' ನಿಗೂಢ ಕಥೆಯನ್ನಾಧರಿಸಿ ' ......

' ನಿಗೂಢ ಕಥೆಯನ್ನಾಧರಿಸಿ ' ......

ಪಾಟೀಲರ ' ನಿಗೂಢ ' ಕಥಾನಕದ ನಾಯಕ ಕೊರಗನ ಹಠಾತ್ ಕಣ್ಮರೆ ಕುರಿತು ಸಂಪದಿಗರು ಕುತೂಹಲ ವ್ಯಕ್ತ ಪಡಿಸಿದ್ದು ಇದು ನನ್ನನ್ನೂ ಸಹ ಚಿಂತನೆಗೆ ಹಚ್ಚಿತು. ಆ ಚಿಂತನೆಯ ಫಲಶೃತಿ ಈ ಲೇಖನ. ಸುಮಾರು 70-80 ವರ್ಷ ಪ್ರಾಯದ ಅನೇಕರು ವೃದ್ಧಾಪ್ಯ ಸಂಬಂಧಿತ ತೊಂದರೆಗೆ ಒಳಪಡುತ್ತಾರೆ. ವಿಶೇಷವಾಗಿ ಮರೆಗುಳಿತನ ಹೆಚ್ಚಿನವರಿಗೆ ಬಾಧಿಸುತ್ತದೆ. ಈ ಮರೆಗುಳಿತನ ( ಡಿಮೆನ್ಸಿಯಾದ ) ಘೋರ ಸ್ವರೂಪವೆ' ಅಲ್ಝಮೈರ್ 'ಕಾಯಿಲೆಯೆಂದು ವೈದ್ಯರು ಗುರುತಿಸುತ್ತಾರೆ. ಈ ಮರೆವು ರೋಗಕ್ಕೆ ಒಳಪಟ್ಟ ಹಿರಿಯ ನಾಗರಿಕರ ಬಗ್ಗೆ ಮನೆಯವರು ನಿಗಾ ಮಾಡಬೇಕಾಗುತ್ತದೆ. ಒಬ್ಬಂಟಿಯಾಗಿ ಅವರು ಪ್ರತಿದಿನ ಎಲ್ಲಾದರೂ ಹೊರಗೆ ತಿರುಗಾಡಲು ಹೋಗುತ್ತಿರುತ್ತಾರೆ, ಅಂತಹ ಸಂಧರ್ಭಗಳಲ್ಲಿ ಒಮ್ಮೆಲೆ ಈ ಮರೆವು ರೋಗದ ಬಾಧೆ ತಟ್ಟಿದರೆ ಅವರಿಗೆ ದಿನ ನಿತ್ಯದ ಜಾಗದ ಅರಿವಿಲ್ಲದೆ, ಯಾರನ್ನೂ ಗುರುತಿಸ ಲಾಗದೆ ಏಕಮುಖಿಯಾಗಿ ನಡೆದುಕೊಂಡು ಹೋಗುತ್ತಿರುತ್ತಾರೆ. ತಾನು ಎಲ್ಲಿಗೆ ಹೊರಟಿರುವೆಎಂಬ ಅರಿವಿಲ್ಲದೆ ತನ್ನತಾನೆ ಮರೆತುಕೊಂಡು ಅಲೆಮಾರಿಯಾಗಿ ಊರೂರು ಅಲೆಯುತ್ತ ತಿರುಗುವ ಇಂತಹವರ ಸಾಕಷ್ಟು ಪ್ರಕರಣಗಳ ಬಗ್ಗೆ ಕೇಳಿದ್ದೇವೆ ಮತ್ತು ಓದಿದ್ದೇವೆ. ಇಂತಹವರು ತಮ್ಮ ಹೆಸರನ್ನು ಸಹ ಮರೆತಿರುತ್ತಾರೆ, ಹೆಂಡತಿ ಮಕ್ಕಳಿಗೆ ನೀವು ಯಾರು ಎಂದು ಪ್ರಶ್ನಿಸುತ್ತಾರೆ. ಹಾಗಾಗಿ ಅತಿ ವೃದ್ಧಾಪ್ಯ ತಲುಪಿದ ವ್ಯಕ್ತಿಗಳನ್ನು ಸಣ್ಣ ಮಕ್ಕಳಂತೆಯೆ ನೋಡಿಕೊಳ್ಳಬೇಕಾಗುತ್ತದೆ. ಅವರನ್ನು ಏಕಾಂಗಿಯಾಗಿ ಎಂದೂ ಸಹ ಬಿಟ್ಟಿರಬಾರದು. ರಾತ್ರಿಯ ವೇಳೆಯೂ ಸಹ ಅವರ ಬಗ್ಗೆ ಹೆಚ್ಚಿನ ನಿಗಾವಹಿಸ ಬೇಕಾಗುತ್ತದೆ. ಅವರು ಯಾವ ತಪ್ಪನ್ನು ಮಾಡಿದರೂ ಸಿಡುಕದೆ ಅವರ ಆರೈಕೆ ಮಾಡಬೇಕಾಗುತ್ತದೆ. ನಾನು ಈ ಮರೆಗುಳಿತನದ ಬಗ್ಗೆ ಇಷ್ಟೆಲ್ಲ ಬರೆಯಬೇಕಾದ ಕಾರಣ ಪಾಟೀಲರು ಬರೆದ 'ನಿಗೂಢ' ಕಥೆಯ ಅಂತ್ಯ ನಾವೇ ಹುಡುಕಿಕೊಳ್ಳುವ ಪ್ರಸಂಗವೊದಗಿದ ಕಾರಣವಾಗಿದೆ. ಕಥೆಯಲ್ಲಿ 80 ರ ಪ್ರಾಯದ ಕೊರಗನು ತನ್ನ ಊರವರನ್ನು ತೊರೆದು ಯಾವ ವಿಷಯಾಸಕ್ತಿಯನ್ನು ಹೊಂದದೇ ವೈರಾಗ್ಯ ಜೀವನ ನಡೆಸುತ್ತಿದ್ದನು. ಒಂದು ದಿನ ಇದ್ದಕ್ಕಿದ್ದಂತೆ ಊರಿನಿಂದ ಕಣ್ಮರೆಯಾಗುತ್ತಾನೆ. ಅವನ ಕಣ್ಮರತೆಗೆ ಸಂಪದಿಗರು ಅನೇಕ ಅಭಿಪ್ರಾಯಗಳನ್ನು ತಿಳಿಸಿದರಾದರೂ ನನಗೆ ತೋಚಿದ್ದು ಈ ಮರೆಗುಳಿತನ ( ಡಿಮೆನ್ಷಿಯಾ ) ಕಾಯಿಲೆಗೆ ತುತ್ತಾದನೆ ಎನ್ನುವದು ನನ್ನ ಅನಿಸಿಕೆ. ವಿಷಯ ಇಷ್ಟೆ, ಹೊನ್ನೆ ಮರೆದ ಕೆಳಗೆ ಚಪ್ಪಲಿಗಳನ್ನು ಕಳಚಿಟ್ಟು ವಿಶ್ರಮಿಸು ತ್ತಿರುವಾಗ ಈ ಮರೆಗುಳಿತನ ಕಾಯಿಲೆ ಆತನನ್ನು ತೀವ್ರವಾಗಿ ಬಾಧಿಸಿ ಆತನಿಗೆ ತಾನು ಯಾರು, ತಾನು ಎಲ್ಲಿದ್ದೇನೆ? ಎಂಬುವುದು ಸಂಪೂರ್ಣ ಮರೆತು ತನ್ನ ಕಣ್ಣೆದುರಿಗೆ ಕಂಡ ದಾರಿಯನ್ನು ಹಿಡಿದು ಅದು ಎಲ್ಲಿಗೆ ಕರೆದುಕೊಂಡು ಹೋಯಿತೋ ಅಲ್ಲಿಗೆ ಅವನು ತನ್ನ ಏಕಾಂಗಿ ಪಯಣ ಬೇಳೆಸಿದ್ದಾಗಿರಬಹುದು. ತನ್ನ ತಾನೇ ಕಳೆದುಕೊಂಡು ನಂದಿಗೊಪ್ಪ ಗ್ರಾಮವನ್ನೂ ಮತ್ತೂ ಊರ ಜನರನ್ನೂ ಕಳೆದುಕೊಂಡು ಬೇರೆ ಊರಲ್ಲಾಗಲಿ ಅಥವಾ ಕಾಡು ಮೇಡುಗಳಲ್ಲಿ ಅಲೆಯುತ್ತಿರ ಬಹುದು. ಹಾಗಾಗಿ ಕೊರಗ ಒಂಟಿಯಾಗಿ ಬಂದ ಒಂಟಿಯಾಗಿ ಬರಿಗಾಲಲ್ಲಿ ನಡೆದ, ಇದು ವಾಸ್ತವವಾಗಿರಬಹುದೆಂದು ನನ್ನ ಅನಿಸಿಕೆ. ಸಂಪದ ಸ್ನೇಹತರೆ ನಿಮಗೆ ಅನಿಸಿದ್ದನ್ನು ಅಭಿವ್ಯಕ್ತಿಸಿ ಕೊರಗನ ಕಥಾ ಮಾಲಿಕೆಯನ್ನು ಮುಂದು ವರೆಸಿ. ಚಿತ್ರ ಕೃಪೆ ( Dementia.org - Causes, Symptoms, Test, Treatment, Prevention http://www.dementia.org/

Comments