ಶಾಲೆಗೆ ಬನ್ನಿ ಮಕ್ಕಳೆ
ಶಾಲೆಗೆ ಬನ್ನಿ ಮಕ್ಕಳೆ
ಬನ್ನಿರಿ ಮಕ್ಕಳೆ ಶಾಲೆಗೆ |
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ||
ಕಲಿಕೆಯ ಲವಲವಿಕೆಗಳು |
ಬೇಕಿದೆ ವ್ಯಕ್ತಿತ್ವದೊಳು ||
ಬೆಳವಣಿಗೆಯಲದ ಗಳಿಸಿ |
ಉಳಿಸುತ ತನ ಬೆಳಗಿಸಿರಿ ||೧||
ಬನ್ನಿರಿ ಮಕ್ಕಳೆ ಶಾಲೆಗೆ |
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ|
ಜ್ಞಾನದ ಅರಿವಿರಬೇಕು |
ವಿಜ್ಞಾನವ ತಿಳಿದಿರಬೇಕು ||
ಭಾಷೆಗಳೆಲ್ಲವು ಬೇಕು |
ಲೆಕ್ಕವು ಬೇಕೇಬೇಕು ||೨||
ಬನ್ನಿರಿ ಮಕ್ಕಳೆ ಶಾಲೆಗೆ |
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ|
ಅಂತರ ಸರಿದೂಗಿಸಲು |
ಅತಂತ್ರತೆಯನು ತೊಲಗಿಸಲು ||
ಸ್ವಾತಂತ್ರ್ಯವ ಮೊಳಗಿಸಲು |
ಜಗದಲಿ ಕಾಣಿಸಿಕೊಳಲು ||೩||
ಬನ್ನಿರಿ ಮಕ್ಕಳೆ ಶಾಲೆಗೆ |
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ|
- ಸದಾನಂದ
Comments
ಉ: ಶಾಲೆಗೆ ಬನ್ನಿ ಮಕ್ಕಳೆ
In reply to ಉ: ಶಾಲೆಗೆ ಬನ್ನಿ ಮಕ್ಕಳೆ by makara
ಉ: ಶಾಲೆಗೆ ಬನ್ನಿ ಮಕ್ಕಳೆ
In reply to ಉ: ಶಾಲೆಗೆ ಬನ್ನಿ ಮಕ್ಕಳೆ by Premashri
ಉ: ಶಾಲೆಗೆ ಬನ್ನಿ ಮಕ್ಕಳೆ
In reply to ಉ: ಶಾಲೆಗೆ ಬನ್ನಿ ಮಕ್ಕಳೆ by makara
ಉ: ಶಾಲೆಗೆ ಬನ್ನಿ ಮಕ್ಕಳೆ
In reply to ಉ: ಶಾಲೆಗೆ ಬನ್ನಿ ಮಕ್ಕಳೆ by makara
ಉ: ಶಾಲೆಗೆ ಬನ್ನಿ ಮಕ್ಕಳೆ