ಮದುವೆ ಯಾರಿಗೆ ಬೇಕು...

ಮದುವೆ ಯಾರಿಗೆ ಬೇಕು...

ಮದುವೆಯಾಗದೆ ಜೊತೆಗೆ ಇರೊದು ಇವಾಗ ಹುಡುಗ-ಹುಡುಗಿಯರಿಗೆ ಕಾಮನ್. ಕಾಮನ ಆಟ ಆಡೊರಿಗೆ ಎಲ್ಲಾ "ಕಾಮನ್"ನೆ!

ಅಂದಹಾಗೆ, ನಿನ್ನೆ ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ತನ್ನ ಹೆಂಡತಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಇವರು ಸುಮಾರು 3 ವರ್ಷಗಳಿಂದ ಜೊತೇಗೇ ಇದ್ದರಂತೆ, ಮದುವೆಯಾಗದೆ! ಕೆಲದಿನಗಳ ಹಿಂದಷ್ಟೆ ಮದುವೆಯಾದದ್ದು (ಯಾಕೋ?). ಮದುವೆಯಾದ ಸ್ವಲ್ಪ ದಿನಗಳಲ್ಲೆ ಆ ಹುಡುಗಿ ಇನ್ನೊಬ್ಬನ ಜೊತೆ ಸರಸ ಆಡ್ತಾ ಇದ್ದದ್ದು ಗೊತ್ತಾಯಿತು. ಏಕಿರಬಹುದು? ಇವಳಿಗೆ ಈ ಹುಡುಗ "ಬೋರ್" ಆದನಾ? ಅಥವಾ, ಐ.ಟಿ. ಕೆಲಸದ ಒತ್ತಡದಿಂದ, ಇವಳ ಬಗ್ಗೆ ಅವನ ಗಮನ (ಶಕ್ತಿ!?) ಕಡಿಮೆ ಆಯ್ತಾ? ಅಥವಾ,ಇದು modern ಹುಡುಗಿಯರ "ಫ್ಯಾಷನ್"ನ? ಅಥವಾ,ನಮ್ಮ ಹಿರಿಯರು (ತಮ್ಮ ಅನುಭವದಿಂದ?!) ಹೇಳಿದ "ಮದುವೆ" ಎಂಬ ಪವಿತ್ರ ಸಂಭಂಧವನ್ನು ತಿರಸ್ಕರಿಸಿ, "live-in relationship" ಪ್ರಯೋಗಿಸಲು ಹೋದ ಪರಿಣಾಮವೆ?

ವೇದ ಕಾಲದಲ್ಲಿ "ಮದುವೆ"ಅನ್ನೊ concept ಟೆ ಇರ್ಲ್ಲಿವಂತೆ! ಮಕ್ಕಳಮೇಲೆ, ಸಮಾಜದಮೇಲೆ ಆಗೊ ದುಷ್ಪರಿಣಾಮವನ್ನು ನೋಡಿ ಬದಲಾವಣೆಗಳನ್ನು ತಂದರು. ಈಗ ಮತ್ತೆ ಅದೇ ತಪ್ಪು ಮಾಡ್ತಾ ಇದೀವಿ. ಇತಿಹಾಸದ ಪುನರಾವರ್ತನೆ ಅಂತೀರೆನೋ! ಇರಬಹುದು.

ಇಂಥಾ ಗಟನೆಗಳು ಇತ್ತೀಚಿಗೆ ಹೆಚ್ಚಾಗಿ ನಡೀತಾ ಇರೊದು ಗಮನಾರ್ಹ. ಸ್ತ್ರೀ ಸ್ವಾತಂತ್ರ ಅಂದ್ರೆ ಇದೇನಾ???

ಬಾchi - www.sumneblog.com

Rating
No votes yet

Comments