ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ಧಿಕ್ಕರಿಸುತ್ತೀರಾ...?
ನಮ್ಮ ದೇಶವನ್ನಾಳುವ ಜನನಾಯಕರನ್ನು ಹೊಗಳಲ್ಲು ನನಗಿ೦ದು ಅದ್ಭುತಾವಕಾಶ ದೊರಕಿದೆ..ಅದಕ್ಕಾಗಿ ಬರೆಯುತಿದ್ದೇನೆ...
ಭ್ರಷ್ಟಾಚಾರದಲ್ಲಿ ಈಗ ತಾನೆ p.h.d ಮಾಡಿರೋ ಭವ್ಯ ಭಾರತದ ಭ್ರಷ್ಟ ರಾಜಕೀಯ ನಾಯಕರಿಗೆ....& ಅವರನ್ನು ಮುಟ್ಟಾಳರ೦ತೆ ಬೆ೦ಬಲಿಸೋ ಸತ್ ಪ್ರಜೆಗಳಿಗೆ..
ಅದು 1990ರ ಕಾಲ ಪೆಟ್ರೋಲ್ ಬೆಲೆ 50ಪೈಸೆ ಹೆಚ್ಚಳವಾದರು ಉಗ್ರ ಪ್ರತಿಭಟನೆಗಳಾಗುತಿದ್ದವಂತೆ. ಆಗ ಪೆಟ್ರೋಲ್ ಏಳೂವರೆ ರೂಪಾಯಿ ಲೀಟರ್ ಗೆ ಇತ್ತು. 2004ರಲ್ಲಿ 40ರೂಪಾಯಿ ಇತ್ತು. ಕಳೆದ 10ವರ್ಷಗಳಲ್ಲಿ 40ರುಪಾಯಿ ಹೆಚ್ಚಳವಾಗಿದೆ. ಅಂದರೆ ಏನು ಈ ಕಥೆ ಹೀಗಾದರೆ, ದುಪ್ಪಟ್ಟು ಹೆಚ್ಚು ಮಾಡಿರುವ ಯುಪಿಎ ಸರ್ಕಾರಕ್ಕೆ ಚೂರಾದರು ಬಡ ಬಗ್ಗರ ಬಗ್ಗೆ ಕಾಳಜಿ ಇದ್ದಿದ್ದರೆ ಹೀಗೆ ಮನಸೋ ಇಚ್ಛೆ ಜಾಸ್ತಿ ಮಾಡುತಿದ್ದರೇ....,
ಕೋಟ್ಯಾಂತರ ರುಪಾಯಿ ಆಸ್ತಿ ಹೊಂದಿರೋ ಸಚಿವರು ಶಾಸಕ ಸಂಸದರಿಗೆ ಸರ್ಕಾರ ಪೆಟ್ರೋಲ್ ಭತ್ಯೆ ನೀಡುತ್ತದೆ.. ಹಾಗಾಗಿ ಅವರಿಗೆ ಅದು ಎಷ್ಟು ಆದರು ಸಮರ್ಥಿಸಿಕೊಳ್ಳುತ್ತಾರೆ ಕೇಂದ್ರ ಸಚಿವರುಗಳು. ರಾಜ್ಯ ಸಚಿವರು ಕೇಂದ್ರ ಸರ್ಕಾರದ ಮೇಲೆ ಅದೆಲ್ಲಿಂದಲೋ ಹಿಡಿದು ತಂದ ಪಾಪದ ಗೂಬೆಯನ್ನು ಕೂರಿಸಿ ತಮ್ಭ ಪಿಎಗಳಿಗೆ ಹೇಳಿ ಮಿನರಲ್ ವಾಟರ್ ತರಿಸಿಕೊಂಡು ಕೈ ತೊಳೆದುಕೊಳ್ಳುತ್ತಾರೆ. ಇನ್ನು ನಮ್ಮ ಯುಪಿಎ ಮಿತ್ರ ಪಕ್ಷಗಳು ನಾಟಕದ ಮಾತಾಡಿ ಮೊಸಳೆ ಕಣ್ಣೀರಾಕಿ ಹೋಗುತ್ತಾರೆ. ಮಹಿಳಾ ಮಣಿ ಪ ತ್ರುಣ ಮೂಲ ಕಾ೦ಗ್ರೆಸ್ ನ ಬಂಗಾಳದ ಹುಲಿಯಂತಹ ಮುಖ್ಯಮಂತ್ರಿ ಮಿತ್ರ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆ ಉ ಮೇಲೆ ಕೆಳಗೆ ಅಂದು ಅರಚಾಡಿ ಕಿರುಚಾಡಿ ವಿರೋದದ ಬೊಗಳೆ ಮಾತಾಡಿ ಇನ್ನೇನು ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುತ್ತಾರೆ ಎನ್ನುವಾಗಲೇ ಕರೆಂಟ್ ಹೋಗಿಬಿಡುತ್ತದೆ.. ಅವರ ಬೆಂಬಲ ವಾಪಸ್ ತೆಗೆದುಕೊಂಡರೋ ಇಲ್ಲವೋ ಎಂದು ತಿಳಿಯೋದು ಸರ್ಕಾರ ಸೇಫ್ ಆಗಿರೋದು ನೋಡಿದಾಗಲೇ.ಇದೇ ಮುಂದಿನ ಬಾರಿಯೂ ಬೆಲೆ ಏರಿಕೆಯಾದಾಗಲು ಮರುಪ್ರದರ್ಶನವಾಗುತದೆ.. ಇಂತಹ ಘನತೆವೆತ್ತ ಸರ್ಕಾರದ ಮುಖಂಡರು ಹೇಳುತ್ತಾರೆ ಮುಂದಿನ ಬಾರಿಯೂ ಸರ್ಕಾರ ನಮ್ಮದೇ ಅಂತ ಇದು ಯಾವ ಮುಟ್ಟಾಳನೂ ನಂಬೋಲ್ಲ ತಿಳಿಯಿರಿ. ದ್ವಿಚಕ್ರ ವಾಹನ ಸವಾರರನ್ನು ಬಗ್ಗಿಸಿ ಬರೆಹಾಕೋ ನಿಮ್ಮನ್ನು ಎಂದೂ ಒಪ್ಪೋಲ್ಲ ಜನ ತಿಳಿಯಿರಿ..
ಹಾಗೆಂದ ಮಾತ್ರಕ್ಕೆ ವಿರೋಧ ಪಕ್ಷಗಳೇನು ಸಾಚಾ ಅಲ್ಲ ಯುಪಿಎ 2ರ ಪ್ರತಿಪಕ್ಷ ಬಿಜೆಪಿ ಕೇಂದ್ರದಲ್ಲಿ ಅಬ್ಬರಿಸಿ ಬೊಬ್ಬಿರಿದು ಕೊನೆಗೆ ಸುಮ್ಮನಾಗುವುದೆಂದು ಬಲ್ಲೆವು. ಅದೇ ಕರ್ನಾಟಕ ರಾಜ್ಯದಿ ಅಧಿಕಾರಾಲಂಕೃತ ಬಿಜೆಪಿ ಪೆಟ್ರೋಲ್ ಮೇಲಿನ ಸ್ಥಳೀಯ ತೆರಿಗೆ ಇಳಿಸಬಹುದೆಂಬ ವಿಚಾರ ತಿಳಿಯದೇ ಸುಮ್ಮನಿಹರೋ, ತಿಳಿದು ಸುಮ್ಮನಿಹರೋ, ನಾ ಕಾಣೆ ಆದರೆ ಒಂದು ವಿಚಾರವಂತು ಸತ್ಯ ನೆರೆಯ ಗೋವಾದಲ್ಲಿ ದೇಶದಲ್ಲೇ ಅತಿ ಕಡಿಮೆ ಪೆಟ್ರೋಲ್ ಬೆಲೆ ಪಾವತಿ ಮಾಡುವ ಏಕೈಕ ರಾಜ್ಯ ಬಿಜೆಪಿ ಆಡಳಿತದ ಗೋವಾ ಅತಿಹೆಚ್ಚು ಬೆಲೆ ತೆರುವ ಬಿಜೆಪಿ ಆಡಳಿತದ ಏಕೈಕ ರಾಜ್ಯ ಕರ್ನಾಟಕ. ನೆನಪಿಡಿ ರಾಜಕಾರಣಿಗಳೇ ಇಂದಲ್ಲ ನಾಳೆ ನೀವು ಅಧಿಕಾರದಿಂದ ಕೆಳಗಿಳಿದ ಮೇಲೆ ಕೈಯಿಂದ ಬೆಲೆಕಟ್ಟವಾಗಲೇ ಅರಿವಾಗೋದು ನಿಮಗೆ ಬೆಲೆ ಏರಿಕೆಯ ಬಿಸಿ.ತೈಲ ಬೆಲೆ ಏರಿಕೆಯಾಗಲು ಪ್ರಮುಖ ಕಾರಣ ಡಾಲರ್ ಮುಂದೆ ರುಪಾಯಿ ಕುಸಿತ ವೊಂದೇ ಅಲ್ಲ ತೈಲ ಕಂಪನಿಗಳ ಮೇಲೆ ಅಧಿಕ ಕರವಿಧಿಸಿ ಅವರನ್ನು ಬರ್ಬಾದ್ ಮಾಡಿದ ನೇರಾನೇರ ಪರಿಣಾಮ ಇಂದು ಸರ್ಕಾರದ ಪ್ರಮುಖ ಆದಾಯ ತೈಲ ಕರ ಇಂತಹ ಅತ್ಯವಶ್ಯಕ ವಸ್ತುವಿನ ಮೇಲೆ ಹೆಚ್ಚಿನಕರ ವಿಧಿಸೋದು ಸರಿಯೇ.ಮೊದಲು ಕೇಂದ್ರ ರಾಜ್ಯ ಎರಡೂ ಸರ್ಕಾರಗಳು ಕರ ಇಳಿಸಿ ಜನರ ಭಾರ ತಣಿಸಿ.ಕೊನೆ ಪಕ್ಷ ನಮ್ಮ ದೇಶದ ಪ್ರಮುಖ ಶತ್ರು ಪಾಕಿ(ಪಿ)ಸ್ತಾನದಲ್ಲಿ 40ರೂ ಲೀಟರ್ ಗೆ ಆಕಸ್ಮಾತ್ಗು ಅಪ್ಪಿತಪ್ಪಿ ಗುಜರಾತ್ ಗಡಿ ಗ್ರಾಮದವರು ಅಲ್ಲಿಗೆ ಹೋಗಿ ಪೆಟ್ರೋಲ್ ಹಾಕಿಸಿಕೊಳ್ಳೋಕೆ ಅಲ್ಲಿಗೆ ಹೋಗೋ ಮೊದಲು ಎಚ್ಚೆತ್ತುಕೊಳ್ಳಿ.ಇಲ್ಲವಾದಲ್ಲಿ ಅಲ್ಲಿ ಸೆರೆಯಾದರೆ ಬಿಡುಗಡೆಯ ಮಾತೇ ಇಲ್ಲ ರೌರವ ನರಕ ತೋರಿಸುತ್ತಾರೆ ಅವರು.ಉದಾಹರಣೆಗೆ ಈಗಲೇ ಮತ್ತೆ ಮುಂಗಾರು ಚಲನಚಿತ್ರ ವೀಕ್ಷಿಸಿ.ಅದಕ್ಕೂ ಮೊದಲು ಈಗಲೇ ಹೋಗಿ ನಿಮ್ಮ ವಾಹನಧ ಟ್ಯಾಂಕ್ ಭರ್ತಿ ಮಾಡಿಸಿಕೊಳ್ಳಿ ಯಾರಿಗೊತ್ತು ಪೆಟ್ರೋಲ್ ಬೆಲೆ ಯಾವಾಗ ಜಾಸ್ತಿ ಆಗುತ್ತಂತ..ಕೊನೆ ಪಕ್ಷ ಭ್ರಷ್ಟರ "ರಾಜ"ರ ಆಸ್ತಿ ಮುಟ್ಟುಗೋಲು ಹಾಕಿಕೊ೦ಡು ಅದರ ಹಣದಲ್ಲಿ ಸಬ್ಸೀಡಿ ನೀದಿದರು ಪೆಟ್ರೋಲ್ ಉಚಿತವಾಗಿ ಹ೦ಚಬಹುದು..ಭ್ರಶ್ಟಾಚಾರದಲ್ಲಿ phd ಮಾಡಿರೋ ರಾಜಕಾರಣಿಗಳಾ ಹಣದಲ್ಲೇ ನಮ್ಮ ದೇಶದ ತೈಲ ಬೆಲೆ ಇಳಿಸಬಹುದು ಹಾಗು ಸ್ವಿಸ್ ಬ್ಯಾ೦ಕ್ ನ ಅಕ್ರಮ ಹಣದಲ್ಲಿ...
ಲಾಸ್ಟ್ ಪಂಚ್:ಯಾವುದೇ ಅನ್ಯಾಯ ಅಕ್ರಮ ಬೆಲೆಏರಿಕೆ ಆದಾಕ್ಷಣ ಒಗ್ಗಟ್ಟಾಗಿ ಹೋರಾಟ ಮಾಡಿ ಇಲ್ಲವೇ ಸಾಥ್ ಕೊಡಿ ಅದಕ್ಕೆ ನ್ಯಾಯ ದೊರೆಯುತ್ತದೆ.
Comments
ಉ: ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ...
In reply to ಉ: ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ... by madhusudhanbabu
ಉ: ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ...
ಉ: ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ...
In reply to ಉ: ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ... by venkatb83
ಉ: ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ...
ಉ: ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ...