ಹಾಸ್ಯನಟ ಚಾರ್ಲಿ ಚಾಪ್ಲಿನ್, ಬಾಪುರವರನ್ನು ಭೇಟಿಯಾದ ಸವಿ ನೆನಪು !

ಹಾಸ್ಯನಟ ಚಾರ್ಲಿ ಚಾಪ್ಲಿನ್, ಬಾಪುರವರನ್ನು ಭೇಟಿಯಾದ ಸವಿ ನೆನಪು !

ಜಗದ್ವಿಖ್ಯಾತ  ಹಾಲಿವುಡ್ ನಗೆನಟ  ಚಾರ್ಲಿ ಚಾಪ್ಲಿನ್,  ಬೊಂಬಾಯಿಗೆ ಬಂದು ನಮ್ಮ ಮಹಾತ್ಮಾ ಗಾಂಧಿಯವರನ್ನು ಭೇಟಿಯಾದರು. ಮೂಲತಃ ಒಬ್ಬ  ಬ್ರಿಟಿಷ್ ನಾಗರಿಕನಾದಾಗ್ಯೂ ಚಾಪ್ಲಿನ್ ತಮ್ಮ ಸರಕಾರ ಮಾಡಿದ ಕೆಲಸ ಸರಿಯಾದದ್ದಲ್ಲ ಎನ್ನುವಮಾತನ್ನು ಮನಗಂಡಿದ್ದರು. ಇಂಥಹ ಹಲವಾರು ವಿಶ್ವದ ವ್ಯಕ್ತಿಗಳು ನಮ್ಮ ಗಾಂಧೀಜಿಯವರನ್ನು ಭೇಟಿಮಾಡಿ ತಮ್ಮ ಒಲವನ್ನು ತೋರಿಸುತ್ತಿದ್ದರು. ಬಾಪುರವರನ್ನು ಸ್ವಾತಂತ್ರ್ಯಕ್ಕೆ ಹೋರಾಡಲು ಪ್ರೇರೇಪಿಸುತ್ತಿದ್ದರು. 

ಮಣಿಭವನದ ಒಳಕೋಣೆಗಳಲ್ಲಿ ಇಂಥಹ ಅನೇಕ ಚಿತ್ರಗಳನ್ನು ನಾವು ಕಾಣಬಹುದು. ಒಂದು ಸಂತೋಷವೆಂದರೆ, ಮಣಿಭವನದಲ್ಲಿ ಸೆಕ್ಯುರಿಟಿ ಚೆಕ್ ಇಲ್ಲವೇ ಇಲ್ಲ ! ಮತ್ತೊಂದು ವಿಷಯವೆಂದರೆ, ಎಷ್ಟು ಬೇಕಾದರೂ ಫೋಟೋಗಳನ್ನು ತೆಗೆಯಬಹುದು. ಮುಂಬೈನಲ್ಲಿ ಇದು ವಿಶೇಷವೇ ! ಭಾರತದಲ್ಲಿ ಚಿತ್ರ ತೆಗೆದುಕೊಳ್ಳುವುದು ಅಸಾಧ್ಯದ ಮಾತು. ಅದೇ ಅಮೇರಿಕಾದಲ್ಲಿ ಹಾಗಿಲ್ಲ. ನಾವು ಅಮೇರಿಕ ದೇಶಕ್ಕೆ ಭೇಟಿ ಇಟ್ಟಾಗ ಅದೆಷ್ಟು ಚಿತ್ರಗಳನ್ನು ತೆಗೆದೆವೋ ನಮಗೆ ಸರಿಯಾಗಿ  ನೆನಪಿಲ್ಲ.

ಮಣಿಭವನವನ್ನು ನೋಡಲು ಬರುವ ಬಹುಪಾಲು ವೀಕ್ಷಕರು ವಿದೇಶೀಯರು. ಅವರು ತೋರಿಸುವ  ಆಸಕ್ತಿ, ಪ್ರೀತಿ, ಭಕ್ತಿ, ಮತ್ತು ಆಶ್ಚರ್ಯ, ಅದ್ಭುತವಾದದ್ದು. ಅವರು ಪುಸ್ತಕಗಳನ್ನೂ, ಸಿ.ಡಿ.ಗಳನ್ನೂ ಖರೀದಿಸುತ್ತಾರೆ, ಒಳ್ಳೆಯ ಗೈಡ್ಗಳನ್ನು ಸಂಪರ್ಕಿಸಿ ಹಲವಾರು ಮಾಹಿತಿಗಳನ್ನೂ ಶೇಖರಿಸಲು ಸದಾ ಉತ್ಸುಕರಾಗಿರುತ್ತಾರೆ. ನಮ್ಮ ಭಾರತೀಯರು ಬಮ್ದವರಲ್ಲಿ ಹಲವರು ಸುಮ್ಮನೆ ಆಲ್ಲಿ ಇಲ್ಲಿ ನೋಡಿ ಫಕ್ಕನೆ ಹೊರಟುಹೋಗುತ್ತಾರೆ. 

 

Comments