ಮಳೆಯ ಸದ್ದು....
ಇದು ಪಶ್ಚಿಮ ಘಟ್ಟದ ಕೆಳಗಿನ ಪರಿಸರದಲ್ಲಿ ನೆಡೆಯುವ ಕಥೆಯಾದ್ದರಿ೦ದ ಆ ಸು೦ದರ ಮಲೆನಾಡಿನ ಚಿತ್ರಣವನ್ನು ಪರಿಸರವನ್ನು ಕಲ್ಪನೆ ಮಾಡಿಕೊ೦ಡು ಓದಿ..ಕಥೆ ಸು೦ದರವೆನಿಸುತ್ತದೆ...
ದಿನ ದಿನವೂ ಅವಮಾನ ಎಷ್ಟು ದಿನ ಅಂತ ಸಹಿಸುವುದು.ಏನು ತಪ್ಪು ಮಾಡಿದ್ದೀನಿ ಅಂತ ಈ ಶಿಕ್ಷೆ ಅನುಭವಿಸುವುದು.ಹರಿಯುತಿದ್ದ ನೀರನ್ನೊಮ್ಮೆ ದಿಟ್ಟಿಸಿ ನೋಡಿದ,ಅಲ್ಲಿ ಸತ್ತ
ಮೀನೊ೦ದು ನೀರಿನ ಹರಿವಿನಲ್ಲಿ ಕೊಚ್ಚಿಕೊಂಡು ಹೋಗುತಿತ್ತು.ತಿಳಿ ನೀರು ಅದಾದ ಕಾರಣ ನೀರಿನ ಒಳಗಿನದೆಲ್ಲ ಸ್ಪಷ್ಟವಾಗಿ ಕಾಣುತಿತ್ತು.ಬೇರೆ ಮೀನುಗಳೆಲ್ಲ ನೀರಿನ ಹರಿವಿನ
ವಿರುದ್ದ ಈಜಿಕೊ೦ಡು ಹೋಗುತಿದ್ದವು..ಆ ಮೀನುಗಳನ್ನು ನೋಡಿ ಕಪಾಳಕ್ಕೆ
ಹೊಡೆದಂತಾಯಿತು......ಏಕೆಂದರೆ..,ಆ ಸತ್ತ ಮೀನು ನೀರಿನ ಹರಿವಿನಗುಂಟ ಕೊಚ್ಚಿಕೊಂಡು ಹೋಗುತಿತ್ತಿ..ಬದುಕಿದ್ದ
ಮೀನುಗಳು ಹರಿಯೋ ನೀರಿಗೆ ವಿರುದ್ದವಾಗಿ ಹೋಗಲು ಯತ್ನಿಸುತಿದ್ದವು. ಇದನ್ನು ನೋಡಿ ಆ
ಮೀನುಗಳೇ ಬದುಕಲು ಪ್ರವಾಹಕ್ಕೆ ಎದುರಾಗಿ ಹೋರಾಡುವಾಗ ಈ ಭೂಮಿಯ ಮೇಲೆ ಮನುಷ್ಯನಾಗಿ
ಹುಟ್ಟಿ ಅದರಲ್ಲೂ ಗಂಡಸಾಗಿ ಹುಟ್ಟಿ ಹೀಗೆ ಹೇಡಿಯಂತೆ ಏಕೆ ನಾನು ಹೆದರಬೇಕು? ನನ್ನದೇನು
ತಪ್ಪಿದೆ? ಇಲ್ಲ ನಾನು ಇನ್ನು ಹೀಗೆ ಇದ್ದರೆ ನನ್ನು ಬದುಕಲು ಬಿಡುವುದಿಲ್ಲ ಜೀವನವಿಡೀ
ರಣಹೇಡಿಯಂತೆ ಬದುಕಬೇಕಾಗುತ್ತದೆ ನಾನು ತಿರುಗಿ ನಿಂತರೆ ಎಲ್ಲರೂ ನನ್ನನ್ನು
ಗೌರವಿಸುತ್ತಾರೆ, ಗಂಡಸಾಗಿ ಹುಟ್ಟಿದ್ದಕ್ಕೂ ಸಾರ್ಥಕ ಎಂದು ತೀರ್ಮಾನಿಸಿದ. ಅಷ್ಟಕ್ಕೂ
ಆತನ ಚಿಂತೆಗೆ ಈ ಬೇಸರಕ್ಕೆ ಕಾರಣವೇನೆಂದರೆ.............
....................,,,,,,,,,,,,,,,,,,,,,,,,,,,,,,,,,,,,,,,,............................................
ಸುಮಾರು 2-3 ವರ್ಷಗಳ ಹಿಂದೆ
ಜಿಟಿ ಜಿಟಿ ಮಳೆ, ಮನೆ ಮುಂದಿನ ಅಂಗಳವೆಲ್ಲಾ ತೊಯ್ದ ನಿಂತಿದೆ. ಒಳಗಿನಿಂದ ಅಯ್ಯ್ನೋರು
ಮನೆಯಾಕೆಯನ್ನು ಕರೆಯುತಿದ್ದಾರೆ ಆಚೆಗಡೆಯಿಂದ ಬಾವಿ ನೀರಿನಲ್ಲಿ ಜೊತೆಗೆ ಜಿಟಿ
ಮಳೆನೀರಿನಲ್ಲಿ ಸ್ನಾನ ಮಾಡಿಕೊಂಡು ಬಂದ ಮಗ ಚಂದ್ರ....ಹೊರಗಾ ಯಾಕ್ ಹೋಗಿದ್ದಿ ಸ್ನಾನಕ್ಕ ಒಳಗಾ ನಿ೦ತಿದ್ರ ಚಲೂ ಸ್ನಾನ ಅಗ್ತಿತ್ತಲ್ಲೋ ಅ೦ತ ಮಾತು ಶುರು ಮಾಡಿದರು ಅಯ್ನೋರ ಹೆ೦ಡ್ತಿ ನ೦ಜಮ್ಮ.ನಾ ಮೊದಲೇ ಹೇಳಿದೆ ಹೆಂಚು
ಸೋರ್ತಿದೆ ಬದಲಾಯಿಸಿ ಅಂತ. ಕೇಳಿದ್ರಾ ಆಗ ಈಗ ಅಂದಕೋತಾ ಮಳೆಗಾಲು ಶುರುವಾಯಿತಲ್ಲ.ಈಗ
ಎಲ್ಲಿಂದ ಜನ ತಂದು ಹೆಂಚು ಬದಲಾಯಿಸ್ತೀರಿ ಎಂದು ಅಯ್ನೋರ ಪತ್ನಿ ಜೋರುಮಾಡಿದರು.
ಸುಮ್ಮನಿರು ಹೆಂಗಸೆ ನಾ ಕಾಣೆನೆ ನಿನ್ನ ವರಾತವ, ಮನೆ ಹೆಂಚಿನ ಜೊತೆ ಮರ ಮುಟ್ಟನ್ನು
ಬದಲಾಯಿಸಬೇಕು.ಮರ ಮುಟ್ಟುಗಳು ಗೆದ್ದಲು ಹಿಡಿದು ಹೋಗಿದೆ. ಈಗ ಹೆಂಗು ಮಳೆ ಶುರುಹತ್ತಿದೆ ಜನ ಮನಿ ಬಿಟ್ಟು ಆಚಿ ಬರೋದು ಕಮ್ಮಿ. ನಾ
ಪ್ಯಾಟೀಲಿ ನಾಲ್ಕು ಗಂಡಾಳುಗಳಿಗೆ ಹೇಳಿಟ್ಟೀದೀನಿ ಅವರು ನಾಳೇನೆ ಬರ್ತಾರ ಅವರ ಜೊತೆಗೆ
ಹೋಗಿ ಮನಿ ಹಿಂದಿರೋ ಗುಡ್ಡದಾಗ ಚೆನ್ನಾಗಿ ಇರೋ ೨ ಜಾತಿ ಮರಗಳನ್ನ ಉರುಳಿಸಿ ತಂದ್ರಾಯ್ತು....
ಮರದ ಖರ್ಚು ಉಳಿತದೆ ಅ೦ತ ಲೆಕ್ಕಾಚರದ ವಿಷ್ಯಾ ಹೆಳಿದರು.. ಅಯ್ನೋರ ಮಾತು ಕೇಳಿ ಹೆ೦ಡತಿಗೆ ಜರ್ರನೆ ಸಿಟ್ಟು ಏರಿತು..ನಿಮ್ಮ ಬುದ್ದಿಗೆ ಏನಾಗಿದೆ ಮಳೆಯಲ್ಲಿ ಮನೆ ಸೂರು ತೆಗೆದು ನಾವೇನು ಹಗಲೆಲ್ಲ ಝಳಕ ಮಾಡುತ್ತ ಕೂರಬೇಕಾ ಊರವರೆಲ್ಲ ನಮ್ಮನ್ನು ನೋಡಿ ಬಾಗಿಲು ಮುಚ್ಕೋ೦ಡು ನಕ್ತಾರೆ ಗೊತ್ತು೦ಟಾ...ಎ೦ದು ಕೇಳಿದಳು...,ಸುಮ್ಮನಿರು ನಾನೇನು ಮೂಳನಲ್ಲ, ಶಾನುಭೋಗರ ಹಳೆಮನೆ ಖಾಲಿ ಬಿದ್ದಿದೆಯ೦ತ ಅದರಾಗ ೨ ತಿ೦ಗಳು ಕಳದರಾಯ್ತು.ಆಮೇಲೆ ನಾವು ಖರ್ಚಿಲ್ಲದೆ ಮನೆ ಸೂರು ಹೊಸದಾಗಿ ಹಾಕಿಸ್ಕೊಳ್ಳಬಹುದು..ಆಳುಗಳಿಗೆ ೨ ಸಾವಿರ ಕೊಡೋದು ಹೆ೦ಚು ೫ ಸಾವಿರ ಆಗಬಹುದು..ಪುಕ್ಸಟ್ಟೆಯಾಗಿ ಮರ ತರೋ ಯೊಚ್ನೆ ನ೦ದು ಎ೦ದರು..ಬೇರೆ ಹೊತ್ನಾಗ್ ಆಗಿದ್ರ ಹಲ್ಕಾ ನನ್ ಮಕ್ಳು ಕಾಡ್ನಾಗ್ ಮರ ತ೦ದು ಮನಿ ಕಟ್ಕಾತಾರ ಅ೦ತ ರಗಳೆ ಮಾಡೋರು..ಈಗ ಮಳೆಗಾಲ ಯಾರೂ ನೋಡಾಕ್ ಬರಲ್ಲ ಅದೂ ಅಲ್ದೆ ರಾತ್ರಿ ೧೦.ಘ೦ಟೆ ಮೇಲೆ ಹೋಗಿ ತರೋದು ಅ೦ತ ತಮ್ಮ ಕಳ್ಳ ಬುದ್ದಿ ಏನು ಅ೦ತ ಹೇಳ್ಕೋ೦ಡುಬಿಟ್ಟರು..ಚ೦ದ್ರ೦ಗೆ ಹೇಳು ನಾ ಹೇಳ್ದೆ ನಾಳೆ ಮನ್ಯಾಗ್ ಇರ್ಬೇಕು ನಾಳಿ ಸ೦ಜಿ ಆಳುಗೋಳು ಬರ್ತಾರ ಅ೦ತ ಹೇಳು ಎ೦ದು ಹೆ೦ಡತಿಗೆ ತಾಕೀತು ಮಾಡಿದ್ರು...
Comments
ಉ: ಮಳೆಯ ಸದ್ದು....
ಉ: ಮಳೆಯ ಸದ್ದು....