ಎತ್ತರದಲಿ ಇದ್ದುಬಿಡು

ಎತ್ತರದಲಿ ಇದ್ದುಬಿಡು

ಎಂಥಾ ಕೊಳಲುವಾದಕನಾದರೂ
ಬಿದಿರನು ಕೊಳಲಾಗಿಸಲು
ಕುಶಲಕರ್ಮಿಗಳು ಬೇಕು
 
ಎಂಥಾ ಹಾಡುಗಾರನಾದರೂ
ಪದಗಳ ಮಾಲೆಯಾಗಿಸಲು
ಕವಿಗಳು ಬೇಕು
 
ಎಂಥಾ ವ್ಯವಹಾರಸ್ಥನಾದರೂ
ಯೋಜನೆ ಕಾರ್ಯರೂಪಗೊಳಿಸಲು
ಕಾರ್ಮಿಕರು ಬೇಕು
 
ಎಂಥಾ ಯಶಸ್ಸು ಪಡೆದರೂ
ಸಾಧನೆಯ ಹಾದಿಯಲಿ ಹಲವರ
ನೆರವು ಸಹಕಾರ ಬೇಕು
 
ನಾನು ನನ್ನಿಂದೆನ್ನುತ
ಬೀಗದಿರು
ನಾವು ನಮ್ಮಿಂದೆನ್ನುತ
ಮಾಗುತ ಬಾಗುತ
ಎತ್ತರದಲಿ ಇದ್ದುಬಿಡು

Rating
No votes yet

Comments