ಮನದ ಮಾತು

ಮನದ ಮಾತು

ಕವನ


 


 


ನಿಂತೆ ಕನ್ನಡಿಯೆದುರು
ಹೇಳಲಿಲ್ಲ ಅದು ಎನಗೆ
ಮನದ ಮಿಡಿತ
ಬಿಡಲಿಲ್ಲ ತುಡಿತ
ಬಿಳಿಹಾಳೆ ಪೆನ್ನು
ಬಂದಾಗ ಕೈಗೆ
ಮೂಡಿದವು ಅಕ್ಷರಗಳ ಮಾಲೆಯಲಿ...


ಎಲ್ಲೋ ಎದೆಯಾಳದಲಿ
ಹುದುಗಿದ್ದ ಮಾತು
ಸಹಿಸದೆ ಬೇಸರಿಸಿದ್ದ ಸಂಗತಿಗಳು
ಮಡುಗಟ್ಟಿದ್ದ ಗತಿಗಳು ಬರುತಿವೆ ಸಾಲು ಸಾಲು ...


ಸವಿಯಾಗಿ ಸುಳಿಯಾಗಿ
ಸೊಲ್ಲಾಗಿ ಕಾಣುವುದು
ತೆರೆದಿಟ್ಟ ಪುಟದಲಿ
ಕಾದಿದೆ ಮನ ಮೆಚ್ಚಿ ನುಡಿಯುವ ಮಾತಿಗೆ
ಬೆನ್ನ ತಟ್ಟುವ ಕೈಗಳಿಗೆ...

Comments