದ ಹಗರಣಗಳು
ಬೋಫೋರ್ಸ್ ಹಗರಣ
       ಅದು 1980-90ರ ಅವಧಿ. ಭಾರತವಿನ್ನೂ ಉದಾರೀಕರಣದ ಮಹಾಪ್ರಪಂಚಹಕ್ಕೆ ತೆರೆದುಕೊಂದಿರದ ಕಾಲವದು.ಕೋದ್ರದಲ್ಲಿ ನೆಹರುರವರ ವೊಮ್ಮಗ ರಾಜೇವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಳ್ವಿಕೆಯಲ್ಲಿತ್ತು. ಅಂತಾ ಸಂದರ್ಭದಲ್ಲಿ ದೇಶದ ಸೈನ್ಯದಲ್ಲಿ ಅದುವರೆವಿಗೆ ಬಳಕೆಯಲ್ಲಿದ್ದ ಹಳೆ ಮಾದರಿಯ ಫಿರಂಗಿ, ಗನ್ಗಳ ಬದಲು ಸುಧಾರಿತ ಫಿರಂಗಿ ಬಂದೂಕುಗಳನ್ನು ಒದಗಿಸಲು ಸರ್ಕಾರದಲ್ಲಿನ ಉನ್ನತ ಮಟ್ಟದ ಅಧಿಕಾರಿ ವರ್ಗವು ತೀರ್ಮಾನಿಸಿತು. ಇದಕ್ಕಾಗಿ ಸ್ವೀಡನ್ ಮೂಲದ ಎಬಿ ಬೋಫೋರ್ಸ್ ಎನ್ನುವ ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ ಮುಂದಾಯಿತು. ಇದುವೇ ಮುಂದೆ ದೇಶದ ಉದ್ದಗಲಕ್ಕೂ ಜನಮಾನಸದಲ್ಲಿ ದಿಗ್ಬ್ರಮೆ ಮೂಡಿಸಿದ ಬಹುಕೋಟಿ ರೂಪಾಯಿಗಳ ಬೋಫೋರ್ಸ್ ಹಗರಣ.
       ದಢಶ್ ಸೈಬಿಕ ವ್ಯವಸ್ತೆಗೆ ಆಧುನಿಕ ಶಸ್ತ್ರಾಸ್ತ್ರ ಪೂರೈಕೆ ಪ್ರತಿಯೊಂದು ದೇಶದ ಮೂಲ ಕರ್ತವ್ಯವಾಗಿದೆ, ಅದೇ ರೀತಿಯಲ್ಲಿ ಭಾರತದಲ್ಲಿ ಕೂಡ ಅಲ್ಲಿವರೆಗಿದ್ದ ಹಳೇ ಮಾದರಿ ಫಿರಂಗಿ ಬಂದೂಕುಗಳ ಬದಲಿಗೆ 155 mm hoತಿiಣzeಡಿs  ಒದಗಿಸಲು ನಿರ್ಧರಿಸಲಾಗಿ ಆ ನಿಟ್ಟಿನಲ್ಲಿ ದೇಶದ ಉನ್ನತಾಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆದವು. ಆ ಸಮಯದಲ್ಲಿ ಅಂತಹಾ ಫಿರಂಗಿಗಳ ಉತ್ಪಾದನೆ ಮಾಡುತ್ತಿದ್ದ ಸ್ವೀಡನ್ ಮೂಲದ ಸಂಸ್ಥೆ ಎಬಿ ಬೋಫೋರ್ಸನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು. ಂಟಜಿಡಿeಜ ಓobeಟ ಒಡೆತನದ ಆ ಸಂಸ್ಥೆ ಭಾರತೀಯ ಸೈನ್ಯಕ್ಕೆ ಅಗತ್ಯವಾದ ಊಚಿubiಣs ಈಊ-77  ಫಿರಂಗಿ ಬಂದೂಕಿನ ಪೂರೈಕೆಗೆ ಸಂಬಂಧಿಸಿ ಮಾರ್ಚ್ 24 1986ರಂದು ಹೊಸದೆಹಲಿ ಮತ್ತು ಸ್ವೀಡನ್ ಇನ್ನತ ಮಟ್ಟದ ಅಧಕಾರಿಗಳ ಮದ್ಯೆ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಈ ಒಂದ ಒಪ್ಪಂದದಂತೆ ಎಬಿ ಬೋಫೋರ್ಸ್ 410 155-mm hoತಿiಣzeಡಿs ಗಳನ್ನು ಪೂರೈಕೆ ಮಡುವಂತೆಯೂ ಜೊತೆಗೆ 1000 ಹೆಚ್ಚುವರಿ ಬಂದೂಕನ್ನು ಪೂರೈಸುವುದಾಗಿಯೂ ಹೇಳಲಾಗಿತ್ತು. ಒಟ್ಟಾರೆ ಈ ಒಪ್ಪಂದದ ಮೌಲ್ಯ $286 ಮಿಲಿಯನ್ (1500 ಕೋಟಿ ರೂಪಾಯಿ) ಆಗಿದ್ದು ಅಂದಿನ ಅವಧಿಯ ಬಹು ದೊಡದಡ ಪ್ರಮಾಣದ ಡೀಲ್ ಇದಾಗಿತ್ತನ್ನಬಹುದು.  
       ಇದಾದ ಒಂದು ವರ್ಷದ ಬಳಿಕ ಸ್ವೀಡನ್ ರೇಡಿಯೋ ಬ್ರಾಡ್ಕಾಸ್ಟಿಂಗ್ ಸಂಸ್ಥೆ ಈ ಹಗರಣದ ಬಗ್ಗೆ ಸುದ್ದಿ ಪ್ರಸಾರ ಮಾಡಿದಾಗ ಭಾರತವಶ್ಟೇ ಅಲ್ಲದೆ ಇಡೀ ಜಗತ್ತೇ ಬೆಚ್ಚಿ ಬಿದ್ದಿತ್ತು. ಈ ಸುದ್ದಿ ಪದರಸಾರವಾದ ದಿನಾಂಕ- ಏಪ್ರಿಲ್ 18 1987. ಅಲಿ ತಿಳಿಸಿದಂತೆ ಸ್ವೀಡನ್ ಮೂಲದ ಎಬಿ ಬೋಫೋರ್ಸ್ ಸಂಸ್ಥೆ ತನ್ನೊಂದಿಗಿನ ಭಾರತದ ಈ ಬೃಹತ್ ಒಪ್ಪಂದದ ಸುರಕ್ಷತೆಗಾಗಿ ಭಾರತದ ಉನ್ನತಾಧಿಕಾರಿಗಳಿಗೂ, ಭಾರತೀಯ ಸೈನ್ಯದಳಗಳ ಉನ್ನತ ಮೂಲದ ಅಧಿಕಾರಿಗಳಿಗೂ ಬೃಹತ್ ಪ್ರಮಾಣದ ಲಂಚ ನೀಡಲಾಗಿತ್ತು. ಈ ಸುದ್ದಿಯಿಂದಾಗಿ ಸ್ವೀಡನ್ ಸರ್ಕಾರ ಮತ್ತು ಭಾರತದಲ್ಲಿದ್ದ ರಾಜೀವ್ ಗಾಂಧಿ ನೇತೃತ್ವದ ಸರ್ಕಾರಗಳಿಗೆ ಹಗರಣದ ಕಳಂಕ ಮೆತ್ತಿಕೊಂಡಿತು.
       ಅತ್ತ ಜಿನೀವಾ ಕಛೇರಿಯಲ್ಲಿದ್ದ ‘’ದಿ ಹಿಂದೂ’’ ಪತ್ರಿಕಾ ಪ್ರತಿನಿಧಿ ಚಿತ್ರಾ ಸುಬ್ರಮನ್ಯನ್ ಎನ್ನುವವರು ಈ ಸುದ್ದಿಯಿಂದ ಕುತೂಹಲಗೊಂಡು ಇದರ ಕುರಿತಾಗಿ ಹೆಚ್ಚಿನ ವಿಷಯ ಸಂಗ್ರಹಕ್ಕೆ ಮುಂದಾದರು. ಇzಕ್ಕೆ ‘’ದಿ ಹಿಂದೂ’’ವಿನ ಆಗಿನ ಮುಖ್ಯ ಸಂಪಾದಕರಾದ ಎನ್. ರಾಮ್ ರವರು ಕೂಡ ಬೆಂಬಲ ವ್ಯಕ್ತಪದಿಸಿದರು. ಇದರಿಂದಾಗಿ ಉತ್ತೆಜಿತರಾದ ಚಿತ್ರಾರವರುಈ ಒಂದು ಹಗರಣ ನಡೆದಿರಬಹುದಾದ ಪರಿ ಮತ್ತು ಅದರ ಕುರಿತ ತನಿಖೆಯ ಬಗ್ಗೆ ವಿವರವಾಗಿ ಶೋಧಿಸಿ ಲೇಖನ ಪ್ರಕಟಣೆಗೆ ಮುಂದಾದರು. ಹೀಗೆ ತನ್ನ ಪತ್ರಿಕಾ ವರದಿಗಾರ್ತಿ ಕೆಲಸ ಆರಂಭ ಮಾಡಿದ ಚಿತ್ರಾರವರು ಸರಿಯಾದ ವ್ಯಕ್ತಿಗಳಿಂದ ಸರಿಯಾದ ರೀತಿಯ ಮಾಹಿತಿಯನ್ನು ಕಲೆಹಾಕುವಲ್ಲಿ ಯಶಸ್ವಿಯಾದರು. ಆಗವರಲ್ಲಿ ಈ ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿ ಸಾವಿರಾರು ಕಾಗದ ಪತ್ರಗಳು, ದಾಖಲೆಗಳೂ ಸಂಗ್ರಹವಾದವು. ಇವರು ಪ್ರಕಟಿಸಿ ಈ ತನಿಖಾ ವರದಿಯ ಪರಿಣಾಮಿಡಿಯ ದೇಶಕ್ಕೆ ಈ ಮಹಾ ವೋಸದ ಹಗರಣದ ಬಗ್ಗೆ ಅರಿವಾಯಿತು. ಸರಿಸುಮಾರು 64 ಕೋಟಿಗಳಷ್ಟು ದೊಡ್ಡ ವೊತ್ತವನ್ನು ಭಾರತೀಯ ಮೂಲದ ಉನ್ನತ ಆಡಳಿತ ವರ್ಗದಲ್ಲಿರುವವರು ಮತ್ತು ಸೈನ್ಯದಲ್ಲಿನ ಪ್ರಮುಖ ಸ್ಥನದಲ್ಲಿರುವವರು ಲಂಚವಾಗಿ ಸ್ವೀಕರಿಸಿದ್ದರೆನ್ನುವುದು ಬೆಳಕಿಗೆ ಬಂದಿತು.
     
ಈ ನಡುವೆ ಇಟಲಿ ಮೂಲದ ಬೃಹತ್ ಉದ್ಯಮಿಯಾದ ಒಟ್ಟಾವಿಯೋ ಕ್ವಟ್ರೋಚ್ಚಿ ಎನ್ನುವ ವ್ಯಕ್ತಿಯ ಹೆಸರೊಂದು ಇದೇಬೋಫೋರ್ಸ್ ಹಗರಣದಲ್ಲಿ ತಳುಕು ಹಾಕಿಕೊಂಡಿರುವುದು ತಿಳಿಯಿತು. ಈತ ಇಟಲಿಯ ಪೆಟೋಲಿಯಮ್ ಉಪನ್ನಗಳ ಸಂಸ್ಥೆಯಾದ Sಟಿಚಿmಠಿಡಿogeಣಣi ಎನ್ನು ಸಂಸ್ಥೆಯ ಒಡೆಯನಾಗಿದ್ದು ಈತ ಹೊಸದಿಲ್ಲಿಯಲ್ಲಿನ ಆಡಳಿತದಲ್ಲಿದ್ದ ಪದರಭಾವಶಾಲಿ ವ್ಯಕ್ತಿಗಳಿಗೂ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿದ್ದ ಮುಖ್ಯ ಅಧಿಕಾರಿಗಳಿಗೂ ನಡುವೆ ದಲ್ಲಾಳಿಯಾಗಿದ್ದನು. ಇದರಲ್ಲಿಯೂ ಆಡಳಿತದಲ್ಲಿದ್ದ ಕಾಂಗೆಸ್ ಪಕ್ಷದ ಪ್ರಧನ ಶಾಖೆಯಾದ ನೆಹರು-ಗಾಂಧಿ ಕುಟುಂಬಕ್ಕೆ ಆಪ್ತನಾಗಿದ್ದನೆನ್ನುವ ಅಂಶ ಪ್ರಧಾನವಾದುದು. ಈ ಮೂಲಕ ಈ ಒಂದು ಹಗರಣದಲ್ಲಿ ರಾಜೀವ್ ಗಾಂಧಿಯವರ ಹೆಸರು ಸಹ ತಗುಲಿಕೊಂಡಿತು.
       ಹೀಗೆ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಬೋಫೋರ್ಸ್ ಹಗgಣದ ಕುರಿತಂತೆ ಆಗಸ್ಟ್ 6 1987 ರಲ್ಲಿ ಪ್ರಥಮ ಬಾರಿಗೆ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಜಂಟಿ ಸದನ ಸಮಿತಿ(ಎoiಟಿಣ Pಚಿಡಿಟiಚಿmeಟಿಣಚಿಡಿಥಿ ಅommiಣಣee (ಎPಅ)) ರಚಿಸಲ್ಪಟ್ಟಿತು. ಈ ಸಮಿತಿ ತನ್ನ ರಚನೆಯಾದ ಎರಡು ವರ್ಷಗಳ ತರುವಾಯ ತನ್ನ ಅಚಿತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಇದಾಗಿ 1989 ರ ನವೆಂಬರ್ ನಲ್ಲಿ ನಡೆದಂತಹಾ ಮಹಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಕಳೆದುಕೊಂದು ಅದೇ ಡಿಸೆಂಬರ್ 26 ಕ್ಕೆ ವಿ. ಪಿ. ಸಿಂಗ್ ರವರ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅದಾಗ ಮುಂಬರುವ ದಿನಗಳಲ್ಲಿ ಎಬಿ ಬೋಫೋರ್ಸ್ ಸಂಸ್ಥೆಯು ಭಾರತೀಯ ಮಿಲಿಟರಿಗೆ ಸಂಬಂಧಿಸಿದ ಶಸ್ತ್ರಾಸ್ತ್ರ ವ್ಯವಹಾರಕ್ಕಾಗಿ ಭಾರತವನ್ನ ಪ್ರವೇಶಿಸುವುದನ್ನು ನಿರ್ಬಂಧಿಸಿತು. ಮತ್ತು ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕೊಡಲಾಯಿvsÀು. ಆನವರಿ 22 1990ಕ್ಕೆ ಚಿಬಿಐ ಬೋಫೋರ್ಸ್ ಹಗರಣದ ಕುರಿತು ಪ್ರಥಮ ಬಾರಿಗೆ ದೂರು ದಾಖಲು ಮಾಡಿಕೊಂಡಿತು. ಇದಾದ ಮರುವರ್ಷ ಎಂದರೆ 1991 ರ ಮೇ 21 ರಂದು ಹಗರಣzಲ್ಲಿ ಭಾಗಿಯಾಗಿದ್ದರೆಂದು ಶಂಕಿಸಲಾಗಿದ್ದ ಭಾರತದ ಮಾಜಿ ಪ್ರಧಾನಿಗಳದ ರಾಜೀವ್ ಗಾಂಧಿ ಎಲ್ಟಿಟಿಇ ಉಗ್ರ ಸಂಘಟನೆಯ ಬಾಬ್ ಧಾಳಿಗೆ ಬಲಿಯಾದರು. ಇಷ್ಟೆಲ್ಲವನ್ನು ಮೌನವಾಗಿಯೇ ಗಮನಿಸುತ್ತಿದ್ದ ಹಗರಣದ ಪ್ರಮುಖ ಆರೋಪಿಯಾಗಿದ್ದ ಒಟ್ಟವಿಯೋ ಕ್ವಟ್ರೋಚ್ಚಿ ಜುಲೈ 1993 ಕ್ಕೆ ಭಾರತವನ್ನು ತೊರೆದನು.
       ಹಗgಣದ ತನಿಖೆ ನಡೆಯುತ್ತಲಿದ್ದು ನ್ಯಾಯಾಲಯಗಳ ಕಲಾಪಗಳು ಸಾಗುತ್ತಲಿರಬೇಕಾದರೆ ಜನವರಿ 1997ಕ್ಕೆ ಅಂದಿನ ಸ್ವಿಸ್ ಸರ್ಕಾರ ಈ ಒಂದು ಹಗರಣಕ್ಕೆ ಸಂಬಂಧಿಸಿ ಗುಪ್ತ ಮತ್ತು ಮಹತ್ವವಾದ ಸುಮಾರು500 ಪುಟಗಳ ದಾಖಲೆಗಳನ್ನು ಭಾರತ ಸರ್ಕಾರಕ್ಕೆ ನೀಡಿತು. ಇದಾದ ಒಂದು ವಾರದಲ್ಲಿ ಸಿಬಿಐ ನಿಂದ ಹಗರಣದ ತನಿಖೆಗಾಗಿ ವಿಶೇಷ ತಂಡವೊಂದರ ರಚನೆಯಾಯಿತು. ಸುಮಾರು ಅದೇ ವರ್ಷಆತ್ಯದಲ್ಲಿ ಕ್ವಟ್ರೋಚ್ಚಿ ಬಂಧನಕ್ಕಾಗಿ ಮಲೇಷಿಯಾ ಹಾಗೂ ಯುಎಇ ಗಳಿಗೆ ವಿಶೇಷ ಆದೇಶವಿದ್ದ ಪತ್ರ ರವಾನೆಯಾಯಿತು. ಇದರ ಮದ್ಯೆಯೇ ಯುಕೆ ಮೂಲದ ಹಿಂದೂಜಾ ಸಹೋದರದ ಹೆಸರುಗಳೂ ಈ ಹಗರಣದಲ್ಲಿ ಕೇಳಿಬಂತು ಆದರೆ 2000 ದಲ್ಲಷ್ಟೇ ಆ ದೂರು ನಿರಾಧಾರವೆಂದು ಸಾಬೀತಾಯಿತು. 2000ನೇ ವರ್ಷದ ಅಂತ್ಯದಲ್ಲಿ ಮಲೇಷಿಯಾ ಸರ್ಕಾರ ಕ್ವಟ್ತೋಚ್ಚಿಯನ್ನು ಬಂಧಿಸಿತು ಆದರೆ ಆತ ಮಾತ್ರ ಷರತ್ತುಬದ್ದ ಜಾಮೀನನ್ನು ಪಡೆದುಕೊಳ್ಳುವಲ್ಲಿ ಸಫಲನಾದನು. ಆದರೆ ಅನುಮತಿ ಇಲ್ಲದೆ ದೇಶ ತೊರೆಯಬಾರದಾಗಿ ಸೂಚಿಸಲಾಯಿತು. 2004 ರಲ್ಲಿ ದೆಹಲಿ ಮುಖ್ಯ ನ್ಯಾಯಾಲಯವು ರಾಜೀವ್ ಗಾಧಿಯವರನ್ನ ಈ ಹಗರಣದ ಆರೋಪದಿಂದ ಮುಕ್ತಚಾಗಿಸಿತು, ಹಾಗೆ 2005 ರಲ್ಲಿ ಅದೇ ನ್ಯಾಯಾಲಯವು ಹಿಂದೂಜಾ ಸೋದರರನ್ನು ಸಹ ನಿರ್ದೋಷಿಗಳೆಂದು ತೀರ್ಪಿತ್ತಿತು. ಫೆಬ್ರವರಿ 6 2007 ರಂದು ಅರ್ಜೆಂತೈನಾದಲ್ಲಿದ್ದ ಕ್ವಟ್ರೋಚ್ಚಿಯನ್ನು ಇಂಟರ್ಪೋಲ್ ತಂಡದವರು ಪತ್ತೆಹಚ್ಚಿದರು. ಆದರೆ ಭಾರತ ಸರ್ಕಾರ ಮಾತದರ ಇದರ ಬಗ್ಗೆ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಇಸರಂದಿಗೆ ಈ ಒಂದು ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಹುನ್ನಾರ ನಡೆದಿರುವುದು ಸ್ಪಷ್ಟವಾಯಿತು. ಎರಡು ವರ್ಷಗಳ ಬಳಿಕ ಸೆಪ್ಟೆಂಬರ್ 29 2009 ರಂದು ಭಾರತ ಸರ್ಕಾರ ದೇಶದ ಉಚ್ಚ ನ್ಯಾಯಾಲಯಕ್ಕೆ ಈ ಹಗರಣದ ವಿಚಾರಣೆಯನ್ನು ನಿಲ್ಲಿಸುವಂತೆಯೂ ಕ್ವಟ್ರೋಚ್ಚಿ ನಿರ್ದೋಷಿಯಾಗಿರುವನೆಂದೂ ತನ್ನ ಅಭಿಪ್ರಾಯವನ್ನು ತಿಳಿಸಿತು.
       2011 ರಲ್ಲಿ ಭಾರತ ಆದಾಯ ತೆರಿಗೆ ಇಲಾಖೆ ಈ ಒಂದು ಹಗರಣದ ಸಂಬಂಧ ದೇಶದ ಬೊಕ್ಕಸಕ್ಕೆ ಸರಿ ಸುಮಾರು 40 ಕೋಟಿಯಷ್ಟು ನಷ್ಟವಾಗಿದೆ, ಅಲ್ಲದೆ ಆ ಹಣವು ಬೋಫೋರ್ಸ್ ಫಿರಂಗಿ ಖರೀದಿ ವಿಷತದಲ್ಲಿ ಕ್ವಟ್ರೋಚ್ಚಿ ಖಾತೆಗೆ ಜಮೆಂಯಾಗಿರಬೇಕೆಂದು ಅಭಿಪ್ರಾಯಕ್ಕೆ ಬಂದಿತು. ಆದರೆ ಅದೇ ಮಾರ್ಚ್ 4 2011 ರಂದು ದೆಹಿ ಮುಖ್ಯ ನ್ಯಾಯಾಲಯ ಕ್ವಟ್ರೋಚ್ಚಿ ವಿರುದ್ದದ ಎಲ್ಲ ಪ್ರಕರಣದಲ್ಲಿ ಅವನನ್ನು ಆರೊಪ ಮುಕ್ತನೆಂದಿತು, ಅದರೊಂದಿಗೆ ಸಿಬಿಐ ಗೆ ಈ ಪ್ರಕರಣದ ತನಿಖೆ ಕೈ ಬಿಡುವಂತೆ ಸೂಚಿಸಿತು. ಇದರೊಂದಿಗೆ ದೇಶವ್ಯಾಪಿ ಅಚ್ಚರಿಗೆ ಕಾರಣವಾಗಿದ್ದ ಬೋಫೋರ್ಸ್ ಫಿರಂಗಿ ಅವ್ಯವಹಾರದ ಹಗರಂಕ್ಕೆ ಪೂರ್ಣವಿರಾಮ ದ್ದಂತಾಯಿತು.

Comments