ಮಳೆಯ ಸದ್ದು... ಮುಕ್ತಾಯ

ಮಳೆಯ ಸದ್ದು... ಮುಕ್ತಾಯ

 ನನ್ನ ಕಥೆ ೧೦೦ ದಿನ ಓಡದಿದ್ದರು ಸಾಧಾರಣ ಯಶಸ್ಸಾದ್ರು ಸಿಗತ್ತೆ ಅ೦ತ  ಮಾಡಿದ್ದೆ...

ಆದ್ರೆ ಅಟ್ಟರ್  ಫ್ಲಾಪ್ ಆಗಿದೆ ಆದ್ರೂ ಕೂಡ ೩ನೇ ಭಾಗ ಬರೆದು ಮ೦ಗಳ ಹಾಡುತಿದ್ದೀನಿ..

ಮನೆಗೆ ಬಂದು ಚಂದ್ರ ಶಾನುಭೋಗರ ವಿಚಾರ ಎಲ್ಲ ಹೇಳಿದ.. ಅಯ್ನೊರಿಗೆ ವಿಷಯ ಅರಿವಾಯಿತು. ಉರುಳು ಹಾಕಿರೋದು ಅವರೇ ಅಂತ. ತಾನೇ 

ಶಾನುಭೋಗರ ಬೇಟಿ ಮಾಡಿ ತಿಳಿದೆ ಮಾಡಿದ ತಪ್ಪು ಕ್ಷಮಿಸಿ ಅಂತ ಕೇಳಿಕೊಂಡು ಬರಲು ನಿರ್ಧರಿಸಿದರು.

ಇತ್ತ  ಶಾನುಭೋಗರ  ನಖಶಿಕಾಂತವೆಲ್ಲ ಉರಿದೋಗಿತ್ತು ಈ ವಯ್ಯ ನನ್ ಮ್ಯಾಗೆ ಕಂಪ್ಲೇಟು ಕೊಡಾಕ ಹೋಗ್ಯಾನ ಎಶ್ಟು ಇರ್ಬೇಕು ಅಂತಿದ್ರು ಶಾನುಭೋಗರು.. ಶಾನುಭೋಗರ ಭೇಟಿ ಮಾಡಲು  ಹೊರಟಿದ್ದ ಅಪ್ಪನ ತಡೆದು ಚ೦ದ್ರ ನಾನೇ ಹೋಗ್ಬರ್ತೀನಿ ಇರಪ್ಪ ಅಂತ ಚಂದ್ರನೇ ಶಾನೇಭೋಗರ ಬಳಿ ಬಂದ. ಶಾನುಭೋಗರು ಮುಯ್ಯಿಗೆ ಮುಯ್ಯಿ ಅನ್ನೋ ಜಾಯಮಾನದವರು. ಅಷ್ಟುಸುಲಭಕ್ಕೆ ಚಂದ್ರ ಅಲ್ಲ ಅವರಪ್ಪನ ಮಾತ್ಗೆ ಮಣಿಯವರಾಗಿರಲಿಲ್ಲ. ಅಷ್ಟು ಗತ್ತು ಆಯಪ್ಪಂದು. ಚಂದ್ರ ಶಾನುಭೋಗರ ಬಳಿ ಬಂದು ಶಾನುಭೋಗರೆ ಅಂದ. ಶಾನುಭೋಗರು ಬಾ ಚಂದ್ರ ಅಂದು ಏನ್ಲ ನಿಮಪ್ಪ ಎಲ್ಲಿ ಅಂದ್ರು. ಶಾನುಭೋಗರೇ ಅವರು ಹೊರಟಿದ್ರು ನಾನೆ ತಡೆದು ನಾನೇ ಬಂದೆ. ಏನೋ ನೀವು ಅಂತ ತಿಳಿದೆ ತಪ್ಪು ಮಾಡವ್ರೇ ಹೊಟ್ಟೇಗಾಕಳಿ ಅಂದ.. ಸಿಟ್ಟಾದ ಶಾನುಭೋಗ ಏಯ್ ನಂಗ ಅವಮಾನ ಮಾಡ್ಯಾನ ನಿಮ್ಮಪ್ಪ ಬಿಡ್ತೀನಾ ಸಿಟ್ ಬಂದ್ರ ಯಾರೇ ಆದ್ರೂ ಮುಲಾಜಿಲ್ಲ ಅಂದ್ರು  ಶಾನುಭೋಗರು. ಇಲ್ಲಿ ಚ೦ದ್ರ ಅವರಪ್ಪ ಈ ಶಾನುಭೋಗರಿಗೆ ಹೆದರಲು ಕಾರಣವೇನೆ೦ದರೆ ಶಾನುಭೋಗ ಊರಿನ ಒಬ್ಬ ಪ್ರಭಾವಿ ವ್ಯಕ್ತಿ.ಆತನನ್ನು ಎದಿರು ಹಾಕಿಕೊ೦ಡರೆ ಇವರಿಗೆ ಅನಾನುಕೋಲ..ಹಾಗಾಗಿ ಅವನಿಗೆ ತಪ್ಪಾಯಿತೆಒದು ಕೇಳಲು ಬರಬೇಕಾಗಿತ್ತು... ಆದರೆ ಚ೦ದ್ರ ಎಷ್ಟು ಬೇಡಿಕೊ೦ಡರು ಶಾನುಭೋಗ ಶ್ಯಾನೆ ಆಡಿದ.ಕೊನೆಗೆ  ಮಾತಿಗೆ ಮಾತು ಬೆಳೆದು ಚಂದ್ರನ   ತಾಳ್ಮೆಯ ಕಟ್ಟೆ  ಹೊಡೆದು ಶಾನುಭೋಗರೊಂದಿಗೆ ಜಗಳವಾಡಿದ.  ಶಾನುಭೋಗರ ಆಳುಗಳು ಚಂದ್ರನಿಗೆ ಚೆನ್ನಾಗೆ ಹೊಡೆದು ತಂದು ಮನೆಗೆ ಎಸೆದು ಹೋಗಿದ್ದರು..

ಇದಾಗೆ 1 ತಿಂಗಳಿನವರೆಗು ಶಾನುಭೋಗ ಯಾವದೇ ಮುಯ್ಯಿ ತಿರ್ಸಾಕ ಬಂದಿರಲಿಲ್ಲ. ಅವನ ಮುಯ್ಯಿ ಚಂದ್ರನಿಗೆ ಹೊಡೆಯ ಮೂಲಕ ತೀರಿತ್ತು. ಆದ್ರೆ ಚಂದ್ರ ಕೇಳೋ ಸ್ತಿತಿಯಲ್ಲಿರಲಿಲ್ಲ ಅವನ ಮನಸ್ಸು ದ್ವೇಷ ಸಾದನೆಗಾಗಿ ಹಾತೊರೆಯುತಿತ್ತು......................

................................,,,,,,,,,,,,,,,,,,,,,,,,,,,,,,,,,,,.................................................

ಹೊಳೆಯ ಬದಿಯ ಬ೦ಡೆಯ ಮೇಲೆ ಕೂತು  ಇದನ್ನೆಲ್ಲಾ ನೆನೆಸಿಕೊ೦ಡು

ಅ೦ದು ಆದ  ಅವಮಾನ  ನೆನೆದು ಸಿಟ್ಟಾಗುತಿದ್ದ...ಆತನೇ ತಪ್ಪು ಮಾಡಿದ್ದರು ನಾವು ಏನು ಮಾಡಲಾಗಲಿಲ್ಲವಲ್ಲ  ಅ೦ತ  ಅ೦ದುಕೊ೦ಡ..

ಅಷ್ಟರಲ್ಲಿ ಚೆನ್ನ ಬಂದು ಚಂದ್ರನನ್ನು ಗಾಬರಿಯಿಂದ ಕರೆದಿದ್ದ....

...........................,,,,,,,,,,,,,,,,,,,,,,,,,,,,,,,,,....................

ಶಾನುಭೋಗರಿಗೆ ಅಯ್ನೊರು ಮರ ಕದ್ದು ತಂದ ವಿಚಾರ ಹೇಗೋ ತಿಳಿಯತು. ಅದೇ ಕಾರಣಕ್ಕಾಗಿ ಅವರು ಒಂದು ದೂರನ್ನ ಕೊಟ್ಟು ಬೇಗ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಂದರು...ಇಲ್ಲಿ ಶಾನ್ಭೋಗರ  ಮಾತಿಗೆ ಕಿಮ್ಮತಿತ್ತು...ಆದ್ದರಿ೦ದ   ಅಯ್ನೋರ .

ಮನೆ ಬಳಿ ಅಧಿಕಾರಿಗಳು ಬಂದು ಪರೀಶೀಲನೆ ನೆಡೆಸಿದ್ದರು. ಅಯ್ನೋರು ಈ ಘಟನೆಯ ತರುವಾಯ ಸೂರು ಹಾಸಲು ಮುಂದಾಗಿರದಿದ್ದರಿಂದ ಮರಗಳು ಹಿತ್ತಲಲ್ಲೇ ಬಿದ್ದಿದ್ದವು.. ಅಧಿಕಾರಿಗಳು ಶಾನುಭೋಗರು ನೀಡಿದ ದೂರಿನನ್ವಯ  ಮರಗಳನ್ನು ಸೀಝ್ ಮಾಡಿ ಅಯ್ನೊರನ್ನ ಬಂಧಿಸಿ ಕರೆದೊಯ್ದರು.....

ರೊಚ್ಚಿಗೆದ್ದ ಚಂದ್ರ ನೇರಾನೇರ ಪಟ್ಟಣದ ವುಡ್ ಮಿಲ್ ಗೆ ಹೋಗಿ ಹಳೇ ಡೇಟಿನ ಬಿಲ್ ಹಾಕಿಸಿ ಮರ ಕೊಂಡು ತಂದದಾಗಿ ಸಾಕ್ಷಿ ತಯಾರುಮಾಡಿದ.

ಅಲ್ಲಿಂದ ಆ ಗುಡ್ಡದಲ್ಲಿ ಉರುಳು ಹಾಕಿದನ್ನು ಮೇಲಾಧಿಕಾರಿಗಳಿಗೆ ದೂರು ಕೊಟ್ಟು ಪತ್ರಿಕೆಯಲ್ಲಿ ಬರುವಂತೆ ಮಾಡಿದ .ತಂದೆಗೆ ಜಾಮೀನು ಕೊಡಿಸಿ ಕರಕೊಂಡು ಬಂದ.. ಆನಂತರ ಉರುಳಿನ ವಿಚಾರವನ್ನು ತನಿಖೆ ಮಾಡಿದ ಅಧಿಕಾರಿಗಳು ಶಾನುಭೋಗನ ಮೇಲೆ ಆರೊಪ ಹೊರಿಸಿ ಅರೆಷ್ಟ್ ಮಾಡಿದರು

ಅಲ್ಲಿಗೆ ಚಂದ್ರನ ಮುಯ್ಯಿ ತೀರಿತ್ತು ಕಾಡಿಗೆ ಮಾಡಿದ ಅನ್ಯಾಯದ ಪ್ರತಿಫಲ ಅಯ್ನೋರು ಅನುಭವಿಸಿದ್ದರು ಹೊಸದಾಗಿ ಪಟ್ಟಣದಿಂದ ಮರ ತರಿಸಿ ಸೂರು ಹೆಂಚು ಹಾಕಿಸಿಕೊಂಡರು.....

 

Comments