ಹೀಗೇಕೆ !

ಹೀಗೇಕೆ !

ಕವನ

ಹೀಗೇಕೆ !

ಯಾವುದೋ ಮಿಂಚು ಮಿಂಚುಳ್ಳಿ ಯಂತೆ ಹಾರಿ ಹಾರಿ

ಕಾಡ ಹತ್ತಿದೆ ಇಂದು , ತಿಳಿ ತಿಳಿ ಕೊಳದಲ್ಲಿ ಅಲ್ಲೊಂದು ಇಲ್ಲೊಂದು ದುಂಡನೆಯ ಅಲೆಯಂತೆ!

ಮನಸೇಕೆ ಉಪೆಮೆಯನ್ನು ಹುಡುಕುತ್ತೆ ? ಭಾವನೆಗೆ ರೂಪ ಬೇಕೇ ?

ಬಣ್ಣದ ಮುಗಿಲಿಗೇಕೆ ಈ ಸೊಬಗು ?

ಹೇ ಸುಂದರ ! ಇಷ್ಟು ರೂಪ ಕೊಟ್ಟು

ನಿತ್ಯ ನಾಗಿ ಬಿಂಬನಾಗಿ ಜೀವ ನಾಗಿ  ನಮ್ಮಲ್ಲೇ ನಿಂತೆಯ ?

ಹಸಿರು ಬಣ್ಣ ಭುವಿಗೆ ಮಾತ್ರ !

ನಾವು ಯುಗಾಂತರ ದಿಂದ ನಿತ್ಯವೂ ಜಿಗಿದು ಇಣುಕಿ ಇಣುಕಿ ಕಂಡಿದ್ದೆ ಇಷ್ಟು

ಕಣ್ಣು ಹೊರಗಿಟ್ಟೆ ! ಕಾಣ್ಮೆ ಮನಕ್ಕೆ ಕೊಟ್ಟೆ !

 

ಮುಗಿಲು ! ನಿತ್ಯ ನೂತನ , ಕ್ಷಣ ಕ್ಷಣಕ್ಕೂ ನೂತನ

ಯಾರಿಗೆ ಕೊಟ್ಟೆ  ಬದಲಾಯಿಸುವ ಈ ಕೆಲಸ ? ವಿಶ್ವಂಬರನಿಗೋ ?

ನೀ ಜಾಣ ! ಕಣ್ಣಿಗೂ ಮೆದುಳಿಗೂ ಅವಿನಾಭಾವ ಕೊಂಡಿ

 

ಆ ಹಸಿರು ಎಲೆಗಳ ಮೇಲೆ ಗುಪ್ತವಾಗಿ ಜೋಡಿಸಿಡುವ ಹನಿಗಳ ಸಾಲೇ ಸಾಕು

ನಿನ್ನ ಕಾರ್ಯಶೀಲತೆಗೆ ! ಹೇಗೆ ಹಿಡಿದಿರುವೆ ಆ ಕಾಲನನ್ನ ?

ಉಸಿರಾಡುವ ನಾನು ! ಊಹಿಸಲು ಅಸಾದ್ಯ ! ಹಾಗಂತ ಸುಮ್ಮನೆರಲು ಬಿಟ್ಟೆಯ ನೀನು ?

 

ಹಿಡಿದು ಬಿಟ್ಟು ಅಲ್ಲಿಗೆ ತಂದು ಬಿಡುತ್ತಿರುವೆ !

ಕಣ್ಣತುಂಬಿಕೊಂಡೆ ಬಿಡು

ಆಗಾಗ ಮಿಂಚುಳ್ಳಿ ಯಂತೆ ಬಂದು ಹರಿಸು

ಭಾವ ಗಳ ಹೊನ್ನ ಹೊಳೆ !!

Comments