ಸಂಪದಿಗರಿಬ್ಬರ ವಿಶೇಸಮ್ಮಿಲನ @ ಮೆಜೆಸ್ಟಿಕ್..ಭಾಗ-೧

ಸಂಪದಿಗರಿಬ್ಬರ ವಿಶೇಸಮ್ಮಿಲನ @ ಮೆಜೆಸ್ಟಿಕ್..ಭಾಗ-೧

 
ಜೂನ್ -ಒಂದು- ೨೦೧೨ ರ ರಾತ್ರಿ ೯ ಘಂಟೆ ಸುಮಾರಿಗೆ  ಮನೆಯಲ್ಲಿ  ಕಂಪ್ಯೂಟರ್ ಆನ್ ಮಾಡಿ 'ಸಂಪದ' ಓಪನ್ ಮಾಡಿ  ಓದಲು ಶುರು ಮಾಡಿದಾಗ,  ನನಗೆ ಒಂದು ಕರೆ-ಅದೂ ಅನಾಮಿಕ-ಅನಾಮಧೇಯರಿಂದ...ಮತ್ತು ನನ್ನ ಒಂದು ಪಾಲಿಸಿ ಅಂದ್ರೆ, ಅನಾಮಿಕ -ಅನಾಮಧೇಯ ಕರೆಗಳನ್ನು ನಾ ಸ್ವೀಕರಿಸುವುದು ಕಡಿಮೆ, ಸ್ವೀಕರಿಸಿದರೂ 'ಸುಮ್ಮನೇ' ಕಿವಿಗೆ ಹಿಡಿಯುವೆ, ಅದು ಯಾವುದೋ ಜಾಹೀರಾತು ಕರೆಯೋ,ಸಾಲ(ಶೂಲ!!)-ಇನ್ಸೂರೆನ್ಸ್ ಅದೂ ಇದೂ ಅಂತ ಬಡಬಡಿಸಲು ಆರಂಬಿಸಿದರೆ ಕಾಲ್ ಕಟ್...:((
ಈ ಕರೆ ಬಂದಾಗಲೂ ಮನ ಹಿಂಜರಿಯಿತು-ಸ್ವೀಕರಿಸಲು...
ಆಮೇಲೆ ಯೋಚಿಸಿ ನೋಡೋಣ ಅಂತ ಸ್ವೀಕರಿಸಿ ಕಿವಿಗಿಟ್ಟುಕೊಂಡು ಸುಮ್ಮನಿದ್ದೆ...!!
 
ಅವರು: ಹಲೋ ಸಪ್ತಗಿರಿವಾಸಿಯವಾರಾ?
ನನ್ನ ಹೆಸರು ಕೇಳಿದೊಡನೆ ನನಗೆ ಅಚ್ಚರಿಯಾಯ್ತು...
ಅದಕ್ಕೆ ಕಾರಣ-ನನ್ನ ಈ ಹೆಸರು ಗೊತ್ತಿರುವುದು ಸಂಪದ ಮತ್ತು ವಿಸ್ಮಯನಗರಿ ಸ್ನೇಹಿತ(ತೆ)ರಿಗ್ ಮಾತ್ರ,
ಇವರಿಗೆ ನನ್ನ ಹೆಸರು ಹೇಗೆ ಗೊತ್ತಾಯ್ತು?
ಯಾರ್ ಇರ್ಬಹುದು?
ನಾ ಯಾರಿಗೂ ನಂಬರ್ ಕೊಟ್ಟ ಹಾಗ್ ನೆನಪಿಲ್ಳವಲ್ಲ ಅಂತ.....
ಮುಂದೇನಾಯ್ತು...??
 
ಅವರು: ಹಲೋ ಸಪ್ತಗಿರಿವಾಸಿಯವಾರಾ?
ಸ-ವಾ: ಹ್ಹಾ- ಹೌದು.....
ನೀವ್ ಯಾರು? ಅಂತ ಗೊತ್ತಾಗಲಿಲ್ಲವೇ.....
ಹಾಗೆಯೇ ಮನದಲ್ಲಿ ಯೋಚಿಸುತ್ತಿದ್ದೆ ಇವರು 'ಅವರು' ಇರಬಹುದೇ?
'ಇವರು'?
ಇವರೂ ಅಲ್ಲ ಅವರೂ ಅಲ್ಲ'ಮತ್ತೊಬ್ಬರಿರಬೇಕೇನೋ'? ...
ನನ್ನ ಯೋಚನಾ ಲಹರಿ ಗಮನಿಸಿದಂತೆ
ಅವರು: ಯಾರೂ ಅಂತ ಗೊತ್ತಾಗಲಿಲ್ಲವೇ?
ಯೋಚಿಸಿ ಯೋಚಿಸಿ.....
 
ಸ-ವಾ: ಸ್ಸಾರ್ ನನ್ನ ಈ ಹೆಸರು ಗೊತ್ತಿರುವುದು ನನ್ನ ಸಂಪದ ಮತ್ತು ವಿಸ್ಮಯನಗರಿ ಸದಸ್ಯ ಮಿತ್ರರಿಗೆ -ಮತ್ತು ಓದುಗರಿಗೆ ಮಾತ್ರ, ಅದ್ಯಾಗ್ಗು ನಾ ನನ್ನ ನಂಬರ್ ಯಾರಿಗೂ ಕೊಟ್ಟ ಹಾಗೆ ನೆನಪಿಲ್ಲ...
ಯೋಚಿಸಿದರೂ ನೀವ್ ಯಾರುಂ..ಗೊತ್ತಾಗುತ್ತಿಲ್ಲ ಎಂದೆ...
ಅವರು: ನಾ ಸಂಪದ ಸದಸ್ಯನೇ ಮತ್ತು ನಿಮ್ಮೊಡನೆ ದಿನವೂ ಅಲ್ಲದಿದ್ದರೂ ೨-೩ ದಿನಕ್ಕೊಮ್ಮೆಯಾದರೂ ಒಡನಾಟದಲ್ಲಿರುವವ್ನು, ನಿಮಗೆ ಸಂಪದದಲ್ಲಿ ತಟ್ಟನೆ ನೆನಪಿಗೆ ಬರುವ ೩-೪ ಹೆಸರು ನೆನಪಿಸಿಕೊಳ್ಳಿ ಅದರಲ್ಲಿ ನಾ ಒಬ್ಬ....!!
 
ಅವರು ಆಡುವ ಮಾತಿನ ಉಚ್ಚಾರಣೆ-ಭಾವದಿಂದ ಮತ್ತು ಧ್ವನಿಯಿಂದಾಲಾರ  ಅವ್ರ್ಯಾರು ಅಂತ ಕಂಡು ಹಿಡಿಯುವ ಅಂದ್ರೆ, ಅದು ಬೆಂಗಳೂರಿನವರು ಆಡುವ ಭಾಷೆಯೇ,ಧ್ವನಿ ಹೆಚ್ಚು ಕಡಿಮೆ ೪೫-೫೫ ರ ವ್ಯಕ್ತಿಯದ್ದು......!!
ಈಗ ಒಂದಂತೂ ಕನ್‌ಫರ್ಮ್ ಆಯ್ತು-ಅದು ಇವರು ಸಂಪದ ಸದಸ್ಯರೆ, ಸ್ಸರಿ, ಆದರೆ ಯಾರಿರಬಹುದು?
ತಟ್ಟನೆ ಯೋಚಿಸಿದೆ-ತಟ್ಟನೆ ನೆನಪಿಗೆ ಬಂದವರು ಹಲವರು..!!
 
ಗುರುಗಳು(ಪಾರ್ಥ ಸಾರಥಿ ಅವರು)
ಗಣೇಶ್ ಅಣ್ಣ
ಶ್ರೀಧರ್ ಜೀ
ಹಿರಿಯರಾದ ಕವಿ ನಾಗರಾಜ ಅವರು
ಶ್ರೀ ಕರ್ ಅವರು
ಚೇತನ್(ಚಿಕ್ಕು)
ಸಂತೋಷ್
ಸುಪ್ರೀತ್..
ಸತೀಶ್
ಜಯಂತ್...
ನಂಜುಂಡ ಅವರು
........
ಇಸ್ತು ಜನರಲ್ಲಿ ನನಗೆ ಆ ವಯಸ್ಸಿನ ೪೫-೫೫ ರೇಂಜ್ನವರು ಅನ್ನಿಸಿದ್ದು(ಅವರು ಅಲ್ಲಲ್ಲಿ ಬರೆವ ಬರಹಗಳು-ಪ್ರತಿಕ್ರಿಯೆಗಳ ಮೂಲಕ ಹೇಳಿದ್ದು ಗಮನಿಸಿ)ಮತ್ತ್ತು ನಾ ಶಾರ್ಟ್ ಲಿಸ್ಟ್ ಮಾಡಿದ್ದು ೪ ಜನರನ್ನ....
 
ಗುರುಗಳು
ಗಣೇಶ್ ಅಣ್ಣ
ಶ್ರೀಕರ್ ಅವರು
ಕವಿ ನಾಗರಾಜ್ ಅವರು...
ಕೆಲವು ತಿಂಗಳುಗಳಿಂದ ನಾ ಯಾರ ಜೊತೆ ಅತಿ ಹೆಚ್ಚು ಒಡನಾಟದಲ್ಲಿದ್ದೆ, ಯಾರು ನನಗೆ ಪ್ರತಿಕ್ರಿಯಿಸಿದ್ದರು, ಎಂದೆಲ್ಲ ಯೋಚಿಸಿಯೂ ಈ ೪ ಜನರಲ್ಲಿ 'ಇವರು' ಯಾರು ಅನ್ನೋದು ಗೊತ್ತಾಗದೇ ಹೋಯ್ತು...:(( ಯಾಕೆಂದರೆ ಆಸ್ತೂ ಜನರ ಜೊತೆ ನಾ ಒಡನಾಟದಲ್ಲಿದ್ದೆ, ನಾ ಅವರಿಗೆ, ಅವರು ನನ್ನ ಬರಹಗಳಿಗೆ ಪ್ರತಿಕ್ರಿಯಿಸಿದ್ದರು...
ಅವರು: ಈಗಲರ ಗೊತ್ತಾಯ್ತಾ? ನಾ ಯಾರು ಅಂತ
ಸ್ಸಾರ್ ನೀವ್ ಗುರುಗಳು(ಪಾರ್ಥ ಸಾರಥಿ ಅವರು) ಅಲ್ಲವೇ????
ಅವರು: ನಗುತ್ತಲೇ, ಅಲ್ಲ
ಸ-ವಾ: ಸಂಶಯದಿಂದಲೇ, ನೀವು ಅವರೇ ನಿಮ್ಮ ಧ್ವನಿ ಕೇಳಿದರೆ ನನ್ ಊಹೆಯಂತೆ ನೀವ್ ಅವರೇ...
ಅವರು: ಇಲ್ಲ ನಾ 'ಅವರಲ್ಲ',,, ಇನ್ನೂ ನಿಮಗೆ ಯಾರು ನೆನಪಿಗೆ ಬರುವರು?
ಸ-ವಾ:ಗಣೇಶ್ ಅ..., ನೀವ್ ಗಣೇಶ್ ಅಣ್ಣ ಅವರೇ ಇರ್ಬೇಕು...
 
ಅವರು:,,,,,,,,,,,,
ಸ್ಸರಿ...ಸ್ಸರಿ ಅದು ಬಿಡಿ, ಹೇಳಿ ಹೇಗಿದೀರಾ?
ನೀವ್ ಬರೆವ ಬರಹಗಳು ಸಖತ್..!! ಅದ್ರಲ್ಲೂ ಆ ಸೃಷ್ಟಿ, ಅಬಬ್ಬಬಾ....!!
ಸ-ವಾ ಸಂಕೋಚದಿಂದಲೇ , ಅಯ್ಯೋ ಅದ್ ಬಿಡಿ ಸ್ಸಾ.. ಏನೋ ತೋಚಿದ್ದು ಗೀಚುತ್ತಿರುವೆ, ಅದನ್ನ ನೀವೆಲ್ಲ ಮೆಚ್ಚಿಕೊಳ್ಳುತ್ತಿರುವಿರಿ... ನನಗೆ ಖುಷಿ  ಆಗುತ್ತಿದೆ..
ಅವರು:ಈಗ್ ನಾ ನಿಮಗೆ ಫೋನ್ ಮಾಡಿದ್ದು ಒಂದು ವಿಚಾರ ಹೇಳಲಿಕ್ಕೆ...
ಸ-ವಾ: ಏನ್ಸಾರ್ ಅದು?
ಅವರು:ಏನಿಲ್ಲ,ನಾ ಮತ್ತು ನೀವ್ ಒಂದು ಸಾರಿ ಭೆಟ್ಟಿ ಆಗಬೇಕಿತ್ತಲ್ಲ........
ಸ-ವಾ: ವಾಹ್ವಾವ್... ನಾ ಈ ಘಳಿಗೆಗಾಗಿಯೇ ಆದೆಸ್ಟು ದಿನದಿಂದ ಕಾದಿದ್ದೆ... ಬೆರ್‌ ಯಾವ ಸಂಪದ ಮಿತ್ರರಿಗೆ ಎಸ್ತೊಂದು ದಿನ್ಗಳಿಂದ ಸಿಗದವರು- ತಮ್ಮ  ಮುಖ ತೋರಿಸದವರು ತಮ್ಮ ಬಗ್ಗೆ ಎಲ್ಲವನ್ನು ರಹಸ್ಯವಾಗಿತ್ತು ಕುತೂಹಲ ಹುಟ್ಟಿಸಿದವರು ತಮ್ಮ ಪಂಚ್ ಪ್ರತಿಕ್ರಿಯೆಗಳಿಂದ ಮುದಗೊಳಿಸುವವರು, ತಮ್ಮ ಬರಹಗಳಿಂದ ಮುದ ನೀಡುವವರು,ಎಲ್ಲರನ್ನೂ ಬಿಟ್ಟು ,ನನ್ನನು ಭೆಟ್ಟಿ ಆಗುವುದು, ನಾ ಅವರನ್ನು ನೋಡುವುದು ಅಂದ್ರೆ-ಸುಮ್ನೇನಾ?............
ಸ-ವಾ: ಸ್ಸರಿ ಸ್ಸಾ..ಅದಕ್ಕೇನಂತೆ, ಖಂಡಿತ ಭೆಟ್ಟಿ ಆಗುವ, ಎಲ್ಲಿ ನಮ್ಮ ಭೇಟಿ?
ಅವರು: ನಾ ಅದನ್ನು ಆಮೇಲೆ ಮತ್ತೆ ಫೋನ್ ಮಾಡಿ ನಾಳೆ ಹೇಳುವೆ(೨-೬-೨೦೧೨)...
ಸ-ವಾ: ಆಯ್ತು ಸಾ.. ಶುಭವಾಗಲಿ.. ಶುಭ ರಾತ್ರಿ..........
ಮೈ ಮನವೆಲ್ಲ ಅಹ್ಲಾದಮಯ, ಸಂತಸ ಸಡಗರ ಸಂಭ್ರಮ..ಅದಕ್ಕೆ ಕಾರಣವೂ ಇತ್ತೆನ್ನಿ,,,!!
 
ಧ್ವನಿ ಅಂತೂ ಕೇಳಿ ಆಯ್ತು........ ಈಗ ಅವರನ್ನು ನೋಡುವುದು ಮಾತ್ರ ಬಾಕಿ, ಅದೂ ನಾಳೆ ನೆರವೇರಲಿದೆ, ಇದೆ ಸುಸಮಯ ಸಂದರ್ಭ ಅಮೃತ ಘಳಿಗೆ  ಅಂತ ಈ ವಿಚಾರವನ್ಣ ಗುರುಗಳಿಗೂ ಮತ್ತು ಇನ್ನಿತರರಿಗೂ ಹೇಳೋಣ ಅಂದ್ರೆ ಅವರು ಯಾರೊಬ್ಬರ ಸಂಚಾರಿ ದೂರವಾಣಿ -ಸ್ಥಿರ ದೂರವಾಣಿ ನಂಬರ್ ನನಗೆ ಗೊತ್ತಿಲ್ಲ, ಹೋಗಲಿ ಮಿಂಚೆ ಕಳಿಸೋಣ ಅಂದ್ರೆ ನನಗೆ ಗೊತ್ತಿರುವುದು ಇಬ್ಬರ ಮಿಂಚೆ ವಿಳಾಸ ಮಾತ್ರ
ಗುರುಗಳು ಮತ್ತು ಶ್ರೀಧರ್ ಜೀ ಅವರದು...
ಇಬ್ಬರಿಗೂ ಹಲವು ಬಾರಿ ಮಿಂಚೆ ಕಳಿಸಿದರೂ ಇಬ್ಬರಿಂದಲೂ ಯಾವುದೇ ಮಾರುತ್ತರ ಬರದಿದುದ್ದುದರಿಂದ ..................
ಸಂಪದದಲ್ಲೇ 'ಅವರನ್ನು' ಭೇಟಿ ಮಾಡುವ ಬಗ್ಗೆ ಹೇಳುವ ಅಂದ್ರೆ ಸ್ಥಳ ಎಲ್ಲಿ ಅಂತ ಗೊತ್ತಿಲ್ಲ?
ಯಾವಾಗ ಅಂತ ಗೊತ್ತಿಲ್ಲ?
ಭೇಟಿ ಆಗುವೆವು ಎಂಬುದಕ್ಕೆ ಅದು ಇನ್ನೂ ಪಕ್ಕಾ ಆಗಿಲ್ಲ.. ಅದಕ್ಕೆ 'ಅವರನ್ನು' ಭೆಟ್ಟಿ ಮಾಡಿ ಮಾತುಕತೆಯಾಡಿ ಆಮೇಲೆ ಫೋಟೋ ತೆಗೆದು ಸಂಪದದಲ್ಲಿ ಹಾಕಿದರೆ ಆಯ್ತು....
ಮಾರನೆ ದಿನ ಮಧ್ಯಾಹ್ನದವರೆಗೂ ಫೋನ್ ಬರದೇ ಇರಲು, ನಾನೇ ಅವರಿಗೆ ಕರೆ ಮಾಡಿದೆ..ಉತ್ತರಿಸಿ ಸ್ವಲ್ಪ ಕೆಲಸ ಇದೆ ಅಂತಲೂ ತಾವೇ ಫೋನ್ ಮಾಡಿ ಸ್ಥಳ ಸಮಯ ಹೇಳುವುದಾಗಿ ತಿಳಿಸಿದರು...
ರಾತ್ರಿ ೭ ಸುಮಾರಿಗೆ ಕರೆ ಬಂತು.....
ಅವರು:ಸಪ್ತಗಿರಿಯವರೇ ನಾ ಈಗ ಬಸವನಗುಡಿಯಲ್ಲಿರುವೆ, 'ಸೃಷ್ಟಿ' ವೆಂಚರ್ಸ್ ನ ಈಗಸ್ಟೆ ನೋಡಿದೆ...
'ಸೃಷ್ಟಿ ವೆಂಚರ್ಸ್' ಎಲ್ಲೋ ಕೇಳಿದ ಹಾಗಿದೆಯಲ್ಲ- ಹೋ, ಅದು ವಾಕ್ಪಥ ನಡೆಯುವ ಸ್ಥಳ... ಅಂದ್ರೆ ಇವರು ನನಗಿಂತ ಮುಂಚೆಯೇ 'ಅವರೆಲ್ಲರನ್ನೂ' ಭೇಟಿ ಆದರೇನೋ...:((
ಸ-ವಾ:ಸಾ. ಅದು ವಾಕ್ಪಥ ನಡೆಯುವ ಸ್ಥಳವಲ್ಲವೇ?
ಅಲ್ಲಿ ನಿಮಗೆ ಗುರುಗಳು ಮತ್ತು ಮಂಜು ಅಣ್ಣ ಗೋಪಿನಾಥ್ -ಜಯಂತ್ ಅವರು ಸಿಕ್ಕಿರುತ್ತಾರೆ..
ಅವರು: ಹಾ, ಅದೇ ಸ್ಥಳ, ಅದೇ ನೋಡಿ ಅಚ್ಚರಿ,
ಅದಕ್ಕೆ ಹತ್ತಿರವೇ ನಂ ಸಂಬಂಧಿಕರ ಮನೆ ಇರುವುದು.. ಆ ಬಿಲ್ಡಿಂಗ್ ನೋಡಿದೆ, ಆದರೆ ಅಲ್ಲಿ ಯಾರು ಸಂಪದ ಸದಸ್ಯರು ಸಿಗಲಿಲ್ಲ, ನಾಳೆ ಭಾನುವಾರವಲ್ಲವೇ, ನಾಳೆ ಬರಬಹುದೇನೋ? ವಾಕ್ಪಥ ಇದ್ರೆ..... ಆದರೆ ನಾ ನಾಳೆ ಬೇರೆ ಕಡೆ ಹೋಗಬೇಕಿದೆ ,ಅಂದ್ ಹಾಗೆ ನೀವ್ ಈಗ ಇಲ್ಲಿಗೆ ಬರಲು ಸಾಧ್ಯವೇ? ಅಥವಾ ನಾ ನಿಮಗೆ ಹತ್ತಿರವಾಗುವ ಸ್ಥಳಕ್ಕೆ ಬರಲೇ?
ಸ-ವಾ: ಸಾ, ನೀವ್ ಇಲ್ಲಿಗೆ ಬರೋದು ಮತ್ತೆ ವಾಪಾಸ್ಸು ಹೋಗೋದು ಕಸ್ಟ, ಅಲ್ಲದೇ ಊರಿಗೆ ಬೇರೆ ಹೋಗಬೇಕು ಅನ್ನುವಿರಿ, ನಾನೇ ಸಾಧ್ಯ ಆದ್ರೆ ಶಾಂತಿ ನಗರಕ್ಕೆ(ಟೀ ಟೀ ಎಂ ಸೀ) ಬರುವೆ, ಆಗದಿದ್ದರೆ ಮೆಜೆಸ್ಟಿಕ್ ಗೆ ಬರುವೆ, ಅಲ್ಲಿಯೇ ಭೇಟಿ ಆಗ್ಬಹುದ್-ಮಾತುಕತೆ ನಡೆಸಬಹ್ದು ಎಂದೆ..
ಅವರು: ಸ್ಸರಿ, ನಾ ಈಗ ಬೇರೆ ಒಂದು ಕಡೆ ಹೋಗಿ ಅಲ್ಲಿ ಹತ್ತು ನಿಮಿಷ ಕುಳಿತು ಬರುವೆ, ನೀವ್ ಮೆಜೆಸ್ಟಿಕ್ ಗೆ ಬಂದು ಕರೆ ಮಾಡಿ...
ಸ-ವಾ: ಆಗಬಹುದು...ಹಾಗೆ ಆಗಲಿ ಸ್ಸಾ...
ನಾ ಇರುವ ಸ್ಥಳದಲ್ಲಿ ಬಸ್ಸುಗಳು ಅದ್ಯಾವಾಗ ಬರುವವೊ? ಹೋಗುವವೋ? ಅವುಗಳನ್ನು ಓಡಿಸುವ ಡ್ರೈವ್ರ್ನ ಬಿಟ್ಟು ಬೇರೆ ಯಾರಿಗೂ ಗೊತ್ತಿರದ ಚಿದಂಬರ ರಹಸ್ಯ...!! ಅರ್ಧ ಘಂಟೆ ಕಾದು ಒಂದೂ ಬಸ್ಸು ಬರದೇ ಇರಲು ಮತ್ತೆ ಅವರಿಗೆ ಕರೆ ಮಾಡಿದೆ,
ಸ-ವಾ: ಸಾ.. ಈಗಲೆ ೭-೩೦ ಆಗುತ್ತಿದೆ ಶಾಂತಿನಗರಕ್ಕೆ ಬ0ದರೆ ಮತ್ತೆ ನಾ ವಾಪಾಸು ಬರಲು ತಡ ಆಗಬಹುದ್ ನನಗೆ ಬಸ್ಸುಗಳು ಸಿಗದೆಯೂ ಇರಬಹುದು, ಹೀಗಾಗಿ ನಾವ್ ಮೆಜೆಸ್ಟಿಕ್ನಲ್ಲೇ ಮೀಟ್ ಆದರೆ ಹೆಂಗೆ?
ಅವರು: ಓ ಹೌದಾ? ಸ್ಸರಿ, ಅಲ್ಲಿಯೇ ಮೀಟ್ ಆಗುವ, ಇವತ್ತು ಎಸ್ಟ್ ತಡ ಆದರೂ ಮೀಟ್ ಮಾಡಿಯೇ ತೀರುವ,ಆಮೇಲೆ ನಾ ಊರಿಗ್ ಹೋಗುವೆ...
ಸ-ವಾ:ಸಾ. ನನ್ನಿಂದ ನೀವ್ ಊರಿಗೆ ಹೋಗಲು ತಡ ಆಗಬಹುದೇನೋ?
ನನ್ನಿಂದ ನಿಮಗೆ ತೊಂದ್ರೆ...
ಅವರು:ಎಂತದ್ದು ಇಲ್ಲ, ಮೀಟ್ ಮಾಡಲೇಬೇಕಿದೆ.. ಬನ್ನಿ ಏನೂ ಯೋಚಿಸಬೇಡಿ....
ಸ-ವಾ: ಆಯ್ತು ಸ್ಸಾ.. ನಾ ೮-೩೦ ಗೆ ಮೆಜೆಸ್ಟಿಕ್ ತಲುಪುವೆ, ನಿಮಗೆ ಕರೆ ಮಾಡುವೆ..
ನನಗೆ ಬಸ್ಸು ಸಿಕ್ಕಿತು ಅದೋ, ಮಾರುಕಟ್ಟೆಗೆ ಹೋಗುವ ಬಸ್ಸು, ಅದಕ್ಕೆ ಮಲ್ಲೇಶ್ವರ ಸರ್ಕಲ್ಲಿಗೆ ಇಳಿದುಕೊಂಡು ಮತ್ತೊಂದು ಬಸ್ಸು ಹಿಡಿದು ಅವರಿಗೆ ಕರೆ ಮಾಡಿದೆ
ಸ-ವಾ:ಸಾ ಎಲ್ಲಿದೀರಾ? ನಾ ಈಗ ಭಾ ಮು (ಭಾರಿ ಮುತ್ತು) ಏರಿಯಾ ದಾಟಿದೆ...!!
ಅವರು: ಭಾ ಮು, ಒಹೋ..!! ನಾ  ಬಸ್ಸಿನಲ್ಲಿ ಇರುವೆ ಇನ್ನೂ ಹತ್ತು ನಿಮಿಷದಲ್ಲಿ ಮೆಜೆಸ್ಟಿಕ್ ತಲುಪಬಹುದು..
ಆಯ್ತು ಬನ್ನಿ ನಾ ಅಲ್ಲಿ ಇಳಿದ ಮೇಲೆ ನಿಮಗೆ ಕರೆ ಮಾಡುವೆ..
ಆ ಹತ್ತು ನಿಮಿಷಗಳಲ್ಲಿ ನಾನೂ-ಅವರೂ ಮೆಜೆಸ್ಟಿಕ್ ನಲ್ಲಿ ಇಳಿದು ಆಗಿತ್ತು..
ನಿರೀಕ್ಷಿಸಿದಂತೆ ಅವರಿಂದ ಕರೆ ಬಂತು.. ನಾ ೩ ನೇ ಪ್ಲಾಟ್‍ಫಾರ್ಮ್‌ನಲ್ಲಿ ಇರುವೆ, ಆದರೆ ಅದು ಬೀ ಎಂ ಟೀ ಸೀ ಅಲ್ಲ, ಕೆ ಎಸ್ ಆರ್ ಟೀ ಸಿ...
 
ಆಯ್ತು ಸ್ಸಾ.. ನಾ ಬರುವೆ...... 'ಇವರು' ಆ ಪ್ಲಾಟ್‍ಫಾರ್ಮ್‌ನಲ್ಲಿ ಯಾಕೆ ಇರುವರು?
ಯಾವ ಊರಿಗೋ ಹೋಗುತ್ತಿರುವ ಹಾಗಿದೆ, ಅದು ಉತ್ತರ ಕರ್ನಾಟಕ ಕಡೆ(ಗುಲ್ಬರ್ಗ-ಬಳ್ಳಾರಿ-ಹೊಸಪೇಟೆ-ಸಿಂಧನೂರು-ಮಾನವಿ ಕಡೆ ಹೋಗುವ ಬಸ್ಸುಗಳ ನಿಲ್ದಾಣ)... ಅಪ್ಪಿ ತಪ್ಪಿ ರೆಡ್ಡಿಗಳ ಭಂಡವಾಳ ಬಯಲು ಮಾಡಲು(ತಮ್ಮ ಛಾಯಾ ಚಿತ್ರಗಳ ಮೂಲಕ-ಸಂಶೋಧನೆ ಮೂಲಕ) ಹೋಗುತ್ತಿಲ್ಲವಸ್ತೆ...!!
ಕೆ ಎಸ್ ಆರ್ ಟೀ ಸಿ ನಿಲ್ದಾಣ ತಲುಪಿ ಮುಖ್ಯ ದ್ವಾರವನು ದಾಟಿ ಅವರು ಹೇಳಿದ ಪ್ಲಾಟ್‍ಫಾರ್ಮ್ ಹತ್ತಿರ ನಿಂತುಕೊಂಡು ಸುತ್ತ ಮುತ್ತ ಕಣ್ಣಾಯಿಸಿದೆ ಹಾಗೆಯೇ  ಜನರನ್ನು ಗಮನಿಸತೊಡಗಿದೆ, ದಪ್ಪಗೆ-ಮೀಡಿಯಮ್-ತೆಳ್ಳಗೆ ಕೆಂಪಗೆ ಕಪ್ಪಗೆ ಕುಳ್ಳಾಗೆ ಎತ್ತರ ಇರುವ್ವರನ್ನು 'ಸ್ಕ್ಯಾನ್' ಮಾಡಿದರೂ ನಾ ಊಹಿಸಿಕೊಂಡ ವ್ಯಕ್ತಿ ಮಾತ್ರ ಕಾಣಿಸಲಿಲ್ಲ.. ಮತ್ತೆ ಅವರೀಗ್ ಕರೆ ಮಾಡಿದೆ, ಮಾಡುತ್ತಲೇ ಸುತ್ತ ಮುತ್ತ ಗಮನಿಸುತ್ತಿದ್ದೆ, ಯಾಆರು ಫೋನ್ ಎತ್ತುವರು ಮಾತಾಡುವರು ಅಂತ, ಆದರೆ ಕೆಲವೇ ನೂರು ರೋಪಾಯಿಗಳಿಗೆ ಫೋನು ಸಿಗುವ ಈ ಕಾಲದಲ್ಲಿ ಎಲ್ಲರ ಕೈನಲ್ಲೂ ಫೋನುಗಳೇ ಎಲ್ಲರೂ ಕಿವಿಗೆ ಇಟ್ಟುಕೊಂಡವರೇ...!!  ರಿಸರ್‌ವೇಷನ್ ಕೌಂಟರ್ ಹತ್ತಿರ ನಿಂತು ಅವರಿಗೆ ಕರೆ ಮಾಡಿದೆ
 
ಸ-ವಾ: ಸಾ. ನಾ ಆಗಲೇ ಒಳಗೆ ಬನ್ದಾಯ್ತು, ೩ ನೇ ಪ್ಲಾಟ್‍ಫಾರ್ಮನಲ್ಲಿ ಇರುವೆ, ನೀವ್ ಎಲ್ಲಿರುವಿರಿ?
ಅವರು: ಓ.. ನೀವ್ ಆಗಲೇ ಒಳಗೆ  ಹೋದ್ರ? ನಾ ಇಲ್ಲೇ ಮುಖ್ಯ ಧ್ವಾರದ ಹತ್ತಿರ ಇದ್ದೆನಲ್ಲ...!!
ಸ-ವಾ: ಹೌದಾ ಸ್ಸಾ. ಏನೋ ನಿಮ್ಮ ಫೋಟೋ ನೋಡಿಯೇ ಇಲ್ಲ ನೋಡಿ, ಹೀಗಾಗಿ ನೀವ್ ಇವರೇ ಅಂತ ಗೊತ್ತುಮಾಡಿಕೊಳ್ಳಲು ಕಸ್ಟ ಆಯ್ತು...:((
ಅವರು: ಹೌದಾ? ಆಯ್ತು ಇರಿ ನಾ ನೇ ಅಲ್ಲಿಗೆ ಬರುವೆ...
ವಧು ಅನ್ವೇಷಣೆಗೆ ಹೋಗುವಾಗ-ಲವ್ನಲ್ಲ್ ಬಿದ್ದು ಆ ವಿಷ್ಯ ಹುಡುಗಿಗೆ ಹೇಳುವಾಗ ಪರೀಕ್ಷೆ ಬರೆವಾಗ-ರಿಜಲ್ತು ಬಂದಾಗ ಆಗುವದಕ್ಕಿಂತ ಹೆಚ್ಚಿನ ಉದ್ವೇಗ-ಆತುರ-ಕಾತುರ-ಸಂತಸ-ಸಂಭ್ರಮ-ದುಗುಡ-ಆತಂಕ ಎಲ್ಲವೂ ನನ್ನಲ್ಲಿ ಮೇಳಯಿಸಿ ಕೊನೆಗೂ
ಆ ಕ್ಷಣ ಬಂತು.....
 
ಮಾತಾಡುತ್ತಾ  'ಅವರು' ಒಳಗೆ ಬಂದರು, ಆ ಹಾವ ಭಾವ ಉಚಾರಣೆ ವ್ಯಕ್ತಿತ್ವ ನೋಡಿ ನಾ ಅಂದುಕೊಂಡೆ ಇವರೇ ಇರಬೇಕು..
ಸ್ಸಾ.. ಅದು ನೀವೇನಾ? ಅಂತ ಕೈ ಮಾಡಿ ಕೇಳಿದೆ, ಅವರು ನಾ ಕೈ ಅಡ್ಡಡ್ಡ ಆಡಿಸುತ್ತಿರುವುದು ನೋಡಿ ನಃಗುತ್ತಾ ಹತ್ತಿರ ಬಂದರು,ಕೈ ಕುಲುಕಿದರು, ನನ್ನಸ್ತೆ ಖ್ಸುಷಿ ಸಂಭ್ರಮ ಅವರ ಮುಖದಲ್ಲೂ ಎದ್ದು ಕಾಣುತ್ತಿತ್ತು...
ಹೌದು ಅದೆಲ್ಲ ಅತ್ಲಾಗಿರ್‍ಲೀ...
ಅವರು ಹೇಗಿದ್ದರು?
ಯಾವ ಡ್ರೆಸ್ ಹಾಕಿದ್ದರು?
ಅವರು ನಾವ್ ಕಲ್ಪ್ಸಿಕೊಂಡ ಹಾಗೆಯೇ ಇರುವರೆ?
ಅಂತ ನೀವೆಲ್ಲ ಕೇಳುವಿರಿ,,,ನನಗೆ ಗೊತ್ತು....
ಅವರು .......??????
 
......................................................................................................................................
ವಿ-ಸೂ..... : ಇದು  ಕಲ್ಪನಾ ಬರವಣಿಗೆ ಅಲ್ಲ, ನಾ ನಿನ್ನೆ ರಾತ್ರಿ ನಿಜವಾಗಿಯೂ 'ಅವರನ್ನು'ಸಂಧಿಸಿದ್ದು...ಮಾತಾಡಿದ್ದು-ಊಟ ಮಾಡಿದ್ದು-ಅವರನ್ನು ಬಸ್ಸಿಗೆ ಬಿಟ್ಟು ಬಂದಿದ್ದು..ಆ ಬಗ್ಗೆ ಅವರೇ ೪-೫ ದಿನಗಳಲ್ಲಿ ಉತ್ತರಿಸುವರು...
ಅವರ' ಬಗ್ಗೆ ೨ ನೇ ಭಾಗದಲ್ಲಿ ನಿಮಗೆ ಪೂರ್ಣ ವಿವರಗಳು ತಿಳಿಯಲಿವೆ...

 

Comments