ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
'ಊರ್ಮಿಳ' ಅಂದರೆ ಭಾವನೆಗಳ ಅಲೆ , ಮೋಹಿನಿ ಅನ್ನುವ ಅರ್ಥಗಳಿವೆ. ಭಾವನೆಗಳ ಅಲೆಯಲ್ಲಿ ತೇಲಿಸುವವಳು,ಮೋಹಿನಿಯಂತೆ ತನ್ನತ್ತ ಸೆಳೆಯುವವಳು ಎಂದರ್ಥ. ನಮ್ಮ ರಾಮಾಯಣ ಮಹಾ ಕಾವ್ಯದ ಪಾತ್ರವಾದ ಊರ್ಮಿಳೆಯು ಹಾಗೆಯೆ ತನ್ನ ಉನ್ನತ ವಿಚಾರಗಳಿಂದ ,ತ್ಯಾಗಬಲಿದಾನಗಳಿಂದ ಎಲ್ಲರ ಮನಸೂರೆಗೊಳ್ಳುತ್ತಾಳೆ. ಊರ್ಮಿಳೆಯು ಒಳ್ಳೆಯ ಚಿತ್ರಕಾರಳೂ ಆಗಿದ್ದಳು.
ಹಿಂದೂ ಮಹಾಕಾವ್ಯವಾದ ರಾಮಾಯಣದಲ್ಲಿನ ದುರಂತ ನಾಯಕಿ ಊರ್ಮಿಳ. ರಾಮಾಯಣದಲ್ಲಿ ಊರ್ಮಿಳೆ ಎಂಬ ಪಾತ್ರದ ಚಿತ್ರಣಕ್ಕೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಪಾತ್ರದ ಬೆಳವಣಿಗೆಗೆ ನ್ಯಾಯ ಒದಗಿಸಿಲ್ಲ. ಹಾಗಾಗಿದ್ದರೆ ಅದು ಕೂಡ ದೊಡ್ಡ ಕತೆಯೇ ಆಗುತ್ತಿತ್ತೇನೋ. ರಾಮ ಸೀತಾ ರಾಮಾಯಣದ ಮುಖ್ಯಪಾತ್ರಗಳು. ದಶರಥ ರಾಜನ ಮಕ್ಕಳಲ್ಲಿ ಹಿರಿಯವನು ರಾಮ. ಲಕ್ಷ್ಮಣ, ಭರತ, ಶತ್ರುಜ್ಞ ಸಹೋದರರು. ಜನಕನ ಮಗಳು ಸೀತಾ. ಊರ್ಮಿಳ, ಮಾಂಡವಿ, ಶ್ರುತಕೀರ್ತಿ ಅವಳ ಸಹೋದರಿಯರು. ರಾಮ ಸೀತಾ ಸ್ವಯಂವರದ ಸಂದರ್ಭದಲ್ಲಿ ರಾಮನ ಸಹೋದರರೊಂದಿಗೆ ಸೀತೆಯ ಸಹೋದರಿಯರ ವಿವಾಹವಾಗಿರುತ್ತದೆಯಷ್ಟೇ .ಊರ್ಮಿಳ ಸೀತೆಯ ತಂಗಿ ಮತ್ತು ಜನಕ ರಾಜನ ಮಗಳು ಎಂಬ ವಿಚಾರವೇ ಅನೇಕರಿಗೆ ತಿಳಿದಿರುವುದಿಲ್ಲ . ರಾಮಾಯಣದಲ್ಲಿ ಸೀತೆಯ ತ್ಯಾಗ ಬಲಿದಾನದ ಬಗ್ಗೆ ಉಲ್ಲೇಖವಿದೆಯೇ ವಿನಃ ಲಕ್ಷ್ಮಣನ ಹೆಂಡತಿಯಾದ ಊರ್ಮಿಳೆಯ ಬಗ್ಗೆ ಇಲ್ಲ.
ಪಿತೃವಾಕ್ಯ ಪರಿಪಾಲನೆಗಾಗಿ ರಾಮನು ಲಕ್ಷ್ಮಣ ಮತ್ತು ಸೀತೆಯರೊಂದಿಗೆ ಕಾಡಿಗೆ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯು ತನ್ನ ಪತಿಯನ್ನು ಅನುಸರಿಸಿದಾಗ ಲಕ್ಷ್ಮಣನು ಅವಳಿಗೆ ಅರಮನೆಯಲ್ಲಿಯೇ ಇದ್ದು ಅತ್ತೆಮಾವಂದಿರ ಸೇವೆ ಮಾಡಬೇಕೆಂದು ಅನುನಯಿಸುತ್ತಾನೆ. ಅದರಂತೆ ಊರ್ಮಿಳೆಯು ತನ್ನ ಯವ್ವನದ ಉತ್ತುಂಗದಲ್ಲಿ ಹದಿನಾಲ್ಕು ವರ್ಷಗಳನ್ನು 'ವನವಾಸಕ್ಕೆ ತೆರಳದೆಯೇ ವನವಾಸವನ್ನು ಅನುಭವಿಸುತ್ತಾಳೆ'. ಲಕ್ಷ್ಮಣನ ನಿರೀಕ್ಷೆಯಲ್ಲಿ ಏಕಾಂಗಿಯಾಗಿ ಸಮಾಧಿ ಸ್ಥಿತಿಗೆ ಜಾರುತ್ತಾಳೆ. ಒಂದು ಕತೆಯ ಪ್ರಕಾರ ಊರ್ಮಿಳ ಹದಿನಾಲ್ಕು ವರ್ಷಗಳನ್ನೂ ನಿದ್ದೆಯಲ್ಲಿ ಕಳೆಯುತ್ತಾಳೆ .(ಲಕ್ಷ್ಮಣನ ಪಾಲಿನ ನಿದ್ದೆಯನ್ನು ಕೂಡ ). ಆ ವೇಳೆಯಲ್ಲಿ ಲಕ್ಷ್ಮಣ ನು ಜಾಗೃತನಾಗಿದ್ದು ರಾಮ ಸೀತೆಯರ ಸೇವಾಮಗ್ನನಾಗಿರುತ್ತಾನೆ.
ಸೀತೆಯ ಎಲ್ಲ ಕಷ್ಟ-ಸುಖಗಳಲ್ಲಿ ರಾಮ ಒಡನಾಡಿಯಾಗಿರುತ್ತಾನೆ. ಜನಕನ ಮಗಳಾಗಿ ಊರ್ಮಿಳೆ ಕೂಡ ಅರಮನೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವಳು. ಶ್ರೀರಾಮನ ಅನುಜ ಲಕ್ಷ್ಮಣನ ಕೈ ಹಿಡಿದರೂ ಎಲ್ಲ ಸುಖಗಳಿಂದ ವಂಚಿತಳಾದ ಊರ್ಮಿಳ ಪಾತ್ರದ ಬಗ್ಗೆ ವ್ಯಾಖ್ಯಾನಕಾರರಿಗೆ ಕನಿಕರವಿಲ್ಲ. ತೆರೆಯ ಮರೆಗೆ ಸರಿಯುವ ದುರಂತ ನಾಯಕಿಯ ಪಾತ್ರ ಜನರ ಅಂತಃಪಟಲದಿಂದ ಕೂಡ ಮರೆಯಾಗುತ್ತದೆ. ಇಂದಿನವರೆಗೂ ಸಹ ಕೈಕೇಯಿ ಅವಳ ಸಖಿ ದುಷ್ಟ ಮಂಥರೆಯನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವ ಜನರಿಗೆ ಪತಿವ್ರತೆಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಊರ್ಮಿಳೆಯ ಪರಿಚಯವಿಲ್ಲವೆಂಬುದು ಆಶ್ಚರ್ಯ ತರುವ ವಿಷಯವಾದರೂ ಕಟುಸತ್ಯ.
Comments
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
In reply to ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ by partha1059
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
In reply to ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ by suma kulkarni
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
In reply to ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ by asuhegde
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ:ಕಮಲ ಅವ್ರೆ ..?
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
In reply to ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ by makara
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ
In reply to ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ by pkumar
ಉ: ಮನವ ಕಾಡುವ ಊರ್ಮಿಳೆಯೆಂಬ ಭಾವ ಸಮೃದ್ದಿ