ತುಟಿಗೊಂದು ಆಭರಣ!

ತುಟಿಗೊಂದು ಆಭರಣ!

 


ಮಾನವ ನಾಗರೀಕತೆ ಅನ್ನೋ ಧರ್ಮವನ್ನು ಪೀಳಿಗೆಯಿಂದ ಪೀಳಿಗೆಗೆ ಹೊಸ ಹೊಸದಾಗಿ ಬದಲಿಸುತ್ತಾ, ಪಾಲಿಸುತ್ತಾ ಬಂದ. ಹಾಗೆ ಸಾಗಿ ಬಂದ ಹಾದಿಯಲ್ಲಿ ಹಸಿ ಮಾಂಸ ಬೇಯಿಸಲ್ಪಡಿತ್ತು. ಬೆತ್ತಲೆ ಮೈಗೆ ಸೊಪ್ಪು ನಂತರದಲ್ಲಿ ಬಟ್ಟೆ ಬಳಕೆಯಾಯಿತು. ಅಲೆಮಾರಿತನವನ್ನು ಸ್ಥಿರ ವ್ಯವಸಾಯ ಒಂದೇ ಕಡೆ ಬದುಕುವಂತೆ ಮಾಡ್ತು. ನಂತರದಲ್ಲಿ ಸೌಂದರ್ಯ ಪ್ರಜ್ಞೆ ಬೆಳೆದು ಅಚ್ಚೆ, ಆಭರಣಗಳ ಬಳಕೆಯೂ ಬಂತು. ಹಾಗೇ ಬೆಳೆದು ಬಂದು ಸುಮಾರು ವರ್ಷಗಳಾಗಿವೆ. ಆದ್ರೆ ಇಂದಿಗೂ ಏಷ್ಯಾದ ಹಲವಾರು ಕಡೆ ಸಾಕಷ್ಟು ಬುಡಕಟ್ಟು ಜನಾಂಗಗಳು ಇನ್ನೂ ಹಳೆಯ ಮತ್ತು ವಿಶಿಷ್ಟ ಆಭರಣಗಳನ್ನು ಬಳಸುತ್ತಿದ್ದಾರೆ. ಅವುಗಳಲ್ಲಿ ಒಂದು ಲಿಪ್​ ಪ್ಲೇಟ್​. ಇದನ್ನ ತುಟಿತಟ್ಟೆ ಅಂತ ಕರೀಬಹುದು. ರೂಪಾಯಿಯ ಬಿಲ್ಲೆಯಿಂದ ಹಿಡಿದು ಥೇಟ್​ ಕಂಪ್ಯೂಟರ್​ ಸೀಡಿಯ ಗಾತ್ರದವರೆಗಿನ ವೃತ್ತಾಕಾರದ ತಟ್ಟೆಗಳನ್ನು ಕಾಣಬಹುದು. ಇಂತಹ ತುಟಿತಟ್ಟೆಗಳನ್ನ ಸೀಳಿದ ತುಟಿಗಳಿಗೆ ಸಿಕ್ಕಿಸಿಕೊಳ್ಳುತ್ತಾರೆ.

ಇಂತಹ ತುಟಿತಟ್ಟೆಗಳನ್ನು ಇಥಿಯೋಪಿಯಾದಲ್ಲಿ ಬರೋ ಸುಮಾರು 5 ಬುಡಕಟ್ಟು ಜನರು ಬಳಸುತ್ತಾರೆ. ಇಥಿಯೋಪಿಯಾದ ಮುರ್ಸಿ ಮತ್ತು ಸುರ್ಮ ಜನಾಂಗದಲ್ಲಿ ಮಹಿಳೆಯರು ಬಳಸಿದ್ರೆ, ಬ್ರೇಜಿಲ್​ನಲ್ಲಿ ಕಂಡು ಬರೋ ಸೂಯಾ ಜನಾಂಗದಲ್ಲಿ ಗಂಡಸರು ಆಭರಣವನ್ನು ಬಳಸುತ್ತಾರೆ ಅನ್ನೋದು. ಹಾಗೆ ಟ್ಯಾಂಜಾನೀಯಾದ ಮಕಾಂಡ್ ಜನಾಂಗದವರು ಮತ್ತು ಬ್ರೇಜಿಲ್​ನ ಬೋಟೋಕುಡೋ ಜನಾಂಗದಲ್ಲಿ ಗಂಡು ಹೆಣ್ಣೆಂಬ ಬೇಧ ಭಾವವಿಲ್ಲದೆ ಆಭರಣವನ್ನು ಬಳಸುತ್ತಾರೆ. ಅಂದ್ಹಾಗೆ ಇದು ಜನರ ಸಂಸ್ಕೃತಿ ಮತ್ತು ಪರಂಪರೆಯ, ತಮ್ಮ ಜೀವನದ ದಿನಚರಿಯ ಒಂದು ಭಾಗ.

ಲಿಪ್​ ಪ್ಲೇಟ್​ಗಳನ್ನು ಮರದ ತುಂಡಿನಿಂದ ಮತ್ತು ಮಣ್ಣಿನಿಂದ ಮಾಡಿರುತ್ತಾರೆ. ಪ್ಲೇಟ್ಗಳು ವಯಸ್ಸು ಮತ್ತು ಅವ್ರವ್ರ ಸ್ಥಾನಮಾನಗಳಿಗೆ ಅನುಗುಣವಾಗಿ ಗಾತ್ರ ಮತ್ತು ಅಳತೆಗಳನ್ನು ಹೊಂದಿರುತ್ತವೆ. ಹಾಗಂತ ಕೆಲವರು ಮಾತ್ರ ಹಿರಿದಾದಲಿಪ್​ ಫ್ಲೇಟ್​ಗಳನ್ನು ಬಳಸುತ್ತಿರಲಿಲ್ಲ. ಇಷ್ಟಪಟ್ಟ ಮಹಿಳೆಯರೆಲ್ಲಾ ಧರಿಸಬಹುದಿತ್ತು. ಮರ್ಸಿ ಮತ್ತಿತರ ಬುಡಕಟ್ಟಿನ ಜನಾಂಗಗಳು ಆಚರಣೆಯನ್ನು ಶ್ರದ್ಧೆಯಿಂದ ಇಲ್ಲಿಯವರೆಗೂ ನಡೆಸಿಕೊಂಡು ಬರ್ತಿದ್ದಾರೆ. ಅದ್ರಿಂದ್ಲೇ ಇತ್ತಿಚೆಗೆ ಇಥಿಯೋಪಿಯಾಗೆ ಬರೋ ಪ್ರವಾಸಿಗರಿಗೆ ಆಭರಣ ಕೂಡ ಆರ್ಕಷಣೀಯ.

ಮದುವೆ ಆಗೋದಕ್ಕೆ ಒಂದು ವರ್ಷ ಮುಂಚೆ ಬುಡ ಕಟ್ಟು ಮಹಿಳೆಯರು ಲಿಪ್​ ಪ್ಲೇಟ್​ಗಳನ್ನು ಧರಿಸಲು ಸಿದ್ಧರಾಗ್ತಾರೆ. ಲಿಪ್​ಪ್ಲೇಟ್​ಗಳನ್ನು ತನ್ನ ತಾಯಿ ಇಲ್ಲವೆ ಆಕೆಯ ರಕ್ತ ಸಂಬಂಧಿ ಮೊದಲಿಗೆ ಧರಿಸುವ ಶಾಸ್ತ್ರ ಮಾಡುತ್ತಾರೆ. ಅಂದ್ರೆ 15-18 ವಯಸ್ಸಿನಲ್ಲಿ ಇಂತದ್ದೊಂದು ಆಚರಣೆ ಶುರುವಾಗುತ್ತೆ. ಮೊದ್ಲಿಗೆ ತೀರ ಸಣ್ಣ ಗಾತ್ರದ ಅಂದ್ರೆ 1-2 ಸೆ ಮೀ ಉದ್ದದ ಲಿಪ್​ ಪ್ಲೇಟ್​ ಹಾಕ್ತಾರೆ. ಇದನ್ನು ಹಾಕ್ವಾಗ ಆಗುವ ಗಾಯ ಮಾಗುವವರೆಗೂ ಅದನ್ನು ಬದಲಿಸುವುದಿಲ್ಲ. ಅದು ಮಾಗೋಕೋ ಬಿಡೋದು ಸಹ ಕೇವಲ 2-3 ವಾರ ಮಾತ್ರ. ಆಮೇಲೆ ಇನ್ನಷ್ಟು ದೊಡ್ಡದಾದ ಲಿಪ್​ ಪ್ಲೇಟ್​ ಹಾಕ್ತಾರೆ. ಕನಿಷ್ಟ ಅಂದ್ರೂ 4 ಸೆ ಮೀ ಉದ್ದದ ಲಿಪ್​ ಪ್ಲೇಟ್​ಗಳನ್ನು ಪ್ರತಿ ಮಹಿಳೆ ಧರಿಸುತ್ತಾಳೆ, ತನ್ನಗೆ ಇಷ್ಟವಿದ್ದಲ್ಲಿ ಇನ್ನೂ ದೊಡ್ಡ ಗಾತ್ರದ ಲಿಪ್​ ಪ್ಲೇಟ್​ ಧರಿಸಿದ್ರೆ ಮತ್ತಷ್ಟು ಗೌರವ ಸಮಾಜದಲ್ಲಿ ದೊರೆಯುತ್ತೆ ಅನ್ನೋವಂಥ ನಂಬಿಕೆ ಬುಡಕಟ್ಟಿನ ಜನರಲ್ಲಿದೆ. ಹೀಗೆ ತುಟಿಗೆ ತಟ್ಟೆ ತೊಡಿಸುವ ಪರಿಪಾಠವನ್ನು ನಡೆಸಿಕೊಂಡು ಬರ್ತಿದ್ದಾರೆ ಬುಡಕಟ್ಟಿನ ಜನ.

Comments