ಇಂತಾ ಪುಣ್ಯಾತ್ಮರು ಈಗಲೂ ಇದ್ದಾರೆ!

ಇಂತಾ ಪುಣ್ಯಾತ್ಮರು ಈಗಲೂ ಇದ್ದಾರೆ!

 ಆ ದಂಪತಿಗಳಿಬ್ಬರೂ ಬೆಂಗಳೂರಿನ ಒಂದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಾರೆ. ತಿಂಗಳೆಲ್ಲಾ ದುಡಿದರೂ ಇಬ್ಬರಿಂದ ಏಳೆಂಟು ಸಾವಿರ ರೂಪಾಯಿ ಸಂಪಾದನೆ ಇಲ್ಲ. ಕಷ್ಟ ಪಟ್ಟು ಉಳಿತಾಯ ಮಾಡಿ ಒಂದು ಚಿಕ್ಕ ಸೈಟ್ ಕೊಂಡರು. ಸರ್ಕಾರದ ಸಹಾಯಧನದಿಂದ ಪುಟ್ಟ ಮನೆಯನ್ನೂ ಕಟ್ಟಿದರು. ಹೊಸ ಮನೆಗೆ ಹೋಗಬೇಕು. ಆದರೆ ಹೋಗಲು ಹಿಂಜೆರೆಯುತ್ತಿದ್ದಾರೆ. ಕಾರಣ ತಿಳಿದು ನಾನು ಮೂಕ ನಾಗಿ ಬಿಟ್ಟೆ." ನೋಡಿ ನಮ್ಮನೆಗೆ ಇಬ್ಬರು ವಿದ್ಯಾರ್ಥಿಗಳು ನಿತ್ಯವೂ ಊಟಕ್ಕೆ ಬರುತ್ತಾರೆ.ನಾವೇನಾದರೂ ಐದಾರು ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಹೊಸಮನೆಗೆ ಹೋಗಿ ಬಿಟ್ಟರೆ ಆ ಹುಡುಗರಿಗೆ ತೊಂದರೆ ಆಗುತ್ತೆ!!

ನಾನು ಕೇಳಿದೆ" ನೀವು ದಂಪತಿಗಳು ಬೆಳಿಗ್ಗೆ ಎಂಟಕ್ಕೆ ಕೆಲಸಕ್ಕೆ ಹೋಗಿ ಬಿಟ್ಟರೆ ರಾತ್ರಿ ಹಿಂದಿರುಗುತ್ತೀರಿ. ಆ ಹುಡುಗರಿಗೆ ಊಟ ಯಾವಾಗ ಹಾಕ್ತೀರಿ?"

ಅವರು ಹೇಳಿದ್ರು" ನನ್ನ ಪತ್ನಿ ಐದಕ್ಕೆ ಎದ್ದು ಸ್ನಾನ ಮುಗಿಸಿ ಅಡಿಗೆ ತಯಾರು ಮಾಡ್ತಾಳೆ. ನಾವು ಕ್ಯಾರಿಯರ್ ತೆಗೆದುಕೊಮ್ದು ಹೋಗ್ತೀವಿ. ಮನೆಯ ಬೀಗದ ಮತ್ತೆರಡು ಕೀಗಳು ಆಹುಡುಗರಿಗೆ ಕೊಟ್ಟಿರುವೆವು. ಅವರ ಪಾಡಿಗೆ ಅವರು ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗ್ತಾರೆ.

ಮತ್ತೆ ಕೇಳಿದೆ" ಅವರು ನಿಮ್ಮ ಹತ್ತಿರದ ನೆಂಟರೇ?
ಅವರು ಹೇಳಿದರು.....
" ಅವರ ಕುಲ ಯಾವುದೂ ಅಂತಾ ಕೂಡ ನಮಗೆ ಗೊತ್ತಿಲ್ಲ."

...ಅಬ್ಭಾ! ನನ್ನ ಕಣ್ಣು ತೇವವಾಗಿತ್ತು!!

 

Rating
No votes yet

Comments