ಮೂಢ ಉವಾಚ - 147

ಮೂಢ ಉವಾಚ - 147

ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲು
ಕಣ್ಣಿದ್ದು ಕುರುಡನೆನಿಸುವೆಯೊ ನೀನು |
ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲು
ನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..293


ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿ
ಜ್ಞಾನಿಗಳ ಹಿತನುಡಿಯು ನಾಯಕಗೆ ನೆರವಾಗೆ |
ಅಂತಿಪ್ಪ ನಾಡು ಪುಣ್ಯವಂತರ ಬೀಡು
ಸಜ್ಜನರ ಒಡನಾಟ ಹಿತಕಾರಿ ಮೂಢ || ..294
*******************
-ಕ.ವೆಂ.ನಾಗರಾಜ್.
 

 

Rating
No votes yet

Comments