ಬ್ರೇಕಿಂಗ್ ನ್ಯೂಸ್...
ಸದಾ ಬ್ರೇಕಿಂಗ್ ನ್ಯೂಸ್ ನೀಡುವ ಸುದ್ದಿ ಮಾಧ್ಯಮವೊಂದರಲ್ಲಿ ಇದೀಗ ತಾನೇ ಬಂದ ಸುದ್ದಿ ಎಂದು ಸುದ್ದಿಯೊಂದು ಬಿತ್ತರಗೊಳ್ಳುತ್ತಿತ್ತು. ಇಂದು ಮುಸುಕಿನಲ್ಲಿ ನಡೆದ ಭೀಕರ ದುರ್ಘಟನೆಯಲ್ಲಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮವಾಗಿರಸ್ತೆ ದಾಟುತ್ತಿದ್ದ ನಿಮಗ್ಯಾಕ್ರಿ ಗ್ರಾಮದ ಮೂವರು ಅಪರಿಚಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರ ಬಗ್ಗೆ ಹೆಚ್ಚಿನ ವರದಿಯನ್ನು ನಿಮಗ್ಯಾಕ್ರಿ ಗ್ರಾಮದ ವರದಿಗಾರ ಗೊತ್ತಿಲ್ಲ ಅವರು ತಿಳಿಸುತ್ತಾರೆ.
ಹೇಳಿ ಗೊತ್ತಿಲ್ಲ ಈ ಘಟನೆ ಎಷ್ಟೊತ್ತಿಗೆ ನಡೆಯಿತು, ಘಟನೆ ನಡೆದ ಸಮಯದಲ್ಲಿ ಇನ್ಯಾರಿಗಾದರೂ ಏನಾದರೂ ಅಪಘಾತ ಸಂಭವಿಸಿದೆಯ? ಗುದ್ದಿದ್ದ ಲಾರಿ ಯಾವ ಸ್ಪೀಡಿನಲ್ಲಿ ಬರುತ್ತಿತ್ತು? ಲಾರಿ ಓಡಿಸುತ್ತಿದ್ದವನು ಕುಡಿದು ಲಾರಿ ಚಾಲನೆ ಮಾಡುತ್ತಿದ್ದನ?...
ಅತ್ತ ಕಡೆ ಗೊತ್ತಿಲ್ಲ ಮನಸಿನಲ್ಲೇ ಬೈಕೊಂಡು...ನೋಡಿ ಮರ್ತೋಯ್ತು ಅವರೇ ಈ ಘಟನೆ ನಡೆದಿದ್ದು ಇಂದು ಮುಂಜಾನೆ ಸುಮಾರು ೩-೪ ಗಂಟೆಯ ಸಮಯದಲ್ಲಿ. ಆ ಸಮಯದಲ್ಲಿ ಅಷ್ಟೊಂದು ಬೆಳಕಿರದ ಕಾರಣ (ಅಷ್ಟು ಕತ್ತಲಲ್ಲಿ ಬೆಳಕೆಲ್ಲಿರಬೇಕು) ಲಾರಿ ಚಾಲಕನಿಗೆ ರಸ್ತೆ ದಾಟುತ್ತಿದ್ದವರು ಕಾಣಿಸದೆ ಇರಬಹುದು ಇದೊಂದು ಕಾರಣ ಇರಬಹುದು..
ಅಷ್ಟರಲ್ಲಿ ಮಧ್ಯದಲ್ಲಿ ಬಾಯಿ ಹಾಕಿದ ಮರ್ತೋಯ್ತು..ಒಂದು ನಿಮಿಷ ಗೊತ್ತಿಲ್ಲ ಅವರೇ ನಾನು ಮತ್ತೆ ನಿಮ್ಮ ಜೊತೆ ಸಂಪರ್ಕಕ್ಕೆ ಬರುತ್ತೇನೆ..ಈಗ ನಮ್ಮ ಸ್ಟುಡಿಯೋನಲ್ಲಿ ನಿಮಗ್ಯಾಕ್ರಿ ಗ್ರಾಮದ ಯಾವನಿಗೊತ್ತು ಅವರು ನಮ್ಮ ಜೊತೆ ಇದಾರೆ.ಹೇಳಿ ಯಾವನಿಗೊತ್ತು ಅವರೇ ಈ ಘಟನೆಗೆ ನಿಮಗೆ ಯಾವ ರೀತಿ ಸಂಬಂಧ ಇದೆ, ಹಾಗೆ ರಸ್ತೆ ದಾಟುತ್ತಿದ್ದವರಲ್ಲಿ ನಿಮ್ಮವರು ಯಾರಾದರೂ ಇದಾರ...
ಅಯ್ಯೋ ಇಲ್ಲ ಬುದ್ಧಿ ದಯವಿಟ್ಟು ನನ್ನ ಬುಟ್ ಬುಡಿ ಈ ಘಟನೆಗೂ ನನಗೂ ಯಾವ ಸಂಬಂಧಾನು ಇಲ್ಲ. ನನ್ನ ಪಾಡಿಗೆ ನಾನುಬಯಲು ಕಡೆ ಹೋಗಿ ವಾಪಸ್ ಬರಬೇಕಾದರೆ ನಿಮ್ಮವರು ಬಂದು ಎಳ್ಕೊಂಡು ಬಂದು ಬುಟ್ಟವರೆ. ಅವರು ಯಾರೂ ಅಂತಾನು ನನಗೆ ಗೊತ್ತಿಲ್ಲ...ಸರಿ ಸರಿ ಯಾವನಿಗೊತ್ತು ಅವರೇ ನಾನು ಮತ್ತೆ ನಿಮ್ಮ ಜೊತೆ ಮಾತಾಡುತ್ತೀನಿ..
ಹಲೋ...ಗೊತ್ತಿಲ್ಲ ಅವರೇ ಇದ್ದೀರಾ...
(ಇಲ್ಲದೆ ಎಲ್ಲಿ ಹಾಳಾಗಿ ಹೋಗ್ತೀನಿ)...ಹಾ ಹೇಳಿ ಮರ್ತೋಯ್ತು ಅವರೇ....
ಅದೇ ಅವಾಗಲೇ ಏನೋ ಹೇಳ್ತಾ ಇದ್ರಿ..
ಹಾ ಮರ್ತೋಯ್ತು...ಲಾರಿ ಚಾಲಕ ಕುಡಿದು ಚಾಲನೆ ಮಾಡುತ್ತಿದ್ದನ ಇಲ್ಲವೋ ಎನ್ನುವುದು ಇನ್ನೂ ಗೊತ್ತಾಗಿಲ್ಲ ಯಾಕೆಂದರೆ ಲಾರಿ ಚಾಲಕ ಗುದ್ದಿ ಪರಾರಿ ಆಗಿ ಬಿಟ್ಟಿದ್ದಾನೆ. ಅವನನ್ನು ಹುಡುಕಿ ನಂತರ ಪರೀಕ್ಷೆ ಮಾಡಿ ವರದಿ ಬಂದ ಮೇಲೆ ನೋಡಬೇಕು...ಇನ್ನು ಅವನು ಯಾವ ವೇಗದಲ್ಲಿ ಗುದ್ದಿದ್ದಾನೆ ಎಂಬುದಕ್ಕೆ ಯಾವುದೇ ಸರಿಯಾದ ಆಧಾರ ಇಲ್ಲ. ಆದರೆ ಇಲ್ಲಿ ಬಿದ್ದಿರುವ ಶವಗಳನ್ನು ನೋಡಿದರೆ ಖಂಡಿತ ಅವನು ೧೦೦-೧೨೦ ಕಿಮೀ ವೇಗದಲ್ಲಿ ಬಂದು ಗುದ್ದಿದ್ದಾನೆ ಎನಿಸುತ್ತಿದೆ. ಅಷ್ಟರಲ್ಲಿ ಅಲ್ಲಿನ ದೃಶ್ಯಗಳನ್ನು ತೋರಿಸುತ್ತಿದ್ದರು. ನೋಡಲು ತೀರ ಭಯಾನಕವಾಗಿದ್ದರಿಂದ ಅದನ್ನು ಮಸುಕು ಮಸುಕಾಗಿ ತೋರಿಸಲಾಗುತ್ತಿತ್ತು.
ಹೌದು ಗೊತ್ತಿಲ್ಲ ಅವರೇ ತೀರ ದಾರುಣವಾಗಿ ಗುದ್ದಿದ್ದಾನೆ. ಅಂದ ಹಾಗೆ ಸತ್ತವರ ವಯಸ್ಸು ಅಂದಾಜು ಎಷ್ಟಿರಬಹುದು. ಹಾಗೆ ಸತ್ತವರ ಸಂಬಂಧಿಗಳು ಯಾರಾದರೂ ಸ್ಥಳಕ್ಕೆ ಆಗಮಿಸಿದ್ದಾರ?...
ಹಲೋ..ಹಲೋ...ಹಾ....ಅಪಘಾತದಲ್ಲಿ ಅವರ ಮುಖಗಳು ಗುರುತು ಸಿಗುತ್ತಿಲ್ಲ, ಆದ್ದರಿಂದ ಅವರ ವಯಸ್ಸು ಅಂದಾಜಿಸುವುದು ಕಷ್ಟ...ಇದುವರೆಗೂ ಇವರ ಸಂಬಂಧಿಗಳು ಯಾರೂ ಬಂದಿಲ್ಲ. ನಿಮಗ್ಯಾಕ್ರಿ ಗ್ರಾಮದ ಗ್ರಾಮಸ್ಥರು ಈ ಸತ್ತವರು ಯಾರೂ ನಮ್ಮ ಗ್ರಾಮದವರಲ್ಲ ಎನ್ನುತ್ತಿದ್ದಾರೆ ಮರ್ತೋಯ್ತು...
ಒಂದು ನಿಮಿಷ ಗೊತ್ತಿಲ್ಲ ಅವರೇ...ಈಗ ನಮ್ಮ ಸ್ಟುಡಿಯೋ ದಲ್ಲಿ ನಿಮಗ್ಯಾಕ್ರಿ ಗ್ರಾಮದ ಪಂಚಾಯತ್ ಮೆಂಬರ್ ನಮ್ಮ ಜೊತೆ ಇದ್ದಾರೆ. ಹೇಳಿ ತಲೆ ಕೆಟ್ಟೋಯ್ತು ಅವರೇ ಈ ದಾರುಣ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಈ ಘಟನೆ ನಡೆದಿರುವುದು ನಿಮ್ಮ ಗ್ರಾಮದ ಹತ್ತಿರ ಆದರೆ ಸತ್ತವರು ಯಾರೂ ನಿಮ್ಮ ಗ್ರಾಮದವರಲ್ಲ ಎನ್ನುತ್ತಿದ್ದೀರಾ...ಇದರ ಹಿಂದೆ ಏನಾದರೂ ತಂತ್ರ ಇದೆಯಾ...
ಹಾ ಹೌದು ಸಾಮಿ...ಇದೆಲ್ಲ ಆ ಕೊಳ್ತೋಗಿದೆ ಪಕ್ಷದ ಕೈವಾಡನೆ ಇರಬೇಕು. ಯಾವುದೋ ಗ್ರಾಮದ ಸತ್ತವರನ್ನು ತಂದು ನಮ್ಮ ಗ್ರಾಮದ ಮುಂದೆ ಹಾಕಿ ನಮ್ಮ ಗ್ರಾಮಕ್ಕೆ ಕೆಟ್ಟ ಹೆಸರು ಬರೋ ಹಾಗೆ ಮಾಡವ್ರೆ ನಾನು ಇದನ್ನು ಸುಮ್ಕೆ ಬಿಡಾಕಿಲ್ಲ...ನಾನು ನಾಳೆ ಒಂದಷ್ಟು ಶವಗಳನ್ನು ಎತ್ತುಕೊಂಡು ಹೋಗಿ ಅವರ ಗ್ರಾಮದ ಮುಂದೆ ಹಾಕಿ ಬತ್ತೀನಿ...ಬರೋಣವೇ ಎಂದು ಎದ್ದು ಹೊರಟು ಹೋದರು....
ಹಾ ಗೊತ್ತಿಲ್ಲ...ಈಗ ಯಾರಾದರೂ ಸತ್ತವರ ಕಡೆಯವರು ಬಂದಿದ್ದಾರ...ಬಂದಿದ್ದರೆ ಅವರು ಏನು ಹೇಳುತ್ತಿದ್ದಾರೆ...
ಹಾ ಮರ್ತೋಯ್ತು ಅವರೇ ಇಲ್ಲಿ ಸುಮಾರು ಜನ ಅವರ ಸಂಬಂಧಿಕರು ಬಂದಿದ್ದರು...ಆದರೆ ಅವರು ಯಾರೂ ಮಾತಾಡಲಿಲ್ಲ...ಮಾತಾಡಿಸಲಿಕ್ಕೆ ಹೋದರೆ ಯಾರೂ ಏನೂ ಉತ್ತರ ಕೊಡಲಿಲ್ಲ. ಸರಿ ಗೊತ್ತಿಲ್ಲ ಅವರೇ ಈಗ ಸತ್ತವರ ಪರಿಸ್ಥಿತಿ ಹೇಗಿದೆ
(ಸತ್ತವರ ಪರಿಸ್ಥಿತಿ ಹೇಗಿರುತ್ತದೆ)...ಹಾ ಮರ್ತೋಯ್ತು ಅವರೇ ಈಗ ಆ ಸತ್ತು ಬಿದ್ದಿದ್ದ ಮೂರು ನಾಯಿಗಳನ್ನು ಎಳೆದು ರಸ್ತೆ ಪಕ್ಕಕ್ಕೆ ಹಾಕಿದ್ದಾರೆ...ಹೆಚ್ಚಿನ ಮಾಹಿತಿಗಳನ್ನು ನಂತರದಲ್ಲಿ ನೀಡುತ್ತೇನೆ...ಕ್ಯಾಮೆರ ಪರ್ಸನ್ ನೆನಪಿಲ್ಲ ಅವರ ಜೊತೆ ಗೊತ್ತಿಲ್ಲ..ಟಿವಿ...
ಇಲ್ಲೀವರೆಗೂ ನೋಡಿದರಲ್ಲ ನಮ್ಮ ವರದಿ...ಹೆಚ್ಚಿನ ಸುದ್ದಿಗಾಗಿ ಪಕ್ಕದಲ್ಲೊಂದು ಅಮೃತಾಂಜನ್ ಇಟ್ಟುಕೊಂಡು ನೋಡ್ತಾ ಇರಿ...ಟಿವಿ.....
Comments
ಉ: ಬ್ರೇಕಿಂಗ್ ನ್ಯೂಸ್...:ಅಚ್ಚರಿ ...??
In reply to ಉ: ಬ್ರೇಕಿಂಗ್ ನ್ಯೂಸ್...:ಅಚ್ಚರಿ ...?? by venkatb83
ಉ: ಬ್ರೇಕಿಂಗ್ ನ್ಯೂಸ್...:ಅಚ್ಚರಿ ...??
In reply to ಉ: ಬ್ರೇಕಿಂಗ್ ನ್ಯೂಸ್...:ಅಚ್ಚರಿ ...?? by ಗಣೇಶ
ಉ: ಬ್ರೇಕಿಂಗ್ ನ್ಯೂಸ್...:ಅಚ್ಚರಿ ...??
In reply to ಉ: ಬ್ರೇಕಿಂಗ್ ನ್ಯೂಸ್...:ಅಚ್ಚರಿ ...?? by venkatb83
ಉ: ಬ್ರೇಕಿಂಗ್ ನ್ಯೂಸ್...:ಅಚ್ಚರಿ ...??
ಉ: ಬ್ರೇಕಿಂಗ್ ನ್ಯೂಸ್...
In reply to ಉ: ಬ್ರೇಕಿಂಗ್ ನ್ಯೂಸ್... by ಗಣೇಶ
ಉ: ಬ್ರೇಕಿಂಗ್ ನ್ಯೂಸ್...
ಉ: ಬ್ರೇಕಿಂಗ್ ನ್ಯೂಸ್...
In reply to ಉ: ಬ್ರೇಕಿಂಗ್ ನ್ಯೂಸ್... by makara
ಉ: ಬ್ರೇಕಿಂಗ್ ನ್ಯೂಸ್...
ಉ: ಬ್ರೇಕಿಂಗ್ ನ್ಯೂಸ್...
In reply to ಉ: ಬ್ರೇಕಿಂಗ್ ನ್ಯೂಸ್... by kavinagaraj
ಉ: ಬ್ರೇಕಿಂಗ್ ನ್ಯೂಸ್...
ಉ: ಬ್ರೇಕಿಂಗ್ ನ್ಯೂಸ್...
ಉ: ಬ್ರೇಕಿಂಗ್ ನ್ಯೂಸ್...