ಗೋಡೆಗಳ ಮೇಲೆ ಮೆಚ್ಚುಗೆಗಳಾಟ!

ಗೋಡೆಗಳ ಮೇಲೆ ಮೆಚ್ಚುಗೆಗಳಾಟ!

ಗೋಡೆಗಳ ಮೇಲೆ ಮೆಚ್ಚುಗೆಗಳಾಟ!


ನಾನು ಬರೆದು ಹಾಕಿದ್ದೇನೆ ನೋಡು ನನ್ನ ಗೋಡೆಯ ಮೇಲೆ
ಹೋಗು ಒಮ್ಮೆ ಓದಿ ತಿಳಿಸಿಬಿಡು ನಿನ್ನ ಮೆಚ್ಚುಗೆಯನ್ನು ಅಲ್ಲೇ

ನಾನೂ ಬರೆಯುತ್ತಿರುತ್ತೇನಲ್ಲ ಸದಾ ನನ್ನ ಗೋಡೆಯ ಮೇಲೆ
ನೀನೇಕೆ ವ್ಯಕ್ತಪಡಿಸಿಲ್ಲ ಮೆಚ್ಚುಗೆಯನ್ನು ನನ್ನ ಬರಹದ ಮೇಲೆ

ಹಳೆಯದನೆಲ್ಲಾ ಮರೆತು ಬಿಡು ಇನ್ನು ಹಾಗಾಗುವುದಿಲ್ಲ ಕಣೆ
ಇನ್ನು ನೀನು ಬರೆಯುವುದನ್ನೆಲ್ಲಾ ನಾ ಮೆಚ್ಚುತ್ತೇನೆ ನಿನ್ನಾಣೆ

ಹಾಗಾದರೆ ನಾನೂ ಮೆಚ್ಚುತ್ತೇನೆ ನಿನ್ನ ಬರಹಗಳನ್ನು ಇನ್ನು
ನೀನು ನಿಲ್ಲಿಸಿದಂದು ನಾನೂ ನಿಲ್ಲಿಸುತ್ತೇನೆ ಮೆಚ್ಚುವುದನ್ನು!
*****************

Rating
No votes yet

Comments