ಆ ದಿನಗಳು ....!!!!
ಕವನ
ಮುಂಜಾವಿನ ಮಂಜಲಿ ಮರೆಯಾದ ದಿಗಂತವ ದಿಟ್ಟಿಸುತ
ಕೋಗಿಲೆ, ಪಿಕಳಾರರ ದನಿಗೆ ಕಿವಿಯಾಗಲು ಯತ್ನಿಸುತ
ಆಧುನೀಕತೆಯ ಮೋಟಾರಿನ ಕರ್ಕಶತೆಗೆ ಬಲಿಯಾಗಿರಲು
ಅರಿವಿಲ್ಲದೆ ನಾ ತಲುಪಿದ್ದೆ ನನ್ನ 'ಆ ದಿನಗಳಿಗೆ'......!!!!!!
ಯಥೇಚ್ಹ ವನರಾಶಿಯ ನಡುವಲಿ
ನಾನ್ಯಾವ ವಾನರರಿಗೂಕಡಿಮೆಯಾಗದೆ
ಬಿದ್ದೆದ್ದು ನಲಿದಾಡಿದ ಬಾಲ್ಯವ ನೆನೆಯುತಲಿ
ಅಕ್ಷರಶಃ ಹೊಗಬಯಸಿದ್ದೆ ನನ್ನ 'ಆ ದಿನಗಳಿಗೆ'......!!!!!!
ತುಂಗೆಯ ಮಡಿಲಲಿ ಮಿಂದೇಳುತ
ತಿಮ್ಮತಿಮ್ಮಿಯರಳೊಂದಾಗಿ ಜೊತೆಗಾಡುತ
ಚಿನ್ನೀದಾಂಡು , ಗೋಲಿಗಳೇ ಆಯುಧಗಳೆಂದೆಣಿಸಿ
ಮಹಾಯುದ್ಧಗಳಾಗುತಿದ್ದ 'ಆ ದಿನಗಳಿಗೆ'......!!!!!!
ನಮ್ಮದಾ ಪುಟ್ಟ ಜಗದೊಳಗೆ
ತೀರ್ಥಹಳ್ಲಿಯೇ ಮಹಾನಗರವೆಂದೆಣಿಸಿ
ಸಡಗರ ಸಂಭ್ರಮದಿ ಬೀದಿಬೀದಿ ಸುತ್ತಿದ
ಚೆಲುವನಾಡಿನ 'ಆ ದಿನಗಳಿಗೆ'......!!!!!!
ನಾ ಬೆಳೆಯಬಾರದಿತ್ತು , ದೊಡ್ಡವನಾಗಬಾರದಿತ್ತು
ಕಳೆದುಕೊಳ್ಲುತಿರುವೆ ತನುಮನದ ಸಂತಸವ
ವಿಧಿಯೇ ದಯಮಾಡಿ ಕಾಲಚಕ್ರವ ಹಿಂದಿರುಗಿಸು
ಮತ್ತೆ ತಲುಪಿಸು ನನ್ನ ಮುದ್ದಿನ 'ಆ ದಿನಗಳಿಗೆ'......!!!!!!
Comments
ಉ: ಆ ದಿನಗಳು ....!!!!
In reply to ಉ: ಆ ದಿನಗಳು ....!!!! by Usha Bhat
ಉ: ಆ ದಿನಗಳು ....!!!!
ಉ: ಆ ದಿನಗಳು ....!!!!
In reply to ಉ: ಆ ದಿನಗಳು ....!!!! by padma.A
ಉ: ಆ ದಿನಗಳು ....!!!!
ಉ: ಆ ದಿನಗಳು ....!!!!
In reply to ಉ: ಆ ದಿನಗಳು ....!!!! by gurudutt_r
ಉ: ಆ ದಿನಗಳು ....!!!!
ಉ: ಆ ದಿನಗಳು ....!!!!
In reply to ಉ: ಆ ದಿನಗಳು ....!!!! by pkumar
ಉ: ಆ ದಿನಗಳು ....!!!!