ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)-ಸುಖಾಂತ್ಯ:()))

ನವ ಜೀವಿಯ ರಹಸ್ಯ 'ಸೃಷ್ಟಿ(ಕಥೆ)-ಸುಖಾಂತ್ಯ:()))

 
ಇಲ್ಲೀವರೆಗೆ-
ಸಿರಿ 'ಸೃಷ್ಟಿ'ಯ 
ಬಾಲದ  'ವಿಷಕಾರಿ' ತುದಿ ಕತ್ತರಿಸಿದಳು, ಮನೆಗೆ ಮರಳಿದ ವಿಶಾಲ್ ಗೆ ಎಲ್ಲವನ್ನು ಹೇಳಿದಳು, ರಾತ್ರಿ ಹಾಲಿನಲ್ಲಿ ಇಬ್ಬರೂ ಕುಳಿತು ಮಾತಾಡುವಾಗ ಫಕ್ಕನೆ ಕರೆಂಟ್ ಹೋಗಿ, ಅದೇ ಸುಸಮಯ ಅಂತ 'ಸೃಷ್ಟಿ' ಮನೆ ಮೇಲುಗಡೆ ತಪ್ಪಿಸಿಕೊಂಡು ಹೋಗಿ ಗಾಳಿಗೆ ಸ್ವತ0ತ್ರ ಹಕ್ಕಿಯಾಗಿ  ಕೈ ಅಗಲಿಸಿ ನಿಂತಲೂ- ಅವಳನ್ನು ಹುಡುಕಿಕೊಂಡು ಮೇಲೆ ಬಂದ ವಿಶಾಲ್ ಗೆ ಅವಳ ಬೆನ್ನ ಹಿಂದುಗಡೆ ರೆಕ್ಕೆ ಮೂಡಿದ್ದು  ಅವಳು ಹಾರಿ ಹೋಗಲು ರೆಡಿ ಆಗಿದ್ದು -ಯಾವ ಪ್ರಶ್ನೆಗೂ ಉತ್ತರಿಸದೇ ಮೂಕನಾದ ವಿಶಾಲ್,ಏಣಿ ಹತ್ತಿ ಮೇಲೆ ಬಂದ ಸಿರಿಗೆ ಎಲ್ಲವೂ ಗೊತ್ತಾಗಿ, 'ಸೃಷ್ಟಿ'ಯನ್ನು ರಮಿಸಿ ಮನೆಗೆ ಕರೆದುಕೊಂಡು ಬಂದು ಮಲಗಿಸಿ  ಸಿರಿಯನ್ನು ಎತ್ತಿಕೊಂಡು ವಿಶಾಲ್ ತಮ್ಮ ರೂಮಿಗೆ ಹೋದ, 'ಸೃಷ್ಟಿ' ಮನೆಯ ಮೇಲಿನ ಕಿಟಕಿ ಮೂಲಕ ಹೊರ ಹೋದಳು.....


ರಾತ್ರಿ ವಿಶಾಲ್ ಮತ್ತು ಸಿರಿ ಮಲಗಲು ರೆಡಿ ಆಗುವಾಗ ಡಾ: ಕಣ್ನನ್ ಬಂದಿದ್ದು 'ಸೃಷ್ಟಿ'ಯನ್ನು ತಮಗೆ ಒಪ್ಪಿಸಲು ಕೇಳಿದರು, ಒಳಗೆ ಹೋಗಿ ನೋಡಿದಾಗ 'ಸೃಷ್ಟಿ' ತಪ್ಪಿಸಿಕೊಂಡಿದ್ದು ಗೊತ್ತಾಗಿ ಅವಳ ಎಲ್ಲ ವಸ್ತುಗಳನ್ನು ಒಟ್ಟುಗೂಡಿಸಿ ಸೂಟು ಹಾಕಿದರು...  ಅಸ್ಟ್ರಲ್ಲಿ ಏನೋ ಸುತ್ತ ಮುತ್ತ ಹಾರಾಡಿದಂತೆ ಆಗಿ ಕೆಲವು ನಿಮಿಷಗಳಲ್ಲಿ ಡಾ: ಕಣ್ನನ್ ಹತ್ತಿರ ಒಂದು ವಸ್ತು ಬಿದ್ದು ಅದು ಏನು ಅಂತ ಎತ್ತಿಕೊಂಡು ನೋಡಿದಾಗ ಅದು ಮನುಷ್ಯನ ತುಂಡಾದ ಕೈ ಅಂತ ಗೊತ್ತಾಗಿ ಕಿರುಚುತ್ತಾ ದೂರ ಎಸೆದರು.. ಆ ಕೈ ತನ್ನ ಜೊತೆ ಬಂದಿದ್ದ ಡ್ರೈವರ್ದೇ ಅಂತ ಗೊತ್ತಾಯ್ತು, ಡಿಕ್ಕಿಯಲ್ಲಿದ್ದ ಡಬಲ್ ಬ್ಯಾರೆಲ್ ಗನ್ನು ಮತ್ತು ಪವರ್‌ಫುಲ್ ಟಾರ್ಚ್ ಎತ್ತಿಕೊಂಡು ಬಂದು ನಿಂತರು....
ಮುಂದೇನಾಯ್ತು......???
---------------------------------------------------
ಈ ಸರಣಿಯ ಹಿಂದಿನ ಭಾಗಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ


sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A7/10/05/2012/36658

 

sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A8/10/05/2012/36667



sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A9/16/05/2012/36717
 
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%AA/31/05/2012/36893
 
sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%AB/05/06/2012/36962
------------------------------------------------------------------------------------------------------------

ಕೊನೆಯ ಭಾಗ- ೨ ವಿಭಿನ್ನ ಅಂತ್ಯಗಳಲ್ಲಿ..


ಸುಖಾಂತ್ಯ:()))
=========


ವಿಶಾಲ್ ಮತ್ತು ಸಿರಿ ಗೆ ಇದು 'ಸೃಷ್ಟಿ' ಯ ಕೆಲ್ಸಾ ಇರಬಹುದೇ ಎನ್ನಿಸಿತು... ಶಬ್ಧವೇ ಆಗದ ಹಾಗೆ ಹೊತ್ತೊಯ್ಯೋಕೆ ಗಾಳಿಯಲ್ಲಿ ಹಾರಿ ಬಂದಿರಬೇಕು ಅಂದುಕೊಂಡು ಅದನ್ನು ಹೇಳಲು ಡಾ: ಕಣ್ನನ್ ಕಡೆಗೆ ನೋಡುವಾಗಲೇ ಇವರ ಮುಂದೆಯೇ ರಕ್ತ ತೊಟ್ಟಿಕ್ಕುತ್ತಾ ಬೀಳುತ್ತಿರುವುದು ಕಾಣಿಸಿ ಕೈನಲ್ಲಿನ ಟಾರ್ಚ್ ಮೇಲಿನ ಮರದತ್ತ ಹಾಕಿದರೆ ......ಅಲ್ಲಿ......???
ಮರದಲ್ಲಿ ರಕ್ತ ಸಿಕ್ತ  ವಿರೂಪಗೊಂಡ ಶವ ತೇಲಾಡುತ್ತಿದೆ.....


ಓ....!! ನೋ .ನೋ.... ಅಂತ ಕಿರುಚುತ್ತಾ ಸಿರಿ ಮತ್ತು ವಿಶಾಲ್ ಓಡುತ್ತಾ ಹೋಗಿ ಡಾ: ಕಣ್ನನ್ ಪಕ್ಕ ನಿಂತರು... ಡಾ: ಕಣ್ನನ್  ತಮ್ ಕಾರಿನ ಡಿಕ್ಕಿ ಓಪನ್ ಮಾಡಿ ಅದರಲ್ಲಿದ್ದ ಒಂದು ಡಬಲ್ ಬ್ಯಾರೆಲ್ ಗನ್ನು ಮತ್ತು ಪವರ್‌ಫುಲ್ ಟಾರ್ಚ್ ಎತ್ತಿಕೊಂಡು, ಭಯ ಪಡಬೇಡಿ, ಅದು ಯಾರು ಅಂತ ನೋಡುವ ನಡೆಯಿರಿ ಎಂದರು..... ಅದಕ್ಕೆ ಸಿರಿ ಬೇಡ ಸ್ಸಾ... ಅದು ಏನಾರಾ-ಯಾರಾರ ಆಗಿರಲಿ, ನಾವ್ ಇಲ್ಲಿಂದ ಹೋಗಿ ಬಿಡೋಣ ಅಂದರೂ ಕೇಳ್ಡ ಡಾ: ಕಣ್ನನ್ ತಾವ್ ಒಬ್ಬರೇ ಒಂಟಿಯಾಗಿ ಹೋಗಲು ಅಣಿಯಾದಾಗ ಸಿರಿ ಮತ್ತು ವಿಶಾಲ್ ಸಹಾ ಹಿಂಬಾಲಿಸಲೇಬೇಕಾಯ್ತು.. ಟಾರ್ಚ್ ಹಾಕುತ್ತಾ ಸುತ್ತ ಮುತ್ತ ಸ್ವಲ್ಪ ಶಬ್ಧ ಆದರೂ ಭಯದಿಂದ ನಡುಗುತ್ತಾ ಮೂವರು ಹೋಗುತ್ತಿದ್ದರು....


ಸುತ್ತ ಮುತ್ತ ಆಕಾಶ ಮುಟ್ಟುವಂತೆ ಬೆಳೆದ ಮರಗಳು ಗವ್ವೆನ್ನುವ ಕತ್ತಲು, ಬರೀ ಟಾರ್ಚ್ ಬೆಳಕಲ್ಲಿ ನಡೆಯುತ್ತಾ ಇರುವಾಗ, ಸೊಯ್ಯನೇ ಏನೋ ಶಬ್ಧ ಕೇಳಿಸಿ ಹಿನ್ದುರುಗಿದ ಡಾ: ಕಣ್ನನ್ನನ್ನು ಎತ್ತಿಕೊಂಡು ಹಾಅರುತ್ತ ಕಣ್ಮರೆಯಾದಳು 'ಸೃಷ್ಟಿ'...ಈಗ ಅವಳ ರೂಪ ಭಯಂಕರವಾಗಿ ಬದಲಾದಂತೆ ಇತ್ತು..  ನೋಡಲೇ ಭಯ ಪಡುವಂತೆ ಇದ್ದಳು.. ಡಾ: ಕಣ್ಣನ್ನ್ ಅವರನ್ನು ಹೊತ್ತೊಯ್ದು ಎತ್ತರವಾದ ಒಂದು ಮರದ ಮೇಲೆ ಕೊಂಬೆಗೆ ನೇತು ಹಾಕಿದಳು, ಏನು? ಎಂತ ಅನ್ನುವಸ್ತರಲ್ಲಿ ತನ್ಣನು ಏನೋ ಎತ್ತಿಕೊಂಡದ್ದು ಹಾರಿದ ಹಾಗೆ ಅನ್ನಿಸಿದ್ದು, ಈಗ ಕೊಂಬೆಯಲ್ಲಿ ತಾ ನೇತಾಡುತ್ತಿರುವುದು ಕನಸು ಅಲ್ಲ ಅನ್ನಿಸಲು ಹೆಹ್ಚು ಹೊತ್ತು ಬೇಕಾಗಲಿಲ್ಲ ಡಾ: ಕಣ್ನನ್ ಅವರಿಗೆ...!!


ಭಯದಿಂದ ನಡುಗುತ್ತಾ ಕಣ್ಣು ತೆರೆದು ನೋಡಿದರೆ ಎದುರಿಗೆ ನಿಂತಿದ್ದ ತಮ್ಮ 'ಸೃಷ್ಟಿ'  ಎದೆ ಗುಂಡಿಗೆ ನಿಲ್ಲಿಸುವಸ್ತು ಭಯಂಕರವಾಗಿ ಕಾಣುತ್ತಿದ್ದಳು. ಅವಳ ಕೋಪ ತಾಪ ಸಿಟ್ಟು ಎಲ್ಲವೂ ತನ್ನನ್ನು ಸೃಸ್ತಿಸಿದವರ ಮೇಲೆಯೇ ಎಂಬಂತಿತ್ತು...
ಡಾ ಕಣ್ನನ್- ಬಾಯ್ ತೆರೆದು ಉಗುಳು ನುಂಗುತ್ತಾ, ಸೃಷ್ಟಿ,  ಪ್ಲೀಜ್  ನನ್ನ ಮಾತು ಕೇಳು, ಯಾಕೆ ಹೀಗೆಲ್ಲ ಮಾಡುತ್ತಿರುವೆ?.. ನಿನಗೆ ಏನು ಬೇಕು? ಏನಾರಾ ಕೇಳು ನಾ ಕೊಡುವೆ, ನಮ್ ಜೊತೆ ಬಾ ಎನ್ನಲು...
 
'ಸೃಷ್ಟಿ' ಭಯಂಕರವಾಗಿ ನಗುತ್ತಾ ತನ್ನ ಬಾಲವನ್ನು ಎತ್ತಿದಳು, ಡಾ: ಕಣ್ಣನ್ನ್ ಗೆ ಗೊತ್ತಾಯ್ತು ಅಂತ್ಯ ಸಮೀಪಿಸಿತು ಅಂತ, ಕೈನಲ್ಲಿ ಇನ್ನೂ ಭದ್ರವಾಗಿ ಹಿಡಿದಿದ್ದ
ಗನ್ನು ಅವಳಿಗೆ ಗುರಿ ಮಾಡಿ ಗುಂಡು ಹಾರಿಸುವುದ್ದಕ್ಕೂ ಅದನ್ನು ಮೊದಲೇ ಗ್ರಹಿಸಿದಂತೆ 'ಸೃಷ್ಟಿ' ಪಕ್ಕಕ್ಕೆ ಹಾರಿ ಇನ್ನೊಂದು ಕೊಂಬೆ ಮೇಲೆ ನಿಂತಿದ್ದು ಆಯ್ತು...:(( ಮತ್ತೊಮ್ಮೆ ಹಾರಿ ಡಾ: ಕಣ್ನನ್ ಬಳಿ ಬಂದು ಬಾಲ ಎತ್ತಿ  ಅವರ ಕೊರಳಿಗೆ ಚುಚ್ಚಿದಳು..... ಸ್ವಲ್ಪ ಹೊತ್ತು ಒದ್ದಾಡಿ ಡಾ: ಕಣ್ನನ್ ಕತ್ತು ವಾಲಿಸಿದರು, ಕೈನಲ್ಲಿನ ಗನ್ನು ಬಂದು ಕೆಳಗೆ ಬಿತ್ತು...

 
ಅತ್ತ
 
ಸುತ್ತ ಮುತ್ತ ನೋಡುತ್ತಾ ಭಯ ಪಡುತ್ತಾ ಡಾ: ಕಣ್ನನ್  ಅವರಿಗಾಗಿ ನೋಡುತ್ತಾ ಬರುತ್ತಿದ್ದ ವಿಶಾಲ್ ಮತ್ತು ಸಿರಿ ಡಾ: ಕಣ್ನನ್ ನೇತಾಡುತ್ತಿದ್ದ ಮರದ ಕೆಳಗೆ ಬಂದು ನೀತರು, ಕಾಲಿಗೆ ಏನೋ ತಗುಲಿದರೆ, ನೋಡಿದರೆ ಅಲ್ಲಿ ಡಾ: ಕಣ್ನನ್ ಅವರ ಗನ್ನು.....ಡಾ" ಕಣ್ನನ್ ಎಲ್ಲಿ ಅಂತ ಸುತ್ತ ಮುತ್ತ ಟಾರ್ಚ್ ಹಾಯಿಸುತ್ತಾ ನೋಡುತ್ತಿರಲು...
ವಾಲಾಡುತ್ತಿದ್ದ ಡಾ: ಕಣ್ನನ್ ಶರೀರ ಬಂದು ಇವರ ಮುಂದೆಯೇ ಬಿತ್ತು, ಅದನ್ನು ಕಂಡು ಸಿರಿ ಭಯಂಕರವಾಗಿ ಕಿರುಚಿ ಓಡಿ ಬಂದು ಡಾ: ವಿಶಾಲ್‌ಣನ್ನು ಅಪ್ಪಿಕೊಂಡಳೂ.... ಅದನ್ನು ನೋಡುತ್ತಿದ್ದ 'ಸೃಷ್ಟಿ'ಗೆ ಕೋಪ ಬಂದು ಹಾರುತ್ತ ಬಂದು ವಿಶಾಲ್ ನನ್ನು ಎತ್ತಿಕೊಂಡು ಹೊಯ್ದು ಹತ್ತಿರದಲ್ಲಿದ್ದ ನೀರಿನ ಗುಂಡಿಗೆ ಬಿದ್ದಳು.....


ಹಠಾತ್ತನೆ ನಡೆದ ಈ ಕ್ರಿಯೆಗೆ ಬೆಚ್ಚಿ ಚೇತರಿಸಿಕೊಂಡು  ನೋಡಿದ ಡಾ: ಸಿರಿ ಗೆ ಗುಂಡಿಯಲ್ಲಿ ಧದಾರನೆ ಬಿದ್ದ 'ಸೃಷ್ಟಿ ಮತ್ತು ವಿಶಾಲ್ ಕಾಣಿಸಿದರು ಸಿರಿ ಅಲ್ಲಿಗೆ ಹೋಗುವದರೊಳಗೆ ಆಳಕ್ಕೆ ಹೋಗಿಯಾಗಿತ್ತು... ವಿಶಾಲ್ ಕೈನಲ್ಲ್ಲಿದ್ದ ಟಾರ್ಚ್ ಕೈ ಜಾರಿ ತೇಲುತ್ತ ನೀರಿನ ಮೇಲೆ ಬಂತು.....ತನ್ನ ಮುಂದೆ ಬಿದ್ದಿದ್ದ ಗಣ್ಣು ಎತ್ತಿಕೊಂಡು ನೀರಿನ ಗುಂಡಿ ಹತ್ತಿರ ಬಂದು ತನಗೆ ಈಜು ಬಾರದೇ ಇದ್ದುದಕ್ಕೆ ತನ್ನನ್ನೇ ಶಪಿಸುತ್ತಾ ವಿಶಾಲ್ ಮೇಲೆ ಬರುವುದನ್ನು ಕಾಯ್ತಿದ್ದಳು...


ಹತ್ತೋ ಹದಿನೈದು ನಿಮಿಷಗಳ ನಂತರ ನೀರಿನಲ್ಲಿ ಗುಳ್ಲೆಗಳು ಬಂದು ನೀರು ಉಕ್ಕುತ್ತಾ ಮೇಲೆ ಬರುವುದು ಕಾಣಿಸಿ ತಾಆರ್‌ಚ್ ಆ ಕಡೆ ತಿರುಗಿಸಿ ಕೈನಲ್ಲಿ
ಗನ್ನು ಹಿಡಿದು ಉಸಿರು ಬಿಗಿ ಹಿಡಿದು ಕಾದಳು..

ಸರ್ರನೇ ಮೇಲೆ ಬಂದ- ವಿಶಾಲ್ ಕೈ ಚಾಚಿದ, ಏದುಸಿರು ಬಿಡುತ್ತಿದ್ದ ಅವನ ಕೈ ಹಿಡಿದು ಕಸ್ಟ ಪಟ್ಟು ಎಳೆದು ದಡಕ್ಕೆ ಹಾಕಿದಳು ಸಿರಿ- ಮತ್ತು ಸುಸ್ತು ಆಗಿ ಅವನ ಪಕ್ಕವೇ ಕೂತಳು...
ಮತ್ತ್ತೆ ನೀರಿನಲ್ಲಿ ಗುಳ್ಲೆಗಳು ಬರುತ್ತಿರಲು, ಧಡ್ಫನೇ ಎದ್ದು ಇಬ್ಬರು ನಿಂತರು, ನೀರಿನಲ್ಲಿ ತೇಲುತ್ತ ಎದ್ದು ನಿಂತ 'ಸೃಷ್ಟಿ' ತನ್ನ ರೆಕ್ಕೆ ಆಗಲಿಸಿದಳು, ಸಿರಿ ಮತ್ತು ವಿಶಾಲ್ ಕೈ ಕೈ ಹಿಡಿದು 
ಓಡಲು ಶುರು ಹಚ್ಚಿಕೊಂಡರು ಆ ಕತ್ತಲಿನಲ್ಲಿ, ಕೈನಲ್ಲಿ ಟಾರ್ಚ್ ಮತ್ತು ಗನ್ನು.....


ಸ್ವಲ್ಪ ದೂರ ಹೋಗಿದ್ದರಸ್ತೆ, ಹಿಂದೆ ತಿರುಗಿ ನೋಡುತ್ತಾ 
ಓಡುತ್ತಿದ ಇವರ ಮುಂದೆಯೇ ಹಾರಿ ಬಂದು ನಿಂತ 'ಸೃಷ್ಟಿ ಕೋಪದಿಂದ ಒಮ್ಮೆ ಸಿರಿ ಯ ಕಡೆಗೆ ನೋಡಿದಳು, ಹತ್ತಿರ ಹಾರುತ್ತ ಬಂದು ಪಟ್ಟ್ ಅಂತ ಒಂದು ಏಟು ಕೊಟ್ಟಳು ಸಿರಿಯ ಕೆನ್ನೆಗೆ, ದೂರಕ್ಕೆ ಹಾರಿ ಬಿದ್ದ ಸಿರಿಯನ್ನು ರಕ್ಷಿಸಲು ಮುಂದೆ ಹೋದ ವಿಶಾಲ್ ಕಡೆಗೆ ಹಾರಿ ಬಂದು ಒಮ್ಮೆ ಅವನ ಕಣ್ಣಲ್ಲಿ ಕಣ್ಣಿಟ್ಟು ಧುರ ಧುರನೆ ಕ್ರೋಧದಿಂದ ನೋಡಿದಳು, 

ತನ್ನನ್ನು ಅಪ್ಪಿಕೊಂಡು ನಿಂತ 'ಸೃಷ್ಟಿ'ಯ ಹಿಡಿತದಿಂದ  ದೂರಾಗಲು ಕೊಸರಾಡಿದ ವಿಶಾಲ್ ಕಡೆಗೆ ಒಮ್ಮೆ ಯಾವುದೋ ಭಾವದಿಂದ ನೋಡಿದ 'ಸೃಷ್ಟಿ' ಒಂದು ಕ್ರೂರ ನಗೆ ನಕ್ಕು ಅವನನ್ನು ಬಿಟ್ಟು ಸಿರಿ ಬಿದ್ದಲ್ಲಿಗೆ ಬಂದಳು, ಸಿರಿಯ ಹೊಟ್ಟೆಯ ಮೇಲೆ ಕುಳಿತು ತನ್ನ ಬಾಲವನ್ನು ಎತ್ತುತ್ತಾ ಕ್ರೂರವಾಗಿ ನೋಡಿದಳು.... ಸಿರಿ ಗೆ ಗೊತ್ತಾಯ್ತು, ಇವಳಿಗೆ ನಾನಾ ಮೇಲೆಯೇ ಜಾಸ್ತಿ ಕೋಪ ಇದೆ, ಅಸೂಯೆ ಇದೆ ಆಕ್ರೋಶ ಇದೆ.. ಮತ್ತು ಅದಕ್ಕೆ ಕಾರಣಗಳು ಇವೆ... ಯಾರು ತಾನೇ ಪತಿಯನ್ನು ಹಂಚಿಕೊಳ್ಳಲು ಬಯಸುವರು? ಅಲ್ಲದೇ ಇದು ತಮ್ಮದೇ 'ಸೃಷ್ಟಿ' ಸಂಬಂಧದಲ್ಲಿ ನಮ್ಮ ಮಗಳ ತರಹದವಳು... ಆದರೆ ಪ್ರಾಣಿ ಸಹಜ ಕಾಮನೆ ಅವಳ ಮನದಲ್ಲಿ ಉಕ್ಕಿ ....... ಯೋಚಿಸುತ್ತಿದ್ದಳು ಸಿರಿ...


ಪಟ್ -ಪಟ್ ಅಂತ  ಸಿರಿ ಯ ಎರಡು ಕೆನ್ನೆಗೆ ಜೋರಾಗಿ ಹೊಡೆದಳು 'ಸೃಷ್ಟಿ' ಆ ಏಟಿಗೆ ತತ್ತರಿಸಿದಳು ಸಿರಿ, 'ಸೃಷ್ಟಿ'ಯನ್ನು  ಜೋರಾಗಿ ಪಕ್ಕಕೆ ತನ್ನೆಲ್ಲ ಶಕ್ತಿ ಉಪಯೋಗಿಸಿ  ತಳ್ಳಿದಳು, ಎದ್ದು ವಿಶಲ್ ನಿಂಟ್ರುವ ಕಡೆ ಓಡಿದಳು... ಕೆಳಗೆ ಬಿದ್ದ್ಡ ಗನ್ನು ಕಡೆಗೆ ವಿಶಾಲ್ ಗಮನ ಹೋಯ್ತು.. ಅದನ್ನು ಎತ್ತಿಕೊಳ್ಳಲು ಬಗ್ಗಿದ, ಅಸ್ತರಲ್ಲಿ ಹಾರುತ್ತ ಬಂದ 'ಸೃಷ್ಟಿ ಸಿರಿಯನ್ನು ಎತ್ತಿಕೊಂಡು ಹಾರುತ್ತ ಹೋದಳು... ಸಿರಿ...ಸಿರಿ.... 'ಸೃಷ್ಟಿ', ಪ್ಲೀಜ್ ಬೇಡ ಅನ್ನುತ್ತಾಲೇ ಹಿಂದೆಯೇ ಓಡುತ್ತಾ ಹೋದ ವಿಶಾಲ್... ಸ್ವಲ್ಪ ಹೊತ್ಟಲ್ಲೇ ಕಣ್ಮರೆಯಾದ 'ಸೃಷ್ಟಿ' ಮತ್ತು ಸಿರಿಯನ್ನು ಹುಡುಕುತ್ತಾ ಕೈನಲ್ಲಿನ ಟಾರ್ಚು ಎಲ್ಲ ಕಡೆಗೆ ಬೆಳಕು ಬೀರುತ್ತಾ ಹೋದ, ಒಂದು ಕಡೆ ಸಿರಿಯ ಉಡುಪಿನ ಒಂದು ಹರಿದ ಭಾಗ ಕಾಣಿಸಿ ಅತ್ತ ನಡೆದ.. ಶಬ್ಧವೇ ಆಗದ ರೀತಿ ಮೆತ್ತಗೆ ಹೋಗುತ್ತಾ ಟಾರ್ಚ್ ಬೆಳಕು ಆರಿಸಿದ..

ಅಲ್ಲಿ ದೂರದಲ್ಲಿ ಸಿರಿಯನ್ನು ಕೆಳಗೆ ಹಾಕಿ ಅವಳ ಹೊಟ್ಟೆ ಮೇಲೆ ಕುಳಿತು ಬಗ್ಗಿ ಬಗ್ಗಿ ಅವಳ ಕಣ್ಣುಗಳಲ್ಲಿ ಕಣ್ಣಿಟ್ಟು  ನೋಡುತ್ತಾ ಜೋರಾಗಿ ಕಿರುಚುತ್ತಾ ತನ್ನ ಎದೆಗೆ ಹೊಡೆದುಕೊಳ್ಳುತ್ತಿದ್ದ 'ಸೃಷ್ಟಿ'...ಅವಳಿಗೆ ಹುಚ್ಚು ಹಿಡಿದಿಲ್ಲವಸ್ತೆ? ವಿಶಾಲ್ ಸಂದೇಹ...
'ಸೃಷ್ಟಿ' ತನ್ನ ಬಾಲವನ್ನು ಎತ್ತಿ ಅದರಿಂದ ಸೂಜಿಯಂತ ಮೊನಚಾದ ವಸ್ತು ಒಂದು ಹೊರ ಬಂದು ಇನ್ನೇನು ಸಿರಿಯ ಕೊರಳಿಗೆ ತಲುಪಬೇಕು, ಅಸ್ತರಲ್ಲಿ ಗನ್ನು ಎತ್ತಿ ಗುರಿ ಇಟ್ಟು ಗುಂಡು ಹಾರಿಸಿದ  ವಿಶಾಲ್.......

ಡ೦-

ಡ೦

ಎ0ದು ಗುಂಡುಗಳು 'ಸೃಷ್ಟಿ' ಪಕ್ಕವೇ ಹಾದು ಹೋದವು...:((
ಕ್ರೂರವಾಗಿ ನೋಡುತ್ತಾ ಹಿಂದಕ್ಕೆ ತಿರುಗಿದಳು 'ಸೃಷ್ಟಿ..  ವಿಶಾಲ್ ಗೆ ಬಂದೂಕು ಉಪಯೋಗಿಸಿ ಗೊತ್ತಿಲ್ಲ, ಇನ್ನೂ ಗುರಿಗೆ ಗುಂಡು ಹೊಡೆಯುವುದು ದೂರದ ಮಾತು..!!
ಎರಡು ಗುಂಡುಗಳು ಹತ್ತಿರವೇ ಹಾದು ಹೋಗಿದ್ದು ಅವುಗಳ ಕಿವಿಗಡಚಿಕ್ಕುವ ಶಬ್ಧಕ್ಕೆ ಬೆದರಿದಳು  ಸಿರಿ- ಅವಳನ್ನು ಪಕ್ಕಕ್ಕೆ ತಳ್ಳಿ , ಎದ್ದು
ಹಾರುತ್ತ  ವಿಶಾಲ್  ಹತ್ತಿರ ಬಂದಳು 'ಸೃಷ್ಟಿ.. ಅವಳ ಕಣ್ಣುಗಳಲ್ಲಿ  ಕೋಪದ ಜ್ವಾಲೆ...


ತನ್ನ ಎದುರಿಗೆ ನಿಂತ 'ಸೃಷ್ಟಿ'ಯನ್ನು ಒಮ್ಮೆ ನೋಡಿದ ವಿಶಾಲ್, ಅವನ ಮನದಲ್ಲಿ 'ಸೃಷ್ಟಿ'ಯ ಪ್ರಾರಂಬಿಕಾ ಹಂತದಿಂದ ಇಲ್ಲೀವರೆಗಿನ ಎಲ್ಲ ಬೆಳವಣಿಗೆಯ ಹಂತಗಳು,

ತೊಂದರೆ

ತಾಪತ್ರಯ,

ಖುಷಿ -ನೋವು ಎಲ್ಲವೂ ಹಾದು ಹೋದವು...


ಅಲ್ಲ ಅಸ್ತು ಚೆನ್ನಾಗಿದ್ದ 'ಸೃಷ್ಟಿ' ಯಾಕೆ ಹೇಗೆ ಆದಳು?

ಮನುಷ್ಯರನ್ನೇ ಕೊಲ್ಲುವಸ್ತು ಕಟುಕತನ ಹೇಗೆ ಬಂತು? 

ಇವಳಲ್ಲಿ ಪ್ರಾಣಿ ಸಹಜ ಗುಣಗಳಿಗಿಂತ ಮನುಜರ ಅಸೂಯೆ-ಕೋಪ- ಪ್ರತೀಕಾರ-ಹತಾಶೆ-ಯ ಭಾವಗಳೆ ಕಾಣುತ್ತಿವೆಯಲ್ಲ.. ವಿಶಾಲ್ ಯೋಚನಾ ಲಹರಿ ತುಂಡು ಮಾಡಲು 'ಸೃಷ್ಟಿ' ಹತ್ತಿರ ಬಂದು ಒಮ್ಮೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು, ನಂತರ ಒಮ್ಮೆ ತಿರುಗಿ ಸಿರಿ ಕಡೆಗೆ ನೋಡಿದಳು, ಹಾರಿ ಜೋರಾಗಿ ವಿಶಾಲ್ ಎದೆಗೆ ಒದ್ಡಳು, ಮಾರು ದೂರ ಹಾರಿ ಬಿದ್ದ ವಿಶಾಲ್ ಅಚ್ಚರಿಯಿಂದ 'ಸೃಷ್ಟಿ' ಕಡೆಗೆ ನೋಡಿದ.. ಅಬ್ಬಾ..!! ಏನು ಶಕ್ತಿ? ಎದೆ ಬಾಗದಲ್ಲಿ ಉಜ್ಜಿಕೊಳ್ಳುತ ನೋವಿಂದ ಮುಖ ಕಿವುಚಿದ....

ಮತ್ತೆ ಹಾರಿ ಬಂದು ಸಿರಿ ಯ ಮುಂದೆ ಬಗ್ಗಿ ಅವಳನ್ನು ಎತ್ತಿ ದೂರಕ್ಕೆ ಎಸೆದಳು, ನೋವಿನಿಂದ ಕಿರುಚುತ್ತಿದ್ದ ಸಿರಿ ಯ ಹೊಟ್ಟೆಯ ಮೇಲೆ ಕುಳಿತು ತನ್ನ ಬಾಲವನ್ನು ಎತ್ತಿದಳು, ವಿಶಾಲ್ ಇದನ್ನು ನೋಡುತ್ತಿದ್ದರೂ ಏಳಲು ಆಗುತ್ತಿಲ್ಲ, ಗನ್ನು ಮತ್ತು ಟಾರ್ಚ್ ಆಗಲೇ ದೂರದಲ್ಲಿ ಎಲ್ಲೋ ಬಿದ್ದು ಆಗಿದೆ.. ಏನಾರಾ ಮಾಡಬೇಕು ಮಾಡಬೇಕು, ನನ್ನ ಸಿರಿಯನ್ನು ಉಳಿಸಿಕೊಳ್ಳಬೇಕು....ಸುತ್ತ ಮುತ್ತ ನೋಡುತ್ತಿರಲು......
 
ಸಿರಿಗೂ ಗೊತ್ತಾಯ್ತು ವಿಶಾಲ್ ಎದ್ದು ಬಂದು ತನ್ನನ್ನು ಕಾಪಾಡುವುದು ಆಗಲಿಕ್ಕಿಲ್ಲ, ಒಮ್ಮೆ ಪಕ್ಕಕ್ಕೆ ಹೊರಾಳುತ್ತ ಹತ್ತಿರದಲ್ಲಿ ಇದ್ದ ಕಲ್ಲು ಒಂದನ್ನು ಕೈ ಚಾಚಿ ಎತ್ತಿಕೊಂಡಳು, ಅದನ್ನು ನಗುತ್ತಾ ನೋಡಿದ 'ಸೃಷ್ಟಿ'  ಆ ಕಲ್ಲನ್ನು ಎತ್ತಿದ ಕೈ ಮೇಲೆ ಫಟ್ ಅಂತ ಒಂದು ಏಟು ಹೊಡೆದಳು ...ನೋವಿಗೆ ಕಿರುಚಿದಳು ಸಿರಿ, 'ಸೃಷ್ಟಿ' ತನ್ನ ಬಾಲವನ್ನು ಎತ್ತಿ ಅದು ಸಿರಿ ಯ ಕೊರಳು ತಲುಪಿ...............ಸಿರಿ ಕಣ್ಣು ಮುಚ್ಚಿದಳು, ಇನ್ನೂ ತಮ್ಮನ್ನು ಕಾಪಾಡಲು ಯಾರಿಂದಲೂ ಸಾಧ್ಯ ಇಲ್ಲ... ನಾವೇ ಸೃಷ್ಟಿಸಿದ 'ಸೃಷ್ಟಿಯ ಕೈನಲ್ಲೇ ನಮ್ಮ ಸಾವು...:((
ಒಮ್ಮೆ ಕಣ್ಣು ತೆರೆದು 'ಸೃಷ್ಟಿ' ಯನ್ನು ನೋಡಿದಳು ಸಿರಿ, ಅವಳ ಕಣ್ಣುಗಳಲ್ಲಿ 'ಆಶಾ ಭಾವ' ಕಾಣಿಸಿತು... ಮತ್ತು ಅದಕ್ಕೆ ಕಾರಣ 'ಸೃಷ್ಟಿ' ಹಿಂದುಗಡೆ ಶಬ್ಧ ಮಾಡದೇ ಒಂದು ಕಟ್ಟಿಗೆ ಹಿಡಿದು ಬರುತ್ತಿರುವ ವಿಶಾಲ್.......


ಇದ್ದಕ್ಕಿದ್ದಂತೆ ಜೀವ ಭಯ ಹೋಗಿ  ಆಶಾಭಾವ ಬಂದ ಸಿರಿ ಕಡೆಗೆ ನೋಡಿ ಅನುಮಾನ ಬಂದು ಹಿಂದಕ್ಕೆ ತಿರುಗುವುದರೊಳಗೆ   ಬೆನ್ನ ಹಿಂದಿನಿಂದ ತೂರಿ ಹೊಟ್ಟೆ ಮುಂದುಗಡೆ  ಹಾದು ಬಂತು ಆ ಕಟ್ಟಿಗೆ........
ಸಂದೇಹದಿಂದೆಂಬಂತೆ ನೋಡುತ್ತಾ ಆ ಕಟ್ಟಿಗೆ ತೂರಿ ಬಂದ ಕಡೆಗೆ ನೋಡಿದಳು 'ಸೃಷ್ಟಿ' ಅಲ್ಲಿ ಧಾರಾಕಾರವಾಗಿ ಸುರಿಯುತ್ತಿದೆ ರಕ್ತ......


ಸಿರಿ 'ಸೃಷ್ಟಿ'ಯನ್ನು ಜೋರಾಗಿ ಪಕ್ಕಕೆ ತಳ್ಳಿ ಎದ್ದು  ನಿಲ್ಲುತ್ತಿರಲು, 'ಸೃಷ್ಟಿ' ನೋವಿನಿಂದ  ಅಸ್ಟೆ ಕ್ರೋಧದಿಂದ ವಿಶಾಲ್ ಕಡೆಗೆ ನೋಡುತ್ತಾ, ತನ್ನ ಹೊಟ್ಟೆಯಲ್ಲಿ ತೂರಿದ್ದ ಆ ಕಟ್ಟಿಗೆಯನ್ನು ಜೋರಾಗಿ ಎಳೆದು ಕಿತ್ತಿದಳು....ಮತ್ತ್ತೊಮ್ಮೆ ನೋವಿನಿಂದ ಕಿರುಚಿ ಒಮ್ಮೆ ಕೆಳಗೆ ನೋಡಿದಳು ಅಲ್ಲಿ ಧಾರಾಕಾರವಾಗಿ ಹರಿಯುತ್ತಿದೆ ರಕ್ತ, ಕೋಪದ ಜ್ವಾಲೆ ಇನ್ನಸ್ತು ಹೆಚ್ಚಾಗಿ ತೂರಾಡುತ್ತಾ ಹತ್ತಿರ ಬಂದು ಒಮ್ಮೆ ಜೋರಾಗಿ ಒದ್ಡಳು ವಿಶಾಲ್ ಗೆ...
 
ಅಸ್ತು ದೂರ ಹಾರಿ ಬಿದ್ದ ವಿಶಾಲ್, ಓಡುತ್ತ ಹೋಗಿ ತನ್ನ ಕೈನಲ್ಲಿನ ಕಟ್ಟಿಗೆ ಅವನ ಹೊಟ್ಟೆಗೆ ತಿವಿಯ ಹೋದಳು.......ಅಸ್ತರಲ್ಲಿ ಸಿರಿ ಎಚ್ಚೆತ್ತು ಓಡಿ ಬಂದು 'ಸೃಷ್ಟಿ'ಯನ್ನು ಪಕ್ಕಕ್ಕೆ ತಳ್ಳಿದಳು, ಅವಳು ಏಳಲು ಪ್ರಯತ್ನಿಸುತ್ತಿರುವಾಗಲೇ ಅಲ್ಲೇ ಪಕ್ಕದಲ್ಲಿ ಬಿದ್ದಿದ ಒಂದು ಸೈಜುಗಲ್ಲು ಎತ್ತಿಕೊಂಡಳು, 'ಸೃಷ್ಟಿ' ಮತ್ತು ವಿಶಾಲ್  ಒಮ್ಮೆಲೇ ಸಿರಿ ಕಡೆಗೆ ನೋಡಿದರು.... 'ಸೃಷ್ಟಿ' ಕಣ್ಣುಗಳಲ್ಲಿ ನನ್ನನು ಕ್ಷಮಿಸು ಬಿಟ್ಟು ಬಿಡು ಎಂಬ ಭಾವ.. ಅದೇ ಭಾವ ವಿಶಾಲ್ ಕಣ್ಣಿನಲ್ಲೂ ಮುಖದಲ್ಲೂ.... ಸಿರಿ ಬೇಡ ಹಾಗೆ ಮಾಡಬೇಡ, 'ಸೃಷ್ಟಿ' ನಮ್ಮವಳು, ಅವಳನ್ನು ಸೃಷ್ಟಿಸಿದ್ದೆ ನಾವು, ಈಗ ನಾವೇ ಅವಳನ್ನು ಸಾಯಿಸುವುದು ಸರಿಯಲ್ಲ ಬಿಟ್ಟು ಬಿಡು......
------------------------------------------------------------------------------------------------------------
'ಸೃಷ್ಟಿ'ಯ ಅಂತ್ಯ-
ಕೊನೆಯ ಭಾಗ- ಎರಡು ವಿಭಿನ್ನ ಅಂತ್ಯಗಳು-
ಸಂತೋಷದ ಅಂತ್ಯ
ದುಖದ ಅಂತ್ಯ
 ನಿಮಗೆ ಬೇಕಾದದ್ದು  ಆಯ್ದುಕೊಳ್ಳಿ- ಓದಿ.....!! 
ಹಾಗೆ ನೋಡಿದರೆ ನಾ ಈ ಸರಣಿಯ ಅಂತ್ಯವನ್ನು ದುಖಕರಾಗಿಯೇ ಕೊನೆಗಾಣಿಸಬೇಕು ಅಂದುಕೊಂಡಿದ್ದೆ...!! ಆದರೆ ಸರಣಿಗಳಿಗೆ ಪ್ರತಿಕ್ರಿಯಿಸಿದ  'ಪ್ರತೀಕ್' ಮತ್ತು 'ದತ್ತಾತ್ರೇಯ' ಅವರ ಮನದ ತುಡಿತ ಮತ್ತು ಇನ್ನೂ ಕೆಲವರ ಪ್ರತಿಕ್ರಿಯೆಗಳನ್ನು ಗಮನದಲ್ಲಿ ಇಟ್ಟುಕೊಂಡು
ಈ ಸರಣಿಯ ಅಂತ್ಯದಲ್ಲಿ ಹ್ಯಾಪಿ ಮತ್ತು ಸ್ಯಾಡ್ ಎಂಡಿಂಗ್ ಬರೆದು ಎಲ್ಲರಿಗೂ ಸಮಾಧಾನಗೊಳಿಸಿರುವೆ...:()))
------------------------------------------------------------------------------------------------------------
ಸಂತೋಷದ ಅಂತ್ಯ:
ಸಂದೇಹದಿಂದೆಂಬಂತೆ ನೋಡುತ್ತಾ ಆ ಕಟ್ಟಿಗೆ ತೂರಿ ಬಂದ ಕಡೆಗೆ ನೋಡಿದಳು 'ಸೃಷ್ಟಿ' ಅಲ್ಲಿ ಧಾರಾಕಾರವಾಗಿ ಸುರಿಯುತ್ತಿದೆ ರಕ್ತ......
 
ಸಿರಿ 'ಸೃಷ್ಟಿ'ಯನ್ನು ಜೋರಾಗಿ ಪಕ್ಕಕೆ ತಳ್ಳಿ ಎದ್ದು  ನಿಲ್ಲುತ್ತಿರಲು, 'ಸೃಷ್ಟಿ' ನೋವಿನಿಂದ  ಅಸ್ಟೆ ಕ್ರೋಧದಿಂದ ವಿಶಾಲ್ ಕಡೆಗೆ ನೋಡುತ್ತಾ, ತನ್ನ ಹೊಟ್ಟೆಯಲ್ಲಿ ತೂರಿದ್ದ ಆ ಕಟ್ಟಿಗೆಯನ್ನು ಜೋರಾಗಿ ಎಳೆದು ಕಿತ್ತಿದಳು....ಮತ್ತ್ತೊಮ್ಮೆ ನೋವಿನಿಂದ ಕಿರುಚಿ ಒಮ್ಮೆ ಕೆಳಗೆ ನೋಡಿದಳು ಅಲ್ಲಿ ಧಾರಾಕಾರವಾಗಿ ಹರಿಯುತ್ತಿದೆ ರಕ್ತ, ಕೋಪದ ಜ್ವಾಲೆ ಇನ್ನಸ್ತು ಹೆಚ್ಚಾಗಿ ತೂರಾಡುತ್ತಾ ಹತ್ತಿರ ಬಂದು ಒಮ್ಮೆ ಜೋರಾಗಿ ಒದ್ಡಳು ವಿಶಾಲ್ ಗೆ... ಅಸ್ತು ದೂರ ಹಾರಿ ಬಿದ್ದ ವಿಶಾಲ್, ಓಡುತ್ತ ಹೋಗಿ ತನ್ನ ಕೈನಲ್ಲಿನ ಕಟ್ಟಿಗೆ ಅವನ ಹೊಟ್ಟೆಗೆ ತಿವಿಯ ಹೋದಳು.......
 
 
ಅಸ್ತರಲ್ಲಿ ಸಿರಿ ಎಚ್ಚೆತ್ತು ಓಡಿ ಬಂದು 'ಸೃಷ್ಟಿ'ಯನ್ನು ಪಕ್ಕಕ್ಕೆ ತಳ್ಳಿದಳು, ಅವಳು ಏಳಲು ಪ್ರಯತ್ನಿಸುತ್ತಿರುವಾಗಲೇ ಅಲ್ಲೇ ಪಕ್ಕದಲ್ಲಿ ಬಿದ್ದಿದ ಒಂದು ಸೈಜುಗಲ್ಲು ಎತ್ತಿಕೊಂಡಳು, 'ಸೃಷ್ಟಿ' ಮತ್ತು ವಿಶಾಲ್  ಒಮ್ಮೆಲೇ ಸಿರಿ ಕಡೆಗೆ ನೋಡಿದರು.... 'ಸೃಷ್ಟಿ' ಕಣ್ಣುಗಳಲ್ಲಿ ನನ್ನನು ಕ್ಷಮಿಸು ಬಿಟ್ಟು ಬಿಡು ಎಂಬ ಭಾವ.. ಅದೇ ಭಾವ ವಿಶಾಲ್ ಕಣ್ಣಿನಲ್ಲೂ ಮುಖದಲ್ಲೂ.... ಸಿರಿ ಬೇಡ ಹಾಗೆ ಮಾಡಬೇಡ, 'ಸೃಷ್ಟಿ' ನಮ್ಮವಳು, ಅವಳನ್ನು ಸೃಷ್ಟಿಸಿದ್ದೆ ನಾವು, ಈಗ ನಾವೇ ಅವಳನ್ನು ಸಾಯಿಸುವುದು ಸರಿಯಲ್ಲ ಬಿಟ್ಟು ಬಿಡು......


ಸಿರಿ ಹೃದಯವೂ ಅದನ್ನೇ ಹೇಳುತ್ತಿತ್ತು, 'ಸೃಷ್ಟಿ' ತನಗೆ ಮಗಳ ಸಮಾನ, ಅವಳ ಸೃಷ್ಟಿಯಲ್ಲಿ ನನ್ನದೂ ಪಾಲಿದೆ, ಅವಳ ಬೆಳವಣಿಗೆಯ ಎಲ್ಲ ಹಂತಗಳಲ್ಲಿ  ತನ್ನ ಸ್ವಂತ ಮಗಳಂತೆ ಹೆತ್ತು ಹೊತ್ಟಂತೆ  ಆರೈಕೆಯನ್ನು ಅಕ್ಕರೆಯಿಂದ ಮಾಡಿರುವೆ.. ಅವಳನ್ನು ಎತ್ತಿದ ಆಡಿಸಿದ ಕೈಗಳಿಂದಲೇ ಅವಳ ಮೇಲೆ ಕಲ್ಲು ಎತ್ತ್ತಿ ಹಾಕಿ ಸಾಯಿಸಲೇ?....
 
ಅಸ್ತರಲ್ಲಿ 'ಸೃಷ್ಟಿಯ ಹೊಟ್ಟೆಯಲ್ಲಿ ಆಗಿದ್ದ ಗಾಯ ಮಾದು ಅಲ್ಲಿ ಚರ್ಮ ಕೂಡಿಕೊಂಡು ರಕ್ತ ಹರಿಯುವುದು ನಿಂತಿತು... ಇದನ್ನು ಅಚ್ಚರಿಯಿಂದ ನೋಡಿದಳು 'ಸೃಷ್ಟಿ', ವಿಶಾಲ್ ಮತ್ತು ಸಿರಿ ಗೆ ಗೊತ್ತಾಯ್ತು, ಇಯವಳನ್ನು ಸೃಷ್ಟಿ ಮಾಡಿದ್ದೇ ಮನುಷ್ಯರಿಗೆ ಬರುವ ಹಲವು ರೋಗಗಳಿಗೆ-ಆಗುವ ಗಾಯಗಳಿಗೆ  ಪ್ರತ್ಯವಷಾಧಿ-ಔಷಧಿ  ಉತ್ಪಾದಿಸಲು, ನಮ್ಮ  ಪ್ರಾಜೆಕ್ಟ್ ವರ್ಕ್ ಔಟ್ ಆಯ್ತು...

ಕೈನಲ್ಲಿನ ಕಲ್ಲು ದೂರ ಎಸೆದಳು ಸಿರಿ.. 'ಸೃಷ್ಟಿ' ಮೇಲೆದ್ದು ಬಂದು ಅಪ್ರಾಧಿ ಭಾವನೆಯಿಂದ ಎಂಬಂತೆ ತಲೆ ತಗ್ಗಿಸಿ ಕಣ್ಣೀರು ಹಾಕುತ್ತಾ ನಿಂತಳು..ಅವಳ ಗಲ್ಲ ಹಿಡಿದು ಮೇಲಕ್ಕೆ ಎತ್ತಿ ಅವಳ ಹಣೆಗೆ ಮುತ್ತು ಇಕ್ಕಿ ಅಪ್ಪಿಕೊಂಡಳೂ ಸಿರಿ... ಅವಳ ಬಿಸಿ ಅಪ್ಪುಗೆಯಲ್ಲಿ ಕರಗಿದಳು 'ಸೃಷ್ಟಿ', ಇದನ್ನು ನೋಡುತ್ತಾ ವಿಶಾಲ್ ಕಣ್ಣಲ್ಲೂ ಹನಿಗಳು ಮೂಡಿದವು, ಎದ್ದು ಹತ್ತಿರ ಬಂದು 'ಸೃಷ್ಟಿ' ಮತ್ತು ಸಿರಿಯ ಹೆಗಲು ಬಳಸಿ ನಿಂತ.... ಸ್ವಲ್ಪ ಹೊತ್ತಿನ ನಂತರ ಏನೂ ಆಗಿಲ್ಲ ಎಂಬಂತೆ  ಅಲ್ಲಿಂದ ಹೊರಟು ತಮ್ಮ ಕಾರಿನಲ್ಲಿ ಕುಳಿತು ಮನೆ ಕಡೆ ಹೊರಟರು..
 
ತಮ್ಮ ಬೆಡ್ ಬಿಟ್ಟು ದೂರ ಮಲಗಿದ ವಿಶಾಲ್
ಒಂದೇ ಬೆಡ್ ನಲ್ಲಿ 'ಸೃಷ್ಟಿ' ಮತ್ತು ಸಿರಿ ಅಪ್ಪಿಕೊಂಡು ಮಲಗಿದರು..
 
ಆದಾಗಲೇ ಸಿರಿ ಮತ್ತು ವಿಶಾಲ್ ನಿರ್ಧರಿಸಿ ಆಗಿತ್ತು.. ಇನ್ನೂ ಇಲ್ಲಿರುವುದು ಬೇಡ, ನಾವ್ ಮೂವರು ಈ ಮನೆ ಮಾರಿ ಆದಸ್ತು ಜನರ ಸಂಪರ್ಕವೇ ಇಲ್ಲದ  ದೂರದ ಕುಗ್ರಾಮ ಒಂದರಲ್ಲಿ ಮನೆ ಕಟ್ಟಿಸಿ ಅಲ್ಲಿ ಅಜ್ಞಾತರಂತೆ ಬದುಕಬೇಕು.. ಆ ತರಹದ ಸ್ಥಳ ಎಲ್ಲಿದೆ? ಯೋಚಿಸುತ್ತಿರುವಾಗ  ಪಸ್ಚಿಮ ಘಟ್ಟ ಪ್ರದೇಶದಲ್ಲಿ ಸರಿಯಾದ ರಸ್ತೆ ವಿದ್ಯುತ ಸಂಪರ್ಕ ಇಲ್ಲ ಅಂತ ಆದಾಗಲೇ ಇದ್ದ ತಮ್ಮ ವಂಶಸ್ತರ ಮನೆಯನ್ನು ಕೊಳ್ಳಲು ಯಾರಾದರೂ ಇರುವರೆ? ಎಂದು ವಿಚಾರಿಸಿದ್ದ ತಮ್ಮ ಸ್ನೇಹಿತ ಗಜೇಂದ್ರನ ನೆನಪು ಬಂದು ಅವನಿಗೆ ಫೋನಾಯಿಸಿ ಆ ಮನೆಯನ್ನು ತಾವೇ ಕೊಳ್ಳುವುದಾಗಿ ತಿಳಿಸಿದರು...
 
ಮಾರನೆ ದಿನವೇ ಬೆಂಗಳೂರಿನ ತಮ್ಮ ಮನೆಯನ್ನು ಆ ಹಳೆಯ ಮನೆಗೆ ಅದಲು ಬದಲು ಮಾಡಿಕೊಂಡು ಅಲ್ಲಿಗೆ ಪ್ರಯಾಣ ಬೆಳೆಸಿದರು.... ಆ ಪ್ರದೇಶ ತಲುಪಿ-ತಮ್ಮ ಎಲ್ಲ ವಸ್ತುಗಳನ್ನು ಇಳಿಸಿ.....ಮನೆ ಮೇಲುಗಡೆ ಆದಸ್ತು ಸೂರ್ಯನ ಬೆಳಕು ಬೀಳುವ ಕಡೆ ಆದಾಗಲೇ ಸೋಲಾರ್ ಫಲಕಗಳನ್ನು ಅಳವಡಿಸಿದ್ದರಲ್ಲ.. ಅದರ ಉಪ್ಯೋಗದಿಂದ ಮನೆಗೆ ಬೆಳಕು ಟೀ ವಿ ಮತ್ತ್ ಕಂಪ್ಯೂಟರ್ ಗೆ ವಿದ್ಯುತ್ ಸಹಾ ಸಿಗುತ್ತಿತ್ತು...

ರಾತ್ರಿ ಟೀ ವಿ ನೋಡುವಾಗ ಬ್ರೇಕೀಂಗ್ ನ್ಯೂಜ್ ಅಂತ ನಿನ್ನೆ ರಾತ್ರಿ ನಗರದಲ್ಲಿ ಆದ ಭಯಾನಕ ಕೊಲೆಗಳ ಬಗ್ಗೆ ಸುದ್ಧಿ ಬಿತ್ತರಿಸುತ್ತಿದ್ದರು.... ಗುರುತು ಸಿಗಲು ಆಗದ ಶವಗಳ ಬಗ್ಗೆ ಅವನ್ನು ಗುರುತಿಸುವವರಿಗಾಗಿ ಒಂದು ನಂಬರ್ ಕೊಡುತ್ತಿದ್ದರು... ಒಂದೊಮ್ಮೆ ಪೊಲೀಸರಿಗೆ ಆ ಬಗ್ಗೆ ತಿಳಿದು ಇಲ್ಲಿಗೆ ಬಂದರೆ ಎಂಬ ಸಂದೇಹ ಸಿರಿ ವಿಶಾಲ್ ಮನದಲ್ಲಿ ಬಂತು...
 
೨-೩ ವಾರ ಆದರೂ ಯಾರೊಬ್ಬರೂ ಆ ಶವಗಳನ್ನು ಗುರುತಿಸದೇ, ಪೊಲೀಸರು ಆನ್ ಸಾಲ್ವ್ಡ್ ಕೇಸ್ ಅಂತ ಆ ಫೈಲನ್ನು ಮೂಲೆಗೆ ತಳ್ಳಿದರು..ಮೊದಲೇ ಡಾ: ಕಣ್ನನ್ ಅವಿವಾಹಿತರು, ಇನ್ನೂ ಅವರ  ಡ್ರೈವರ್ ಸಹಾ ಚಿಕ್ಕಂದಿನಿಂದಲೇ ಅನಾಥನಾಗಿ ಡಾ: ಕಣ್ನನ್ ಬಳಿ ಸಹಾಯ ಯಾಚಿಸಿ ಬಂದು ಅವರ ಹತ್ತಿರ ಕೆಲಸಕ್ಕೆ ಸೇರಿ ತನಗೆ ಮಡುವೆಯೇ ಬೇಡ ಅಂತ ಆದಾಗಲೇ ೫೦ ರ ಅಂಚು ತಲುಪಿದ್ದ.. ಇನ್ನೂ 'ಸೃಷ್ಟಿ' ಬಯೋ ಎಂಜಿನೀಯರಿಂಗ್ ಕಂಪನಿ ಗೆ ಕೆಲವೇ ದಿನಗಳ ಹಿಂದೆಯಸ್ತೆ ರಾಜೀನಾಮೆ ಬಿಸಾಕಿದ್ದ ಡಾ: ಕಣ್ನನ್, ಅಸ್ತು ಒಳ್ಳೆಯ ಸಂಬಳ ಅಧಿಕಾರ ಇದ್ದು ಯಾಕೆ ಸಡನ್ ಆಗಿ ಕಂಪನಿ ತೊರೆದರು ಅಂತ ರಹಸ್ಯ ಕಾರ್ಯಾಚರಣೆ ನಡೆಸಿದಾಗ ಬೆಳಕಿಗೆ ಬಂದದ್ದು-ಅವರು ಈಗ ತಾವೇ ಒಂದು ಕಂಪನಿ ಶುರು ಮಾಡಬೇಕು ಅಂದುಕೊಂಡಿದ್ದರು ಅಂತ... ನಮಗೆ ಪ್ರತಿ ಸ್ಪರ್ಧಿಯೇ ಅಂತ ಅಸೂಯೆಗೊಂಡಿದ್ದ ಆ ಕಂಪನಿಯವರೂ ಪೊಲೀಸರಿಗೆ ಕರೆ ಮಾಡಲಿಲ್ಲ...
 
ಹೀಗಾಗಿ ಡಾ: ಕಣ್ನನ್ ಮತ್ತು ಡ್ರೈವರ್ ಸಾವು ಚಿದಂಬರ ರಹಸ್ಯವೇ ಆಗಿ ಉಳಿಯಿತು..ಪೊಲೀಸರಿಗಂತು ಅವರಿಬ್ಬರ ಹೆಸರು -ಊರು ಏನೂ ಗೊತ್ತಾಗದೇ ಬಗೆ ಹರಿಯದ ಕೇಸು ಅಂತ ಷರಾ ಬರೆದು ಆ ಶವಗಳನ್ನು ಹೂಳಿ   ಹಾಕಿದರು.. ಶವಗಳ ಜೊತೆ ಅವರ ವಿವರವೂ ಮಣ್ಣು ಸೇರಿತು..:((


ಮೂರು ತಿಂಗಳ  ನಂತರ- 'ಸೃಷ್ಟಿ' ಯ ಈ ಮುಂಚೆ ಪ್ರಾಣಿಗಳಂತೆ ಇದ್ದ ಕಾಲುಗಳು ಪಕ್ಷಿಗಳ ತರಹದ ಕೈ ಗಳು  ಈಗ ಆಲ್ ಮೋಸ್ಟ್ ಮನುಷ್ಯ ಸಹಜ ಅವಯವಗಳಾಗಿ ಬದಲಾಗಿದ್ದವು... ತಲೆ ಮೇಲೆ ಕೂದಲೂ ಮೂಡತೊಡಗಿದ್ದವು...

ಅವಳು ಈಗ 'ವಿಶ್ವ ಸುಂದರಿಗೆ' ಸೆಡ್ಡು ಹೊಡೆಯುವಂತೆ ಆಗಿದ್ದಳು...!!
 
ಒಂದು ದಿನ ...
 
ವಿಶಾಲ್ ಮತ್ತು ಸಿರಿ ಮಾತಾಡಿಕೊಳ್ಳುತ್ತಿದ್ದರು- ನಮಗೆ ಅಳಿಯ ಆಗಿ ಬರುವವನು ಮನೆ ಅಳಿಯನೇ ಆಗಬೇಕು, 'ಸೃಷ್ಟಿ' ನಮ್ಮೊಡನೆಯೇ ಇರಬೇಕು ಸದಾ....ಆ ತರಹ ಒಂದು ಪತ್ರಿಕಾ ಪ್ರಕಟಣೆ ಕೊಡೋಣ.... ಹೊರಗೆ ನಿಂತು ಪಸ್ಚಿಮ ಘಟ್ಟದ  ಸೌಂದರ್ಯವನ್ನ್ ವೀಕ್ಸಿಸುತ್ತಿದ್ದ  'ಸೃಷ್ಟಿ' ನಗುತ್ತಾ ಬಂದು ಸಿರಿಯ ತೊಡೆ ಮೇಲೆ ಮಲಗಿದಳು-ಮತ್ತು ಹೇಳಿದಳು-

ನಾನೇ ಸೆಲೆಕ್ಟ್ ಮಾಡುವೆ... ..

ಮೂವರೂ ಸೇರಿ  ಜೋರಾಗಿ ನಕ್ಕರು...

 


>>> ನೋಡ್ರಪ್ಪ- ನಿಮ್ಮಲ್ಲಿ ಯಾರಾದರೂ  'ಬ್ಯಾಚಲರ್' ಇದ್ರೆ-ಪಸ್ಚಿಮ ಘಟ್ಟದ ಆ ಪ್ರದೇಶಕ್ಕೆ ಹೋಗಿ...'ಸೃಷ್ಟಿ'ಯ ಪರೀಕ್ಷೇಲಿ ಪಾಸಾಗಿ.....ಅವಳನ್ನು ಮದುವೆಯಾಗಿ ನೀರೋಗಿಯಾಗಿರಿ... ಶತಾಯುಷಿ ಆಗಿ....:()).
 

 

Rating
No votes yet

Comments