ಮಗನೆ

ಮಗನೆ

 

ಮೀಸೆ ಮೂಡಿದರೂ

ಎಷ್ಟೆತ್ತರಕೆ ಬೆಳೆದರೂ

ನೀನು ನನಗೆ ಮಗನೇ

ಪ್ರಿಯಸತಿಯ ಪತಿಯಾದರೂ

ಅಪ್ಪನಾದರೂ ಮೊಮ್ಮಕ್ಕಳ ಕಂಡರೂ

ನಿನಗಿಹುದು ನನ್ನಲ್ಲಿ ಒಲುಮೆ

ಆದರೂ

ಸಂಸಾರದ ಹೊಣೆ

ಕಾರ್ಯ ಕಲಾಪದಲಿ

ತೊಡಗಿರಲು

ಕಡೆಗಣಿಸದಿರು ಎನ್ನ

ಬಾಳ ಅಂಚಿನಲಿ

ಮನೆ ಮನದಲಿ

ಇರಲಿ ಕೊಂಚ ಜಾಗ

ಮೀಸಲಿರಿಸು

ಒಂಚೂರು ಸಮಯ

ನೆಮ್ಮದಿಯಾಗಿಸು

ಬದುಕ ಕೊನೆಯ


ಮಾತೃತ್ವದ ಭಾವ

ತುಂಬಿರಲು ಜೀವ

ಕೆಲವೊಮ್ಮೆ

ತುಟಿಮೀರೀತು

ಹೊಸತನವು ತುಂಬದೆ

ತುಳುಕೀತು ಸುಮ್ಮನೆ

ಇರಬಹುದು ಮರೆವು

ನನ್ನರಿವಿಗೂ ಪರೆಯು

ಸಿಹಿಯೆನಿಸದು

ಸಹಿಸಿಕೋ ಮಗನೆ

ಕಣ್ರೆಪ್ಪೆ ನಾನಾಗಿದ್ದೆ

ಒಮ್ಮೆ!


Rating
No votes yet

Comments