ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ ?

ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ ?

ಇದು ಕೇವಲ ನನ್ನ ಅನಿಸಿಕೆ. ಯಾರಾದರೂ ಮನಸಿಗೆ ಘಾಸಿ ಆದರೆ ದಯವಿಟ್ಟು ಕ್ಷಮಿಸಿ.

 

ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ? ಹೌದು ನನಗೆ ಬಹಳ ದಿನಗಳಿಂದ ಈ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಎಲ್ಲೇ ಯಾವುದೇ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ ಎಂದರೆ ಕೂಡಲೇ ಯಾರಾದರೊಬ್ಬರು ಪ್ರಾಣಿ ದಯಾ ಸಂಘಕ್ಕೆ ಕರೆ ಮಾಡಿರಿ ಎಂದು ಸಲಹೆ ಕೊಡುವುದು ಸಾಮಾನ್ಯ ಅಲ್ಲವೇ. ಅಷ್ಟೇಕೆ ಬೀದಿಯಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಕಚ್ಚಿ ಕೆಲವೊಮ್ಮೆ ಆ ಮಕ್ಕಳ ಸಾವಿಗೆ ಕಾರಣವಾದ ನಾಯಿಗಳ ಬಗ್ಗೆ ಕೂಡ ಅನುಕಂಪ ತೋರಿಸುವ ಒಬ್ಬರೇ ಎಂದರೆ ಅದು ಪ್ರಾಣಿ ದಯಾ ಸಂಘದವರು ಮಾತ್ರ ತಾನೇ.

ಏನಪ್ಪಾ ಇವನು ಬರೆದಿರುವ ಶೀರ್ಷಿಕೆ ಏನು ಈಗ ಬರೆಯುತ್ತಿರುವುದು ಏನು ಎಂದು ಯೋಚಿಸುತ್ತಿದ್ದೀರಾ..ಅಲ್ಲಿಗೆ ಬಂದೆ ಸ್ವಾಮಿ. ಇಂಥಹ ಮನುಷ್ಯರಿಗೆ ಹಾನಿ ಮತ್ತು ಅಪಾಯಕಾರಿಯಾದ ಪ್ರಾಣಿಗಳ ಬಗ್ಗೆ ದಯೆ ತೋರಿಸುವ ಪ್ರಾಣಿ ದಯಾ ಸಂಘಕ್ಕೆ ಪ್ರತಿ ದಿನ ಲೆಕ್ಕವಿಲ್ಲದಷ್ಟು ಕುರಿ ಮತ್ತು ಕೋಳಿಗಳು ಆಹಾರಕ್ಕಾಗಿ ಬಲಿಯಾಗುತ್ತಿರುವುದು ಕಾಣುವುದಿಲ್ಲವೇ. ಅಥವಾ ಅವುಗಳು ಪ್ರಾಣಿಗಳ ಜಾತಿಗೆ ಸೇರುವುದಿಲ್ಲವೇ. ಎಲ್ಲೂ ಇದರ ಬಗ್ಗೆ ಪ್ರಾಣಿ ದಯಾ ಸಂಘದವರು ಸೊಲ್ಲೆತ್ತಿರುವುದನ್ನು ನಾನು ಕಂಡಿಲ್ಲ ಕೇಳಿಲ್ಲ. ಅದಕ್ಕೆ ನನಗೆ ಈ ಅನುಮಾನ ಬಂದದ್ದು ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ ?
Rating
No votes yet

Comments