ಕುವೆಂಪು ‍‍ ನನ್ನ್ನ ಬಾಳ‌ ಕಂಪು

ಕುವೆಂಪು ‍‍ ನನ್ನ್ನ ಬಾಳ‌ ಕಂಪು

ಕವನ

ನಿಮ್ಮ  ದರ್ಶನ ಗೈದ  ಆ ದಿನ


ಕುಣಿ  ಕುಣಿದಾಡಿತು ತನು ಮನ


 ಬಿರಿ ಮೊಗ್ಗಾಗೆ ಹಿರಿ ಹಿಗ್ಗಿತು


ಕಲ್ಪನೆಯ ಅಲೆ ಅಲೆಯಲಿ   ತೇಲಿತು 


ಹರುಷ  ಸಾಗರದಿ  ಈಜಾಡಿತು 


ಭಾವ ಸಮಾಧಿಯ ಸುಷುಪ್ತ   ತರಂಗದಿ             


 ಹೃದಯ  ತೃಪ್ತಿಯ   ಪಡೆದಿತ್ತು                         


ನಿಮ್ಮ ಭವ್ಯ ರೂಪವ ಹೀರಿ ಹೀರಿ


      ಕಣ್ಣು  ತಣಿಯದಾಯಿತು


ನಿಮ್ಮ ಆಣಿ ಮುತ್ತು  ಕೇಳಿ , ನಿಮಿರಿ


         ಕಿವಿ ದಣಿಯದಾಯಿತು


   ಸಂತಸದ ಅಮಲಿನಲಿ ಹಾಡಿ,ಓಲಾಡಿ


  ಕಾವ್ಯ ರಸ ಋಷಿಯ ಸ್ವರ್ಗಕ್ಕೇರಿದಂತಾಯಿತು !


  ಅಮೃತವ ಹೀರಿ ಅಮರತೆಯ ಪಡೆದ  ದೇವತಯಂತೆ


  ರವಿಯೋದಯ ಕಂಡು ಬಿರಿಯುವ  ಕಮಲದಂತೆ


  ಚಂದ್ರೋದಯ ಕಂಡು ಹಾಡುವ ಚಕೋರನಂತೆ


          ಸುಪ್ರೀತ  ನನ್ನ ತನು ಮನ


 ರಸ ರೋಮಾಂಚನದ  ಹೂವಾಗರಳಿತು


  ನನ್ನ ನಿಮ್ಮ ಗುರು-ಶಿಷ್ಯ ಸಂಬಂಧ


  ದ್ರೋಣ- ಏಕಲವ್ಯ ಋಣಾನುಬಂಧ


  ಯಾವ  ಜನ್ಮದ ಪೂಜಾಫಲ  ?


  ಯಾವ ಜನ್ಮದ ಸುಕೃತವೋ ನನಗೀ  ಅನಂತ ಶಕ್ತಿಯ ಪ್ರೇರಕ !  


   


 

Comments