ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
ಮೊದಲಿಗೆ ಪಾರ್ಥಸಾರಥಿಯವರಿಗೆ ಇಂತಹದೊಂದು ಪ್ರಯತ್ನದ ಬಗ್ಗೆ ಚಿಂತಿಸಿದಕ್ಕಾಗಿ ಅಭಿನಂದಿಸುವೆ. ಕಥೆಯ ಮೂರು ಆಯಾಮಗಳನ್ನು ಮೂವರ ಶೈಲಿಯಲ್ಲಿ ಹೊರತರುವ ಅವರ ಬಯಕೆ ಒಂದು ಹೊಸ ಕಲ್ಪನೆ, ಆ ಕಾರ್ಯಕ್ಕೆ ನನ್ನನು ಅವರು ಆಯ್ದುಕೊಂಡದಕ್ಕೆ ಮೊದಲಿಗೆ ಅವರಿಗೆ ಕ್ರತಜ್ನತೆ ಸಲ್ಲಿಸುತ್ತೇನೆ. ನನ್ನ ದೃಷ್ಟಿಕೋನದಲ್ಲಿ ನನಗೆ ಕೊಟ್ಟ ಕಥೆಯ ಮೂರನೇ ಹಂದರವನ್ನು ಚಿತ್ರಿಸಿರುವೆ. ಕಥೆಯ ಹಿಂದಿನ ಭಾಗಳನ್ನು ಓದಿರದಿದ್ದರೆ ಮೊದಲು ಅವನ್ನು ಓದಿ ನಂತರ ಮೂರನೇ ಭಾಗವನ್ನು ಓದಿ
'ಇಂಜಿನಿಯರಿಂಗ್ ಅನ್ನು ಕಷ್ಟ ಪಟ್ಟು ಮುಗಿಸಿ, ಕಾಲೇಜ್ ದಿನಗಳಿಗೆ ವಿದಾಯ ಹೇಳಿದ ಸಂಧರ್ಭದಲ್ಲಿ, ಕೈಯಲ್ಲಿ ಒಂದು ಕೆಲಸವಿಲ್ಲದೇ, ಬರಿಯ ಪ್ರಥಮದರ್ಜೆಯ ನನ್ನ ಇಂಜಿನಿಯರಿಂಗ್ ಸರ್ಟಿಫಿಕೇಟ್ ಹಿಡಿದು ಬೆಂಗಳೂರಿನ ಬೀದಿ ಬೀದಿ ಸುತ್ತುವಾಗ ನಾನು ಮತ್ತೆ ನನ್ನ ಗೆಳೆಯರ ಸಾಲಿನಲ್ಲಿ ಸರಿಯಾಗಿ ನಿಲ್ಲಬಲ್ಲೆ ಎಂದು ಉಹಿಸೂವುದು ಕಷ್ಟ ಸಾಧ್ಯವಾಗಿತ್ತು. ಸದೃಡರಲ್ಲದ ಹೆತ್ತವರಿಗೆ ನಾನೊಂದು ಆರ್ಥಿಕ ಹೊರೆಯಾಗಿರುವ ಹೊತ್ತಿನಲ್ಲಿ ಬದುಕಿಗೆ ಒಂದು ಆಶಾಕಿರಣ ಒದಗಿಸಿದ್ದು ಫ್ಯೂಚರ್ ಟೆಕ್ ಇನ್ಫೋಟೆಕ್. ಮುಳುಗುವ ಜೀವಕ್ಕೆ ನೆರೆಯಲ್ಲಿ ತೇಲಿ ಬರುವ ಹುಲ್ಲು ಆಸರೆಯಾಗುತ್ತದೆ ಅನ್ನುತ್ತಾರೆ, ಆದರೆ ನನಗೆ ಆಸರೆಯ ಹುಲ್ಲಿನ ಬದಲಾಗಿ ತೇಲಿ ಬರಲು ನೆರವಾದದ್ದು ರಮಣಮೂರ್ತಿ ಎಂಬ ಒಂದು ದೊಡ್ಡ ಹಡಗು. ಆ ಹಡಗು ನನ್ನನ್ನು ದಡ ಸೆರಿಸಿದಲ್ಲದೇ ಮುಂದಿನ ನನ್ನ ಜೀವನ ಪಯಣಕ್ಕೆ ಹಸಿರು ಹಾಸು ಹಾಕಿಕೊಟ್ಟಿದ್ದು.' ಎಂದು ಆಲೋಚಿಸ ತೊಡಗಿದ ಕಲ್ಯಾಣ್ ತನ್ನ ಯುಎಸ್ಸ್ ನಲ್ಲಿನ ಆಫೀಸ್ ನಲ್ಲಿ ಕುಳಿತು. ಮನಸಲ್ಲಿ ರಮಣಮೂರ್ತಿಗಳ ಪರವಾಗಿ ಅವನಿಗೆ ಏನೋ ಒಂದು ರೀತಿಯ ಭಕ್ತಿ ಭಾವ, ಅವರ ಬಗ್ಗೆ ಮತ್ತು ಅವರ ಕಂಪೆನಿಯಲ್ಲಿನ ಕೆಲಸದಲ್ಲಿ ಅತೀವ ಶ್ರದ್ದೆ.
ಕೆಲವೊಮ್ಮೆ ಇವನಿಗೆ ತನ್ನ ಶ್ರದ್ದೆಗೆ ಸಿಕ್ಕ ಪ್ರೋತ್ಸಾಹವೇ ವಿದೇಶದಲ್ಲಿ ಈ ಕೆಲಸದ ಅವಕಾಶ ಎಂದು ಅಂದುಕೊಂಡಿದ್ದು ಉಂಟು. ಆದರೆ ಅವಕಾಶ ಕೊಟ್ಟಾದ ಬಳಿಕ ರಮಣಮೂರ್ತಿ ತನ್ನನ್ನು ತನ್ನ ಪಾಡಿಗೆ ಬಿಡದೇ, ಅವನ ಪ್ರತಿಯೊಂದು ಕೆಲಸದ ಬಗ್ಗೆ ತುಂಬು ಉತ್ಸುಕರಾಗಿ ಕೇಳಿ ತಿಳಕೊಳ್ಳುತಿದ್ದರು, ಇದು ಇವನಲ್ಲಿ ಅವರ ಬಗ್ಗೆ ಅಪಾರ ವಿಶ್ವಾಸ ಏರುವಂತೆ ಮಾಡಿತ್ತು.
ಇಂದಿರಾ... ಕೆಲಸದ ನಡನಡುವೆ ಅವಳ ನೆನಪು ಬರುತ್ತದೆ. ಇಂದಿರಾ ಈಗ ಬರಿಯ ಪ್ರಿಯತಮೆ ಯಾಗಿರದೆ ಒಂದು ಗೊಂದಲದ ಜ್ವಾಲಾಮುಖಿ ಯಾಗಿದ್ದಳು. ಅವಳ ಬಗ್ಗೆ ಮನಸ್ಸು ನೆನೆಯಲು ಶುರು ಮಾಡಿತು ಅಂದರೆ ರಮಣಮೂರ್ತಿಗಳ ವಿಶ್ವಾಸದ ಜೊತೆ ನಾನು ಧ್ರೋಹ ಮಾಡುತ್ತಿರುವೆ ಎಂದು ಶುರುವಾಗುವ ಚಿಂತನೆ, ಕೊನೆಗೆ ನನ್ನ ಮನಸ್ತಿತಿಯನ್ನು ಎಲ್ಲಿಗೆ ತಲುಪಿಸುತ್ತದೆ ಎಂದು ಉಹಿಸಲಾಗದಷ್ಟು ದೂರಕ್ಕೆ ಎಸೆಯುತಿತ್ತು. ಇಲ್ಲಿಗೆ ಬಂದ ಹೊಸತರಲ್ಲಿ ಅವಳ ಬಗ್ಗೆ ಆಲೋಚಿಸುತಿದ್ದ ಮನಸ್ಸು, ಇಂತಹ ಹಲವು ಮಂಥನಗಳಿಗೆ ಸಿಲುಕಿ ಅವಳ ಬಗ್ಗೆ ತುಸು ತಾತ್ಸಾರ ಮೂಡಿಸಲು ಸುರುವಾಯಿತು. ಇಲ್ಲಿನ ಅತಿಯಾದ ಒತ್ತಡ ಅದಕ್ಕೆ ಇಂಬು ಕೊಡುವಂತೆ, ದಿನ ಕಳೆದಂತೆ ಅವಳ ಆಲೋಚನೆ ಮೆಲ್ಲ ಮೆಲ್ಲನೆ ಮರೆಯಾಗ ತೊಡಗಿತು.
'ಇಲ್ಲ ಅವಳ ಬಗ್ಗೆ ನನಗೆ ತಾತ್ಸಾರ ಇಲ್ಲ, ಇವಳಿಲ್ಲದೆ ನಾನು ಬದುಕಿರಲಾರೆ' ಕೆಲವೊಮ್ಮೆ ಅವನಿಗೆ ಅವನ ಹೃದಯ ಹೇಳಿದ್ದುಂಟು.
'ಪರಿಹಾರ ..?'
'ತಿಳಿದಿಲ್ಲ, ಸದ್ಯಕ್ಕೆ ನನಗೆ ನನ್ನ ಕೆಲಸ ಮತ್ತು ಮೂರ್ತಿಯವರು ನನ್ನ ಮೇಲೆ ಇಟ್ಟ ನಂಬಿಕೆಯ ಪರವಾಗಿ ನಿಲ್ಲುವುದು ಅನಿವಾರ್ಯ, ಅವಳಿಗಿನ್ನೂ ತನ್ನ ಇಂಜಿನಿಯರಿಂಗ್ ಮುಗಿಸಲು ಸಮಯ ಇದೆ, ಅಲ್ಲಿ ವರೆಗೆ ನಾನು ಶ್ರದ್ಧೆಯಿಂದ ದುಡಿದು ಮೂರ್ತಿಯವರಿಗೆ ಇನ್ನೂ ಹತ್ತಿರವಾಗುತ್ತೇನೆ, ಮುಂದೆ ಭಾರತಕ್ಕೆ ಮರಳಿದ ಬಳಿಕ ಅವರಾಗಿಯೇ ನನಗೆ ತನ್ನ ಮಗಳನ್ನು ಕೊಟ್ಟರೂ ಕೊಡಬಹುದು, ಒಂದು ವೇಳೆ ಅವರು ಆ ಬಗ್ಗೆ ಚಿಂತಿಸದಿದ್ದರೆ ನಾನೇ ನನ್ನ ಪ್ರಸ್ತಾವನೆಯನ್ನು ಅವರಲ್ಲಿ ಇಡಬಹುದು, ಅವರೂ ನನ್ನನ್ನು ಪೂರ್ಣ ಮನಸ್ಸಿನಿಂದ ಒಪ್ಪೇ ಒಪ್ಪುತ್ತಾರೆ' ಎಂದು ಮರು ಕ್ಷಣವೇ ಇನ್ನೊಂದು ಸಾಂತ್ವನ ಗೊಂದಲದ ಮನಸ್ಸಿಗೆ ತಂಪೆರೆಯುತಿತ್ತು.
ಕೆಲಸದ ನಡ ನಡುವೆ ತನ್ನ ಸೋಶಿಯಲ್ ನೆಟ್ವರ್ಕ್ ನಲ್ಲಿ ಭೇಟಿ ಕೊಟ್ಟಿದ್ದುಂಟು, ಆದರೆ ಅಲ್ಲೂ ಅವಳ ಬಗ್ಗೆ ತಾತ್ಸಾರ, ಅವಳು ಹಾಕಿದ ಮೆಸ್ಸೇಜ್ ಮೈಲ್ಸ್ ಗಳಿಗೆ ರಿಪ್ಲೈ ಬರೆಯಲಾಗದಷ್ಟು ಆಲಸ್ಯ ತಾಳಿದಂತೆ ನಟಿಸಲಾರಂಬಿಸಿದ. ಅವನಿಗೂ ಇಂದಿರಾಳ ಪ್ರೀತಿಯ ಮೇಲೆ ಅಪಾರವಾದ ವಿಶ್ವಾಸವಿತ್ತು. ಜಗತ್ತಿನಲ್ಲಿ ಮತ್ಯಾರು ಅವನನ್ನು ಆ ವಿಧದಲ್ಲಿ ಪ್ರೀತಿಸಾರು ಎಂಬ ವಿಶ್ವಾಸವೇ ಅವನ ನಾಟಕವನ್ನು ಇನ್ನೂ ಮುಂದುವರೆಸುವಂತೆ ಮಾಡಿತು. ಏನಾದರು ಇನ್ನೂ ಎರಡು ವರ್ಷದ ಬಳಿಕ ಅವಳು ತನಗೆ ದಕ್ಕೇ ದಕ್ಕುತ್ತಾಳೆ ಎಂಬ ತುಂಬು ವಿಶ್ವಾಸ ಅವನಲ್ಲಿತ್ತು.
ಒಮ್ಮೆಗೆ ಅವಳ ಕಡೆಯಿಂದ ಯಾವುದೇ ಅಪ್ಡೇಟ್ಸ್ ಬಾರದಿದ್ದಾಗ ಕಲ್ಯಾಣ್ ಗೆ ತನ್ನ ಪ್ರೀತಿ ತನ್ನ ಕೈ ತಪ್ಪಿ ಹೋದೀತು ಎಂಬು ಚಿಂತೆ ಶುರುವಾದರೂ, ಮರುಕ್ಷಣವೇ ಅವಳಿಗೆ ತನ್ನ ಪ್ರತಿ ಇರುವ ಪ್ರೀತಿ ಆ ಬಗ್ಗೆ ಆ ರೀತಿ ಚಿಂತಿಸದಂತೆ ಮಾಡುತಿತ್ತು.
ಹೀಗಿರಲು ಒಂದು ದಿನ ಅವಳಿಂದ ಬಂದ ಒಂದು ಮೈಲ್ ಇವನಿಗೆ ಆಕಾಶವೇ ಕಳಚಿ ಬಿದ್ದಂತೆ ಮಾಡಿತು.
"ಪ್ರಿಯ ಕಲ್ಯಾಣ್
ಹೇಗಿದ್ದಿಯೋ ...? ಹೀಗಿದ್ದಿಯಾ ಎಂದು ತುಂಬಾ ಫಾರ್ಮಲ್ ಆಗಿ ಕೇಳ್ತಾ ಇದ್ದೇನಲ್ಲ, ಹೌದು ನಿನ್ನ ಬಗ್ಗೆ ನಾನು ಆಲೋಚಿಸದ ಗಳಿಗೆ ಇಲ್ಲ, ಆದರೆ ನೀನು ಅಲ್ಲಿ ಹೋದ ಬಳಿಕ ನನ್ನನ್ನು ಮತ್ತು ನನ್ನ ಪ್ರೀತಿಯನ್ನು ಮರೆತಂತಿದೆ, ಅದೂ ಹೌದು ಬಿಡು ನೀನು ನನ್ನಂತೆ ಕೆಲಸ ಇಲ್ಲದ ಅಬ್ಬೆಪಾರಿ ಅಲ್ಲ ನೋಡು, ನನಗೆ ನಿನ್ನ ಬಗ್ಗೆ ಆಲೋಚನೆ ಮಾಡುವುದನ್ನು ಬಿಟ್ಟು ಬೇರೆ ಏನು ಕೆಲಸ ಇಲ್ಲ, ಅದಕ್ಕಾಗಿ ನಿನ್ನನ್ನೇ ಹಗಲು ರಾತ್ರಿ ಕನವರಿಸುತಿದ್ದೆ, ಇದೇ ನನ್ನ ಜೀವನಕ್ಕೆ ಮುಳುವಾದಂತಿದೆ, ನನ್ನ ಆಟ- ಪಾಠ - ಊಟ ಯಾವುದರಲ್ಲೂ ನಾನು ನಾಗಿರುತ್ತಿರಲಿಲ್ಲ, ನನ್ನನ್ನು ಸಂಪೂರ್ಣವಾಗಿ ಕಳಕ್ಕೊಂಡೆ, ಆರನೇ ಸೆಮ್ ರಿಸಲ್ಟ್ ಬಂದಾಗ ನನಗೆ ನನ್ನ ಮೇಲೆ ಅಸಹ್ಯ ಮೂಡಲು ಶುರು ವಾಯಿತು, ಪಿಯು ನಲ್ಲಿ ಡಿಸ್ಟಿ ತೆಗೆದ ನನ್ನ ಆರನೇ ಸೆಮ್ ನಲ್ಲಿ ನಾಲ್ಕು ಸಬ್ಜೆಕ್ಟ್ ನಲ್ಲಿ ಬಾಕ್ ಬಂತು, ಮೊದಲಿಗೆ ನಂಬಲು ಸಾಧ್ಯವಾಗಲಿಲ್ಲ, ಆದ್ರೆ ಹೌದು ನಾನು ಓದಿನಲ್ಲಿ ಏಕಾಗ್ರತೆ ಕಳಕ್ಕೊಂಡಿದ್ದೇನೆ.
ಕೊನೆಗೊಂದು ದಿನ ನಾನು ನನ್ನಿಂದ ಇಂಜಿನಿಯರಿಂಗ್ ಮುಗಿಸಲಾಗುತ್ತಿಲ್ಲ, ನನ್ನನು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ತಂದೆಯವರಲ್ಲಿ ಕೇಳಿದ್ದು ಆಯಿತು, ಅವರು ಅದಕ್ಕೆ 'ನೀನು ಓದಿ ನಮ್ಮನ್ನು ಸಾಕ ಬೇಕಾಗಿಲ್ಲ, ಹೇಗಿದ್ದರೂ ಮುಂದಿನ ವರುಷ ನಿನ್ನ ಮದುವೆ ಮಾಡುವ ಆಲೋಚನೆಯಲ್ಲಿದ್ದೆವು, ಅದನ್ನು ಬೇಗನೆ ಮಾಡಿದರಾಯಿತು' ಎಂದರು. ನಾನು ಸದ್ಯಕ್ಕೆ ನನ್ನನ್ನು ಒಂಟಿಯಾಗಿ ಬಿಡಿ ಎಂದು ಅವರನ್ನು ಒಪ್ಪಿಸಿದೆ.
ನನ್ನ ಈ ಒಂಟಿ ಜೀವದ ಕಥೆ ಕೇಳಲು ಯಾರೊಬ್ಬರು ಇರಲಿಲ್ಲ, ನಿನ್ನಲ್ಲಿ ನಾನು ಈ ಬಗ್ಗೆ ಮಾತಾಡುವ ಎಂದರು ನೀನು ನನ್ನ 'ಹಾಯ್' ಬರುತಿದ್ದಂತೆ ಓಫ್ಫ್ ಲೈನ್ ಹೋಗುತಿದ್ದಿಯಾ.. ಯಾರಲ್ಲೂ ನನ್ನ ವ್ಯಥೆ ಹೇಳಲಾರದೆ, ಒಬ್ಬಳೇ ಕೊರಗಿ ಕೊರಗಿ ಬೆಂಡಾಗಿ ಹೋಗಿದ್ದೆ.
ಆದರೆ ಈ ಮೂರು ತಿಂಗಳಲ್ಲಿ ನಾನು ಮತ್ತೆ ಹಿಂದಿನಂತಾದೆ. ಹೇಗೆ ಎಂದು ಆಲೋಚನೆ ಮಾಡ್ತಿದ್ದೀಯ ..?
ಹೌದು ಇದಕ್ಕೆಲ್ಲ ಕಾರಣ, ಆ ಕಿರಣ್, ಕಿರಣ್ ನೆನಪಿದೆಯಾ ನಿನ್ನ ಬ್ಯಾಚ್ಮೆಟ್, ಅವನೇ ನನ್ನ ಕಣ್ಣೀರನ್ನು ಒರಸಿದವನು. ಅವನಿಗೆ ನಿನ್ನ ನನ್ನ ಕಥೆ ಎಲ್ಲ ಗೊತ್ತು, ಆದರೂ ಅವನು ನನಗೆ ಈಚೆಗೆ ಹತ್ತಿರವಾಗಿದ್ದಾನೆ, ಅವನಲ್ಲಿ ಈಚೆಗೆ ಎಲ್ಲ ವಿಚಾರಗಳನ್ನು ನಾನು ಹಂಚಿಕೊಳ್ಳಲು ಶುರು ಮಾಡಿದ್ದೇನೆ. ಅವನೂ ನನ್ನಲ್ಲಿ ಅವನ ಆಗು ಹೋಗುಗಳನ್ನು ಹಂಚುತಿದ್ದಾನೆ. ಮೇಲಾಗಿ ಈಗ ಎರಡು ತಿಂಗಳಿಂದ ಅವನೂ ಪಪ್ಪನ ಕಂಪೆನಿಯಲ್ಲಿ ಸೇರಿಕೊಂಡಿದ್ದಾನೆ, ನಾನೂ ಈಚೆಗೆ ಅದೇ ಕಂಪೆನಿಯಲ್ಲಿ ಸೇರಿಕೊಂಡಿದ್ದೇನೆ. ಅವನ ಜೊತೆ ಕೆಲಸ ಮಾಡಲು ಏನೋ ಒಂದು ತರಹ ದ ಹಿತ ಸಿಕ್ಕುತ್ತಿದೆ.
ನಿನ್ನ ತಾತ್ಸಾರ ಅವನಲ್ಲಿ ನನ್ನ ಪ್ರೀತಿ ಮೂಡಲು ಕಾರಣ ವಾಯಿತಾ..? ಅವನಲ್ಲಿ ಈ ಬಗ್ಗೆ ಹೇಳಿದಾಗ ನಿನಗೆ ಈ ವಿಷಯವನ್ನು ಹೇಳುವಂತೆ ಹೇಳಿದ, ಜೊತೆಗೆ ಅವನಿಗೂ ನಿನ್ನಲ್ಲಿನ ಗೆಳೆತನ ಕಳೆದು ಕೊಳ್ಳಲು ಇಷ್ಟವಿಲ್ಲ. ಅವನೂ ನಿನ್ನ ಸಮ್ಮತಿ ಇದ್ದರೆ ಮಾತ್ರ ನನ್ನ ಗೆಳೆತನ ಮುಂದುವರಿಸುತ್ತೇನೆ ಎಂದು ಹೇಳಿದ್ದಾನೆ, ಅದಕ್ಕಾಗಿ ಎಲ್ಲ ವಿಷಯವನ್ನು ಈ ಮೈಲ್ ನಲ್ಲಿ, ಹಾಕಿರುವೆ ನಿನ್ನ ಅಭಿಪ್ರಾಯ ತಿಳಿಸು
ಹೇ, ಕಲ್ಯಾಣ್, ನಾನು ನಿನಗೆ ಮೋಸ ಮಾಡ್ತಿದ್ದೇನೆ ಅನಿಸುತ್ತಿದೆ.. ನಾನು ಮಾಡಿದ್ದು ತಪ್ಪಾ ...?
ನಿನ್ನ ಉತ್ತರಕ್ಕಾಗಿ ಕಾಯುವ
ನಿನ್ನ ಪ್ರೀತಿಯ
ಇಂದು."
"ಹೇ, ಕಿರಣ್ ... ಮೋಸ ಮಾಡಿದ್ದಿಯಲ್ಲೋ... ಗೆಳೆಯ ಅನ್ಕೊಂಡಿದ್ದೆ, ನನ್ನ ತುತ್ತಲ್ಲೇ ನೀನು ಕದ್ದು ತಿನ್ನುತಿದ್ದಿಯಲ್ಲ.." ಎಂದು ಚೀರಾಡಿದ ಕಲ್ಯಾಣ್.
ಕ್ಯುಬಿಕಲ್ ನಲ್ಲಿದ್ದ ಇನ್ನೊಬ್ಬ ಭಾರತೀಯ ಪ್ರತೀಕ್ ಅವನ ಬಳಿಗೆ ಬಂದು ವಿಚಾರಿಸಿದಾಗ, ಇವನು ಈವರೆಗೆ ಆದ ಎಲ್ಲಾ ಕಥೆಯನ್ನು ಹೇಳಿದ.ಪ್ರತೀಕ್ "ಇಬ್ಬರದ್ದು ತಪ್ಪಿದೆ, ನೀನೇ ಏನೆಂದು ನಿರ್ಧಾರ ತಕೋ" ಹೇಳಿ ಹೊರಟು ಬಿಟ್ಟ.
ಕಲ್ಯಾಣ್ ಗೆ ಏನು ಮಾಡುವುದೆಂದು ತೋಚದೆ ತನ್ನ ಬ್ಯಾಗ್ ನೊಂದಿಗೆ ರೂಂ ಸೇರಿಕ್ಕೊಂಡು, ತನ್ನಿಂದಾದ ತಪ್ಪಿನ ಬಗ್ಗೆ ಆಲೋಚನೆ ಮಾಡ ತೊಡಗಿದ.
'ಇಂದಿರಾ, ಇಲ್ಲದೇ ನಾನು ಬದುಕಲಾರೆ, ಆದರೆ ಈಗ ಅವಳಿಗೆ ಹೇಗೆ ಹೇಳುವುದು, ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಹೇಳಿ??
ಇಲ್ಲ ಸಾಧ್ಯವಿಲ್ಲ;
ಈ ವಿಷಯ ಮೂರ್ತಿಯವರಿಗೆ ತಿಳಿದರೆ ನನ್ನ ಕೆಲಸ ಹೋಗುತ್ತದೆ, ಭವಿಷ್ಯವು ಮತ್ತೆ ಅದೇ ಬೆಂಗಳೂರಿನ ಬೀದಿ ಬೀದಿ ಸುತ್ತುತ್ತದೆ, ಅದನ್ನು ಎದರಿಸಲು ನಾನು ಸಿದ್ದ ನಿದ್ದೇನೆ, ಆದರೆ ಮೂರ್ತಿಯವರು ನನ್ನ ಮೇಲೆ ಇಟ್ಟ ವಿಶ್ವಾಸ ..? ತಿಳಿದು ತಿಳಿದು ಅದಕ್ಕೆ ನಾನೇ ನೀರು ಹೊಯ್ದಂತೆ. ಅವರ ವಿಶ್ವಾಸ ಉಳಿಸಲು ನಾನು ನನ್ನ ಪ್ರೀತಿ ತ್ಯಾಗ ಮಾಡಬೇಕು. ಇಂದಿರಾಳಿಗೆ ಇವತ್ತು ಕಿರಣ್ ಒಂದು ಆಸರೆಯ ಒಡಲಾಗಿ ನಿಂತಿದ್ದಾನೆ, ಅವಳನ್ನು ಅವನು ಸುಖವಾಗಿ ಇಡುವಲ್ಲಿ ಯಾವುದೇ ಸಂಶಯವಿಲ್ಲ.
ದೊಡ್ಡವರ ಮನೆಯ ಕೂಸು ಯಾವತ್ತು ಹಾಳು ಅಂತಾರೆ, ಆದರೆ ಕಿರಣ್ ಅಂಥಹ ಹುಡುಗ ಅಲ್ಲ, ಬೆಳ್ಳಿ ತಟ್ಟೆಯಲ್ಲೇ ಉಂಡು ಬೆಳೆದರೂ ಅವನ ಶರೀರದಲ್ಲಿ ಒಂದು ಚೂರಾದರು ದೊಡ್ಡಸ್ತಿಕೆ ಇಲ್ಲ. ತನಗಿಂತ ಕೆಳಗಿರುವವರ ಬಗ್ಗೆ ಅವನಿಗಿರುವ ಕಾಳಜಿ ಮತ್ತು ಗೌರವ ಅವನನ್ನು ನನ್ನ ಗೆಳೆಯನನ್ನಾಗಿ ಮಾಡಿತ್ತು.
ಹೌದು ಅವಳಿಗೆ ಕಿರಣ್ ಗಿಂತ ಉತ್ತಮ ಗೆಳೆಯ, ಸಂಗಾತಿ ಸಿಗರು; ಹೇಗಿದ್ದರೂ ಅವಳು ನನ್ನ ತಾತ್ಸಾರವನ್ನು ಇನ್ನೊಂದು ಮಗ್ಗುಲಲ್ಲೇ ಅರ್ಥ ಮಾಡಿ ಕೊಂಡಿದ್ದಾಳೆ, ಅವಳು ಅಂದುಕೊಂಡ ದೃಷ್ಟಿಕೊನವೇ ಶಾಶ್ವತವಾಗಿರಲಿ' ಅಂದುಕೊಳ್ಳುತ್ತಾ ತನ್ನ ಲ್ಯಾಪ್ಟಾಪ್ ನಲ್ಲಿ ಅವಳಿಗೆ ತನ್ನ ಒಪ್ಪಿಗೆಯ ಕುರಿತು ಮೈಲ್ ಬರೆದು ಕಳುಹಿಸಿದ.
ತ್ಯಾಗ ಮಾಡಲು ಮಾಡಿ ಆಯಿತು , ಆದರೆ ಆ ಬಳಿಕ ಕಲ್ಯಾಣ್ ಗೆ ಅವಳ ಬಗ್ಗೆ ಮತ್ತು ಅವಳ ಕುರಿತಾಗಿ ತನ್ನಲ್ಲಿದ್ದ ನೈಜ್ಯ ಪ್ರೀತಿ ಪೀಡಿಸಲು ಶುರುಮಾಡಿತು. ಮೂರ್ತಿಯವರ ಪ್ರೋತ್ಸಾಹದ ನುಡಿಗಳು ಮತ್ತು ಅಮೇರಿಕ ಸೆಂಟರ್ ನಲ್ಲಿ ತನ್ನ ಅಸ್ತಿತ್ವ ಗಟ್ಟಿಯಾಗುತ್ತಾ ಸಾಗುತಿದ್ದರಲ್ಲಿ ಕಲ್ಯಾಣ್ ನ ಕಂಬನಿಗಳು ಮೇಲಾನೆ ಮರೆಯಾಗಲು ಶುರುವಾಯಿತು.
ಮೂರು ತಿಂಗಳಲ್ಲೇ ಅವನನ್ನು ಉತ್ತುಂಗಕ್ಕೆ ಏರಿಸಿದ್ದರು ರಮಣಮೂರ್ತಿಯವರು, ಒಂದು ಬದಿಯಲ್ಲಿ ಅವಳ ಬಗೆಗಿನ ಪ್ರೀತಿ ಅವಳನ್ನು ಕಿರಣ್ ನಿಂದ ಕಸಿಯಲು ಮನಸ್ಸು ಹವಣಿಸಿದರೂ, ಮೂರ್ತಿಯವರ ಬಗ್ಗೆ ಇವನಿಗಿದ್ದ ಗೌರವ ತನ್ನ ಪ್ರೀತಿಯನ್ನು ಅಡಗಿಸಿಡುವಂತೆ ಮಾಡಿತು.
_______________________________________________________________________________________________________________________________
ಆರು ತಿಂಗಳ ನಂತರ ಕಲ್ಯಾಣ್ ಮತ್ತೆ ಬೆಂಗಳೂರಿಗೆ ಬಂದಿದ್ದ, ಮೂರ್ತಿಯವರು ಇವನನ್ನು ತನ್ನ ಮಗಳ ನಿಶ್ಚಿತಾರ್ಥಕ್ಕೆ ಖುದ್ದಾಗಿ ಅಮಂತ್ರಿಸಿದ್ದರು. ಮೊದಲು ಇವನು ಬರಲು ಒಪ್ಪದಿದ್ದರೂ , ಕೊನೆಗೆ ಮೂರ್ತಿಯವರ ಒತ್ತಾಯಕ್ಕೆ, ತನ್ನ ಹೃದಯಕ್ಕೆ ತೊಂದರೆ ಯಾದರು ಪರವಾಗಿಲ್ಲ ಹೇಳಿ ಬೆಂಗಳೂರಿನ ಫ್ಲೈಟ್ ಏರಿದ್ದ.
ಸ್ಟೇಜ್ ಮೇಲೆ ಕಿರಣ್ ಮತ್ತು ಇಂದಿರಾ ಮಿಂಚುತಿದ್ದರು. ಕಲ್ಯಾಣ್ ಗೆ ಜೋಡಿಯನ್ನು ನೋಡಿ ಒಂದು ಬದಿಯಲ್ಲಿ ಸಂತೋಷವೂ, ಇನ್ನೊಂದು ಬದಿಯಲ್ಲಿ ಅಸೂಯೆಯು ಏರುತಿತ್ತು. ಜೊತೆಗೆ ಬೆಂಗಳೂರಿನ ತನ್ನ ಕೊಲಿಗ್ ಗಳ ಕೈಯಲ್ಲಿ ಈ ಜೋಡಿ ಮತ್ತು ಅವರ ಪ್ರೇಮ ಕಥೆಯ ಬಗ್ಗೆ ಕೇಳಲು ಗಾಯದ ಮೇಲೆ ಉಪ್ಪು ಸವರಿದಂತಾಗುತಿತ್ತು. ಆದರೂ ಮೂರ್ತಿಯವರನ್ನು ಮನಸಲ್ಲಿ ಇಟ್ಟುಕ್ಕೊಂಡು ಎಲ್ಲ ನೋವನ್ನು ಒಬ್ಬನೇ ನುಂಗುತಿದ್ದ.
ಇಂದಿರಾ, ಕಿರಣ್ ನ ಬೆರಳಿಗೆ ಉಂಗುರ ತೊಡಿಸಿದಳು. ಇಲ್ಲಿವರೆಗೆ ಗೆಳೆಯರಾಗಿದ್ದ ಮೂರ್ತಿಯವರು ಮತ್ತು ಕಿರಣ್ ನ ತಂದೆಯವರು ಈಗ ಬೀಗ- ಬೀಗ ರಾಗಿ ಒಬ್ಬೊರನೊಬ್ಬರು ಆಲಂಗಿಸಿದರು. ಗೊತ್ತಾಗದಂತೆ ಕಲ್ಯಾಣ್ ನ ಕಣ್ಣಿನಿಂದ ಕಂಬನಿ ಜಾರ ತೊಡಗಿತು. ಮುಂದಿನ ಒಂದು ಕ್ಷಣವೂ ಅವನಿಂದ ಅಲ್ಲಿರಲಾಗಲಿಲ್ಲ. ಇನ್ನೇನೋ ಅವನೂ ಅಲ್ಲಿಂದ ಹೋರಾಡಬೇಕು ಎಂದಿಟ್ಟು ಕೊಳ್ಳುವಾಗಲೇ ಮೂರ್ತಿಯವರು ಬಂದು ಇವನೊಡನೆ ಕೈ ಕುಲುಕಿದರು.
"ಕಲ್ಯಾಣ್, ತುಂಬಾ ಥ್ಯಾಂಕ್ಸ್ ಕಣಪ್ಪಾ, ನೀನಿಲ್ಲ ದಿದ್ದರೆ ಇದೆಲ್ಲ ಸಾಧ್ಯಾನೆ ಇರುತ್ತಿರಲಿಲ್ಲ." ಅಂದರು.
ಕೊನೆಗೂ ಅವರಲ್ಲಿ ತನ್ನ ಬೆಗ್ಗೆ ಇರುವ ವಿಶ್ವಾಸ ತಿಳಿದು ಇವನಿಗೆ ಇನ್ನೂ ಕಣ್ಣು ತುಂಬಿ ಬಂತು. "ಅದೆಲ್ಲ ಬಿಡಿ ಸರ್, ನಿಮ್ಮ ಮಗಳಿಗೆ ನೀವೂ ಹುಡುಕಿದರೂ ಇಷ್ಟು ಒಳ್ಳೆ ಹುಡುಗ ಸಿಕ್ಕುತ್ತಿರಲಿಲ್ಲ." ಅಂದ ಕಲ್ಯಾಣ್ ತನ್ನ ಬಿಕ್ಕಳಿಕೆಯನ್ನು ಅಡಗಿಸುತ್ತಾ.
"ಬಾ ಊಟಕ್ಕೆ ಹೋಗೋಣ" ಎಂದು ಅವನ ಕೈ ಹಿಡಿದು ಕೆಳ ನಡೆದರು ಮೂರ್ತಿಯವರು.
ಒಲ್ಲದ ಮನಸ್ಸಿಂದ ತನ್ನ ಪ್ಲೇಟ್ ಗೆ ಎರಡು ರೋಟಿ ಹಾಕಿಸಿ ತಿನ್ನುತಿದ್ದ ಕಲ್ಯಾಣ್ ಗೆ ಬೆಂಗಳೂರಿನ ಇತರ ಕಲೀಗ್ ಗಳು ಜೊತೆಯಾದರು. ಇಂದಿರಾ-ಕಿರಣ್ ಕುರಿತು ಮಾತು ಮುಂದುವರಿದಿತ್ತು ಜೊತೆಗೆ ಬೆಂಗಳೂರಿನಲ್ಲಿನ ಐ-ಟಿ ಉದ್ಯಮದ ಕುರಿತು ಮಾತು ನಡೆಯುತ್ತಿತ್ತು.ಇಲ್ಲಿನ ಸೆಂಟರ್ ನಲ್ಲಿ ಕಳೆದ ಎರಡು ಕ್ವಾಟರ್ ನಲ್ಲಿ ಇಳಿದ ಧಾರಣೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಭಾರತೀಯ ಮಾರುಕಟ್ಟೆ ಯಿಂದ ಪಾಶ್ಚಿಮಾತ್ಯ ಕ್ಲಯಿಂಟ್ ಚೀನಾಕ್ಕೆ ವಲಸೆ ಹೋಗುತ್ತಿರುವ ಪರಿಣಾಮ ಬೆಂಗಳೂರಿನ ಫ್ಯೂಚರ್ ಟೆಕ್ ಇನ್ಫೋಟೆಕ್ ಮೇಲೆ ವಕ್ರ ದೃಷ್ಟಿ ಯನ್ನೇಬೀರಿತ್ತು. ಇದು ಇಲ್ಲಿನ ಹಲವರಿಗೆ ಕಂಪೆನಿಯಲ್ಲಿ ತನ್ನ ಕೆಲಸ ಸದ್ಯದಲ್ಲೇ ಕಳಕೊಳ್ಳುವ ಚಿತ್ರಣ ನೀಡಿತ್ತು.
ಕಲ್ಯಾಣ್ ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ, ಕಾರಣ ಸ್ಪಷ್ಟ ವಾಗಿತ್ತು ಖುದ್ದು ಮೂರ್ತಿಯವರು ಇವನ ಜೊತೆಗಿದ್ದರು. ತನ್ನ ಊಟ ಮುಗಿಸಿ ಮೇನ್ ಸ್ಟೇಜ್ ಗೆ ಹೋಗಿ ಇಬ್ಬರಿಗೂ ಶುಭಾಷಯ ಕೋರಿ ಕೆಳಗೆ ಬರುವಾಗ ಕಿಸೆಯಲ್ಲಿಟ್ಟ ಮೊಬೈಲ್ ರಿಂಗಣಿಸಿತು.
ಆಫೀಸ್ ಮೈಲ್ ಬಾಕ್ಸ್ ನಲ್ಲಿ ಒಂದು ಮೈಲ್ ಇವನಿಗಾಗಿ ಕಾಯುತ್ತಿತ್ತು. ತೆರೆದು ಓದಿದ.
"ಪ್ರಿಯ ಕಲ್ಯಾಣ್,
ಫ್ಯೂಚರ್ ಟೆಕ್ ಇನ್ಫೋಟೆಕ್ ನಲ್ಲಿ ನಿಮ್ಮ ಸೇವೆಯನ್ನು ನಾವು ಮನಸಾ ಪ್ರಶಂಶಿಸುತ್ತೇವೆ, ನಿಮಗೆ ಗೊತ್ತಿರುವಂತೆ ಕಳೆದ ಕೆಲವು ತಿಂಗಳಿಂದ ನಮ್ಮ ಕಂಪೆನಿಯ ವ್ಯವಹಾರ ಪಾತಾಳ ಮುಟ್ಟಿದೆ, ಆದ ಕಾರಣ ನಿಮ್ಮ ಅಮೆರಿಕ ವಿಸಾವನ್ನು ಮುಂದಿನ ಸೋಮವಾರದೊಳಗೆ ಕೊನೆಗೊಳಿಸಲಾಗಿದೆ, ನೀವು ನಮ್ಮಲ್ಲಿ ಉತ್ತಮ ಉಧ್ಯೋಗಿ ಆಗಿ ಸೇವೆ ಸಲ್ಲಿಸಿದನ್ನು ಗಮನದಲ್ಲಿಟ್ಟುಕ್ಕೊಂಡು ನಿಮ್ಮ ಉಧ್ಯೋಗವನ್ನು ಜೂನ್ ೩೦ ರವರೆಗೆ ಮುಂದೂಡಿದ್ದೇವೆ, ಈ ಎರಡು ತಿಂಗಳಲ್ಲಿ ನೀವೂ ಬೆಂಗಳೂರು ಸೇರಿ, ಉತ್ತಮ ಕಂಪೆನಿಯಲ್ಲಿ ನಿಮ್ಮ ಸ್ಥಾನ ಗಟ್ಟಿ ಮಾಡಿಕ್ಕೊಳ್ಳಿ.
ಮುಂದೊಂದು ದಿನ ನಾವು ಹಿಂದಿನಂತೆ ಧಕ್ಷ್ಯ ಕಂಪೆನಿಯಾಗಿ ಭದ್ರವಾದರೆ ನಿಮ್ಮನ್ನು ಮತ್ತೆ ಕರೆಯುತ್ತೇವೆ, ಅಲ್ಲಿಯವರೆಗೆ ಕ್ಷಮೆ ಇರಲಿ.
ಆವಾಗಲೂ ನಿಮ್ಮಿಂದ ಈಗಿರುವಂತೆ ಸಹಕಾರ ಬಯಸುವ
ನಿಮ್ಮ
ಫ್ಯೂಚರ್ ಟೆಕ್ ಇನ್ಫೋಟೆಕ್"
ಮೈಲ್ ಓದುತಿದ್ದಂತೆ ಕಲ್ಯಾಣ್ ಗೆ ಕಾಲ ಅಡಿಯಲ್ಲೇ ಭೂಮಿ ಬಿರಿಯಲು ಶುರುವಾದಂತಾಯಿತು.ಈ ಬಗ್ಗೆ ಮೂರ್ತಿಯವರಲ್ಲೇ ಮಾತಾಡುವ ಹೇಳಿ ಕೆಳಗೆ ಓಡುತ್ತಾನೆ. ಮೂರ್ತಿಯವರು ಮತ್ತು ಮಂತ್ರಿಗಳಾದ ಕಿರಣ್ ನ ತಂದೆಯವರು ಪಾನ ಮುಕ್ತರಾಗಿ ಮಾತಾಡುತ್ತಿದ್ದದ್ದು ಇವನು ತನ್ನ ಹೆಜ್ಜೆಗಳನ್ನು ಮೆಲ್ಲನೆ ಹಾಕುವಂತೆ ಮಾಡಿತು.
"ಅಲ್ಲೋ ಮೂರ್ತಿ, ಯಾವುದೇ ಕ್ಷೇತ್ರ ವಿರಲಿ ನಿನ್ನ ಎದುರು ಬಂದವರನ್ನು ನೀನು ಸ್ವಾಹ ಮಾಡುತ್ತಿಯಲ್ಲೋ... ಅವರಿಗೆ ನಿನ್ನ ಅಸ್ತಿತ್ವ ಗೊತ್ತಾಗುವ ಮುಂಚೆ ಅವರೂ ನಿನ್ನಲ್ಲಿ ಸೇರಿ ಹೋಗಿರುತ್ತಾರಲ್ಲೋ, ಗ್ರೇಟ್ ಕಣಪ್ಪಾ, ನೀನು ಪೊಲಿಟಿಕ್ಸ್ ನಲ್ಲಿ ಇರಬೇಕಾದದ್ದು..." ಅಂದರು ಮಂತ್ರಿ ವರ್ಯರು.
"ಇನ್ನೂ ಇಲ್ವೋ, ಬದುಕಿಕೊಳ್ಳಲು ಎರಡು ತಿಂಗಳು ಸಮಯ ಕೊಟ್ಟಿದ್ದೇನೆ " ಅಂದ್ರು ಮೂರ್ತಿಯವರು.
"ಬ್ಲಾಕ್ ಹೋಲ್ ಕಣೋ ನೀನು, ಅಸ್ತಿತ್ವ ವಿಲ್ಲದೇ ನಿನ್ನ ಅಸ್ತಿತ್ವ ತೋರಿಸುತ್ತೀಯ, ಕಲ್ಯಾಣ್ ಇನ್ನೊಬ್ಬ ಬಲಿಪಶು ಪಾಪ..." ಅಂದರು ಮಂತ್ರಿಯವರು ಕೈಯಲ್ಲಿದ್ದ ಗ್ಲಾಸನ್ನು ಮೇಲೆರಿಸುತ್ತಾ.
ಈ ಮಾತು ಕೆಳುತಿದ್ದಂತೆ ಅಲ್ಲಿ ತನಗೆ ಕೆಲಸ ಇಲ್ಲ ಎಂದು ತಿಳಿದು ಕಲ್ಯಾಣ್ ಹಿಂತಿರುಗಲು ಅಣಿಯಾಗುತ್ತಾನೆ. ಇಂದಿರಾ - ಕಿರಣ್ ನಡುವಲ್ಲಿ ಎದುರಾಗುತ್ತಾರೆ.
ತನ್ನ ಕಣ್ಣೀರನ್ನು ಒರೆಸುತ್ತಾ "ಯಾವಾಗ ಮದುವೆ ಊಟ ಹಾಕಿಸ್ತೀಯಾ ?" ಎಂದು ಕೇಳಿದ.
"ಜೂನ್ ಮೊವತ್ತಕ್ಕೆ ಕಣೋ, ನೀನು ಎಲ್ಲಿದ್ರೂ ಬರಲೇ ಬೇಕು" ಅಂದಳು ಇಂದಿರಾ ಯಾವುದರ ಪರಿವಿಲ್ಲದೆ.
"ಆ ಕಪ್ಪು ರಂದ್ರದ ಸೆಳೆತದಿಂದ ನನ್ನನ್ನು ನಾನು ಉಳಿಸಿಕ್ಕೊಂಡರೆ ಖಂಡಿತವಾಗಿ ಬರುತ್ತೇನೆ" ಎನ್ನುತ್ತಾ ಇಬ್ಬರ ಕೈಗಳ ನಡುವೆ ತನ್ನ ಕೈಗಳನ್ನು ಭಂದಿಸಿದ ಕಲ್ಯಾಣ್.
ಚೌಟ್ರಿ ತುಂಬಾ ಬಣ್ಣ ಬಣ್ಣದ ದೀಪಗಳು ಉರಿಯುತಿದ್ದರೂ ಕಲ್ಯಾಣ್ ನ ಕಣ್ಣು ತುಂಬಾ ಕತ್ತಲು ಕವಿಯಿತು.
Comments
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
In reply to ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩] by RAMAMOHANA
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
In reply to ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩] by venkatb83
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
In reply to ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩] by kavinagaraj
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
In reply to ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩] by sathishnasa
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
In reply to ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩] by partha1059
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
In reply to ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩] by bhalle
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
In reply to ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩] by sasmi90
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]
In reply to ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩] by makara
ಉ: ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಭಾಗ[೩]