ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೩

ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೩

 


ಅವ್ರ ಅ ಕೋಣೆಯ ವೈಭವ ನೋಡಿ ಧಂಗಾಗಿ, ಆಹಾ ಜೀವನ ಅಂದ್ರೆ ಇದು, ಈ ತರಹದ ಸುಖ ಪಡೆಯೋಕು ಅನುಭವಿಸೋಕು  ಪುಣ್ಯ ಮಾಡಿರಬೇಕು ..

ರ್ರೀ ರ್ರೀ ನಿರ್ದೇಶಕರೇ  ಕಥೆ ಶುರು ಮಾಡಿ...

ನಿರ್ದೇಶಕರೇ...

ನಿರ್ಮಾಪಕ ಜೋರಾಗಿ ಕೂಗಿದ್ದಾಗ 'ವಾಸ್ತವಕ್ಕೆ ಬಂದ' ಪುಟ್ಟ

ನೋಡಿ ಸ್ಸಾರ್ ಈ ಕಥೆ ತುಂಬಾ   'ಡಿಫರೆಂಟು'   ಈ ತರಹದ ಸಿನೆಮ ಇದ್ವರ್ಗೂ ಬಂದಿಲ್ಲ, ಅದನ್ ನೋಡಿದವರು  ಮತ್ತೆ ಮತ್ತೆ ಮತ್ತೆ ನೋಡ್ತಲೇ ಇರ್ತಾರೆ, ಪ್ರತಿ ಸೀನು 'ಡಿಫರೆಂಟು' ಸ್ಸಾರ್ ....

 

ರ್ರೀ ಮೊದ್ಲು ಕಥೆ ಏನು ಅಂತ ಹೇಳ್ರೀ,  ಜನ ಮತ್ತೆ ಮತ್ತೆ ನೋಡೋದು  ಆಮೇಲೆ...:)

 

ಸ್ಸಾರಿ ಸ್ಸಾರ್ - ಕಥೆ ನಮ್ಮ 'ಪರಿಚಿತರೊಬ್ಬರು (!! ) ಬಹು ದಿನಗಳ ಹಿಂದೆ ಬರ್ದದ್ದು,

http://sampada.net/blog/%E0%B2%97%E0%B2%A3%E0%B3%87%E0%B2%B6/03/02/2009/16435

 ಅದ್ನ ಓದಿ ನಾ ಫುಲ್   'ಎಕ್ಸೈ ಟು' ಆಗಿದಿನಿ ಅದ್ಕೆ!!...

ಕಥೆ ಈಗ ಶುರು ಮಾಡ್ತೀನಿ ...

 

 

 

 

 

 

 

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ...(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..)

ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ :) ? -ನಮ್ಮದು ಡಿಫರೆಂಟೂ..

ನಾಯಕಿ,ಟು ಪೀಸ್ ಡ್ರೆಸ್ನಲ್ಲಿ.. ‘ಸೂರ್ಯಗ್ರಹಣ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ.., ಪೆಂಗ್ವಿನ್ ಜತೆ (ಅಪ್ಪ ಅಂಟಾರ್ಟಿಕಾದಿಂದ ತಂದು, ಮಗಳಿಗೆ ೧೮ನೇ ವರ್ಷಕ್ಕೆ ಉಡುಗೊರೆ ಕೊಟ್ಟ ಪೆಟ್ ಪ್ರಾಣಿ)..

ಎಮ್.ಜಿ.ರೋಡಲ್ಲಿ ಬರುತ್ತಾಳೆ..

ಬೆವರಿಂದ ಪೂರ್ತಿ ಒದ್ದೆ..

ಕ್ಯಾಮರ ಗ್ರಹಣದಿಂದ ಹಿಡಿದು ಎಲ್ಲೆಲ್ಲಾ ಏಂಗ್ಲ್ಗಳು ಇಲ್ಲವೋ ಅಲ್ಲೆಲ್ಲಾ ಓಡಾಡುತ್ತದೆ.

ಈಗ ನಾಯಕನ ಎಂಟ್ರಿ.. ನಾಯಕ ಡಾಕ್ಟ್ರು?..ಊಹೂಂ

ಇಂಜಿನಿಯರ್? ಸಾಫ್ಟ್ವೇರ್? ..ಊಹೂಂ

ಲಾಯರ್? ಪೋಲೀಸ್? ಕಳ್ಳ? .. ಊಹೂಂ..

ಎಸೆಲ್ಸಿ ಫೈಲ್? ೩ನೇ ಕ್ಲಾಸ್ ಫೈಲ್? ಎಲ್.ಕೆ.ಜಿ ? ..ಊಹೂಂ ಉಹೂಂ..

ಚಮ್ಮಾರ,ಗಮಾರಾ.. ಸಾರಿ ನಮ್ಮದು ಡಿಫರೆಂಟೂ..

ಕ್ಯಾಮರ ಮೊದಲಿಗೆ ನಾಯಕನ ಎದುರಿನ ತಟ್ಟೆ..ಅದರ ಮೇಲಿರುವ - ಕಾಯಿನ್ ಮೇಲೆ ಫೋಕಸ್ ಮಾಡುತ್ತಾ ನಿದಾನವಾಗಿ ಮೇಲೆ ಬರುತ್ತದೆ.. ಟೇಂ..ಟೆ..ಡೇಂ..(ಸುಮ್ಮನಿದ್ದೀರಲ್ಲಾ, ವಿಶ್ಲ್ ಹಾಕ್ರೀ..) ನಾಯಕನದು ತೆಳ್ಳಗಿನ ದೇಹ.. (ಆದರೆ ಸಿಕ್ಸ್ ಪ್ಯಾಕ್ ಶಕ್ತಿ ಇದೆ) ಹರಿದ ಅಂಗಿ..(ಒಳಗೆ ಮೃದು ಹೃದಯ)

ತೂತು ಬಿದ್ದ ಪ್ಯಾಂಟ್ (..ಬೇಡ ಬಿಡಿ..) ಮುಖಕ್ಕೆ ಮುತ್ತಿಕ್ಕುವ ಹಿಪ್ಪಿ ಕೂದಲು (ಪೆಂಗ್ವಿನ್ ಮರಿಯಾ.. ಪೆಂಗ್ವಿನ್ ಮರಿಯಾ.. ಹಾಡಿಗೆ ಕೂದಲು ಕುಣಿಯುವ ಸ್ಟೈಲ್ ನೋಡಲು ಮರೆಯದಿರಿ) ಭಿಕ್ಷುಕ.. ಸಾರಿ..ನಾಯಕ ತಾನು ಕುಳಿತಿದ್ದ ಹರಕು ಗೋಣಿಯನ್ನು, ಬೆವರಿಂದ ಒದ್ದೆಯಾಗಿ, ಚಳಿಯಲ್ಲಿ ನಡುಗುವ ನಾಯಕಿಗೆ ಕೊಡುವನು. ಇದಕ್ಕೆಲ್ಲಾ ಕಾರಣವಾದ ಸೂರ್ಯಗ್ರಹಣವನ್ನು ನಾಯಕ ಬೈಯುವ ದೃಶ್ಯ ಸೂಪರ್ ಆಗಿ ಬಂದಿದೆ. ಲವ್ ಶುರು..

ಈಗ ವಿಲನ್ ಎಂಟ್ರಿ ಆಗಬೇಕಲ್ಲ..

ಯಾರು ವಿಲನ್?

ಹುಡುಗಿಯ ಅಪ್ಪ..?

ಊಹೂಂ.. ಡಿಫರೆಂಟೂ.. ಅಪ್ಪ ಖುಷಿಯಿಂದ ಒಪ್ಪುವನು.

ಮದುವೆ ಗ್ರಾಂಡ್ ಆಗಿ ಸ್ವಿಜರ್ಲ್ಯಾಂಡ್ನಲ್ಲಿ ಮಾಡೋಣವೆಂದು ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಹೊರಡುವನು.

ಹಾಗಾದರೆ ವಿಲನ್? ನಾಯಕನ ಭಿಕ್ಷುಕ ಅಪ್ಪ!! (ಡಿಫರೆಂಟೂ)

‘ನೋಡು ಮಗಾ, ಅವನ ತಿಂಗಳ ಸಂಬಳಕ್ಕಿಂತ ನಿನ್ನ ಸಂಪಾದನೆ ಜಾಸ್ತಿ ಮಗಾ. ನಿನಗೀಗಿರುವ ಸ್ವಾತಂತ್ರ್ಯ ಕಳಕೊಳ್ಳುತ್ತೀಯಾ?

ಅಮೆರಿಕಾ ಅಧ್ಯಕ್ಷನ ಬೀಗ ಎಂದು ನನ್ನ ಸಂಪಾದನೆಗೂ ಖೋತಾ ಆಗುವುದು. ಬ್ರಿಗೇಡ್ ರೋಡಲ್ಲಿ ಬೇಡುವ ನಂಜಿಯೊಂದಿಗೆ ನಿನ್ನ ಮದುವೆ ನಾಳೆನೇ ಅಶೋಕ ಹೋಟಲಲ್ಲಿ..’

ಇಂಟರ್ವಲ್ (

*****************************************

 

ಭಿಕ್ಷುಕರ ಸಂಘದವರು ನಿರ್ಮಿಸಿದ್ದರಿಂದ (ಲೆಕ್ಕವಿಲ್ಲದ-ಲೆಕ್ಕವಿಲ್ಲದಷ್ಟು ಹಣ) ಧಾರಾಳವಾಗಿ ಖರ್ಚು ಮಾಡಿದ್ದಾರೆ. ಕೇವಲ ನಾಯಕನ ಒಂದೊಂದು ಡ್ರೆಸ್ಗೆ ೧೦ ಲಕ್ಷ ರೂ. ಖರ್ಚಾಗಿದೆ-ಲಂಡನ್ನಿಂದ ತರಿಸಿ ಹರಿದು ಚಿಂದಿ ಮಾಡಿ ಹಾಕಿದ್ದು ಅಂದಾಗ ಎಷ್ಟು ಅದ್ದೂರಿಯಾಗಿ ಬಂದಿರಬಹುದು ಯೋಚಿಸಿ.

ಈಗ ಇಂಟರ್ವಲ್ ನಂತರದ ಕತೆ-

ಅಮೆರಿಕಾದ ಫೈಟರ್ ಜೆಟ್ಗಳು ಅಶೋಕಾ ಹೋಟಲ್ ಸುತ್ತುವರಿದವು ಅಂದ್ರಾ-ಊಹೂಂ.. ಡಿಫರೆಂಟೂ.. ನಿರಾಶೆಯಿಂದ ಅಮೆರಿಕಾ ಅಧ್ಯಕ್ಷ, ತನ್ನ ಮಗಳನ್ನು ಕರಕೊಂಡು ವಿಮಾನದಲ್ಲಿ ಹಿಂದೆ ಹೋಗುವನು.

ಕತೆಯಲ್ಲಿ ಟ್ವಿಸ್ಟ್- ಡಂಡಂ ಲಾಡಂನ ಕಡೆಯ ಟೆರರಿಸ್ಟ್ಗಳು ವಿಮಾನ ಹೈಜಾಕ್ ಮಾಡುವರು!! ಇನ್ನೇನು ಅಮೆರಿಕಾದ ಅಧ್ಯಕ್ಷನ ಹಣೆಗೆ ಗನ್ ಗುರಿಯಿಡಬೇಕು ಅನ್ನುವಾಗ ಹಾಡು ಕೇಳುವುದು-‘ಜುಂಯ ಜುಂಯ ಜುಂಯಾ ಜುಂಯ..’- ವಿಮಾನದ ಮೇಲೆ ನಾಯಕ ತನ್ನ ಭಿಕ್ಷುಕ ಬಳಗದೊಂದಿಗೆ ಡ್ಯಾನ್ಸ್ ಮಾಡುತ್ತಿರುವನು ನಾಯಕಿ ಕಿಟಕಿಯಿಂದ ಹೊರಗೆ ಇಣುಕಿ ನಾಯಕನಿಗೆ ಕಣ್ಣು ಹೊಡೆಯುವಳು.. ;)

ಕ್ಲೈಮ್ಯಾಕ್ಸ್ (ಗೌಪ್ಯ)ನಲ್ಲಿ ಹಾಲಿವುಡ್/ಬಾಲಿವುಡ್/ಎಲ್ಲಾವುಡ್ಗಳಲ್ಲಿ ಯಾರೂ ಮಾಡದಿದ್ದ ಡಿಫರೆಂಟ್ ಸಾಹಸವಿದೆ. ಕನ್ನಡ,ತಮಿಳು,ಹಿಂದಿ..ಯಾವ ಚಿತ್ರವೂ ಎಪ್ರಿಲ್ನಲ್ಲಿ ಬಿಡುಗಡೆಯಾಗಲು ರೆಡಿಯಿಲ್ಲ.

.

.

.

.

.

 

..

.

 

ಯಾಕೆಂದರೆ 'ಎಪ್ರಿಲ್ ೧ಕ್ಕೆ'  ನಮ್ಮ ಸಿನೆಮಾ - ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು.

ಅಕ್ಷರಶಃ ಚಿಂದಿ ಉಢಾಯಿಸುವುದು!!

 

========================================================================================================================================================================================================= 

ಅದ್ಭುತ-

ಅತ್ತ್ಯದ್ಭುತ-

ಅಮೋಘ,

ಅಹಹ!!

ವಹ್ಹವ್ವ  ವಹ್ವ್ವ!

ಇದಪ್ಪ ಕಥೆ ಅಂದ್ರೆ,

ನಂಗೆ ನಿಮ್ಮ ಮೇಲೆ 'ಭರವಸೆ' ಇತ್ತು ಒಂದೊಳ್ಳೆ  ಸಿನೆಮ ಕಥೆ ತಂದಿದೀರ,

ಇನ್ಯಾಕೆ ತಡ ?

ನಾಳೆನೆ ಶೂಟಿಂಗ್ ಶುರು ಮಾಡ ಬಿಡಿಪಾ,- ಹೇಳಿದರು  ಈ ಕಥೆ ಕೇಳಿ ಎಗ್ಗಾ ಮಗ್ಗ ಖುಷಿ ಆಗಿದ್ದ  ನಿರ್ಮಾಪಕರು..

 

ತಮ್ಮ  ಹತ್ತಿರ ಇದ್ದ ಚಿಕ್ಕ ಬ್ಯಾಗಿನಿಂದ  ೫೦ ಸಾವಿರದ  ಹಣದ ಕಟ್ಟನ್ನ ಪುಟ್ಟಣ ಕೈ ಗೆ ಇಕ್ಕಿ, ನಿರ್ದೇಶಕರೆ ಇದು ನಿಮಗೆ  ನನ್ನ   'ಬೋಣಿ'  ಅಸ್ಟೇ, ಸಂಭಾವನೆಯನ್ನ  ಅತಿ ಶೀಘ್ರ  ನಿಮಗೆ ಸಂದಾಯ ಮಾಡುವೆ.. ತಮ್ಮ ಸಹಾಯಕನನ್ನ  ಕರ್ದು, ಇವರಿಗೆ ನಮ್ಮ ಪ್ರೋದಕ್ಚನ್  ಮ್ಯಾನೇಜರ್  'ಟೆನ್ಶನ್'  ತಿಮ್ಮರಾಯನ್ನ ತೋರ್ಸಿ, ಇವರ ಚಿತ್ರಕ್ಕೆ ಹಣ ಕಾಸು ಏರ್ಪಾಡು ಮಾಡೋಕೆ ಹೇಳು..

ಏನು ಸ್ಸಾರ್ ಹೆಸರು?

'ಟೆನ್ಶನ್ ' ತಿಮ್ಮರಾಯ ನೆ?

ಹಃ ನೋಡಿ ಅದು ಅವನಿಗೆ ಯಾವಾಗಲೂ ಈ ಸಿನೆಮ ಖರ್ಚು ವೆಚ್ಚ ಕಡಮೆ ಮಾಡೋ ಬಗ್ಗೆ ತಲೆ ಬಿಸಿ, ಸಾದಾ ತೆನ್ಷನಲ್ಲೇ  ಇರ್ತಾನೆ ಅದ್ಕೆ ಅವ್ನಿಗ್ ಆ ಹೆಸರು:))

ನಿರ್ದೇಶಕರೆ ಈ ಅಮೋಘ ಚಿತ್ರ ಕಥೆಗೆ  ನಾಯಕ-

ನಾಯಕಿ-

ಖಳ ನಾಯಕ ,

ಸಪೋರಟಿ0ಗ್   ಪಾತ್ರಗಳಿಗೆ  ಯಾರೆಲ್ಲ ಆದ್ರೆ ಸ್ಸರಿ ಅನ್ಸುತ್ತೆ ನಿಮಗೆ? 

ಅವ್ರು ಖ್ಯಾತರೆ ಆಗಿರಲಿ, ಆದರೆ 'ಖ್ಯಾತೆ' ತೆಗೆಯೋರು ಬೇಡ,,!!

ಹಿಂದಿ ತೆಲುಗು ತಮಿಳು ಯಾರೂ 'ಮಾಡದ  -ನೋಡದ -ತೆಗೆಯದ' ಸ್ಥಳದ  ಕಡೆ ನಾವು ಹೋಗಿ ಚಿತ್ರೀಕರಣ ಮಾಡಬೇಕು.. ವಿದೇಶಕ್ಕೆ ಹೋಗಿ ಶೂಟ್ ಮಾಡೋಣ.. - ಹೇಳಿದರು ನಿರ್ಮಾಪಕರು..

 

ನೋಡಿ ಸ್ಸಾರ್- ಈ ಚಿತ್ರಕ್ಕೆ  ಖ್ಯಾತ ನಟರು  ಸೂಟ್ ಆಗೋಲ್ಲ, ಅದ್ಕೆ ನನಗನಿಸಿದ ಹಾಗೇ ಹೊಸಬರಾದರೆ  ಈ ನಾಯಕನ  ಪಾತ್ರಕ್ಕೆ  ಸೂಟ್ ಆಗ್ತಾರೆ ಅನ್ಸುತ್ತೆ, ಖಳ ನಾಯಕ, ಪೂರಕ ಪಾತ್ರ ವರ್ಗಗಳಿಗೆ ಬೇಕಾರೆ  ಖ್ಯಾತರನ್ನೇ ಹಾಕೊಳ್ಳೋಣ...

ನಿರ್ದೇಶಕರೇ ಸ್ವಲ್ಪ ಇರಿ,

ನಿಮ್ಮ ಈ ಕಥೆ,

ಇದರ ಸತ್ವ ನೋಡಿ ನನಗೆ

.

.

.

.

.

.

.

.

.

.

.

'ನಾನೇ' ನಾಯಕ' ಆದ್ರೆ ಹೆಂಗೆ? ಅನ್ಸ್ತಿದೆ,!

ನೀವ್ ಏನ್ ಹೇಳ್ತೀರಾ?

ಈ ಅನಿರೀಕ್ಚಿತ ಶಾಕ್ ಗೆ  ಧನ್ಗಾಗಿ  ಏನು ಹೇಳುವುದೋ ತೋಚದೆ  ಪಿಚ್ ಆಗಿ ಕುಳಿತ ಪುಟ್ಟ, ಅಲ್ಲ ಎಂಥಾ ಜನ? ಹಣ ಹಾಕಿದ ಮಾತ್ರಕ್ಕೆ 'ತಾವೇ' ಹೀರೋ' ಆಗ್ಬೇಕ?

ಕಥೆ ಏನೋ ಚೆನ್ನಾಗಿದೆ ,ಆದರೆ ಈ ಯಪ್ಪಾ ಹೀರೋ ಆದ್ರೆ 

..

 

.

.

 

.ನಾಲ್ಕು ದಿನವೂ ಚಿತ್ರ ಓಡೊಲ್ಲ..

 

ಪುಟ್ಟಣ 'ಮೌನ' ನೋಡಿ,

ನಿರ್ಮಾಪಕರು ಯಾಕೆ ನಿರ್ದೇಶಕರೇ ಸುಮ್ಮನಾದಿರಿ?

ನಾ ಹೀರೋ ಆಗಬರ್ದೆ?

ಅದ್ಕೆ ನಾ ಲಾಯಕ್ಕಿಲವೇ?

ಇಸ್ಟಕೂ ಅದು 'ಬಿಕ್ಚುಕನ' ಕುರಿತ ಲವ್  ಕಥೆ,  ಅದ್ಕೆ ಅದ್ಯಾವ 'ಖ್ಯಾತ' ಹೀರೋ 'ನಾ' ಮಾಡ್ತೀನಿ ಅಂತ ಮುಂದೆ ಬರ್ತಾನೆ? ಬಂದರೂ ಆಮೇಲೆ, ನನಗೆ ಬಿಕ್ಚುಕ ಹಾಕುವ ಡ್ರೆಸ್ ನ 'ಫಾರೀನಿಂದ'  ತರಬೇಕು, ಅಲ್ಲೇ ಶೂಟ್ ಮಾಡಬೇಕು ಅಂತ  ನಮ್ ಚಿತ್ರದ ಬಜೆಟ್ಟು  'ದುಪ್ಪಟ್ಟು' ಆಗುತ್ತೆ ಅದ್ಕೆ 'ನಾನೇ' ಆದ್ರೆ ಎಸ್ಟೋ 'ಕಾಸು'   ಮಿಕ್ಕುತ್ತೆ! ನೀವ್ ಏನು ಹೇಳ್ತೀರಾ?

  ಅಯ್ಯೋ ಅಯ್ಯೋ ಕಾಸು ಉಳಿಯೋದು ಮುಂಡಾ ಮೊಚ್ತು: ಲಾಸು ಆದ್ರೆ?

-ಪುಟ್ಟಣ ಮೌನ ಅರ್ಥನಾದ-ಚಿಂತೆ!!

((

 

ಇದು ತನ್ನ ನಿರ್ದೇಶನದ ಮೊದಲ ಚಿತ್ರ, ನಾ ಏನೋ  -ಹೀರೋ ಆಗೋದು ಬೇಡ ಸ್ಸಾರ್, ಬೇರೆ ಯಾರ್ನಾರ ಹಾಕೊಳೋಣ ಅಂದು, ಅದ್ಕೆ ಈ ವಯ್ಯ 'ಬೇಸರ' ಆಗಿ ನನ್ನ ಈ ಚಿತ್ರದಿಂದ  ಕಿತ್ತು ಹಾಕಿ 'ಈ ಕಥೆ' ನೆ ಬೇರೆ ಯಾರದೋ ಚಿತ್ರ ನಿರ್ದೇಶಕನ ಜೊತೆ ಮಾಡಿದರೆ? 

ಆಗ ಕಥೆಯೂ ಗೋತಾ! 

ಹಣವೂ ಇಲ್ಲ, 

ನಾ ನಿರ್ದೇಶಕನೂ ಆಗಲ್ಲ, 

ಅದ್ಕೆ ಹೂ೦ ಅಂದೇ ಬಿಡೋಣ, 

ಸಿನೆಮ ಮುಗ್ಗರಿಸಿಕೊಂಡು ಬಿದ್ದರೆ  ಅದ್ಕೆ ಅವ್ರೆ ಕಾರಣ ಅಂತ  ನಾನೇ' ನಮ್ ಪತ್ರಿಕಾ ಚಿತ್ರ ವಿಮರ್ಶೆಯವರ ಕೈ ಲಿ ಹೇಳಿಸಿದರೆ ಆಯ್ತಪ್ಪ!!

 

ಆಯ್ತು ಸ್ಸಾರ್, ನೀವು ಹೇಳಿದಂಗೆ ಆಗಲಿ, ನಿಮಗೆ ಅಭಿನಯದ ಬಗ್ಗೆ ಮುಂಚೆ ಏನಾರ 'ಅನುಭವ' ಇದೆಯೇ?

 

ನನಗ? 

ಉಹೂ  ಏನೋ ಇಲ್ಲ, 

ಅದೇನು  ಕ್ಯಾಮೆರ ಮುಂದೆ ನಿಂತರೆ 'ತಾನಾಗೆ' ಬರ್ತೆ!! ಬರದಿದ್ದರೆ  ನಂಗೆ ಅಭಿನಯ ಹೇಳಿ ಕೊಡೋಕೆ ನೀವ್  ಇದೀರಲ್ಲ,

  ಸ್ಸಾರ್ , ಬರೀ ಬಿಕ್ಷೆ ಕೇಳೋದು, ಒಂದು ಹುಡುಗೀನ್  ನೋಡಿ ,ಲವ್  ಮಾಡೋದು , ಇಸ್ಟೇ ಇದ್ರೆ ಅದ್ನ ಯಾರು ನೋಡ್ತಾರೆ?

ಅದ್ಕೆ   ಅದೀ ಪಡಿಸೋಕೆ ಆಗಾಗ ಕೆಲ ಬೀದಿ ಕಾಮಣ್ಣ ರು  ಬರ್ತಾರೆ ಅವ್ರನ್ ನೀವು ಹೊಡಿಬೇಕು, ರಕ್ತ ಬರೋ ಹಾಗೆ , ರಕ್ತ ರಕ್ತ ಎಲ್ಲೆಡೆ ಚಿಮ್ಮಬೇಕು!! 

ಅದ್ಕೆ ನೀವು ಜಿಮ್ ಗೆ ಸೇರಿ  ೬ ಪ್ಯಾಕ್  ಬರಿಸಬೇಕು:))))

 

 

ಜಿಮ್ಮಾ? 

ನ0ಗೆ ಬೆಳ್ಗೆ ಏಳೋದು, ಅಂದ್ರೇನೆ ಅಲರ್ಜಿ!!

 ಜಿಮ್ ಮಾಡೋದು ಅಂದ್ರೆ ?  

ನಾ ಜಿಮ್ ಗೆ ಹೋಗೋದು ಬೆವರು ಸುರಿಸೋದು ಎಲ್ಲ ಯಾಕೆ?

 ನನಗೆ ೬ ಪ್ಯಾಕ್ ಇರೋ ತರಹ 'ಗ್ರಾಫಿಕ್ಸ್' ವರ್ಕ್ ಮಾಡಿಸಿ ಬಿಡಿ, ನಾ ತೊಂದ್ರೆನೂ  ಪಡೋ ಹಾಗಿಲ್ಲ, ವಸಿ ಕಾಸು 'ಗ್ರಾಫಿಕ್ಸ್' ಗೆ ಹೋದರು ಕಾಸಿಗೆ ಮೋಸ ಇಲ್ಲ,  ನಂಗೆ ಹಿಂದಿ ಯ 'ಸಾಯಿಜ್ ಜೀರೋ ' ಳೇ 'ಕರೀನಾ' ನಾಯಕಿ ಆಗಬೇಕು,

 

ಖಳ ನಾಯಕ ಅಂದ್ರೆ  'ಸಾಯೋ ಕುಮಾರೆ' ಆಗಬೇಕು! ಅವ್ರು ಡಾಯಿಲಾಗು ಭಾರೀ ಹೇಳ್ತಾರೆ, ಹಾಗೆ ಒಂದು

 'ಗಿಳಿಯೋ-ಗಿಡುಗವೋ!! 

ಜೂಲು ನಾಯಿ 

ಮೊಲ 

ಯಾವ್ದಾರ ಒಂದು ಪ್ರಾಣಿ -ಪಕ್ಸ್ಚಿ ಇರ್ಲಿ, ಭಲೇ ಮಜವಗಿರ್ತೆ  ನೋಡೋಕೆ...

ಸ್ಸಾರ್- ಬೆಚ್ಚಿಬಿದ್ದ  ನಿರ್ಮಾಪಕ,ಯಾಕ್ರೀ ನಿರ್ದೇಶಕರೇ  ಆ ಪಾಟಿ  ಕಿರುಚಿದಿರಿ? 

ಕ್ಸಂಸಿ  ಸ್ಸಾರ್, ಈಗ ಪ್ರಾಣಿ-ಪಕ್ಸ್ಚಿ ಗಳನ್ 'ಅವ್ರ' ಅಪ್ಪಣೆ ಇಲ್ದೆ ಚಿತ್ರಗಳಲ್ಲಿ ಉಪಯೋಗಿಸೋ ಹಾಗಿಲ್ಲ, ಹಾಗೆನರ ಮಾಡಿದ್ದೆ ಆದ್ರೆ ಜೈಲು ಕಂಬಿ ಎನಿಸಬೇಕಗುತ್ತೆ ಧನ್ದವೂ ಇದೆ:(( , 

 

ಹೌದಾ? 

ಹಾಗೆಲ ಕಾನೂನು ಇದೆಯಾ?  

ಹೌದು ಅಂದ್ ಹಾಗೆ ನೀವು ಅವ್ರು ಅಂದ್ರಲ್ಲ?  

ಆ 'ಅವ್ರು'  ಯಾರು ?

ಸ್ಸಾರ್, ಅವ್ರು ಅಂದ್ರೆ, ಪ್ರಾಣಿ ದಯಾ ಸಂಘ, 

ಪೊಲೀಸರು , 

ಪರಿಸರ ಅರಣ್ಯ ಸಚಿವರು, 

ಉನ್ನತ ಅಧಿಕಾರಿಗಳು, ಅಪ್ಪಿ ತಪ್ಪಿದರೆ ಕೋರ್ಟು  ಸಹ್ಹ! 

ಎಪ್ಪ ಶಿವ್ನೇ ":)) 

ಹೀಗೆಲ್ಲ ಉಂಟಾ?

 ನಮಗೆ ಅವ್ರ ಸಹವಾಸವೇ ಬೇಡ, ನಾವು ಅದ್ಕೂ 'ಗ್ರಾಫಿಕ್ಸ್'  ಉಪಯೋಗಿಸೋಣ, ಎಸ್ಟಾರ ಖರ್ಚು ಆಗಲಿ,ಹಾಗೆ ಈ ಸಿನೆಮ  '೩ ಡೀ' ನಲಿ ಮಾಡಬಹುದೇ?  ನಿರ್ಮಾಪಕ

ಯಾಕಿಲ್ಲ ಸ್ಸಾರ್ ಖಂಡಿತ  ಮಾಡಬಹುದು, ಅದಕ್ಕೆ 'ಬರೀ' ನೂರು ಕೋಟಿ ಆದರೆ ಸಾಕು, ಮಾಡೋಣವೆ ಸ್ಸಾರ್? 

ಪುಟ್ಟಣ  ವ್ಯಂಗ್ಯ ಭರಿತ ಪ್ರಶ್ನೆ   

 

ಪೂರಕ ಪಾತ್ರಗಳಿಗೆ ನಮ್ಮ ಅತ್ತೆ-ಭಾವ-..................................

.

.

.

.

.

 

 



ಪುಟ್ಟ - ಮನದಲ್ಲೇ ಹೇಳಿಕೊಂಡ,

 ಆಹಾ!! ನಿರ್ಮಾಪಕ ಅಂದ್ರೆ ನೀವು ತಂದೆ!

ಎಲ್ರೂ ನಿಮ್ಮ ತರಹ ಯೋಚಿಸಿದರೆ , ಬೇಜಾನ್ ಕಾಸೂ ಮಿಕ್ಕುತ್ತೆ, ಹಾಗೆ ಚಿತ್ರ ಡಬ್ಬ ದಿಂದ ಅಪ್ಪಿ-ತಪ್ಪಿಯೂ ಆಚೆ ಬರೋಲ್ಲ! ಅದು ಒಮ್ಮೆಲೇ 

.

.

.

.

.

.

ಟೀ  ವೀ  ಲಿ ನೇರ ರಿಲೀಜ್  ಆಗಬೇಕು:)) 


ಅಸ್ಟೇ....

ಆಯ್ತು ಸ್ಸಾರ್ ನೀವು ಹೇಳಿದ ಹಾಗೇನೆ ಆಗಲಿ.. ನಾಳೆಯಿಂದಲೇ ಶೂಟಿಂಗ್ ಶುರು,  ಈಗಲೇ ನಾ 'ಕರೀನಾ', ಮತ್ತು 'ಸಾಯೋ ಕುಮಾರ' ಗೆ  ಕಾಲು ಮಾಡಿ, 'ಕಾಲು ಶೀಟು'  ತೆಗೆದುಕೊಳ್ಳುವೆ, ಕಾಸು ಅಡ್ಜಸ್ಟ್ ಮಾಡಿ  'ಅವ್ರಿಗ್' ತಲುಪಿಸಿಬಿಡಿ..

 

 

 

 

 

 

ಮುಂದಿನ ಭಾಗದಲ್ಲಿ  -

 

ಮುಹೂರ್ತ ಪೂಜೆ ಯಾರದು?

ಮೊದಲ  ಕ್ಲಾಪ್ ಮಾಡುವವರು ಯಾರು ?

ಚಿತ್ರೀಕರಣ ಎಲ್ಲೆಲಿ?

 

 

 

 

ಚಿತ್ರ ಕಥೆ ಸೌಜನ್ಯ:

 

 

 

 

 --------------------------------------------

ಈ ನಮ  ಚಿತ್ರದ -ಚಿತ್ರ ಕಥೆ (ಚೋಕರಿ ಫ್ರಂ ಉಸ (USA )- ದಿಫಾರೆಂಟು ಸಿನೆಮ- ) - ವನ್ನ  ನಮ್ಮ ಸಹ ಸಂಪದಿಗರಾದ  ಶ್ರೀ  'ಗಣೇಶ' ಅವ್ರ ಒಂದು ಹಳೆಯ  ಬಹು 'ಹೆಸರುವಾಸಿ' ಬ್ಲಾಗ್ ಬರಹದಿಂದ  ತೆಗೆದುಕೊಂಡಿದೆ..

ಅವ್ರಿಗೆ ನಾ ಅಭಾರಿ..

  


Rating
No votes yet

Comments