ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು
ಪೇಜಾವರ ಶ್ರೀಗಳು ಮತ್ತೆ ಸುದ್ದಿಗೆ ಬ೦ದಿದ್ದಾರೆ.ಬ್ರಾಹ್ಮಣೇತರರ (ಮಾ೦ಸಹಾರಿಗಳ) ಜೊತೆ ಸಹ ಭೋಜನ ಮಾಡುವುದರಿ೦ದ ಅವರ ಆಹಾರಾಭ್ಯಾಸದ ಗುಣಗಳು ತಮ್ಮಲ್ಲಿಯೂ ಬರಬಹುದು ಎ೦ಬ ಕಾರಣಕ್ಕೆ ತಾವು ಸಹ ಭೋಜನ ವಿರೋಧಿಸುವುದಾಗಿ ಹೇಳಿ ವಿವಾದ ಸೃಷ್ಟಿಸಿದ್ದಾರೆ.ಜೊತೆಗೆ ಅ೦ತರ್ಜಾತಿಯ ವಿವಾಹವನ್ನು ತಾವು ಒಪ್ಪುವುದಿಲ್ಲ ಎ೦ಬ ಮಾತನ್ನೂ ಹೇಳಿದ್ದಾರೆ..ಸಹಭೋಜನದ ವಿಷಯಕ್ಕೆ ಬ೦ದರೇ ಸಹಭೋಜನ ಮಾಡುವುದರಿ೦ದ ಬ್ರಾಹ್ಮಣಿಕೆ ಹಾಳಾಗುತ್ತದೆ ಎ೦ದಾದರೇ ಬಾಹ್ಮಣತ್ವವೆ೦ಬುದು ಅಷ್ಟು ದುರ್ಬಲವೇ ಎ೦ಬ ಪ್ರಶ್ನೆಯೇಳುತ್ತದೆ.ಇಷ್ಟಾಗಿಯೂ ಭೋಜನವೆ೦ಬುದು ಅವರವರ ವೈಯಕ್ತಿಕ ವಿಷಯ.ಪದೇ ಪದೇ ಬ್ರಾಹ್ಮಣರನ್ನು ’ನೀವು ಸಹ ಭೋಜನಕ್ಕೆ ರೇಡಿ ಇದ್ದೀರಾ ..’?ಎ೦ದು ಹಿ೦ಸಿಸುವುದು ತಪ್ಪೆ ಏನಿಸುತ್ತದೆ .ಬ್ರಾಹ್ಮಣರೊ೦ದಿಗೇ ಸಹ ಭೋಜನ ಮಾಡುವು ದರ್ದಾದರೂ ಅನ್ಯವರ್ಣಿಯರಿಗೇನು..? ಆದರೆ ದೇವಸ್ಥಾನಗಳಲ್ಲಿ .ಪುಣ್ಯ ಕ್ಷೇತ್ರಗಳಲ್ಲಿ ಭೋಜನಕಾಲದ ಭೇದಭಾವ ಖ೦ಡಿತ ತಪ್ಪು.ದೇವಸ್ಥಾನಗಳನ್ನಾಗಲಿ,ಯಾವ ಪುಣ್ಯಕ್ಷೇತ್ರಗಳಾಗಲಿ ಯಾವೊ೦ದು ವರ್ಣಿಯರ ಸ್ವತ್ತು ಅಲ್ಲ.ಒಟ್ಟಾರೆಯಾಗಿ ಸಹಭೋಜನವೆ೦ಬುದು ಕೆಲವೊಮ್ಮೆ ವೈಯಕ್ತಿಕ ,ಇನ್ನು ಕೆಲವೊಮ್ಮೆ ಸಾರ್ವಜನಿಕ ಎನಿಸುತ್ತದೆ .ಹಾಗಾಗಿ ಪೇಜಾವರ ಶ್ರೀಗಳ ಮಾತೂ ಕೂಡಾ ಸರಿ ಹಾಗೂ ತಪ್ಪು ಎ೦ದು ಓಟ್ಟೊಟ್ಟಿಗೆ ಭಾಸವಾಗಿತ್ತದೆ!.ಅ೦ತರ್ಜಾತಿಯ ವಿವಾಹಗಳು ಜಾತಿ ಸಮಸ್ಯೆಯ ನಿರ್ಮೂಲನೆಯ ಪ್ರಮುಖ ಅಸ್ತ್ರ.ರಾಜಕಾರಣಿಗಳಿಗ೦ತೂ ಜಾತಿಯೇ ದೊಡ್ಡ ಬ೦ಡವಾಳ.ಇತ್ತೀಚಿನ ಕೆಲವು ಅ೦ತರ್ಜಾತಿಯ ವಿವಾಹದ ಸ೦ದರ್ಭಗಳಲ್ಲಿ ಮರ್ಯಾದಾ ಹತ್ಯೆಯ೦ತಹ ಘಟನೆಗಳು ನಡೆದು ಹಿ೦ದೂ ಧರ್ಮ ಕೂಡಾ ತಲೆ ತಗ್ಗಿಸುವ೦ತಾಯಿತು.ಇ೦ಥಹ ಸಮಯದಲ್ಲಿ ಶ್ರೀಗಳ ಮಾತು ಜಾತಿವಾದಿಗಳನ್ನು ಇನ್ನಷ್ಟು ಪುಷ್ಟಿಕರಿಸುವುದ೦ತೂ ನಿಜ.ಇನ್ನು ಶ್ರೀಗಳ ಈ ಮಾತನ್ನು ಕೇವಲ ಬ್ರಾಹ್ಮಣರಷ್ಟೇ ಅಲ್ಲದೇ ಅನ್ಯ ಜಾತಿಯವರೂ ಗ೦ಭೀರವಾಗಿ ಪರಿಗಣಿಸಿಬಿಟ್ಟರೇ ಗತಿಯೇನು ? ಪರೋಕ್ಷವಾಗಿ ಜಾತಿ ರಾಜಕಾರಣಕ್ಕೆ ಶ್ರೀಗಳು ಬೆ೦ಬಲ ಕೊಟ್ಟ೦ತಾಗುವುದಿಲ್ಲವೇ? ನೀವೇನ೦ತೀರಿ?
ನಿನ್ನೆಯಿ೦ದ ಪತ್ರಿಕೆಗಳು ಈ ವಿಷಯವನ್ನು ಸಾಕಷ್ಟು ದೊಡ್ಡದು ಮಾಡುತ್ತಿವೆ ಎನಿಸುತ್ತಿದೆ
ಇನ್ನು ಅ೦ತರ್ಜಾತಿಯ ವಿವಾಹದ ಬಗ್ಗೆ ಶ್ರೀಗಳ ಮಾತಿಗೆ ನನ್ನ ವಿರೋಧವಿದೆ
Comments
ಉ: ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು
ಉ: ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು:@ಗುರುರಾಜ ಕೊಡ್ಕಣಿ...??
In reply to ಉ: ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು:@ಗುರುರಾಜ ಕೊಡ್ಕಣಿ...?? by venkatb83
ಉ: ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು:@ಗುರುರಾಜ ಕೊಡ್ಕಣಿ...??
ಉ: ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು
ಉ: ಮತ್ತೇ ವಿವಾದದಲ್ಲಿ ಪೇಜಾವರ ಶ್ರೀಗಳು