ಒಂದು ಕೊಲೆಯ ಸುತ್ತ ; ಕಿರು ಕತೆ.

ಒಂದು ಕೊಲೆಯ ಸುತ್ತ ; ಕಿರು ಕತೆ.

   ಒಂದು ದಿನ ಅಮೇರಿಕಾದ ನ್ಯೂಯಾರ್ಕ್ ನಗರವೊಂದರಲ್ಲಿ ಒಂದು ಕೊಲೆಯಾಯಿತು. ಕೊಲೆಗಾರ(ರು) ಒಂದು ಕಾರಿನಲ್ಲಿ ಬಂದು ಸೈಕಲ್ ಡೀಲರ್ ಒಬ್ಬನನ್ನು ಲಾಂಗಿನಿಂದ ಇರಿದು ಭಯಂಕರವಾಗಿ ಕೊಲೆ ಮಾಡಿದ್ದ(ರು).
   ಇದನ್ನು ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದರು. ಆ ಪೊಲೀಸ್ ಬ್ರ್ಯಾಂಚಿನ ಇನ್ಸ್ಪೆಕ್ಟರ್ ರಿಚಡ್ರ್ಸ್. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಡೇವಿಡ್ (ಸೈಕಲ್ ಡೀಲರ್) ಟಿ.ವಿ.ಯಲ್ಲಿ ಕುಸ್ತಿ ಪಂದ್ಯ ವೀಕ್ಷಿಸುತ್ತಿದ್ದರು. ಸುಮಾರು ರಾತ್ರಿ 10:30 ಗಂಟೆಗೆ ಒಂದು ಹಳೇ ಡಿಲೆಕ್ಸ್ ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಕೊಲೆನಡೆಸಿರಬಹುದು ಎಂದು.
   ಡೇವಿಡ್ನ ಹೆಂಡತಿ ಬೆತ್ ಫೂನೆಕ್ಸ್ ಊರಿನಲ್ಲಿರಲಿಲ್ಲ. ಡೇವಿಡ್ಗೆ ಮದುವೆಯಾಗಿ 5 ವರ್ಷವಾಗಿದ್ದರೂ ಮಕ್ಕಳಾಗಿರಲ್ಲಿಲ್ಲ.
   ರಿಚಡ್ರ್ಸ್ ಡೇವಿಡ್ನ ಗೆಳೆಯರನ್ನೂ ಕೇಳಿ ತನಿಖೆ ಮಾಡಿದಾಗ ತಿಳಿದುಬಂದ ವಿಷಯ ಕೊಲೆಯಾದ ಡೇವಿಡ್ ನಿನ್ನೆ ಇಟಲಿ ಮತ್ತು ಅಮೇರಿಕಾದ ನಡುವೆ ನಡೆದ ಬಾಸ್ಕೆಟ್ ಬಾಲ್ ಪಂದ್ಯದಲ್ಲಿ ಇಟಲಿ ಗೆಲ್ಲುವುದೆಂದು ಕೆಲವು ಅಪರಿಚಿತ ಬುಕ್ಕಿಗಳೊಡನೆ 100,000 ಡಾಲರ್ ಬೆಟ್ ಕಟ್ಟಿದ್ದ. ಆ ಪಂದ್ಯದಲ್ಲಿ ಇಟಲಿ ಗೆದ್ದಿತು. ಈ ಸಲುವಾಗಿ ಬುಕ್ಕಿಗಳು ಡೇವಿಡ್ನನ್ನು ಸುಫಾರಿ ಕೊಟ್ಟು ಕೊಲ್ಲಿಸಿರಬಹುದೆಂದು ಸಂಶಯವಾಯಿತು.
   ಆ ಬುಕ್ಕಿಗಳು ಯಾರೆಂದು ತಿಳಿಯಲು ಒಂದು ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ರಿಚಡ್ರ್ಸ್ ಯೋಚಿಸುತ್ತಾ ಕುಳಿತಿದ್ದಾಗ ಏನೋ ಹೊಳೆದಂತಾಗಿ ಘಟನಾ ಸ್ಥಳಕ್ಕೆ ಬಂದ, ಅಲ್ಲಿ ಈಗಾಗಲೇ ಕೊಲೆಯಾಗಿ 15 ಗಂಟೆಯಾಗಿತ್ತು. ಆ ಸ್ಥಳವನ್ನು ಫೋಟೋ ತೆಗೆಯುವಾಗ ಡಿಲೆಕ್ಸ್ ಕಾರಿನ ಟೈರಿನ ಗುರುತು ಸಿಕ್ಕಿತು. ಗುರುತಿನ ಪಕ್ಕದಲ್ಲಿ ಸ್ವಲ್ಪ ಡೀಸೆಲ್ ಚೆಲ್ಲಿರುವ ಗುರುತೂ ಸಿಕ್ಕಿತು. ಈಗ ರಿಚಡ್ರ್ಸ್ಗೆ ಒಂದು ಸುಳಿವು ಸಿಕ್ಕಂತಾಯಿತು.
   ಅವನು ನ್ಯೂಯಾರ್ಕ್  ನಗರದಲ್ಲಿನ ಎಲ್ಲಾ ಕಾರ್ ಗ್ಯಾರೇಜ್ಗಳನ್ನು ವಿಚಾರಿಸಿಕೊಂಡು ಬಂದ. “ನಿಮ್ಮಲ್ಲಿ ಯಾವುದಾದರೂ ಹಳೇ ಡಿಲೆಕ್ಸ್ ಕಾರು ಡೀಸೆಲ್ ಟ್ಯಾಂಕ್ ತೂತಾಗಿದೆ ಎಂದು ಬಂದಿದೆಯಾ?” ಎಂದು ವಿಚಾರಿಸತೊಡಗಿದ.
   ಆಮೇಲೆ ಜಾನ್ವೋರ್ಸನ್ ಎಂಬ ಹುಡುಗನೊಬ್ಬನ ಗ್ಯಾರೇಜ್ನಲ್ಲಿ ಈ ಕೇಸಿನ ಕಾರು ಬಂದಿದೆಯೆಂದು ತಿಳಿಯಿತು. ಅವನ ಬಳಿ ಆ ಕಾರಿನ ವ್ಯಕ್ತಿಗಳ ಚಹರೆಯನ್ನು ಕೇಳಿ ಬರೆದುಕೊಳ್ಳಲು ಆರಂಭಿಸಿದ.
   ಆ ಹುಡುಗ ಹೇಳಿದ ಚಹರೆ ಹೀಗಿತ್ತು “ಒಟ್ಟು 4 ಜನ ಒಚಿದೇ ಬಣ್ಣದ (ಆಕಾಶ ನೀಲಿ)  ಟೀಷರ್ಟ್ ಧರಿಸಿದ್ದರು. ಅವರು ಸುಮಾರು 30 ರಿಂದ 32 ವರ್ಷದ ತರುಣರಾಗಿದ್ದರು.” ಎಂಬ ಮಾಹಿತಿಯನ್ನು ಆದರಿಸಿ ರಿಚಡ್ರ್ಸ್ ತನಿಖೆ ಆರಂಭಿಸಿದನು.
   ಆ ಹುಡುಗ ಹೇಳಿದ ಚಹರೆಯಲ್ಲಿ ಒಂದು ಗಮನಿಸುವ ಅಂಶವಿದೆ. ‘ಅವರು ಒಂದೇ ಬಣ್ಣದ ಟೀಷರ್ಟ್ ಧರಿಸಿದ್ದರು’ ಎಂಬುದು. ಇದರಿಂದ ಇವರುಗಳು ಸಬ್ ಸುಫಾರಿ ಕಿಲರ್ಸ್ ಅಂದರೆ ಸುಫಾರಿ ಕಿಲ್ಲರ್ಸ್ನ ಒಚಿದು ಗ್ರೂಪಿನಿಂದ ಬಂದವರಿರಬೇಕು ಎಂಬುದು ತಿಳಿಯಿತು.
ಆ ನಂತರ ರಿಚಡ್ರ್ಸ್ ಆ ಕಾರಿನ ಟೈರಿನ ಗುರುತನ್ನೇ ಆದರಿಸಿ ಅಮೇರಿಕಾದ ಅತ್ಯಂತ ಹಳೆಯ ಕಟ್ಟಡವಾದ ‘ದಿ ಗ್ರೇಟ್ ಬ್ಯಾರಿಯರ್ ರೀಫ್’ ಎಂಬಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಆ ಕಟ್ಟಡದ ಮೇಲೆ ದಾಳಿ  ಮಾಡಿ ಅವರನ್ನು ಬಂಧಿಸಿ ಅವರ ಮೂಲಕ ಬುಕ್ಕಿಗಳನ್ನು ಪತ್ತೆ ಹಚ್ಚಿದನು. ಸುಫಾರಿ ಕೊಟ್ಟ ಬುಕ್ಕಿ ಎಡ್ಜ್ ಎಂಬುವವನ್ನು ಬಂಧಿಸಲಾಯಿತು. ಹೀಗೆ ರಿಚಡ್ರ್ಸ್ನ ಜಾಣ್ಮೆಯಿಂದ ಡೇವಿಡ್ನ ಕೊಲೆಯನ್ನು ಭೇದಿಸಲಾಯಿತು.                                                                                                                                       
 
**************
 
 
 
 

 

Comments