ಹಾಡಾಗದ ಕವಿತೆ..
ಕವನ
ಹಾಡೊಂದು ಬರೆಯುವೆ
ಪಲ್ಲವಿ ನೀನಾಗ ಬಾರದೇ
ಒಲವೊಂದು ಮೂಡಿದೆ.
ಪ್ರೇಯಸಿ ನೀನಾಗ ಬಾರದೆ
ಯಾರಿಗೆ ಹೇಳೋದು ಇನ್ಯಾರಿಗೆ
ಕೇಳೋದು ನೀನೊಬ್ಬಳೇ ಅಲ್ಲವೇ
ನನ್ನ ಪ್ರೇಮ ಕವಿತೆ
ಒಮ್ಮೆ ನೀ ಬಂದು ಕಲ್ಪನೆ
ಮೂಡಿಸಿದರೆ ಸಾಕು ಚರಣ
ತಾನೆ ಹೊಳೆಯುತ್ತದೆ
ಹಾಡೊಂದು ಬರೆಯುವೆ ಪಲ್ಲವಿ
ನೀನಾಗ ಬಾರದೆ. ಚರಣದಲ್ಲಿ
ನನ್ನ ಹೃದಯ ತೆರೆದು ಕೊಳ್ಳುವುದು
ಹಾ!!! ಪಲ್ಲವಿ ಇಲ್ಲದೇ ಹಾಡು ಆಗಲು
ಸಾಧ್ಯವೇ..? ನೀ ಪಲ್ಲವಿ ಆಗು..ನಾ
ಚರಣ ಆಗುವೆ
ಪ್ರೇಮದ ನಿನ್ನ ಪಲ್ಲವಿಯಲ್ಲಿ ನಾನು
ಚರಣ ಆಗಿದ್ದೇನೆ ಈಗ ದೂರದಲ್ಲಿ
ಎಲ್ಲೋ ನಮ್ಮ ಪ್ರೇಮದ ಸ್ವರ ಕೇಳುತ್ತಿದೆ
ಕೇಳುತ್ತಿಲ್ಲವೇ..?
- ರೇವನ್
Comments
ಉ: ಹಾಡಾಗದ ಕವಿತೆ..