ನವ ಜೀವಿಯ ರಹಸ್ಯ 'ಸೃಷ್ಟಿ' (ಕಥೆ)-ಭಾಗ ೪ ....

ನವ ಜೀವಿಯ ರಹಸ್ಯ 'ಸೃಷ್ಟಿ' (ಕಥೆ)-ಭಾಗ ೪ ....

 
 
ಇಲ್ಲಿವರೆಗೆ.....


ಅದೊಂದು ರಾತ್ರಿ ಡಾ:ವಿಶಾಲ್ ಮತ್ತು ಸಿರಿ ಪ್ರಣಯದಲ್ಲಿ ಮೈಮರೆತಿರಲು, ಅದನ್ನು ನೋಡಿದ 'ಸೃಷ್ಟಿ'ಯ ಮನದಲ್ಲಿ ಆಂದೋಲನವೆದ್ದು ಮಾನವ ಸಹಜ ಬಯಕೆ ಹೆಡೆ ಎತ್ತಿತು..  ಸಿರಿ ಕಟ್ಟುನಿಟ್ಟಾಗಿರುವುದು  ವಿಶಾಲ್ ತನ್ನೊಡನೆ ಸಲುಗೆಯಿಂದ ಇರುತ್ತಿದ್ದರಲ್ಲ, ಅದೊಂದು ದಿನ ಬಂಧುಗಳನ್ನು ಬಿಡಲು ಹೊರಗೆ ಹೋಗಿದ್ದಳು ಡಾ:ಸಿರಿ...


ಆ ಸಮಯದಲ್ಲಿ ಮುಖ ಊದಿಸಿಕೊಂಡು ಮ್ಲಾನವಾದನದೊಡನೆ ಕುಳಿತಿದ್ದ್ಡ 'ಸೃಷ್ಟಿ'ಗೆ   ಹುರುಪು -ಹುಮ್ಮಸ್ಸು ತುಂಬಲು  ಸಂತೋಷಗೊಳಿಸಲು  ಡಾ: ವಿಶಾಲ್  ಆಂಗ್ಲ ಭಾಷೆಯ  ಹಾಡು ಹಾಕಿ ನರ್ತಿಸುತ್ತಿರಲು ತಾ ಸಹ ಉತ್ತೇಜಿತಳಾಗಿ 'ಸೃಷ್ಟಿ' ಸಹಾ ಅವನೊಡನೆ ಹೆಜ್ಜೆ ಹಾಕಿದಳು, ಹಾಕುತ್ತಾ ಒಬ್ಬರ ಕೈನೊಬ್ಬರು ಹಿಡಿದು ನರ್ತಿಸುತ್ತಿರುವಾಗ 'ಸೃಷ್ಟಿ'ಯ ಮನದ ಬಯಕೆ ಒತ್ತರಿಸಿ ಅವಳು ಡಾ:ವಿಶಾಲ್ ನನ್ನು ಚುಂಬಿಸ ಹೊರಟಾಗ, ಅವನು ಕೈ ಅಡ್ಡ ತಂದು ಅದನ್ನು ತಡೆದ.. ಅನಿರೀಕ್ಷಿತ ಘಟನೆಗೆ ಅವಾಕ್ಕಾದ...  ಗೊಂದಲದಲ್ಲಿ ಬಿದ್ದ, ತನ್ನದೇ ಸೃಷ್ಟಿಯ 'ಸೃಷ್ಟಿ' ಯಲ್ಲಿ  ಆ ಬಯಕೆ ಕಂಡು ಮೈ ಅದರಿತು ಮೈ ಮನಗಳ ಕಾಮನೆಗಳ ಸುಳಿಯಲ್ಲಿ ಬಿದ್ದು ಒದ್ದಾಡಿದ,ಪರಿ ಪರಿಯಾಗಿ ಯೋಚಿಸ ತೊಡಗಿದ..
 ಚಿಂತಿಸುತ್ತಿದ್ದ....
ಮುಂದೆ ಏನಾಯ್ತು.......???
ನವ ಜೀವಿಯ ರಹಸ್ಯ 'ಸೃಷ್ಟಿ'(ಕಥೆ)ಯ

 ೨

ನೇ ಭಾಗಗಳಿಗಾಗಿ ಕ್ಲಿಕ್ಕಿಸಿ.....

sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A7/10/05/2012/36658

 

sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A8/10/05/2012/36667

 

sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A9/16/05/2012/36717

 


----------------------------------------------------------------------------------------------------
 
ಕಾಮಕ್ಕೆ ಕಣ್ಣಿಲ್ಲ...!!


ಕಾಮಾತುರಣಂ   ನ ಭಯಂ -ನ ಲಜ್ಜಾ..!!


ಸೃಷ್ಟಿಕರ್ತ  ಬ್ರಹ್ಮನೇ ಅದೊಮ್ಮೆ ತಾನೇ ಸೃಷ್ಟಿ ಮಾಡಿದವಳ ಮೋಹ ಪಾಶದಲ್ಲಿ ಬಿದ್ದು......!!


ಋಷಿ-ಮುನಿಗಳ ತಪಸ್ಸಿಗೆ ಏಕಾಗ್ರತೆಗೆ ಮನೋ ಚಂಚಲತೆಗೆ  ಸವಾಲು ಹಾಕಿ ಚಿತ್ತ ಚಾಪಲ್ಯದತ್ತ  ಸೆಳೆದ ಆ ಕಾಮವೇ ಇಲ್ಲಿ  ಗೆದ್ದಿತು....
ಏನೆಲ್ಲಾ ಯೋಚಿಸಿಯೂ  ಅದು ಸರಿ ಅಲ್ಲ ಎಂಬುದು ತಿಳಿದೂ  ಡಾ: ವಿಶಾಲ್ ,ಈಗ ನಾ ಬೇಡ ಅಂದರೂ 'ಸೃಷ್ಟಿ' ತನಗೆ ಬೇಕಾದ್ದನ್ನು ಯಾವುದೇ ವಿಧದಲ್ಲಾದರೋ, ಮನೆಯಿಂದ  ಆಚೆ ಓಡಿ ಹೊಗಿಯಾದರೂ  ಪಡೆವಳು.... ಮೊದಲೇ ಮೂಗಿನ ಮೇಲೆ ಕೋಪ....
ಹಾಯಾಗಿ ಈಜುತ್ತಿರುವಂತೆ ಕಾಣಿಸಿದರೂ ಅವಳ ಅಂತರಂಗದಲ್ಲಿನ ಆಶೆ ಕಾಣಿಸುತ್ತಿದೆ, ಹಾಗೆಯೇ ನಾ ಒಲ್ಲೆ ಎಂದು ದೂರ ತಳ್ಳಿದ ಕಾರಣವಾಗಿ ಕೋಪದ ಛಾಯೆಯು..
ಒಮ್ಮೆ ಮಾತ್ರ  ಈ ತಪ್ಪು ನಡೆಯಲಿ ಅನ್ನುತ್ತ  ಹೆಂಗೂ ಸಂಬಂಧಿಗಳನ್ನ ಬಿಡಲು ಹೋದ  ಸಿರಿ ಈಗ ಬರುವುದಿಲ್ಲ ಅಂತ ಯೋಚಿಸಿ ತನ್ ಮುಂದಿನ ಕಂಪ್ಯೂಟರ್ನತ್ತ ಧಿಟ್ಟಿಸಿ ನೋಡುತ್ತಾ  ಮಾನಿಟರ್ ಆನ್ ಮಾಡಿದ ವಿಶಾಲ್..
ಅಲ್ಲಿ ನೀರಿನ ತೊಟ್ಟಿಯಲ್ಲಿ  ನಗ್ನಳಾಗಿ ಈಜುತ್ತಿದ್ದ 'ಸೃಷ್ಟಿ' ನೀರಿನ ತೊಟ್ಟಿಯಿಂದ ಎದ್ದು ಆಚೆ ಬಂದು  ಬಟ್ಟೆ ಎತ್ತಿಕೊಳಲು ನೋಡಿದರೆ ಅಲ್ಲಿ ಡಾ: ವಿಶಾಲ್ ನಿಂತಿರುವನು.. ಅವನ ಕಣ್ಣಲ್ಲಿ ಕಾಣುತ್ತಿದೆ..... ಕಾಮ ವಾಂಛೆ..!!
ಅವನ ಬಳಿ ಸಾರಿ ಅಪ್ಪಿಕೊಂಡು ಉತ್ಕಟತೆಯಿಂದ ಚುಂಬಿಸುತ್ತ .................. ಪ್ರಣಯದಲ್ಲಿ ಮೈಮರೆತಿರುವಾಗ.......'ಸೃಷ್ಟಿ' ಯ ಬಾಲ   ಎದ್ದು   ಅದರೊಳಗಿಂದ ಒಂದು   ಸೂಜಿಯಂತೆ  ಚೂಪಾದುದು  ಹೊರ  ಬಂದು ಇನ್ನೇನು  ಡಾ: ವಿಶಾಲ್ನ  ಕುತ್ತಿಗೆಯತ್ತ  ದಾವಿಸಬೇಕು ..... ಅಸ್ಟರಲ್ಲಿ   ...  
ಅದೇ ತಾನೇ ವಾಪಾಸು ಬಂದು ಬಾಗಿಲು ತೆಗೆದು ಒಳ ಬಂದು ನಿಂತ ಡಾ: ಸಿರಿ ಗೆ  ಅಲ್ಲಿಯ ದೃಶ್ಯ ಕಂಡು ,ಭೂಮಿಯೇ ಬಿರಿದು ತಾ ಅದರಲ್ಲಿ ಬಿದ್ದರೆ ಎಷ್ಟು ಚೆನ್ನ ಅನ್ನಿಸಿತು.. ನನ್ನ  ಊಹೆ ಸಂದೇಹ ನಿಜವಾಯಿತೇ? ಅಯ್ಯೋ ..!! ನನ್ ನಂಬಿಕೆ   ನುಚ್ಚು ನೂರಾಯಿತು.. ವಿಶಾಲ್... ಗಟ್ಟಿಯಾಗಿ ಅರಚಿದಳು ಇಡೀ ಸೂರು ಕಿತ್ತಿ ಹೋಗುವಂತೆ...
ಡಾ: ವಿಶಾಲ್, ಸ್ವರ್ಗದ  ತುದಿಯಲ್ಲಿ ಇದ್ದವನು ಇದ್ದಕ್ಕಿದ್ದಂತೆ ಬಂದ ಈ ಭಾರೀ ಕೂಗು  ಕೇಳಿ       ಜೋಶ್ ನಿಂದ ಹೋಶ್ಹ್ ಗೆ ಬಂದು  ಕಣ್ಣು ತೆರೆದು  ನೋಡಿದ, 'ಸೃಷ್ಟಿ' ಡಾ: ಸಿರಿ ಕಡೆಗೆ ಕೆಂಗಣ್ಣಿನಿಂದ ನೋಡುತ್ತಾ  ಬಟ್ಟೆ ಎತ್ತಿಕೊಂಡು ಓಡಿ ಹೋದಳು...
ಡಾ: ಸಿರಿ  ಎದ್ದು ನಿಂತು  ಲಜ್ಜೆಯಿಂದ  ತಲೆ  ತಗ್ಗಿಸಿದ   ಗಂಡನ   ಕಡೆಗೆ ನೋಡುತ್ತಾ
ಥೂ...!! ನಂಬಿಕೆ ದ್ರೋಹಿ, .....ಕ,  ಎಂದು ಉಗಿದು
ನಿನ್ನ ಮುಖ ನೋಡಲೇ ಅಸಹ್ಯ ಆಗುತ್ತಿದೆ, ನಾ ಒಂದು ಕ್ಷಣವೂ ಇಲ್ಲಿರಲಾರೆ ,ಈಗಲೇ ಹೊರಟೆ ಎನ್ನುತ್ತಾ ಬಾಗಿಲು ಧಡಾರನೆ  ಹಾಕಿಕೊಂಡು ಹೋದಳು ಸಿರಿ....
ಡಾ: ವಿಶಾಲ್  ಬಟ್ಟೆ  ಹಾಕಿಕೊಂಡು ಹೊರ ಬರುವುದರೊಳಗಡೆ ಸಿರಿ ಕಾರು ಹತ್ತಿ ತನ್ನ ಪೋಷಕರ ಮನೆಯತ್ತ ಹೊರಟು ಆಗಿತ್ತು...ಛೇ...ಛೇ . ಕೆಲ್ಸಾ ಆಗೊಯ್ತು... ನಾ ಈ ತಪ್ಪು ಮಾಡಬಾರದಿತ್ತು...:(
(
ಸಿರಿ ಹೋಗುವುದು ಸೀದಾ ತನ್ನ ಪೋಷಕರ ಮನೆಗೇನೆ, ಅಲ್ಲಿ ಅವಳು ಈ ವಿಷ್ಯವನ್ಣ ತನ್ನ ಪೋಷಕರಿಗೆ ತಿಳಿಸಿದರೆ?... ಓ!! ಮೈ ಗಾಡ್ ಹಾಗೆ ಆಗಕೂಡದು, ಕೂಡಲೇ  ಬೈಕು ಹತ್ತಿ ಹೊರಟ ಕಾರು ಹಿಂಬಾಲಿಸಿಕೊಂಡು...
ಮೊದಲಿಗೆ ಹೇಳದೇ ಕೇಳದೇ ಬಂದ ಮಗಳು, ಅವಳ ಮ್ಲಾನ ವದನ ಕಂಡು ಪೋಷಕರಿಗೆ ದಿಗಿಲಾಯ್ತು, ಏನು ಸಿರಿ ಒಂದು ಮಾತು ಹೇಳದೇ ಬಂದು ಬಿಟ್ತಿದಿಯ? ಎಲ್ಲ ಸೌಖ್ಯವೇ? -ಪೋಷಕರ ಪ್ರಶ್ನೆಗೆ ಹಾ- ಈ ಕಡೆಯೇ ಬಂದಿದ್ದೆ ಹಾಗೆ ನೋಡಿಕೊಂಡು ಮಾತಾಡಿಸಿಕೊಂಡು ಹೋಗುವ ಅಂತ ಬಂದೆ ಎನ್ನುತ್ತಾ ಮನೆಯೊಳಗೆ  ನಡೆದಳು ಸಿರಿ..... ದೂರದಲ್ಲಿ ತನ್ನ ಬೈಕು ನಿಲ್ಲಿಸಿ  ಅವಳು ಮನೆಯೊಳಗೆ ಹೋಗಿದ್ದು ನೋಡಿ, ಹಿಂದೆಯೇ ಹೋದರೆ ಅತ್ತೆ-ಮಾವನಿಗ್ ಏನು ಹೇಳುವುದು ಅಂತ ಯೋಚಿಸಿ  ವಾಪಾಸ್ಸು ಬೈಕು ತಿರುಗಿಸಿ  ನಗರದ ಕಡೆ ಹೋಗಿ ಅಲ್ಲಿ ಪಾರ್ಕ್ ಒಂದರ ಹತ್ತಿರ ಬೈಕು ನಿಲ್ಲಿಸಿ ಪಾರ್ಕ್ನೊಳಗೆ ಹೋಗಿ  ಕತ್ಟಲಾಗುವವರೆಗೆ ಕಾದು  ಆಮೇಲೆ ಬೈಕು ಸ್ಟಾರ್ಟ್ ಮಾಡಿ ಅತ್ತೆ ಮಾವನ ಮನೆ ಕಡೆಗೆ ಹೊರಟ ಡಾ:ವಿಶಾಲ್.
ಹೊರಗಡೆ ಅದೇ ತಾನೇ ಊಟ ಮುಗಿಸಿ ಅಡ್ಡ್ಡಾಡುತ್ತಿದ್ದ ಮಾವನಿಗೆ ಡಾ: ವಿಶಾಲ್ ಬೈಕು ಹತ್ತಿ ಗೇಟು ದಾಟಿ ಬಂದಿದ್ದು ಕಾಣಿಸಿತು.. ಬನ್ನಿ ಬನ್ನಿ ಅಳಿಯಂದಿರೆ,ಎಲ್ಲ ಸೌಖ್ಯವೇ? ಇದೇನು ಇವತ್ತು ಸಿರಿ ಮತ್ತು ನೀವ್ ಹೇಳದೇ ಕೇಳದೇ ಬಂದಿರುವಿರಿ? ಎನ್ನಲು ,ಮಾವ ಅದು ಸಿರಿ ,, ಅದು ಎನ್ನುವಾಗಲೇ ಅವನನ್ನು ತಡೆದು  ಹೋಗಿ ಒಳ ಹೋಗಿ ಕೈ ಕಾಲು ಮುಖ ತೊಳೆದುಕೊಳ್ಳಿ ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳಿ ಬಾಕಿ ವಿಷ್ಯ ಆಮೇಲೆ ಮಾತಾಡುವ ಅಂದರು...
ಉಸ್ಸಪ್ಪ...!
ಸಧ್ಯ ಈ ಯಪ್ಪ  ಕೆದಕಿ ಕೆದಕಿ ಏನೂ ಕೇಳಲಿಲ್ಲವಲ್ಲ..!! ಸಧ್ಯಕ್ಕೆ ಬಚಾವ್, ಈಗ ಸಿರಿಯನ್ನ ಒಲಿಸಿಕೊಳ್ಳುವ ಅವಳ ಮುನಿಸು ಪರಿಹರಿಸುವ ಬಗೆಯನ್ನ ಯೋಚಿಸುತ್ತಾ ಮನೆಯೊಳಗೆ ಹೋದ...ಆಂಜನ್‍ಜುತ್ತಲೇ..
ಹಾಲಿನಲ್ಲಿ ಕುಳಿತು  ಟೀ ವಿ ನೋಡುತ್ತಿದ್ದ ಸಿರಿಗೆ , ವಿಶಾಲ್ ಬಂದಿದ್ದು ನೋಡಿ ಮೈ ಎಲ್ಲ ಉರಿದು ಹೋಯ್ತು. ಉರಿ ಗಣ್ಣು ಬಿಟ್ಟು ನೋಡುತ್ತಿದ್ದ ಅವಳಿಗೆ ಕಣ್ಣು ಸನ್ನೆ ಮಾಡುತ್ತಿರಲು ಅವಳು ಎದ್ದು ರೂಮಿಗೆ ಹೋದಳು , ಹಿಂದೆಯೇ ಅವಳೊಡನೆ ರೂಮಿಗೆ ಹೋಗಿ, ಅವಳ ಮುಖವನ್ನು ಧಿಟ್ತಿಸಿ ನೋಡಲು ಸಾಧ್ಯ ಆಗದೆ ಎತ್ತಲೋ ನೋಡುತ್ತಾ -   ಸಿರಿ ನನ್ನಿಂದ  ತಪ್ಪಾಗಿ ಹೋಯ್ತು, ಪ್ಲೀಜ್ ಫರ್ಗೀವ್ ಮಿ ಎಂದ....
ಆಗ ತಾನಿದ್ದ ಸ್ತಿಥಿ ಎಂತಾದ್ದಿತ್ತು ತಾ ಒಪ್ಪಿಕೊಳ್ಳದಿದ್ದರೂ 'ಸೃಷ್ಟಿ' ತನಗೆ ಬೇಕಾದ್ಡನ್ನ ಬೇರೆಲ್ಲೋ ಪಡೆಯುವ ಸಾಧ್ಯಾಸದ್ಯತೆ  ಬಗ್ಗೆ ವಿವರಿಸಿದ.. ಇದು ರಹಸ್ಯ ಪ್ರಾಜೆಕ್ಟ್ ಮತ್ತು ನಮ್ಮಿಬ್ಬರ ವಿರಸದ ಕಾರಣವಾಗಿ 'ಸೃಷ್ಟಿ' ಒಂದೊಮ್ಮೆ ತಪ್ಪಿಸಿಕೊಂಡು ಹೋದರೆ ಆಗಬಹುದಾದ  ಅನಾಹುತಗಳು ಎಲ್ಲವನ್ನು ಹೇಳಿದ ಮೇಲೆ, ಮುಂದೆ ಈ ರೀತಿಯ ತಪ್ಪು ಮಾಡಲೆಕೂಡದು ಎಂತಲೂ  ಇನ್ನೂ ಮುಂದೆ 'ಸೃಷ್ಟಿ' ದೇಖಾರೇಕೀ ತಾನೇ ನೋಡಿಕೊಳ್ಳುವುದಾಗಿಯೂ  ತನ್ನದೇ ನೀತಿ ನಿಯಮಗಳು ಮತ್ತು ಅದರಲ್ಲಿ ತಲೆ ತೂರಿಸಬಾರದು ಎಂತಲೂ ಹೇಳಿದಳು ಸಿರಿ..
ಆಗಲೇ ಅವರಿಬ್ಬರಿಗೆ 'ಸೃಷ್ಟಿ' ನೆನಪಾಗಿದ್ದು ಧಡ್ಡನೆ ಎದ್ದು ಹೊರ ಬಂದ ಇಬ್ಬರನ್ನು ನೋಡಿ ಮಾವ ಏನು? ಎಂಬಂತೆ ನೋಡಲು ಮಾವ -ಅರ್ಜೆಂಟ್ ಕೆಲ್ಸಾ ಇದೆ, ನಾವ್ ಈಗಲೆ ಹೊರಡುವೆವು, ಮತ್ತೆ ಆದಸ್ತು ಬೇಗ ಮರಳಿ ಬಂದು ೨-೩ ದಿನ ಇರುವೆವು ಅಂತ, ಅವರ ಪ್ರತಿಕ್ರಿಯೆಗೂ ಕಾಯದೇ  ಸಿರಿ ಕಾರು ಹತ್ತಿದಳು, ವಿಶಾಲ್ ಬೈಕು ಹತ್ತಿ ನಗರದತ್ತ  ಪ್ರಯಾಣ ಶುರು ಮಾಡಿದರು... ಇಬ್ಬರ ಮನದಲ್ಲೂ ಆತಂಕ, 'ಸೃಷ್ಟಿ' ಈಗ ಮನೆಯಲ್ಲೇ ಇರುವಳೇ? ಹೊರಗಡೆ ಏನಾರಾ ಹೋಗಿದ್ದರೆ..??
ದೆವ್ರೆ..! ಹಾಗಾಗದಿರಲಿ...
ಅತ್ತ 'ಸಿರಿ' ಕಡೆಗೆ ಸಿಟ್ಟಿನಿಂದ ನೋಡುತ್ತಾ ತನ್ನ ಬಟ್ಟೆ ಎತ್ತಿಕೊಂಡು ಓಡಿ ಹೋಗಿದ್ದ 'ಸೃಷ್ಟಿ' ತನ್ನ ರೂಮಲ್ಲಿ ಒಂಟಿಯಾಗಿ ಕುಳಿತು ಯೋಚಿಸುತ್ತಿದ್ದಳು,ಸಿರಿ ಯಾಕೆ ನಮ್ಮನ್ನು ನೋಡಿ ಕೋಪಗೊಂದಳೂ? ಹಾಗೆ ಕಿರುಚಿದಳು? ಮನುಷ್ಯ ಸಹಜವಾದ ಈರ್ಷ್ಯೆ 'ಸೃಷ್ಟಿ'ಗೆ ಆಯ್ತು... ಅಲ್ಲಿಯೇ ಇದ್ದ ಪೇಪರು ಪೆನ್ಸಿಲ್ಲು ಕೈಗೆ ತೆಗೆದುಕೊಂಡು ಕೆಲವು ಚಿತ್ರಗಳನ್ನು ಬಿಡಿಸಿದಳು...ಆಮೇಲೆ ಸಿರಿ ತನಗೆ ಅಂತ ಕೊಟ್ಟಿದ್ದ ಬಾಕ್ಸ್ ತೆರೆದು ಅದ್ರಲ್ಲಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡುತ್ತಾ ಅಲ್ಲಿದ್ದ ಹಲವು ಆಭರಣಗಳಿಂದ  ಶೃಂಗಾರಿಸಿಕೊಳ್ಳುತ್ತ ಇರಲು- ಮಿಯಾವ್...ಎಂದು ಶಬ್ಧ ಮಾಡುತ್ತಾ ಬೆಕ್ಕು ಒಳ ಬಂತು...ಮೊದಲಿಗೆ ನಿಶ್ಯಬ್ಧ ವಾತಾವರಣದಲ್ಲಿ ಅದರ ಶಬ್ಧ 'ಸೃಷ್ಟಿ'ಯ ಮನದಲ್ಲಿ ಆತಂಕ ಸೃಷ್ಟಿಸಿತು, ಆಮೇಲೆ ಅದು ತನ್ನ ಬೆಕ್ಕು ಅಂತ ಗೊತ್ತಾಗಿ ಅದನ್ನು ಬಳಿ ಕರೆದು ಅದರೊಡನೆ ಆಡುತ್ತಾ ಕುಳಿತಳು...
ಸ್ವಲ್ಪ ಹೊತ್ತಿನ ನಂತರ  ಹೊರಗಡೆ ಕಾರು ಮತ್ತು ಬೈಕು ಶಬ್ಧ ಕೇಳಿಸಿ, ಕಿಟಕಿ ಮೂಲಕ ನೋಡಲು ಸಿರಿ ಮತ್ತು ವಿಶಾಲ್ ಓಡುತ್ತಾ ಬರುವುದು ಕಾಣಿಸಿತು.. ಸಿರಿಯನ್ನ ನೋಡಿ ಕೋಪವೂ ಬಂದಿತು, ಬೆಕ್ಕು ಏನು ಮಾಡುವುದು ಅಂತ ಯೋಚಿಸುವಾಗಲೇ ಧಡಾರ್ ಅಂತ ಬಾಗಿಲು ತೆಗೆದು ಒಳ ಬಂದ ಸಿರಿಗೆ ಕೈನಲ್ಲ್ ಬೆಕ್ಕು ಅವುಚಿ ಹಿಡಿದು ಕುಳಿತಿದ್ದ 'ಸೃಷ್ಟಿ' ಕಾಣಿಸಿದಳು.. , ಹತ್ತಿರ  ಬರುತ್ತಿದ್ದ ಸಿರಿ ಮುಖ ನೋಡಲು ಆಗದೆ ಎತ್ತಲೊ ನೋಡುತ್ತಿದ್ದ 'ಸೃಷ್ಟಿ'ಯ ಸಮೀಪ ಬಂದು ಆಪ್ಯಾಯತೆಯಿಂದ ಅವಳ ಮೈದಡವಿ   ಬೆಕ್ಕನ್ನು ಅವಳ ಕೈನಿಂದ ಬಿಡಿಸಿ ಹೊರ ಹೋಗಲು ಬಿಟ್ಟಳು.... 'ಸೃಷ್ಟಿ'ಗೆ ಮಲಗಲು ಹೇಳಿ  ಹೊರಗೆ ಹೋದಳು ಡಾ: ಸಿರಿ  'ಸೃಷ್ಟಿ'ಯ ರೂಮಿನ  ಬಾಗಿಲು ಹಾಕುತ್ತಾ..
 
ತನ್ನ ಬೆಕ್ಕು- ಮೊಲದ ಮೇಲೇಕೆ ಸಿರಿಗೆ ಕಣ್ಣು-ವಿಶಾಲ್ ತಾ ಸೇರಿದರೆ ಯಾಕೆ ಹೊಟ್ಟೆ ಕಿಚ್ಚು? ಈ ಸಿರಿಗಿಂತ ವಿಶಾಲ್ ವಾಸಿ ಎಂದು ಯೋಚಿಸುತ್ತಾ, ಬೆಕ್ಕನ್ನು ತನ್ನಿಂದ ಕಸಿದುಕೊಂಡು ಹೊರಗಡೆ ಬಿಟ್ಟುದಕ್ಕಾಗಿ ಆ ರಾತ್ರಿ ಊಟ ಮಾಡದೇ ಮುನಿಸು ತೋರುತ್ತ  ಇದ್ದ 'ಸೃಷ್ಟಿ'ಯನ್ಣ ಸಮಾಧಾನ ಪಡಿಸಲು ಆಗದೆ ಒತ್ತಾಯವಾಗಿ ಅವಳಿಗೆ ತಿನ್ನಿಸಲು ಹೋದಾಗ, ಆ ಪಾತ್ರೆಯನ್ನೇ ಎತ್ತಿ ಬಿಸಾಡಿದಳು, ಉರಿ ಗಣ್ಣು ಬಿಟ್ಟು ನೋಡುತ್ತಿದ್ದ 'ಸೃಷ್ಟಿಯ' ಕಣ್ಣುಗಳಲ್ಲಿ ಕೋಪದ ಛಾಯೆ ಮತ್ತು ತನ್ನ ಬಗೆಗಿನ ಶತೃತ್ವದ ಭಾವನೆ ಕಾಣಿಸಿ ಈಗ ಸಧ್ಯಕ್ಕೆ ಇವಳನ್ನ  ಒಂಟಿ ಆಗಿ ಬಿಡುವುದೇ ಲೇಸು ಅಂತ, ಸಿರಿ ಎದ್ದು 'ಸೃಷ್ಟಿ'ಯ ರೂಮ್ ಬಾಗಿಲು ಹಾಕಿಕೊಂಡು ಹೋದಳು.. ಹಾಲಿನಲ್ಲಿ ಕುಳಿತಿದ್ದ ವಿಶಾಲ್ ಗೆ ಈ ವಿಷ್ಯ ಹೇಳಲು, ಅವಳ ಕೋಪ ತಣಿಸುವ ಕುರಿತು ಚರ್ಚಿಸುತ್ತಾ, ಇಬ್ಬರಿಗೂ ನಿದ್ದೆ ಆವರಿಸಿ ತಮ್ಮ ರೂಮಿಗೆ ತೆರಳಿ ಆ ಬಗ್ಗೆ ಯೋಚಿಸುತ್ತಲೇ ನಿದ್ರೆಗೆ ಜಾರಿದರು..ಬೆಳಗ್ಗೆ ಸಿರಿ ಕೊಟ್ಟ ಲಿಸ್ಟ್ ನೋಡಿ ಅದನ್ನು ತೆಗೆದುಕೊಂಡು ,'ಸೃಷ್ಟಿ' ಬಗ್ಗೆ ಹುಷಾರು ಎನ್ನುತ್ತಾ
ಡಿಪಾರ್ಟ್‌ಮೆಂಟಲ್ ಸ್ಟೋರ್ ಗೆ ಹೋಗಿ ಮನೆಗೆ ಬೇಕಾದ ಅವಶ್ಯ ವಸ್ತುಗಳನ್ನು ತರಲು ಹೊರ ಹೋದ ಡಾ:ವಿಶಾಲ್....
ತಿಂಡಿ ತಿಂದು 'ಸೃಷ್ಟಿ'ಯ ನೆನಪಾಗಿ  ಮತ್ತು ತಲೆಗೆ ಏನೋ ಹೊಳೆದು, ಹಾಗೆ ಮಾಡಿದರೆ ಹೆಂಗೆ? ಎಂಬುವ ಭಾವ ಮೂಡಿ, ಒಂದು ಬಾಕ್ಸ್ ತೆಗೆದುಕೊಂಡು.........
 
 
 
 'ಸೃಷ್ಟಿ'ಯ ರೂಮಿನ  ಬಾಗಿಲು ತೆಗೆದುಕೊಂಡು ಸಿರಿ ಒಳಗೆ ಬಂದಳು, ಅವಳತ್ತ ನೋಡಿದ 'ಸೃಷ್ಟಿ'ಗೆ ಸಿರಿ ಕೈನಲ್ಲಿ ಹಿಡಿದಿದ್ದ ಬಾಕ್ಸ್ ಒಂದು ಕಾಣಿಸಿತು,ಅದರಲ್ಲೇನಿದೆ? ಎಂಬಂತೆ ನೋಡುತ್ತಿದ್ದ ಅವಳ ಬಳಿಗೆ ಹೋಗಿ, ಆ ಬಾಕ್ಸ್ ತೆರೆದು ಪಕ್ಕಕ್ಕೆ ಕುಳಿತಳು...
ತೆರೆದ ಬಾಕ್ಸ್ ಒಳಗಿಂದ ಚ0ಗನೆ ನೆಗೆಯಿತು 'ಸೃಷ್ಟಿ'ಯ ಮುದ್ದಿನ ಬೆಕ್ಕು...
ಬೆಕ್ಕು ನೋಡಿಯೂ ಸುಮ್ಮನೇ ಕುಳಿತಿದ್ದ 'ಸೃಷ್ಟಿ'ಯ ಕಂಡು ಈ ಪ್ಲಾನ್ ಕೂಡ ವಾರ್ಕ್ ಔಟ್ ಆಗುವ ಹಾಗೆ ಇಲ್ಲವೇನೋ? ಎಂದುಕೊಳ್ಳುತ್ತ, ಪ್ರಯತ್ನಿಸುವ ಅಂತ, ಆ ಬೆಕ್ಕನ್ನು ಕೈನಲ್ಲಿ ಹಿಡಿದು 'ಸೃಷ್ಟಿ'ಯ ಕೈಗೆ ಕೊಟ್ಟಳು, ಅವಳು ಒಮ್ಮೆ ಆ ಬೆಕ್ಕನ್ನು ಯಾವ ಭಾವನೆಯೂ ಇಲ್ಲದೇ ನೋಡಿ ಅದನ್ನು ಕೆಳಗೆ ಎಸೆದಳು,ಇವಳ ಭಾವನೆ ಯಾವಗ ಹೇಗೆ ಎಂಬುದು ಅರಿಯಲೂ ಆಗದೆ ಬೆಕ್ಕು ಮತ್ತು ಡಾ: ಸಿರಿ 'ಸೃಷ್ಟಿಯ ಕಡೆಗೆ ಬಿಟ್ಟ ಗಣ್ಣು ಬಿಟ್ಟಂತೆ ನೋಡುತ್ತಿರಲು.....
'ಸೃಷ್ಟಿ' ಒಮ್ಮೆ ಹಾರಿ ನಿಂತಳು , ಅವಳ ಬಾಲ ಎದ್ದು ನಿಂತಿತು, ಒಮ್ಮೆ ಅತ್ತಿತ್ತ ಹೊಯ್ದಾಡಿಸಿ ತಟ್ಟನೆ ಆ ಬೆಕ್ಕನ್ನು ಆ ಬಾಲದಿಂದ ಸುತ್ತಿದಳು 'ಸೃಷ್ಟಿ, ಹಾಗೆಯೇ ಬಾಲದ ಹಿಡಿತ ಗಟ್ಟಿಯಾಗಿಸತೊಡಗಿದಳು, ಜೀವ ಭಯದಿಂದ ತತ್ತರಿಸುತಿದ್ದ  ಬೆಕ್ಕು ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುವಾಗಲೇ  ಅತ್ತಿತ್ತ ಹೊಯ್ದಾಡುತ್ತಿದ್ದ ಬಾಲದ ತುದಿಯಿನ್ದ ಸೂಜಿಯಂತೆ ಛೂಪಿದ್ದ ವಸ್ತು ಒಂದು ಬಂದು ಬೆಕ್ಕಿನ  ಹೊಟ್ಟೆಗೆ ಚುಚ್ಚಿತು  ಸ್ವಲ್ಪ ಹೊತ್ತು ಪ್ರತಿಭಟಿಸಿ ಬೆಕ್ಕು ಆಸು ನೀಗಿತು....
ಈ ಎಲ್ಲ ಅನಿರೀಕ್ಷಿತ   ಘಟನೆಗಳನ್ನು ನೋಡುತ್ತಾ  ಕನಸೋ ನನಸೋ ಎಂಬಂತೆ ಕುಳಿತಿದ್ದ  ಡಾ:; ಸಿರಿ ತಟ್ಟನೆ ಎದ್ದು,'ಸೃಷ್ಟಿ' ಇದೇನು ಮಾಡಿದೆ? ಬೆಕ್ಕನ್ನು ಯಾಕೆ ಸಾಯಿಸಿದೆ? ಎನ್ನುತ್ತಾ ಮುಂದೆ ಬರಲು , ಅವಳ ಮುಖಕ್ಕೆ ತಟ್ಟನೆ ಬೀಸಿದಳು ತನ್ನ ನೀಳ ಕೈಗಳನ್ನು,ಆ ಏಟಿಗೆ ತತ್ತರಿಸಿ ಮಾರು ದೂರ ಹಾರಿ ಬಿದ್ದಳು ಡಾ: ಸಿರಿ...
ದೂರದಲ್ಲಿ ಹೋಗಿ ಬಿದ್ದ ಸಿರಿ ಯ ಬಳಿಗೆ ಹಾರುತ್ತ ಹೋಗಿ ಏಳಲು ಪ್ರಯತ್ನಿಸುತ್ತಿದ್ದ ಸಿರಿಯನ್ನ ನೆಲಕ್ಕೆ ನೂಕಿ ಅವಳ ಮೇಲೆ ಹಾರಿ ಕುಳಿತಳು, ಅವಳ ಕಣ್ಣುಗಳಲ್ಲೇ ದೃಷ್ಟಿ ನೆಟ್ಟು ನೋಡುತ್ತಾ ತನ್ನ ಬಾಲವನ್ನು ಎತ್ತಿ ಅದನ್ನು ನೇರವಾಗಿ ಸಿರಿಯ ಕೊರಳ್  ಹತ್ತಿರ ತರಲು, ಸಿರಿಗೆ ಗೊತ್ತಾಯ್ತು ತನ್ನ ಅಂತ್ಯ ಸಮೀಪಿಸಿತು, ಅಯ್ಯೋ..!! ಈ ಕ್ಷಣದಲ್ಲಿ ವಿಶಾಲ್ ಇರಬಾರದಿತ್ತೆ? ಈಗಲೆ ವಿಶಾಲ್ ಬಂದರೆ ಚೆನ್ನ, ಹೀಗೆಂದು ಅವಳು ಯೋಚಿಸುವಾಗಲೇ, 'ಸೃಷ್ಟಿ' ಯ ಬಾಲದ ತುದಿಯಿನ್ದ ಚೂಪಾದ ವಸ್ತು ಬಂದು ಸಿರಿ ಯ ಕೊರಳ್ನಲ್ಲಿದ್ದ ಸರವನ್ನು ಕಿತ್ತಿತು......
ಅಚ್ಚರಿಯಿಂದ ನೋಡುತ್ತಿದ್ದ ಸಿರಿಯ ಮೇಲಿಂದ ಎದ್ದು ಆ ಸರದಲ್ಲಿದ್ದ ಲಾಕೆಟ್ ಬಿಚ್ಚಿದಳು 'ಸೃಷ್ಟಿ'.. ಒಂದು ಇದ್ದ ಲಾಕೆಟ್ ಎರಡು ಆಗಿ ಅದರಲ್ಲಿ ಕಾಣಿಸಿದವು ವಿಶಾಲ್ ಮತ್ತು ಸಿರಿಯ ಫೋಟೋಗಳು.... ಸಿರಿಯ ಫೋಟೋ ಇದ್ದ ಲಾಕೆಟ್ ಕಿತ್ತು ದೂರ ಎಸೆದು ವಿಶಾಲ್ ಇದ್ದ ಲಾಕೆಟ್ ಮಾತ್ರ ತೆಗೆದುಕೊಂಡು ತನ್ನ ಕಡೆ ಅಚ್ಚರಿಯಿಂದ ನೋಡುತ್ತಿದ್ದ ಸಿರಿಗೆ ಬೀಸಿ ಮತ್ತೆ ಒಂದು ಏಟು ಕೊಟ್ಟಳು..
ಆ ಒಂದು ಏಟಿಗೆ ಮೂರ್ಛೆ ಬರುವಂತೆ ಆಯ್ತು, ಕಣ್ಣು ಕತ್ತಲು ಗವಿದವು, ಮುಚ್ಚುತ್ತಿರುವ ಕಣ್ಣು ರೆಪ್ಪೆಗಳನ್ನು ಬಲವಂತವಾಗಿ ತೆರೆಯುತ್ತಾ ನೋಡುವಾಗ, 'ಸೃಷ್ಟಿ' ಬಾಗಿಲು ತೆಗೆದುಕೊಂಡು ಹೊರ ಹೋಗಲು ಪ್ರಯತ್ನಿಸುತ್ತಿರುವುದು ಕಾಣಿಸಿತು.. ಅವಳು ಆ ಯತ್ನದಲ್ಲಿ ಸಫಲಳು ಆಗಿ ಮುಖ್ಯ ಧ್ವಾರದ ಬಾಗಿಲು ತೆರೆದು  ಆ ಗಾಳಿ ಹೊರಗಿನ ವಾತಾವರಣ ನೋಡುತ್ತಾ ಎರಡೂ ಕೈ ಚಾಚಿ ಕಣ್ಣು ಮುಚ್ಚಿ ನಿಂತಳು ಆಮೇಲೆ ಇನ್ನೇನು ಮನೆಯಿಂದ ಹೊರಗೆ ಹೆಜ್ಜೆ ಇಡಬೇಕು, ಅಸ್ತರಲ್ಲಿ ತಲೆ ಮೇಲೆ ಬಿತ್ತು ಫಟ್ ಅಂತ ಒಂದು ಮರದ ತುಂಡಿನ ಬಲವಾದ ಏಟು....... ತಲೆ ಗಿಮ್ಮೆಂದು ಹಿಂದಕ್ಕೆ ತಿರುಗಿ ನೋಡಿದರೆ ಅಲ್ಲಿ ನಿಂತಿದ್ದು........ಡಾ: ಸಿರಿ...
ಧೋಪ್ಪಣೆ ಕೆಳಗೆ ಬಿದ್ದ 'ಸೃಷ್ಟಿ'ಯನ್ನ ಎತ್ತಿಕೊಂಡು ಹೊಯ್ದು ತಮ್ಮ ಪ್ರಯೋಗಾಲಯದ ಆಪರೇಷನ್ ಟೇಬಲ್ ಮೇಲೆ ಮಲಗಿಸಿದಳು ಆಮೇಲೆ ಕೈ ಕಾಲುಗಳನ್ನು ಅಗಲ ಮಾಡಿ ಆ ಟೇಬಲ್ ಗೆ ಗಟ್ಟಿಯಾಗಿ ಕಟ್ಟಿದಳು ಡಾ: ಸಿರಿ...
ತನಗೆ ಬೇಕಾದ ವಸ್ತುಗಳನ್ನು ಆಯ್ದುಕೊಂಡು ಎಲ್ಲವನ್ನು ಟ್ರೇ ನಲ್ಲಿ ಜೋಡಿಸಿಕೊಂಡು 'ಸೃಷ್ಟಿ' ಯ ಹತ್ತಿರ ಬರಲು, ಅವಳು ಆಗಲೇ ಕಣ್ಣು ತೆರೆದು ಸಿರಿಯನ್ನ ನೋಡಿ ಸಿಟ್ತಿಂದ  ಎದ್ದು ಮುಂದೆ ಬರಲು ನೋಡಿದರೆ ತನ್ನ ಅವಯವಗಳಿಗೆ ಗಟ್ಟಿಯಾಗಿ ಹಗ್ಗದಿಂದ ಬಿಗಿದು ಕಟ್ಟಿದ್ದು ,ಬಾಲವನ್ನು ನೇರವಾಗಿಸಿ ಟೇಬಲ್ ತುದಿಗೆ ಇಟ್ಟು ಅದಕ್ಕೆ ಪ್ಲಾಸ್ಟರ್ ಹಾಕಿ ಗಟ್ಟಿಯಾಗಿ ಅಂಟಿಸಿದ್ದು  ಗೊತ್ತಾಗಿ ಕಣ್ಣೀರು ಹಾಕುತ್ತಾ ತನ್ನನ್ನು ಬಿಟ್ಟು ಬಿಡಲು, ಏನೂ ಮಾಡಬಾರದು ಎಂತಲೂ ಎಸ್ಟು ಕನಿಕರ ಬರುವಂತೆ ಬೇಡಿದರೂ ಅದಕ್ಕೆ ಬಗ್ಗದೆ,ಕಣ್ಣೀರಿಗೆ ಕರಗದೆ  ಸಿರಿ ಒಂದು ಚಾಕು ಎತ್ತಿಕೊಂಡು 'ಸೃಷ್ಟಿ'ಯ ಹತ್ತಿರ ಬಂದಳು, ಸಿರಿಯ ಕಣ್ಣಲ್ಲಿ ಕೋಪವೂ ಹಟವೂ-'ಸೃಷ್ಟಿ'ಗೆ ತಾ ಏನು ಅಂತ ತೋರಿಸಬೇಕು -ತನ್ನ ಸೃಷ್ಟಿಕರ್ತರ ವಿರುದ್ಧವೇ ತಿರುಗಿ ಬಿದ್ದರೆ ಏನಾಗುತ್ತೆ ಎಂದು ತೋರಿಸಬೇಕು ಇದಕ್ಕೆ ಕೊನೇ ಕಾಣಿಸಬೇಕು  ಎನ್ನುವ ಭಾವವೂ  ಎಲ್ಲವೂ ಒಟ್ಟಾಗಿ  'ಸೃಷ್ಟಿ' ಯ ಹತ್ತಿರ ಬಂದಳು, ಅವಳ ಕೈನಲ್ಲಿ ಚೂಪಾದ ಚಾಕು ಕಣ್ಣುಗಳಲ್ಲಿ ರೋಷ, ಹಟ ಕಾಣಿಸಿ ಜೀವ ಭಯದಿಂದ 'ಸೃಷ್ಟಿ'  ಒಮ್ಮೆ ಅಲುಗಾಡಿದಳು, ಏನೆಲ್ಲಾ ವ್ಯರ್ಥ ಪ್ರಯತ್ನ  ಮಾಡಿಯೂ ಒಂದು ಇಂಚು ಕದಲಲು ಆಗದೆ  ಕಣ್ಣೀರು ಸುರಿಸುತ್ತಿದ್ದ 'ಸೃಷ್ಟಿ'ಯ ಕಡೆ ಗ0ಭೀರವಾಗಿ ನೋಡುತ್ತಾ ಹತ್ತಿರ ಬಂದು ತನ್ನ ಕೈನಲಿದ್ದ ಚಾಕು ಎತ್ತಿದಳು ಡಾ: ಸಿರಿ.......
ಮುಂದೆ.......???????
ಕೊನೆಯ ಭಾಗದಲ್ಲಿ..........

 

 

Rating
No votes yet

Comments