ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
ಇಲ್ಲಿಯವರೆಗೆ ...
ಮೊಲದ ಜೊತೆಯೇ ಆಟ ಆಡುತ್ತಾ ಕಾಲ ಕಳೆವ 'ಸೃಷ್ಟಿ' ಗೆ ಡಾ: ಸಿರಿ ಬೈದಿದ್ದು ಮತ್ತು ಮೊಲವನ್ಣ ಅವಳಿಂದ ಬೇರೆ ಮಾಡಿ ಗೂಡಿಗೆ ಸೇರಿಸಿದಳು ಅಸ್ಟೆ....
ಅವತ್ತು ಪೂರ್ತಿ ಮುಖ ಊದಿಸಿಕೊಂಡು ಇದ್ದ 'ಸೃಷ್ಟಿ' ಯನ್ಣ ಅವಳ ಪಾಡಿಗೆ ಬಿಟ್ಟು ತಾವ್ ಇಬ್ಬರು ಮಾತಾಡುತ್ತಾ ಕುಳಿತಿದ್ದರು ಡಾ: ಸಿರಿ ಮತ್ತು ವಿಶಾಲ್.. ಏನೋ ಶಬ್ಧ ಕೇಳಿಸಿ ಏನು ಅಂತ ಹೋಗಿ ನೋಡಿದರೆ ಅಲ್ಲಿ ಅವಳ ಕೋಣೆಯಲ್ಲಿ ಇವರಿಗೆ ಬೆನ್ನು ಮಾಡಿ ನಿಂತಿರುವ 'ಸೃಷ್ಟಿ' ಕೈಗಳಲ್ಲಿ ಕೊಸರಾಡುತ್ತಿರುವ ಮೊಲ, 'ಸೃಷ್ಟಿ' ಕಣ್ಣುಗಳಲ್ಲಿ ಕೆಂಡದ ಛಾಯೆ....ಕಾಣಿಸಿ ದಂಪತಿಗಳಿಗೆ ಭಯ ಆಯ್ತು, ಆದರೂ ಸಾವರ್ಸಿಕೊಂಡು 'ಸೃಷ್ಟಿ' ಆ ಮೊಲ ಬಿಡು, ಪ್ರಾಣಿಗಳಿಗೆ ಹಿಂಸೆ ಕೊಡಬಾರದು ಪಾಪ..! ಅನ್ನುತ್ತಾ ಮುಂದೆ ಮುಂದೆ ಬರಲು, 'ಸೃಷ್ಟಿ' ಮತ್ತಸ್ತು ವ್ಯಗ್ರ ಆಗಿ ವಿಚಿತ್ರ ಶಬ್ಧ ಹೊರಡಿಸುತ್ತಾ ಆ ಮೊಲವನ್ ಗಟ್ಟಿಯಾಗಿ ಹಿಡಿದು ಓಡುತ್ತಾ ಮನೆ ಹಿಂದೆ ಓಡಿದಳು....
ಕತ್ತಲೇ ತುಂಬಿದ್ದ ಮನೆ ಹಿಂದುಗಡೆ ತಡ ಬಡಾಯಿಸುತ್ತಾ ಹೋಗಿ ನೋಡಿದಾಗ ಆಲ್ ದೂರದಲ್ಲಿ 'ಸೃಷ್ಟಿ' ಕುಳಿತಿರುವುದು ಕಾಣಿಸಿ
ಓ! ಸದ್ಯ ಇಲ್ಲೇ ಇರುವಳು ಏನೂ ಆಗಿಲ್ಲ ಅಂತ , 'ಸೃಷ್ಟಿ' ಈ ಕಡೆ ತಿರುಗು ,ಬಾ ಇಲ್ಲಿ ಎಂದರು, ಬರದೇ ಇದ್ದ 'ಸೃಷ್ಟಿ' ಹತ್ತಿರವೇ ಹೋದ ಇಬ್ಬರು ಅವಳನ್ನ ನೋಡಿ ಧಂಗಾಗಿ ಬೆಚ್ಚಿದರು,
ಡಾ: ಸಿರಿ -ಬಸವಳಿದು ಬಿದ್ದಳು...
ಅಲ್ಲಿ ಅವರು ಕಂಡಿದ್ದು ಏನು???.
ಹಿಂದಿನ ಭಾಗಳ ಲಿಂಕ್ :
ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೨
------------------------------------------------------------------------------------------------------------
ಅಲ್ಲಿ ಅವರು ಕಂಡಿದ್ದು ಏನು???.
ಸೃಷ್ಟಿ'ಯ ಮುಖದ ತುಂಬಾ ಮೆತ್ತಿದ ರಕ್ತ, ಮತ್ತು ಕೈನಲ್ಲಿ ಅಳಿದುಳಿದ ಮೊಲದ ದೇಹದ ಅವಯವಗಳು...
ಅಯ್ಯೋ..!! ಈ 'ಸೃಷ್ಟಿ' ಹೇಗಾಗಬಾರದು ಅಂತ ನಾವ್ ಅಂದುಕೊಂಡಿದ್ದೆವೋ ಅದರಂತೆಯೇ ಆದಳೇ ?
ಪತ್ನಿ , ಡಾ: ಸಿರಿಯನ್ನ ಅಲುಗಾಡಿಸಿ ಎಬ್ಬಿಸಿದ -ಡಾ: ವಿಶಾಲ್ , ಎಚ್ಚರವಾಗಿ ಕಣ್ಣು ತೆರೆದು 'ಸೃಷ್ಟಿ' ಕಡೆ ನೋಡಿ ಕೈ ತೋರಿಸಿ ಏನೋ ಹೇಳಲು ಪ್ರಯತ್ನಿಸಿದ ಅವಳಿಗೆ ಸುಮ್ಮನಿರುವಂತೆ ಹೇಳಿ, 'ಸೃಷ್ಟಿ' ಹತ್ತಿರ ಹೋಗಿ ಅವಳ ಕೈನಿಂದ ಮೊಲದ ಅವಯವಗಳನ್ನ ಕಿತ್ತಿ ದೂರ ಬಿಸಾಕಿ ಕೊಸರಾಡುತ್ತಿದ್ದ ಅವಳನ್ನ ಕರೆದುಕೊಂಡು ಮನೆಗೆ ಹೋಗಿ ಹೊರಗಡೆಯ ನಲ್ಲಿಯಲ್ಲಿ ಅವಳ ಮುಖ ತೊಳೆದು ಒಳಗೆ ಕರೆದೊಯ್ದು ಮತ್ತು ಬರುವ ಇನ್ಜೆಕ್ಚನ್ ಕೊಟ್ಟು ಮಲಗಿಸಿದರು...
ಹಾಲಿನಲ್ಲಿ ಇಬ್ಬರೂ ತಲೆಯ ಮೇಲೆ ಕೈ ಹೊತ್ತು ಚಿಂತಾಕ್ರಾಂತರಾಗಿ ಕುಳಿತರು, ಒಬ್ಬರನ್ನೊಬ್ಬರು ನೋಡುತ್ತಾ..
ವಿಶಾಲ್, ಕೊನೆಗೂ 'ಸೃಷ್ಟಿ' ಪ್ರಾಣಿ ಸಹಜ ಗುಣಗಳನ್ನ ತೋರಿಸುವುದಕ್ಕೆ ಶುರು ಮಾಡಿರುವಳು,ಈಗ ನಾವ್ ಇದ್ದುದುದಕ್ಕೆ ಸ್ಸರಿ ಹೋಯ್ತು, ನಾವಿಲ್ಲದ ವೇಳೆಯಲ್ಲಿ ಇವಳು ಈ ರೀತಿ ಹೊರಗೆ ಹೋಗಿ ಪ್ರಾಣಿ ಪಕ್ಷಿ ಕೊನೆಗೆ ಮನುಷ್ಯರನ್ನೇ ತಿನ್ನುವದಕ್ಕೆ ಶುರು ಹಚ್ಚಿಕೊಂಡರೆ ಹೆಂಗೆ?- ಡಾ: ಸಿರಿ ಯ ಪ್ರಶ್ನೆ ..
ಅವಳತ್ತ ನೋಡುತ್ತಾ ಡಾ: ವಿಶಾಲ್ ಹೇಳಿದ
'
ಸಿರಿ ನಿನಗೆ ಗೊತ್ತಲ್ಲ ನಾವ್ ಅವಳನ್ನ ಸೃಷ್ಟಿಸುವಾಗ ಮುಕ್ಕಾಲು ಪ್ರತಿಶತ ವಿವಿಧ ಪ್ರಾಣಿಗಳ ಅಂಡಾಣು+ ವಂಶವಾಹಿಗಳನ್ನ ಆದರೆ ಕಾಲು ಭಾಗ ಮಾತ್ರ ನನ್ನ ವಂಶವಾಹಿ ಬೆರೆಸಿರುವೆ..
ಪ್ರಾಣಿಗಳ ಹಿಂಸಾ ಪ್ರವೃತ್ತಿ ಇವಳಲ್ಲಿ ಈಗ ಕಾಣಿಸುತ್ತಿದೆ..
ಅದಕ್ಕೆ ಏನು ಪರಿಹಾರ? ಡಾ: ಸಿರಿ ಪ್ರಶ್ನೆ
ವಿಶಾಲ್: ನನ್ಗೆ ಈಗ ಸಧ್ಯಕ್ಕೆ ಏನೂ ತೊಚುತ್ತಿಲ್ಲ, ಆಮೆಲೆ ಏನಾದರೂ ಹೊಳೆಯಬಹ್ದು..ನೊಡುವ.
ರಾತ್ರಿ ಊಟ ಮಾಡಿ 'ಸೃಷ್ಟಿ' ಬಗ್ಗೆಯೇ ಯೋಚಿಸುತ್ತ ಇಬ್ಬರು ಮಲಗಿದರು..
ಬೆಳಗ್ಗೆ
ಸುಮಾರು ೮ ಕ್ಕೆ ಎದ್ದು ಕುಳಿತ 'ಸೃಷ್ಟಿ' ಸೀದಾ ಎದ್ದು ಹೊಗಿ ಮನೆಯಲ್ಲಿ ಪ್ರಯೋಗಕ್ಕೆ ಅಂತ ಇರಿಸಿದ್ದ ಗಾಜಿನ ದೊಡ್ಡ ನೀರಿನ ತೊಟ್ಟಿಯಲ್ಲಿ ಧಬೀಲನೆ ಬಿದ್ದಳು , ಅವಳು ಎದ್ದುದು ಎದ್ದು ಹೋಗಿ ಗಾಜಿನ ದೊಡ್ಡ ನೀರಿನ ಆ ದೊಡ್ಡ ತೊಟ್ಟಿಗೆ ಧಬೀಲನೆ ಬಿದ್ದುದು ಇದ್ಯಾವುದೂ ಅಡುಗೆ ಮನೆಯಲ್ಲಿ ತಿಂಡಿ ರೆಡಿ ಮಾಡುತ್ತಿದ್ದ ಸಿರಿಗೂ , ಮತ್ತು ಹಾಲ್ ನಲ್ಲಿ ಪೇಪರ್ ಓದುತ್ತಿದ್ದ ವಿಶಾಲ್ ಗೂ ಗೊತ್ತಾಗಲೇ ಇಲ್ಲ..
ತಿಂಡಿ ರೆಡಿ ಮಾಡಿ 'ಸೃಷ್ಟಿ' ಗೆ ಎಬ್ಬಿಸಲು ಬಂದ ಸಿರಿ, ಅಲ್ಲಿ 'ಸೃಷ್ಟಿ' ಕಾಣಿಸದೆ ಹೊರಗಡೆ ಬಂದು , ವಿಶಾಲ್ 'ಸೃಷ್ಟಿ' ಕಾಣಿಸುತ್ತಿಲ್ಲ, ನೀ ನೋಡಿದೆಯ? ಅಂದಾಗ , ಇಲ್ಲವಲ್ಲ 'ಅವಳು' ಇತ ಕಡೆ ಬಂದ ಹಾಗಿಲ್ಲ, ಹೊರಗಡೆ ಬರದೆ ಮನೆಯೊಳಗೇ ಎಲ್ಲಿ ಅಡಗಿ ಕುಳಿತಿರಲು ಸಾಧ್ಯ? ಅಲ್ಲಿ ಏನಾದರೂ?.....
ಒಡನೆಯೇ ಇಬ್ಬರ ಮನವೂ ಏನೋ ಕೇಡು ಶಂಕಿಸಿ ಓಡುತ್ತ ಹೋಗಿ ಒಳಗೆ ತಾವ್ ಪ್ರಯೋಗಕ್ಕೆ ಇರಿಸಿದ್ದ ದೊಡ್ಡ ಗಾಜಿನ ನೀರಿನ ತೊಟ್ಟಿಯ ಕಡೆ ನೋಡಿದಾಗ, ಮನೆ ಒಳಗಡೆಯೇ ಪ್ರಯೋಗಕ್ಕೆ ಅಂತ ಇರಿಸಿದ್ದ ಪಾರದರ್ಶಕ ಗಾಜಿನ ದೊಡ್ಡ ನೀರಿನ ತೊಟ್ಟಿಯಲ್ಲಿ ಈಜಾಡುತ್ತಿದ್ದ 'ಸೃಷ್ಟಿ' ಕಾಣಿಸಿದಳು..
'ಸೃಷ್ಟಿ' ಯಾವುದೇ ಅಳುಕು ಇಲ್ಲದೆ ನೀರಿನಲ್ಲಿ ಕೈ ಕಾಲು ಬೀಸುತ್ತ ಈಜು ಹೊಡೆಯುತ್ತಿರುವಳು..!!
ಸೋಜಿಗವಾಗಿ ಒಬ್ಬರ ಮುಖವನ್ನು ಒಬ್ಬರು ನೋಡಲು ,ಇಬ್ಬರತ್ತ ನೋಡಿದ 'ಸೃಷ್ಟಿ' ಒಮ್ಮೆ ನಕ್ಕಳು ಮತ್ತೆ ಈಜು ಹೊಡೆಯಲು ಶುರು ಮಾಡಿದಳು..
'ಸೃಷ್ಟಿ' ಸಾಕು ಮೇಲೆ ಬಾ- ಒಂದು ಘಂಟೆ ನಂತರವೂ ಅವಳು ಮೇಲೆ ಬಾರದೆ ಇದ್ದಾಗ ಕರೆದಳು ಸಿರಿ ..
ಮೇಲೆದ್ದು ಬಂದ ಅವಳ ಬಟ್ಟೆ ಬದಲ್ಸಿ ವಿಟಮಿನ್ ಮಿಶ್ರಿತ ಮಿಶ್ರಣ ಕುಡಿಸಿ ಅವಳನ್ನ ಅವಳಿಗಾಗಿಯೇ ಇದ್ದ ರೂಮಲ್ಲಿ ಬಿಟ್ಟು ಬಂದರು...
ಹೀಗೆಯೇ ಮುಂದೆ ಯಾವುದೇ ತೊಂದರೆ ಆಗದೆ ಅವಳು ಸುಮಾರು ೮ ವರ್ಷದ ಪ್ರಾಯಕ್ಕೆ ಬಂದಾಗ , ಅವಳು ಆ ವಯಸ್ಸಲ್ಲಿ ಸಾಮಾನ್ಯವಾಗಿ ಆ ವಯಸ್ಸಲ್ಲಿ ಇರಬೇಕಾದ ಹುಡುಗಿಯರಿಗೆ ವಿರುದ್ಧವಾಗಿ ,ಈಗ ಹುಡುಗಿಯರು ೧೮-೨೦ ವರ್ಷ ಆದಾಗ ಹೇಗೆಲ್ಲ ಅವಯವಗಳು -ಮತ್ತು ದೇಹಾಕಾರದಲ್ಲಿ ಬದಲಾವಣೆಗಳು ಆಗುವವೋ ಹಾಗೆಲ್ಲ ಆಗಲು ಶುರು ಆಯ್ತು.. ಇದು ಡಾ: ಸಿರಿ ಮತ್ತು ವಿಶಾಲ್ ಗೆ ಪೇಚಿಗೆ ಇಟ್ಟುಕೊಂತು ...!!
ಈಗೀಗ 'ಸೃಷ್ಟಿ' ಯ ಹಠಮಾರಿತನ ಮೊಂಡುತನ ಕೋಪ ತಾಪ ಸೆಡವು ಎಲ್ಲವೂ ಸಹಿಸಲು ಅಸಾಧ್ಯ ಎಂಬಂತೆ ಆಯ್ತು.. ಇದಕ್ಕೆ ಕಾರಣ ಅವಳು ಬಹುಪಾಲು ಹೊತ್ತು ಒಂಟಿಯಾಗೆ ರೂಮಲ್ಲಿ ಇದ್ದುದು ಏಕಾಂಗಿತನ ಕಾಡಿದ್ದು..
ಡಾ : ವಿಶಾಲ್- ಸಿರಿ ,ಅಪ್ಪಿ ತಪ್ಪಿಯೂ ತಮ್ಮ ಯಾವುದೇ ಸ್ನೇಹಿತರನ್ನು- ಸಂಬಂಧಿಗಳನ್ನು ಮನೆಗೆ ಕರೆದುಕೊಂಡು ಬಂದಿರಲಿಲ್ಲ .!! ಅದಕ್ಕೆ ಕಾರಣ 'ಸೃಷ್ಟಿ',..
ಅವಳು ಯಾರ ಕಣ್ಣಿಗೂ ಒಂದು ಹಂತದವರೆಗೆ ಬೀಳಬಾರದು, ಎಲ್ಲವೂ ನಾವ್ ಅಂದುಕೊಂಡ ಹಾಗೆಯೇ ನಡೆದರೆ ಆಗ ಒಂದು ಶುಭ ದಿನ ಅವಳನ್ನು ಜಗತ್ತಿಗೆ ಪರಿಚಯಿಸುವ ಅಂತ ಇಬ್ಬರೂ ನಿಶ್ಚ್ಯಯಿಸಿ ಆಗಿತ್ತು...
ಅದೊಮ್ಮೆ ಎಂದಿನಂತೆ 'ಸೃಷ್ಟಿ' ಗೆ ಘಂಟೆಗಟ್ಟಲೆ ನೀರಲ್ಲಿ ಆಟ ಆಡಿ ಡಾ: ಸಿರಿ ಕೊಟ್ಟ ವಿಟಮಿನ್ ಮಿಶ್ರಣ ಕುಡಿದು ತನ್ನ ರೂಮಿಗೆ ಹೋದಳು..
ಇಬ್ಬರೂ ಆ ಬಗ್ಗೆಯೇ ಮಾತಾಡುತ್ತ ನಗುತ್ತ, ಏನೇನೋ ವಿಚಾರ ಹೇಳುತ್ತಾ ಹಾಯಾಗಿ ಮಾತಾಡುತ್ತಿದ್ದರಲ್ಲ....
ಆಗ
ಅಲ್ಲಿ ಆ ರೂಮಲ್ಲಿ ಒಂಟಿಯಾಗಿ ಕುಳಿತು ಒಂಥರಾ ಏಕಾಂಗಿತನ ಅನುಭವಿಸುತ್ತಿದ್ದ 'ಸೃಷ್ಟಿ' ಕಣ್ಣಿಗೆ ಡಾ: ಸಿರಿ ಅದೊಮ್ಮೆ ಕೊಡಿಸಿದ್ದ ಪೇಪರ್ ಪೆನ್ಸಿಲ್ಲು ಬಣ್ಣ ಕಾಣಿಸಿತು..
ಪೇಪರ್ ಸ್ಕೆಚ್ ಪೆನ್ನು ಕೈಗೆತ್ತಿಕೊಂಡು ಹಲವು ಚಿತ್ರಗಳನ್ನು ಬಿಡಿಸಿದಳು...
ಆಗಲೇ ಅಲ್ಲಿ ಕಿಟಕಿ ಹತ್ತಿರ
ಮಿಯಾವ್ ..ಮಿಯಾವ್ ಅಂತ ಸದ್ದ್ಧು ಕೇಳಿಸಿ ಮೊದಲು ಬೆಚ್ಚಿ ಬಿದ್ದಳು, ಅವಳಿಗೆ ಯಾವುದೇ ಶಬ್ದ ಪ್ರಾಣಿಗಳು ಒಂಥರಾ ವಿಚಿತ್ರವಾಗಿ ಕಾಣಿಸುತ್ತಿದ್ದವು.. ಇವಳ ವಿಚಿತ್ರ ರೂಪ ನೋಡಿ ಬೆಕ್ಕು ಬೆದರಿ ಅಲ್ಲ್ಲಿಯೇ ನಿಂತಿತ್ತು , ಅದರ ಹತ್ತಿರ ಹೋಗಿ ಹತ್ತಿರ ಬಾ ಎಂಬಂತೆ ಕೈ ಮಾಡಿದಳು ಅದು ಬೆದರಿ ಅಲ್ಲಿಯೇ ನಿಂತಿತ್ತು, ಅದರ ಹತ್ತಿರ ಹೋಗಿ ಕೈನಲ್ಲಿ ಎತ್ತ್ತಿಕೊಂಡು ಅದರ ಜೊತೆ ಆಟ ಆಡುತ್ತ ಕುಳಿತಳು, ಮೊದಲಿಗೆ ಭಯ ಪಟ್ಟಿದ್ದರೂ ಇವಳನ್ನ ನೋಡಿ ಅವಳ ಜೊತೆ ಬೆರೆತು ಬೆಕ್ಕು ಮತ್ತು ಅವಳು ಸ್ನೇಹಿತರಾದರು..
ಡಾ: ಸಿರಿ ಮತ್ತು ವಿಶಾಲ್ ಗೆ ಈ ಬೆಕ್ಕು ಮತ್ತು 'ಸೃಷ್ಟಿ' ವಿಚಾರವೇ ಗೊತ್ತಿರಲಿಲ್ಲ, ಅದೊಮ್ಮೆ ಮಿಯಾವ್ ಮಿಯಾವ್ ಶಬ್ದ ಕೇಳಿಸಿ ನಮ್ಮ ಮನೆಯಲ್ಲಿ ಬೆಕ್ಕು ಅದ್ಯಾವಾಗ ಬಂತು? ಅಂತ ಅಚ್ಚರಿಯಿಂದ ಅದು ಎಲ್ಲಿದೆ ಅಂತ ಕೈನಲ್ಲಿ ಹಾಲು ಹಿಡಿದು ಹುಡುಕುತ್ತ ಹೋರಾಟ ಸಿರಿ ಗೆ ಅದು 'ಸೃಷ್ಟಿ' ರೂಮಲ್ಲೇ ಇರುವುದು ಗೊತ್ತಾಗಿ ಭಯ ಆತಂಕ ಎಲ್ಲವೂ ಒಟ್ಟೊಟ್ಟಿಗೆ ಆಯ್ತು...??
ಹಿಂದೊಮ್ಮೆ ಮೊಲದ ದಾರುಣ ಅಂತ್ಯ ಕಂಡಿದ್ದರಲ್ಲ..
ಬಾಗಿಲು ತೆಗೆದು ಸಿರಿ ಒಳ ಬರುವ ಮೊದಲೇ, ಸಿರಿ ಬಾಗಿಲ ಹತ್ತಿರ ಬಂದಿದ್ದು 'ಸೃಷ್ಟಿ' ಯ ಶ್ರವಣ ಶಕ್ತಿ ಗುರುತಿಸಿ ಬೆಕ್ಕನ್ನು ಒಳಗಡೆ ಅಡಗಿಸಿ ಇಟ್ಟು ಕುಳಿತಿದ್ದಳು...!!
ಒಳ ಬಂದು ಸುತ್ತ ಮುತ್ತ ನೋಡಿದ ಸಿರಿ ಗೆ ಬೆಕ್ಕು ಕಾಣಿಸಲಿಲ್ಲ, ಅದರ ಶಬ್ಧವೂ ಕೇಳಿಸಲಿಲ್ಲ , ಹಾಗಾದರೆ ಆ ಬೆಕ್ಕಿನ ರೀತಿ ಧ್ವನಿ ಮಾಡಿದ್ದು ಇದೆ 'ಸೃಷ್ಟಿಯೇ' ಇರಬೇಕು ಅಂತ ಹತ್ತಿರ ಬಂದು 'ಸೃಷ್ಟಿ' ಹತ್ತಿರ ಕುಳಿತು ತಲೆ ಮೇಲೆ ಕೈ ಹಾಕಿ ನೇವರಿಸಿ ಹಾಗೆ ಒಮ್ಮೆ ಸುತ್ತ ಮುತ್ತ ನೋಡಿ ಬಾಗಿಲು ಹಾಕಿಕೊಂಡು ಹೊರ ಬಂದಳು...
ಸಿರಿ ಹೋದ ಮೇಲೆ ಸ್ವಲ್ಪ ಹೊತ್ತು ಕಾಡಿದ್ದು ಅಲ್ಲಿ ಬಾಕ್ಸ್ ಒಂದರಲ್ಲಿ ಅಡಗಿಸಿ ಇಟ್ಟಿದ್ದ ಬೆಕ್ಕನ್ನು ಹೊರ ತೆಗೆದಳು 'ಸೃಷ್ಟಿ'... ಪ್ರೀತಿಸುವುದು ಮುದ್ದಿಸುವುದ್ ಮಾಡಿ ಒಮ್ಮೆಲೇ ಬಾಕ್ಸ್ಗೆ ಹಾಕಿ ಬಚ್ಚಿಟ್ಟು ಭಯ ಬೀಳ್ಸಿ ಮತ್ತೆ ಈಗ ಹೊರ ತೆಗೆಯುತ್ತಿರುವ 'ಸೃಷ್ಟಿ'ಯ ಮನದಾಳವನ್ನು ಅರಿಯುವ ವ್ಯರ್ಥ ಪ್ರಯತ್ನ ಮಾಡಿ ಸೋತಿತು ಬೆಕ್ಕು..!!
ಸ್ವಲ್ಪ ಹೊತ್ತು ಆದ ಮೇಲೆ ಡಾ: ಸಿರಿ ಮನದಲ್ಲಿ ಯೋಚನೆಯೊಂದು ಬಂತು, 'ಸೃಷ್ಟಿ' ಯನ್ನ ಬಹುಕಾಲ ಒಂಟಿಯಾಗಿ ಬಿಡುವುದು ಸರಿ ಅಲ್ಲ, ಆಗಾಗ ಅವಳನ್ನು ಕೂಡಿಸಿಕೊಂಡು ಕೆಲ ವಿಷಯಗಳನ್ನು ಕಲಿಸಬೇಕು, ಆಟೋಟ ದಲ್ಲಿ ಪಾಲ್ಗೊಳ್ಳುವ ಹಾಗೆ ಮಾಡಬೇಕು, ಎಂದುಕೊಳ್ಳುತ್ತ 'ಸೃಷ್ಟಿ', ಸೃಷ್ಟೀ ಎಂದು ಜೋರಾಗಿ ಕೂಗಿ ಕರೆದಳು, ಬೆಕ್ಕನ್ನು ಕಿಟಕಿಯಿಂದ ಆಚೆಗೆ ಬಿಸುಟು ಡಾ: ಸಿರಿ ಹತ್ತಿರ ಬಂದು ನಿಂತ 'ಸೃಷ್ಟಿ'ಗೆ - ನಿನಗೆ ಈಗ ಮೇಕಪ್ ಮಾಡುವೆ ಬಾ, ಎಂದು ಕರೆದೊಯ್ದು ಅವಳನ್ನು ದೊಡ್ಡ ಸೈಜಿನ ಮಿರರ್ ಮುಂದೆ ನಿಲ್ಲ್ಸಿದಾಗ, 'ಸೃಷ್ಟಿ' ತನ್ನ ರೂಪವನ್ನು ದೆಹಾಕಾರವನ್ನು ಮಾತು ಸಿರಿ ಯ ದೇಹಾಕಾರವನ್ನು ನೋಡಿ -ನಾ ಯಾಕೆ ಹೀಗೆ? ಅವರು ಹಾಗೆ? ಎಂದು ಮನದಲ್ಲಿ ಯೋಚಿಸಿದಳು..
ಅವಳ ಯೋಚನೆ ಅರಿತವಳಂತೆ, ಡಾ: ಸಿರಿ ನಗುತ್ತ, 'ಸೃಷ್ಟಿ' ನೀ ಇನ್ನು ಚಿಕ್ಕವಳಲ್ಲವೇ ಹಾಗಾಗಿ ನಿನಗೆ ಇನ್ನು ತಲೆಯಲ್ಲಿ ಕೂದಲು ಬಂದಿಲ್ಲ, ಆಮೇಲೆ ಕೂದಲು ಬರುವುದು, ನೀ ಸಹಾ ನಮ್ಮಂತೆಯೇ ಆಗುವೆ ಎಂದು ಸಮಾಧಾನ ಮಾಡಿದಳು.. ಆಮೇಲೆ ತನ್ನ ಕೊರಳಲ್ಲಿದ್ದ ಲವ್ ಚಿಹ್ನೆಯ ಸರವನ್ನು ಅವಳ ಕೊರಳಿಗೆ ಹಾಕಿ ಮಿರರ್ ನೋಡು ಎಷ್ಟು ಚೆನ್ನಾಗಿ ಕಾಣಿಸುತ್ತೆ ಎಂದಾಗ, ತನ್ನ ಪ್ರತಿ ಬಿಂಬ ನೋಡಿ 'ಸೃಷ್ಟಿ' ಗೆ ಅನ್ನಿಸ್ತು ಹೌದಲ್ಲ, ಚೆನ್ನಾಗಿದೆ..
ಆಮೇಲೆ ಅವಳಿಗೆ ವಿಧವಿಧವಾದ ಪರಿಕರಿಗಳಿಂದ ಸಖತ್ತಾಗಿ ಮೇಕಪ್ ಮಾಡಿ ಕಣ್ಣು ಹುಬ್ಬು ತೀಡಿ ತುಟಿಗೆ ಕೆಂಪು ಲಿಪ್ ಸ್ಟಿಕ್ ಬಳಿದು ತಲೆಗೆ ವಿಗ್ ಹಾಕಿ ಮತ್ತೊಮ್ಮೆ ಕನ್ನಡಿ ಎದುರು ನಿಲ್ಲಿಸಿದಾಗ 'ಸೃಷ್ಟಿ' ತನ್ನ ಕಣ್ಣುಗಳನ್ನ ತಾನೇ ನಂಬುವುದಕ್ಕೆ ಆಗಲಿಲ್ಲ..
ಇದಕ್ಕೆ ಮೊದಲೇ ಈ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಕ್ಯಾಮೆರ ಒಂದನ್ನು ಒಂದೆಡೆ ರಹಸ್ಯವಾಗಿ ಇರಿಸಿದ್ದಳು ಡಾ: ಸಿರಿ..
ಮೈ ಕೈ ತುಂಬಿಕೊಂಡು ಚೆಲುವಿನ ಗಣಿಯಾಗಿ ವಯಸ್ಸಿಗೆ ಬಂದ ಮಗಳನ್ನ ನೋಡಿದರೆ ಹೇಗೆ ಅನ್ನಿಸುವುದೋ ಹಾಗೆ
ಅವಳನ್ನು ಆ ಮೇಕಪ್ನಲ್ಲಿ ನೋಡಿದ ಡಾ: ಸಿರಿ ಗೆ ಬೇಡ ಬೇಡ ಅಂದರೂ ಮನದಲ್ಲಿ ಒಂದು ಅವ್ಯಕ್ತ ಭಾವ ಹಾದು ಹೋಯ್ತು..???
ಒಂದೊಮ್ಮೆ ಹಾಗೆನಾರ ಆದ್ರೆ?
ಛೆ ಛೆ..!! ಆಗದೆ ಇರಲಿ....
ಆ ದಿನ ಪೂರ 'ಸೃಷ್ಟಿ' ಬಹು ಖುಷಿಯಾಗಿ ಇದ್ದಳು, ಆಮೇಲೆ ತನ್ನ ರೂಮಿಗೆ ಹೋಗಿ ಪೆನ್ಸಿಲ್ಲು, ಪೇಪರ್ ತೆಗೆದುಕೊಂಡು ಹಲವು ಚಿತ್ರಗಳನ್ನು ಬಿಡಿಸಿದಳು...
ರಾತ್ರಿ ಮಾಮೂಲಿನಂತೆ ವಿಟಮಿನ್ ಮಿಶ್ರಣ ಸೇವಿಸಿ ಮಲಗಿಕೊಂಡಳು,
ಅತ್ತ
ತಮ್ಮ ಊಟ ಮುಗಿಸಿ 'ಸೃಷ್ಟಿ' ಬಗ್ಗೆಯೇ ಮಾತಾಡುತ್ತ ಅವಳಿಗೆ ಇವತ್ತು ಮೇಕಪ್ಪು ಮಾಡಿದ್ದು ಅದನ್ನು ರೆಕಾರ್ಡ್ ಮಾಡಿದ್ದು ಡಾ: ವಿಶಾಲ್ ಗೆ ತೋರಿಸಿದಳು
ಸಿರಿ..
ಆ ವೀಡಿಯೊ ಕ್ಲಿಪ್ಪಿಂಗ್ ನೋಡುತ್ತಾ ಡಾ: ವಿಶಾಲ್ ಗೆ ಒಮ್ಮೆ ಮೈ ಜುಮ್ ಎಂತು..!!
ಮೈ ಗಾಡ್ 'ಸೃಷ್ಟಿ' ಮೇಕಪ್ ಮಾಡಿದರೆ ಇಷ್ಟು ಸುಂದರಳಾಗಿ ಕಾಣುವಳೇ?
ಅವನ ಮುಖವನ್ನೇ ನೋಡಿ , ವಿಶಾಲ್ ಏನಾಯ್ತು? ಎನ್ನಲು,
ಏನಿಲ್ಲ, 'ಸೃಷ್ಟಿ' ಈ ಮೇಕಪ್ನಲ್ಲಿ ಸುಂದರವಾಗಿ ಕಾಣುತಿರುವಳು, ತುಂಬಾ ಚೆನ್ನಾಗಿ ಮೇಕಪ್ ಮಾಡಿರುವೆ ಎಂದ...
ಥ್ಯಾಂಕ್ಸ್ ಎಂದು ತನ್ನ ಮನದಾಳದ ಅವ್ಯಕ್ತ ಭಯವನ್ನು ದೂರ ಮಾಡಲು ಏನೋ ಯೋಚ್ಸಿ ಅವನ ಕೊರಳ ಸುತ್ತ ಕೈ ಹಾಕಿದಳು ಡಾ: ಸಿರಿ ..
ಇಬ್ಬರೂ ಶೃಂಗಾರದಲ್ಲಿ ಮೈ ಮರೆತಿದ್ದಾಗ.....
ಅತ್ತ
ರೂಮ್ನಲ್ಲಿ ಮಲಗಿದ್ದ 'ಸೃಷ್ಟಿ' ಇವರ ಮಾತುಗಳನ್ನು ಕೇಳಿಸಿ ಕೊಳ್ಳುತ್ತಿದ್ದಳು,ನಿದ್ದೆ ಬಾರದೆ ಹೊರಳಾಡಿ ಹಾಗೆಯೇ ಎದ್ದು ಬಂದು ಹಾಲಿನಲ್ಲಿ ನೋಡಿದರೆ..??

ಅಲ್ಲಿ ಹಾಲಿನಲ್ಲಿ ತಮ್ಮ ಮೈ ಮನ ಮರೆತು ಶೃಂಗಾರದಲಿ ಸಕ್ರಿಯರಾಗಿದ್ದ,ತನ್ಮಯರಾಗಿದ್ದ ಸಿರಿ ಮತ್ತು ವಿಶಾಲ್ ಅವರನ್ನು ಕಂಡು ಅವರಿಬ್ಬರೂ ಅದರಲ್ಲಿ ಹೊಂದುತ್ತಿರುವ ಆನಂದವನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳಿ 'ಸೃಷ್ಟಿ' ಯ ಮನದಲ್ಲಿ ಆಂದೋಲನ ಶುರ ಆಯ್ತು, ಮೈ ಬಿಸಿ ಆಯ್ತು, ಬಾಗಿಲ ಚೌಕಟ್ಟು ಹಿಡಿದುಕೊಂಡು ನೋಡುತ್ತಾ ಏನೋ ಕಲ್ಪಿಸಿಕೊಳ್ಳುತ್ತಾ ನಿಂತಿದ್ದಳು, ಸ್ವಲ್ಪ ಹೊತ್ತು ಆದ ಮೇಲೆ ವಾಪಾಸ್ಸು ರೂಮಿಗೆ ಬಂದು ಹಾಸಿಗೆ ಮೇಲೆ ಮಲಗಲು ಪ್ರಯತ್ನಿಸಿದಳು,
ಇನ್ನೆಲ್ಲಿ ನಿದ್ರೆ.....??
ಬೆಳಗ್ಗೆ ತಿಂಡಿ ತಯಾರು ಮಾಡಿ ಊರಿಂದ ನೆಂಟರೊಬ್ಬರು ಬಂದಿರುವರೆಂದು ಅವರನ್ನು ಮನೆಗೆ ಕರೆದ್ಕೊಂದು ಬರಲು ಆಗದ್ದರಿಂದ ಅವರನ್ನು ಹೊರಗಡೆಯೇ ಮಾತಾಡಿಸಿಕೊಂಡು ರೈಲು ಹತ್ತಿಸಿ ವಾಪಾಸೂ ಬರುವುದಾಗಿಯೂ ಹೀಗಾಗಿ ಮನೆಯಲ್ಲೇ ಇದ್ದು 'ಸೃಷ್ಟಿ' ಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಅವಳ ಮೇಲೆ ನಿಗಾ ವಹಿಸಬೇಕು ಎಂತಲೂ ಇದಕಾಗಿ ತಾವ್ ಅದಾಗಲೇ ಮನೆ ಎಲ್ಲೆಡೆ ಅಳವಡಿಸಿರುವ ಕ್ಯಾಮೆರ ಮತ್ತು ಅದರ ನಿಯಂತ್ರಣ- ದೃಶ್ಯ ವೀಕ್ಷಣೆ ಮಾನಿಟರ್ ಮೇಲೆ ಗಮನ ಇರಲಿ ಎಂದು ಡಾ: ವಿಶಾಲ್ ಗೆ ಅರ್ಧ ಘಂಟೆವರೆಗೆ ಲೆಕ್ಚರ್ ತೆಗೆದುಕೊಂಡಳು ಸಿರಿ...
ಗ್ಯಾರೆಜ್ನಲ್ಲಿದ್ದ ಕಾರನ್ನು ಹೊರಗೆ ತಂದು ಸ್ಟಾರ್ಟ್ ಮಾಡಿ ಸೃಸ್ಥಿ ಮತ್ತು ವಿಶಾಲ್ ಕಡೆಗೆ ಕೈ ಬೀಸಿ 'ಹುಷಾರು' ಅಂತ ವಿಶಾಲ್ ಗೆ ಸೂಚ್ಯವಾಗಿ ಹೇಳಿ ಹೊರಟಳು ಡಾ: ಸಿರಿ...
ಕಾರು ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದ ವಿಶಾಲ್ ಆಮೇಲೆ ಹಿಂದಕ್ಕ್ಕೆ ತಿರುಗಿ ನೋಡಿದರೆ, ಅಲ್ಲಿ 'ಸೃಷ್ಟಿ' ಇಲ್ಲ... ಎಲ್ಲಿ ಹೋದಳು ಅಂತ ದಿಗಿಲಾಗಿ ಮನೆಯ ಒಳ ಬಂದು ನೋಡಿದರೆ ಅಲ್ಲಿ ..........????
ತನ್ನ ಕಡೆಗೆ ಬೆನ್ನು ಮಾಡಿ ಅನ್ಯಮನಸ್ಕಳಾಗಿ ಕುಳಿತಿದ್ದ 'ಸೃಷ್ಟಿ'...
ಅವಳ ಹತ್ತಿರ ಹೋಗಿ ತಲೆಯ ಮೇಲೆ ಕೈ ಆಡಿಸಿ , 'ಸೃಷ್ಟಿ' ಯಾಕೆ? ಬೇಜಾರ? ಸಿರಿ ಇನ್ನೇನು ಬರುವಳು ಎಂದಾಗ ಅವಳ ಮುಖದಲ್ಲಿ ರೋಷದ ಛಾಯೆ ಕಾಣಿಸಿತು... ಒಹ್..!! ಸಿರಿ ಯಾವಾಗಲೂ ಇವಳ ಜೊತೆ ಕಟ್ಟುನಿಟ್ಟಾಗಿ ಗಂಭೀರವಾಗಿ ಇರುವುದು ಮತ್ತು ಅವತ್ತು ಮೊಲವನ್ನ ಕಿತ್ತುಕೊಂಡು ಬಂದಿದ್ದಕ್ಕೆ ಇವಳಿಗೆ ಅವಳ ಮೇಲೆ ಕೋಪ ಬಂದಿದೆ ಅಂತ ಗೊತ್ತಾಗಿ, ಅವಳ ಬಳಿ ಸಾರಿ ಕುಳಿತು,
'ಸೃಷ್ಟಿ' ಹಾಡು ಕೇಳುವೆಯ ಅಂತ ಟೇಪ್ ಹತ್ತಿರ ಹೋಗಿ ಅದರಲ್ಲಿ ನೃತ್ಯ ಮಾಡಲು ತಕ್ಕುದಾದ ಪಾಶ್ಚ್ಯಾತ್ಯ ಸಂಗೀತ ಹಾಕಿ ನರ್ತಿಸಲು ಶುರು ಮಾಡಿದ..
ಅವನು ಡ್ಯಾನ್ಸ್ ಮಾಡುವುದ ಕೈ ಕಾಲು ಕುನಿಸುವುದೇ ಒಂಥರಹ ವಿಚಿತ್ರ ಅನ್ನ್ನಿಸಿ ಮೆಲ್ಲಗೆ ಅವನ ಹತ್ತಿರ ಹೋಗಿ ನಿಂತಳು 'ಸೃಷ್ಟಿ'..
ಬಾ ಇಲ್ಲಿ ಬಾ ನೋಡು ಹೀಗೆ ಹೀಗೆ ಅಂತ ಹೆಜ್ಜೆ ಹಾಕಿ ಕುಣಿದು ತೋರಿಸಿದ, ಅವಳೂ ಹಾಗೆಯೇ ಪ್ರಯತ್ನಿಸಿದರೋ ಅದು ಆಗದೆ ಕೈ ಚೆಲ್ಲಿ ಕುಳಿತಾಗ, ಅವಳ ಹತ್ತಿರ ಬಂದು ಕೈ ಹಿಡಿದು ತನ್ನ ಕೈಗಳನ್ನು ಅವಳ ಕೊರಳ ಸುತ್ತ ಬಳಸಿ ಕೈ ಹಾಕಿ ಕುಣಿಯುವುದು ಹೇಳಿ ಕೊಡತೊಡಗಿದ..
ಈ ತರಃ ಪುರುಷನೊಬ್ಬನ ಕೈ ತೋಳು ಬಳಸಿ ನರ್ತಿಸುವುದೇ ಅವಳಿಗೆ ಆನಂದವಾಗಿ ಅವನೊಡನೆ ಹೆಜ್ಜೆ ಹಾಕತೊಡಗಿದಳು... ಸುಮಾರು ಹೊತ್ತು ವಿಧ ವಿಧವಾಗಿ ಕುಣಿದು, ಕೊನೆಗೆ ಒಬ್ಬರ ಕೈಗಳನ್ನು ಒಬ್ಬರು ಹಿಡಿದು ಸುತ್ತಲೂ ತಿರುಗುವಾಗ ಕಣ್ಣು ಮುಚ್ಚಿ ಪರವಶಳಾಗಿ ಖುಷಿ ಅನುಭವಿಸುತ್ತಿದ್ದ .....'ಸೃಷ್ಟಿ' ಯ ಕತ್ತಿನತ್ತ ನೋಡಿದ ವಿಶಾಲ್, ಅಲ್ಲಿ ತಾ ಸಿರಿ ಗೆ ಹಾಕಿದ್ದ ಪ್ರೇಮ ಚಿಹ್ನೆಯ ಸರ ,ಇಲ್ಲಿ ಇವಳ ಕೊರಳಲ್ಲಿ, ಒಮ್ಮೆ ಸಿರಿ ಮತ್ತು 'ಸೃಷ್ಟಿ' ಇಬ್ಬರೂ ಮತ್ತ್ತು ಬೇರೆ ಬೇರೆ ಆಗಿ ಅವನ ಕಣ್ಣ ಮುಂದೆ ಕಾಣಿಸತೊಡಗಿದರು, ಕೊನೆಗೆ ಸಿರಿ ಮಾಯವಾಗಿ ಅಲ್ಲಿ 'ಸೃಷ್ಟಿ' ಯ ರೂಪವೇ ಎದುರು ನಿಂತಂತಾಯ್ತು..
ಸುತ್ತಲೂ ತಿರುಗುತ್ತ ಮೈ ಮರೆತಿದ್ದ ವಿಶಾಲ್ ಧುತ್ತನೆ ನಿಂತ, ಆನಂದಕ್ಕೆ ತಡೆ ಬಿದ್ದುದ್ ಕಂಡು ಕಣ್ಣು ತೆರೆದು ನೋಡಿದ 'ಸೃಷ್ಟಿ' ಹತ್ತಿರ ಬಂದು ವಿಶಾಲ್ ಬೆನ್ನ ಸುತ್ತ ಕೈ ಬಳಸಿ ಮುಖವನ್ನು ಹತ್ತಿರ ತಂದು ಅವನ ತುಟಿಯ ಮೇಲೆ ಚುಂಬಿಸ ಹೊರಟಳು..
ಷಾಕ್ ಗೆ ಒಳಗಾದವನಂತೆ ಇದೆಲ್ಲ ನೋಡುತ್ತಿದ್ದ ವಿಶಾಲ್ 'ಅಂತರಾತ್ಮ' ಎಚ್ಚರಿಸಿತು, ಇನೇನು ಹತ್ತಿರ ಬಂದ ಅವಳ ಕೆಂಪು ತುಟಿಗಳಿಗೆ ಕೈ ಅಡ್ಡ ಇಟ್ಟ.. ನಿರಾಸೆಯಾಗಿ ಕೋಪದಿಂದ ನೋಡಿದಳು 'ಸೃಷ್ಟಿ'.... ಮೈ ಮನದ ಕಾವು ಇಳಿಸಿಕೊಳ್ಳಲು ಹಾಗೆಯೇ ಹೋಗಿ ನೀರಿನ ಗಾಜಿನ ತೊಟ್ಟಿಯಲ್ಲಿ ಧಬೀಲನೆ ಬಿದ್ದು ಈಜು ಹೊಡೆಯುತ್ತ ವಿಶಾಲ್ ಕಡೆಗೆ ನೋಡುತ್ತಿದ್ದಳು...
ಸಟ್ಟನೆ ಆದ ಈ ಎಲ್ಲ ಪ್ರಸಂಗದಿಂದ ಮತ್ತು ಒಂಥರಹ ಅಪರಾಧಿ ಪ್ರಜ್ಞೆಯಿಂದ ನರಳುತ್ತ ತನ್ನ ಕೋಣೆಗೆ ಹೋಗಿ ಅಲ್ಲಿ ಮಾನಿಟರ್ ಮೇಲೆ ಅವಳು ಈಜು ಹೊಡೆಯುತ್ತಿರುವುದು ನೋಡುತ್ತಿರಲು....
ನೀರಿನ ತೊಟ್ಟಿಯಿಂದ ಎದ್ದು ಬಂದ 'ಸೃಷ್ಟಿ' ತನ್ನ ಬಟ್ಟೆಗಳನ್ನು ಕಳಚಿ ನಗ್ನಳಾಗಿ ಮತ್ತೆ ನೀರಿನ ತೊಟ್ಟಿಯಲ್ಲಿ ಧುಮುಕಿದಳು... ಅವಳ ಅವಯವಗಳನ್ನು ತುಂಬಿ ತುಳುಕುವ ದೇಹ ಸಂಪತ್ತನ್ನು ತೋರಿಸುತ್ತ ಈಜುತ್ತಾ ಈಜುತ್ತಾ ಎತ್ತಲೋ ನೋಡುತ್ತಿದ್ದ ಅವಳು ತನ್ನನ್ನೇ ನೋಡುತ್ತಿದ್ದಂತೆ ತನ್ನನ್ನೇ ಕರೆಯುತ್ತಿದ್ದಂತೆ ಕೋಣೆಗೆ ಅವಳ ಕೈ ತನ್ನೆಡೆಗೆ ಬಂದಂತಾಗಿ ಮಾನಿಟರ್ ಆಫ್ ಮಾಡಿ ತಲೆ ಮೇಲೆ ಕೈ ಹೊತ್ತು ಕುಳಿತ..... ಮೈ ಒಂದು -ಮನಸು ಒಂದು -ಅಂತರಾತ್ಮದ ಎಚ್ಹರಿಕೆ ಯ ಅಡಕತ್ತರಿ ಮಧ್ಯೆ ಸಿಕ್ಕು

ಒಹ್..!! ದೇವ್ರೇ ಇದೇನು ಪರೀಕ್ಷೆ?....
ಮೊದಲೇ ಇವಳಿಗೆ ಜೊತೆಯಾಗಿ ಇನೊಂದು ಗಂಡು ಜೀವಿ ಇಲ್ಲ, ಈಗ ಇವಳಿಗೆ ವಯೋ ಸಹಜವಾಗಿ ಬಯಕೆ ಬಂದಿದೆ, ಆದರೆ ಸೃಷ್ಟಿಗೆ ಕಾರಣನಾದ ನಾ ಹಾಗೆ ಮಾಡಬಹುದೇ?
ಅದು ಸರಿಯೇ?
ಈ ಬಯಕೆಯನ್ನು ಅವಳು ಯಾವ ವಿಧದಲ್ಲಾದರೂ ತೀರಿಸ್ಕೊಳ್ಳದೆ ಬಿಡಳು.... ಛೆ ಛೆ....!!
ಭಗವಂತ ನೀನೆ ದಾರಿ ತೋರಿಸು...
ನಾ ಏನು ಮಾಡಲಿ..?
ಹೀಗೆ ಗೊಂದಲದಲ್ಲಿ ಮೈ ಮನಗಳ ಕಾಮನೆಗಳ ಸುಳಿಯಲ್ಲಿ ಬಿದ್ದು ಒದ್ದಾಡುತ್ತಿರುವ ಡಾ: ವಿಶಾಲ್ ಮುಂದಿನ ನಡೆ ಏನು?????
ಕೊನೆಯ ಭಾಗದಲ್ಲಿ ..
.................!!!
ಚಿತ್ರ ಮೂಲಗಳು :
Rating
Comments
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩ by nanjunda
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ನಂಜುಂಡ ಅವ್ರೆ ..?
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩ by Prathik Jarmalle
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..??
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..?? by venkatb83
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..??
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..?? by Prathik Jarmalle
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..??
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..?? by venkatb83
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..??
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ..?? by Prathik Jarmalle
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ ಪ್ರತೀಕ್ ಅವ್ರೆ.. ??
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩ by kavinagaraj
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ ೩:@ಹಿರಿಯರೇ ..???
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩ by ಗಣೇಶ
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩ by makara
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩ by Prathik Jarmalle
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ ೩ :@ಪ್ರತಿಕ್...