ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫
ನಿರ್ಮಾಪಕ ಕಂ ನಾಯಕನಿಗೆ ತಾ ಈ ಬಿಲ್ಡಿಂಗ್ನಾ ಇಂದ ಆ ಬಿಲ್ಡಿಂಗ ಗೆ ...... ಒಂದೇ ನೆಗೆತಕ್ಕೆ ಅಂತ ಕೇಳಿ ಜೀವವೇ ಬಾಯಿಗೆ ಬಂದ್ ಹಾಗಾಯ್ತು.
ನಿರ್ದೇಶಕರೆ ನನಗೆ ಎತ್ತರದ ಬಿಲ್ಡಿಂಗ್ ಅಂದ್ರೆ ಭಯ ಅದ್ಕೆ ಯಾರಾರ ದೂಪ್ ಇತ್ತು ಮಾಡಿದ್ರೆ ಆಯ್ತು ಅಂದ್ರು.
ಹಾಗೆ ಮಾಡಬಹುದು ಆದರೆ ಅದು 'ನೀವೇ' ಮಾಡಿದರೆ ಚೆನಿರ್ತೆ ..
ಅವ್ರ ಹುಮ್ಮಸ್ಸು ತುಂಬುವ ಮಾತು ಕೇಳಿ ನಿರಮಪಕ ರೆಡಿ ಆದ.
ನಿರ್ಮಾಪಕ ಕಂ ನಾಯಕನ ಸೊಂಟಕ್ಕೆ ಮತ್ತು ಬುಜಕ್ಕೆ ಸುರಕ್ಚ ಸಾಧನ ಕಟ್ಟಿ ಕ್ರೇನ್ ಮುಖಾಂತರ ಈಬಿಲ್ಡಿಂಗ್ ಇಂದ ಆ ಬಿಲ್ಡಿಂಗ್ ಗೆ ತಲುಪಿಸುತ್ತಿರ್ವಾಗ ಹೆಚ್ಚು ಕಡಿಮೆ ತನ್ ಎತ್ತರದಲ್ಲಿ ಪಕ್ಕದಲ್ಲೇ ಹಾರುತಿದ್ದ 'ಹದ್ದು ' ಒಂದು, ಇದೇನೋ 'ವಿಚಿತ್ರ ' ಈ ಎತ್ತರದಲ್ಲಿ ಇಲ್ಲಿ ನೇತಾಡುತ್ತಿದೆ ಅಂತ ಬಂದು ನಿರ್ಮಾಪಕ ಕಂ ನಟನ ಹೆಗಲ ಮೇಲೆ ಕುಳಿತುಕೊಳಬೇಕೆ :((( ಅದ ನೋಡಿದ ನಿರ್ಮಾಪಕ ಕಂ ನಾಯಕನಿಗೆ ತಲೆ ತಿರುಗಿ ಮೈ ಎಲ್ಲ ಜಲಧರಿಸಿ ಗೋಣು ಕೆಳ ಹಾಕಿ ಕಣ್ಣು ಮುಚ್ಚಿಕೊಂಡ!! ತಕ್ಷಣ ನಿರ್ದೇಶಕರು ಕಟ್ ಕಟ್ ಅಂದು ನಿರ್ಮಪಕನನ್ ವಾಪಾಸು ಆ ಬಿಲ್ದಿಂಗೆ ಗೆ ತರಿಸಿ ಕೆಳಗೆ ಇಳ್ಸಿ ಅವ್ರ ಮುಖ ನೋಡಲು
ನನ್ನಿಂದಾಗಲ್ಲ,
ನನ್ನಿ0ದಾಗಲ್ಲ
ಡೂಪ್ ಇಟೆ ಮಾಡಿ ಅದ್ನ ಅಂತ ಬಡಬಡಿಸಿದರು:))
ಡೂಪ್ ಇಟ್ಟು ಆ ಸೀನು ಮುಗ್ಸಿ ಆಯ್ತು...
ಆಗ ನಿರ್ಮಾಪಕರಿಗೆ ತಾವು ಜೋಗ ಜಲಪಾತದ 'ತುತ್ತ ತುದಿಯಲಿ' ನಿಂತು ನಾಯಕಿಗೆ ಪ್ರೇಮ ನಿವೇದನೆಮಾಡಿಕೊಳೋ ಸೀನು ಹಾಕಬೇಕೆನಿಸಿತು ಅದ್ನ ನಿರ್ದೇಶಕರ್ಗೆ ಹೇಳಲಾಗಿ,ಖಂಡಿತ ಸ್ಸಾರ್ ಮಾಡೋಣಅದ್ಕೆನಂತೆ ನಾಳೆಯೇ ಜೋಗಕೆ ಹೋಗೋಣ ಅಂದ್ರು,
ಪತ್ರಿಕಾ ಪ್ರಕಟಣೆ ಕೊಟ್ಟು ಹಲ 'ಪ್ರಾದೇಶಿಕ' ಹುಡುಗೀರು ತಾ ನಟಿಯಾಗಲು ಎಂದು ಬಂದರೂ ನಿರ್ಮಾಪಕಮಾತ್ರ ಅವ್ರ್ಯಾರನ್ನು ಆಯ್ಕೆ ಮಾಡದೆ ಬಾಲಿವುಡ್ ನಟಿಯೇ ಬೇಕು ಅಂತ, ಅಲ್ಲಿ ಕೆಲಸ ಇಲ್ಲದೆ 'ಖಾಲಿ'ಕೂತು ,ಆದರೂ ಖಾಲಿ ಇಲ ಎಂದು ತೋರಿಸಲು ಅಮೇರಿಕ ಕೆ ಹೋಗಿ ಅಲ್ಲಿ ಯಾವ್ದ ಹೋಟೆಲಿನ ಸ್ಪರ್ಧೇಲಿ ಕೇಕುಮಾಡೋ ಸ್ಪರ್ಧೇಲಿ ಬಾಗವಹಿಸಿ ಅದು ನನ ಹೆಸರಲ್ಲೇ ಮಾಡಿದರು ಎಂದು ಸುಳು ಹೇಳೋ ನಟಿಯೋಬ್ಬಳನ್ನಆಯ್ಕೆ ಮಾಡಿ ಅವಳಿಗೆ ಆ ಬಗ್ಗೆ ಕೋರಿಕೆ ಸಲ್ಲಿಸಲು ಖುದ್ದು ನಾಯಕ ಕಂ ನಿರ್ಮಾಪಕಮತ್ತು ನಿರ್ದೇಶಕ ಹೊರಟರು ಮುಂಬಯಿಗೆ .
ಅಲ್ಲಿ ಹೋಗಿ ನಟಿಗಿಂತ ಮೊದಲು ಅವಳ ಆಪ್ತ ಸಹಾಯಕಿಯನ್ನ ಸಂಪರ್ಕಿಸುವುದೇ ದೊಡ ಅಡೆ -ತಡೆ ಆಯ್ತು, 'ದೇವ್ರು ಕೊಡಬಹುದು ಪೂಜಾರಿ ಕೊಡಲೋಲ್' ಎಂಬಂತಿತು ಪರಿಸ್ತಿತಿ :))
ಮೊದಲು ಗೇಟು ತೆರೆಯಲೇ ಹಿಂದೆ ಮುಂದ್ -ಮೇಲೆ ಕೆಳಗೆ ನೋಡಿದ ಗೇಟು ಕಾಯುವವನಿಗೆ ಸುಸ್ತಾಗ್ವರ್ಗೆ ಹೇಳೀ ಹೊಳ ಹೋದರೆ, ಅಲ್ಲಿ ನಟಿಯ ಸಹಾಯಕಿ ಭರ್ತಿ ೨ ಕಾಲು ಘಂಟೆ ಕಾಯಿಸಿ , ಕೊನೆಗೂ ಬಂದು ಒಳ ಬರಲು ಹೇಳಿದಾಗ ರಕ್ತ ಕೊತ ಕೊತ ಕು.....ಯುತಿದ್ದರೂ , 'ಕೂಲ್ ' ಅಂತ ತಮಮ್ನ ತಾವೇ ಸಂತೈಸಿಕೊಂಡು ಒಳ ನಡೆದರೂ ಹಾಲು ಗಿಂಜುತ್ತ:))))
ನಾಯಕಿಯನ್ನಾಗಿ ಆ ನಟಿಯನ್ನ ಬುಕ್ ಮಾಡಲು ತಾವ್ ಬಂದಿರುವುದಾಗಿ ಹೇಳಿದಾಗ, ಅವಳು ಒಹ್ ಶಿಟ್! ಎನ್ನಲು, ನಿರ್ದೇಶಕ ಮತ್ತು ನಿರ್ಮಾಪಕ ಬೆಚ್ಚಿ ಬಿದ್ದರು, ನಾವ್ ಹೇಳಿದ್ದು ಏನಾರ ತಪ್ಪಿತ್ತ?
ನೋಡಿ ಇವರೇ ನಮ್ಮ ಮೇಡಂ ಈಗ ಫುಲ್ ಬ್ಯುಸಿ :)) ಅವ್ರು ಹಾಲಿ ವುಡ್ ಚಿತ್ರವೊಂದನ್ ಟಾಮ್ ಕ್ರೊಸ್ ಜೊತೆ ಮಾಡ್ತಾವ್ರೆ, ನೇವು ಇನ್ನು ಒಂದು ವರ್ಷ ಕಾಯಬೇಕು ಅಂದಳು!!
ನಿರ್ಮಾಪಕನ ತುಟಿ ಒಣಗಿ, ಛೆ ಹಾಲಿ ವುಡ್ ಅಂತೆ, ಇನ್ನು ಇವಳು ಸಿಕ ಹಾಗೆ ಎಂದುಕೊಂಡ ನಿರ್ದೇಶಕನ ಮುಖ ನೋಡಿದರು..
ಮೊದಲೆಲ ಈ ಬಗ್ಗೆ ಅರಿವಿರದಿದ್ದ ಪುಟ್ಟ ನಿಗೆ ಇದು ನಿರ್ಮ್ಪಕನಿಂದ ಹೆಹ್ಚ್ಚು ಹಣ ಪೀಕಲು ಸ್ಕೆಚ್ಚು ಅಂತ ಅರ್ಥ ಆಯ್ತು, ಅವ್ನು ನಿರ್ಮಾಪಕರೇ ನೀವ್ ಹೊರಗಿರಿ ನಾ ಮಾತಾಡಿ ಮುಗಿಸಿ ಬರವೆ ಎಂದ... ಏನೋ ಮಾಡಿ ಒಟಿನಲ್ಲಿ ಆ ನಟಿಯೇ ನನ್ನ ನಾಯಕಿ ಆಗಬೇಕು, ಅದ್ಕೆ ಎಸ್ತಾರ ಖರ್ಚಾಗಲಿ , ಒಟಿನಲ್ಲಿ ನನ್ನ ಚಿತ್ರ ಕೋಟಿ ಕೋಟಿ ಬಾಚಬೇಕು ಎಂದರು:()))
ನಿರ್ಮಾಪಕ ಹೊರ ಹೋದನಂತರ , ಪುಟ್ಟ ಕೈ ಚಾಚಿ ತನ್ ಪರಿಚಯ ಮಾಡಿಕೊಂಡು, ನಿಮ ನಟಿಗಿಂತ ನೆವೆ ನಾಯಕಿ ಆಗಲು ಸೂಟ್ ಆಗ್ತೀರ ಅಂತೆಲ್ಲ 'ಹೋಳು' ಬಿಟ್ಟು, ಅವಳು ನಾಚಿ ನೀರ್ ಆಗಿ, ನೆಲ ಕಾಳುಗುರಿಂದ ಗೀರ್ತ ನಾಚಿದಳು!!
ನಾನ?
ನಾಯಕಿ?
ನನಗೆ ಅಭಿನಯ ಗೊತ್ತಿಲ್ಲ, ಆದರೂ ನೀವು ನನ್ನ ಸಾಮರ್ತ್ಯ ಗುರುತುಸಿದ್ರಿ ಅದ್ಕೆ ನಮ್ಮ ಮೇಡಂ ಕಾಲು ಶೇಟು ನಿಮಗೆ ಬುಕ್ ಮಾಡುವೆ ಎಂದಳು..
ಪುಟ್ಟ ಅಡ್ವಾನ್ಸ್ ಅಂತ ಕೇಳಲು , ಸಧ್ಯಕ್ಕೆ ೫೦ ಲಕ್ಚ ಮಡಗಿ,
ಆಮೇಲೆ ೮೦ ಲಕ್ಚ ಮತ್ತು ಹೋಗಿ ಬರುವ ಫ್ಲೈಟ್ ಟಿಕೆಟ್ ನಟಿಗೆ- ಅವ್ರ ಅಪ್ಪ ಅಮ್ಮಂಗೆ, ತನಗೆ , ಮತ್ತು ೧೦ ಜನ ಬಾಡಿ ಗಾರ್ಡುಗಳಿಗೆ ಅಲ್ಲದೆ ನಾಯಕಿಯ ೩ ನಾಯಿಗಳೂ ಜೊತೆಗೆ ಬರುವವು ಅವಕ್ಕೂ ವ್ಯವಸ್ತೆ ***** ಹೋಟೆಲಲ್ಲಿ ಆಗಬೇಕು, ಮತ್ತು ನಾಯಕಿ ನಟಿಯ ರೂ ನಂಬರ್ ೩ ನ್ನೇ ಬುಕ್ ಮಾಡಬೇಕು ಅದು ಅವಳ 'ಲಕಿ ನಂಬರ್' ಅಂದ್ಲು, ಅದ್ನೆಲ್ಲ ಕೇಳಿ ಪುಟ್ಟ ಸುಸ್ತಾದ,
ಇರಿ ಈಗ ನಮ್ ನಿರ್ಮಪಕರನ್ ಕೇಳಿ ಬರ್ವೆ ಅಂತ ಹೊರ ಬಂದು ಇದ್ನೆಲ್ಲ ಹೇಳಲು, ನಿರ್ಮಾಪಕರು ಅದ್ಕೆನಂತೆ ಆಗಲಿ, ಎಸ್ಟಾರ ಖರ್ಚು ಆಗಲಿ, ವಿತರಕರು ನಮ್ ಚಿತ್ರದಲ್ಲಿ ಈ ಬಾಲಿವುಡ್ ನಾಯಕಿ ಇದ್ದಾಳೆ ಅಂದ್ರೇನೆ 'ಡಬ್ಬಿ' ಕೊಂಡುಕೋತಾರೆ ಅಂದ್ರು!!..
ನಾಯಕಿಯ ಆಯ್ಕೆ ಮಾಡಿ ಅದ್ವಾನ್ಸು ಕೊಟ್ಟು ಒಮ್ಮೆ ನಾಯಕಿಯನ್ ನೋಡಬೇಕು ಮಾತಾಡಬೇಕು ಅನ್ನಲು , ಸಹಾಯಕಿ ತಮ ಮೇಡಂ ಗೆ ಫೋನಾಯಿಸಿ , ಆ, ಹೌದು ಮೇಡಂ, ಇಲ್ಲೇ ಇದಾರೆ, ಹಾ, ಇನ್ನು ಅರ್ಧ ಘಂಟೆ ಬಿಟು ನಾ ಕರೆ ತರ್ವೆ ಅಂದಳು,, ಆಮೇಲೆ ಇವರೆದೆ ತಿರ್ಗಿ, ನೋಡಿ ಅವ್ರು ಈಗ 'ಕರಣ್ ಜೋಹರ್ ' .... ತೆ ಯಾವ್ದೋ ಕಥೆ ಬಗ್ಗೆ ದಿಸ್ಕಸ್ಸ್ ಮಾಡ್ತಾವ್ರೆ, ನಾವು ಅರ್ಧ ಘಂಟೆ ಆದಮೇಲೆ ಅಲಿಗೆ ಹೋಗಬೇಕು ಅಂದ್ಲು...
ಕೆಲಸ ಇಲ್ಲದೆ 'ಖಾಲಿ' ಕುಳಿತಿದ್ದ ನಾಯಕಿ ಧಡಬಡನೆ ಎದ್ದು, ಕಾರಲ್ಲಿ ಕುಳಿತು, ಚಾಲಕನಿಗೆ ಬೇಗ 'ನ್ಯೂ ಲುಕ್ ಸಲೂನ್' ಗೆ ಹೋಗಲು ಹೇಳಿದರು, ಅಲ್ಲಿ, ತಾ ಇನ್ನು ಅರ್ದ್ಧ ಘಂಟೆಯೊಳಗೆ ನವ ತಾರುಣ್ಯದ ಯುವತಿ ತರಹ ಕಾಣಬೇಕು ಅಂತ ಹೇಳೀ, ಕುರ್ಚಿ ಮೇಲೆ ಕಣ್ಣು ಮುಚ್ಚಿ ಕುಳಿತಳು...ವಿಧ-ವಿಧವಾದ ಪ್ರಸಾದನ ಸಾಮಗ್ರಿ ಅಲ್ಲಿ ಹರಡಿ ೪ ಜನ ಸಲೂನಿನ ಹುಡಿಗೀರು ರೆಡಿ ಆದರು ಈ ಮಧ್ಯ ವಯಸ್ಸೀನ ನಟಿಯನ್ ಯಂಗ್ ಅಂಡ್ ಎನರ್ಜೆತಿಕ್ ಮಾಡಲು:))))
ಪಿಚರ್ ಅಭೀ ಬಿ ಭಾಕಿ ಹಾಯ್...
Comments
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫ by venkatb83
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫
In reply to ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫ by pkumar
ಉ: ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫