ಮೋಸಗಾರ್ತಿಯ ಬೆನ್ನತ್ತಿ....ಪತ್ತೇದಾರಿ ಕಥೆ [1]

ಮೋಸಗಾರ್ತಿಯ ಬೆನ್ನತ್ತಿ....ಪತ್ತೇದಾರಿ ಕಥೆ [1]

 ಲ೦ಡನ್  ಇ೦ಗ್ಲೆ೦ಡ್  ದೇಶದ  ರಾಜಧಾನಿ..ಬಿಳಿ ಜಿರಲೆಗಳ  ನಾಡು 360 ವರ್ಷ  ಭಾರತ  ದೇಶವನ್ನು ತಮ್ಮ  ಕಪಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊ೦ಡಿದ್ದ  ಆ  ಬಿಳಿ ಜನರ  ನಾಡಿನ  ಮೋಸದ  ಜಾಲ  ದ  ಸುತ್ತ  ಕಟ್ಟಿರುವ  ಕಥೆಯೆ   ಮೋಸಗಾರ್ತಿಯ  ಬೆನ್ನತ್ತಿ.....ಪತ್ತೇದಾರಿ ಕಥೆ....

 

             ಪೋಲಿಸ್  ವಾಹನದ  ಕೂಗು ಕೇಳುತ್ತಲೆ ಇದೆ....ಜೊತೆಗೆ  ಆ೦ಬುಲೆನ್ಸ್   ಕೂಡ  ಸದ್ದು ಮಾಡುತ್ತ  ಬರುತ್ತಿದೆ...ಲಂಡನ್ ನ ಪಶ್ಚಿಮ ವಲಯ ಸೈನರ್ಟಕೂರ್ ಪ್ರಾ೦ತ್ಯದ  ಪೂಲೀಸರಿಗೆ ಕೆನೆತ್ ಕೆಫೆ ಬಳಿಯ ಕಾರ್ ಪಾರ್ಕಿಂಗ್ ಜಾಗದಲ್ಲಿ ಒಂದು ಅಪರಿಚಿತ ಶವ ಪತ್ತೆಯಾಗಿದೆ.ಶವ ಗುರುತಿಸಲಾಗುತಿಲ್ಲ.ಪೊಲೀಸ್ ಹೆಡ್ ಜಾನ್ಸಿಲ್ ಇದು ಕೊಲೆ ಎಂದು ಶ೦ಕೆ ವ್ಯಕ್ತ ಪಡಿಸುತಿದ್ದಾನೆ...ಆತನ ಜೂನಿಯರ್ ಇದ್೦ದು ಆತ್ಮಹತ್ಯೆಯ ಪ್ರಕರಣ ಎ೦ದು ದಾಖಲಿಸಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರದಲ್ಲಿದ್ದಾನೆ... ಅದರ ತನಿಖೆ ಕೈಗೆತ್ತಿಕೊಂಡು ಮುಂದಿನ ಕಾರ್ಯಕ್ಕೆ ಜಾನ್ಸಿಲ್   ಅಣಿಯಾಗುತಿದ್ದಾನೆ.

 

        ರೇವ್ಸನ್ ಒಬ್ಬ ಜಗತ್ತಿನ ಅತಿ ಅಗ್ರಗಣ್ಯ ಶ್ರೀಮಂತರಲ್ಲಿ ಒಬ್ಬ.ಈತನ ವ್ಯವಹಾರಗಳು ದೇಶ ವಿದೇಶದಲ್ಲಿ ಹರಡಿವೆ.ಇವನಂತಹ ಕಿಲಾಡಿ ಜಾಣ ಬಿಸಿನೆಸ್ ಮ್ಯಾನ್ ಇನ್ನೊಬ್ಬನಿಲ್ಲ.ಇವನು ಇನ್ನು ವಿವಾಹವಾಗದ ಏಕಾಂಗಿ.ಈತನಿಗೆ ಯಾವಾಗಲು ವ್ಯವಾಹರದ್ದೇ ಚಿಂತೆ.ಹಣ ದುಡಿಯುವುದೊಂದೆ ವ್ಯವಹಾರದ ಮುಖ್ಯ ದ್ಯೇಯ.ಆದರೆ ಆತನ ತಂದೆ ಲೂಯಿಸ್ ಒಬ್ಬ ಪಕ್ಕಾ ಜಾಣ ವ್ಯವಹಾರಗಾರ.ಅತನಿಗೆ ವ್ಯವಹಾರದೊಂದಿಗೆ ಬಂಧ ಸಂಬಂಧಗಳನ್ನು ನೋಡಿಕೊಳ್ಳುವುದು ಗೊತಿತ್ತು.ಆದರೆ ಅವನು ದುಂದು ವೆಚ್ಚಗಾರ.ಅನೇಕ ದುಶ್ಚಟಗಳ ದಾಸನಾಗಿದ್ದ.ಇವನೊಂತರಾ  ವಿಚಿತ್ರ ಸ್ವಭಾವದ ವ್ಯಕ್ತಿ ಯಾವಾಗ ಹೇಗಿರುತಿದ್ದನೆಂದೆ ಹೇಳಲಾಗೋಲ್ಲ.ಇವನು ಈಗ ತನ್ನ ಮಗನಿಗೆ ವ್ಯವಹಾರ ವಹಿಸಿ ತಾನು ಆರಾಮಾಗಿ ಜೀವನ ಸಾಗಿಸುತಿದ್ದ...ಮಗ ಬಹಳ ನೇರಾನೇರ ವ್ಯಕ್ತಿ.ತಿಪ್ಪೆಗೆ ಎಸೆದರು ಎಣಿಸಿ ಲೆಕ್ಕ ಹಾಕುವವನು.ಸುಖಾ ಸುಮ್ಮನೆ ಒಂದು ರುಪಾಯಿಯನ್ನು ಬಿಚ್ಚುವವನಲ್ಲ.ಈತನಿಗಿನ್ನು ಮದುವೆ ಆಗಿರಲಿಲ್ಲ.25ವರ್ಷದ ಯುವಕ....ಕೋಟ್ಯಾಂತರ ರುಪಾಯಿ ಆಸ್ತಿಯ ಏಕೈಕ ಒಡೆಯ.ಲಂಡನ್ ನಗರದ ಪೂರ್ವ ದಿಕ್ಕಿನ ಒಂದು ದೊಡ್ಡ ಮಾಲ್ ನಲ್ಲಿ ಕೆಲಸ ಮಾಡುವಾಕೆ ಜೂರಿ.ಜೂರಿ ಒಬ್ಬ ಸುರಸುಂದರಾಂಗಿ...ಅವಳ ನೋಟಕ್ಕೆ ಮರುಳಾಗದ ಹುಡುಗರೆ ಇಲ್ಲ ಎನ್ನಬಹುದು.ಆದರೆ ಕೆಲವರು ಜೂರಿಯ ಬಡತನವನ್ನು ದುರುಪಯೋಗಪಡಿಸಿಕೊಂಡು ಆಕೆಯನ್ನು ವಂಚಿಸಲು ಯತ್ನಿಸಿದರು ಆಕೆ ಬಹಳ ಬುದ್ದಿವಂತೆ...ಹಾಗೆಲ್ಲ ಯಾರ ಮೋಹದ ಜಾಲಕ್ಕು ಬೀಳದೆ ನೀತಿವಂತಳಾಗಿ ಬಾಳುತಿದ್ದಳು..ಒಂದು ದಿನ ರೇವ್ಸನ್ ಕೆಲಸದ ನಿಮಿತ್ತ ಜೂರಿ ಕೆಲಸ ಮಾಡುತಿದ್ದ ಮಾಲ್ ಬಳಿ ಹಾದು ಹೋಗುತಿದ್ದ.ಆ ದಿನ ಬಹಳ ಹಿಮ ಸುರಿಯತಿತ್ತು..ರೇವ್ಸನ್ ಮಾಲ್ ಬಳಿ ಬಂದಾಗ ಅತಿಯಾದ ಹಿಮ ಬಿದ್ದಿದ್ದ ಕಾರಣ ರಸ್ತೆ ಮುಚ್ಚಲ್ಪಟ್ಟಿತ್ತು.ಸ್ಥಳೀಯ ಸಂಸ್ಥೆಯ ನೌಕರರು ರಸ್ತೆಯಲ್ಲಿ ಬಿದ್ದಿದ್ದ ಹಿಮ ತೆರವುಗೊಳಿಸುವುದರಲ್ಲಿ ನಿರತರಾಗಿದ್ದರು.ಇದನ್ನು ದೂರದಲ್ಲೇ ಗಮನಿಸಿದ ಲೇವ್ಸನ್ ಗೆ ಬದಲಿ ಮಾರ್ಗವಿಲ್ಲದ ಕಾರಣ ಮಾಲ್ ಗೆ ಎಂಟ್ರಿ ಕೊಟ್ಟ.ಮಾಲ್ ನಲ್ಲಿ ಅಡ್ಡಾಡುತ್ತಿರಬೇಕಾದರೆ......

ಹೌ ಕ್ಯನ್ ಐ ಹೆಲ್ಪ್ ಯೂ?ಜೂರಿಸ್ ಕೇಳಿಗಳು.ರೇವ್ಸನ್ ಹಿಂತಿರುಗಿ ನೋಡಿದ.ಅವಳನ್ನು ನೋಡಿ ದಿಟ್ಟಸಿ ನೋಡತೊಡಗಿದ.ಅವಳ ರೂಪವನ್ನು ನೋಡುತಿದ್ದರೆ ಕಣ್ಣು ಬೇರೆಡೆ ತೆಗೆಯಲಾಗಲಿಲ್ಲ ಅವನಿಗೆ.

ಜೂರಿಸ್ ಎಕ್ಸ್ ಕ್ಯೂಸ್ ಮಿ ಪ್ಲೀಸ್...ಎಂದಳು..ಓ ಸಾರಿ....ಎಂದು ನುಡಿದ ಅವಳನ್ನೈ ನೋಡುತ್ತಾ..

ಐ ವಾಂಟ್ ಗಿಟಾರ್ ಕ್ಯನ್ ಯು ಶೋ ಮಿ ಎಂದ.ಬನ್ನಿ ತೋರಿಸುತ್ತೇನೆಂದು ವಿವಿಧ ರೀತಿಯ ಗಿಟಾರ್ ಗಳನ್ನು ತೋರಿಸಿದಳು.ಅವಳೊಂದಿಗೆ ಹೆಚ್ಚು ಕಾಲ ಕಳೆಯಲೆಂದೆ ತನಗೆ ಅದರ ಅವಶ್ಯಕತೆ ಇರದಿದ್ದರು ಕೇಳಿದ್ದ.ಕೊನೆಗೆ ಆಕೆ ತೋರಿಸಿದ ಯಾವುದೋ ಒಂದು ಗಿಟಾರ್ ತಗೊಂಡು ನೀವು ತುಂಬಾ ಚೆನ್ನಾಗಿ ಮಾತುಡುತ್ತೀರಿ ಐ ಲೈಕ್ ಯೂ ಎಂದು ಆಕೆಗೆ ಟಿಪ್ಸ್ ನೀಡಲು ವಾಲೆಟ್ ತೆಗೆದ.ಅದರಿಂದ 1000ಡಾಲರ್ ನ ಒಂದು ನೋಟು ತೆಗೆದು ನೀಡಿದ.ಇದು ನಿಮ್ಮ ಸೇವೆಗಾಗಿ ಎಂದು ಆಕೆಯ ಕೈಗಿತ್ತು ಮತ್ತೆ ಸಿಗೊಣ ಎಂದು ಹೇಳಿ ಹೊರಟು ಹೋದ.ಅತ ಆತುರದಲ್ಲಿ ಪರ್ಸ್ ನಿಂದ ಆಕೆಗೆ ಟಿಪ್ಸ್ ಕೊಡಲು ಹಣ ತೆಗೆಯುವಾಗ ಆತನ ವಿಸಿಟಿಂಗ್ ಕಾರ್ಡನ್ನು ತೆಗೆವಾಗ ಅದು ಕೆಳಗೆ ಬಿದ್ದಿತ್ತು..ಆತ ಹೋದ ಮೇಲೆ ಜೂರಿಸ್ ಅದನ್ನು ತೆಗೆದಿಟ್ಟುಕೊಂಡಳು.ಲೇವ್ಸನ್ ಇತ್ತ ತನ್ನ ಕಾರಿನ ಬಳಿ ಬಂದಾಗ ಅವನಿಗೊಂದು ಶಾಕ್ ಕಾಯ್ದಿತ್ತು.ಲಂಡನ್ ಟ್ರಾಫಿಕ್ ಪೋಲಿಸರು ಆತನ ಕಾರನ್ನು ಪಾರ್ಕಿಂಗ್ ಅಲ್ಲದ ಜಾಗದಲ್ಲಿ ಪಾರ್ಕ ಮಾಡಿದಕ್ಕಾಗಿ 1000ಡಾಲರ್ ದಂಡ ವಿಧಿಸಿ ನೋಟಿಸ್ ಅಂಟಿಸಿ ಹೋಗಿದ್ದರು.ಲೇವ್ಸನ್ ಬ್ಯಾಡ್ ಟೈಮ್ ಎಂದು ಗೊಣಗುತ್ತ ಕಾರು ಹತ್ತಿ ಹೊರಟುಹೋದ.ಜೂರಿಸ್ ಒಬ್ಬ ಏಕಾಂಗಿ ಹುಡುಗಿ. ಆಕೆ ಡರ್ಬನ್ ಸ್ಟ್ರೀಟ್ ನಲ್ಲಿ ಮಾಸಿಕ 200 ಡಾಲರ್ ತೆತ್ತು ಬಾಡಿಗೆ ರೂಂ ಮಾಡಿಕೊಂಡು ವಾಸವಿದ್ದಳು.

ಇತ್ತ ಲೇವ್ಸನ್ ಜೂರಿಸ್ ನ ಸೌಂದರ್ಯ ನೆನೆಸಿಕೊಂಡು ರೋಮಾಂಚಿತನಾಗಿದ್ದ....ಮನೆ ಆಫೀಸು ಪ್ರಯಾಣ ಹೀಗೆ ಎಲ್ಲ ಸಮಯದಲ್ಲು ನಿನದೇ ನೆನಪು ಎಂದು ಹಾಡುತಿದ್ದ.ಅವನಿಗೆ ತಿಳಿದೋ ತಿಳಿಯದೋ ಅವಳಲ್ಲಿ ಪ್ರೇಮಾಂಕುರವಾಗಿತ್ತು.ಜೂರಿಸ್ ರೂಮಿಗೆ ಬಂದು ಅವನ ವಿಸಿಟಿಂಗ್ ಕಾರ್ಡ ನೋಡಿ ಅಚ್ಚರಿ ಪಟ್ಟಳು ಲೇವ್ಸನ್ ಲೂಯಿಸ್ ಪ್ರಪಂಚದ ಅಗ್ರಗಣ್ಯ ಶ್ರೀಮಂತ.ಈತ ಅವಳೊಂದಿಗೆ ಈ ದಿನ ಸಲುಗೆಯಿಂದಿದದ್ದ ನೆನೆಸಿಕೊಂಡು ಸಂಭ್ರಮಿಸಿದಳು.ಮಾರನೆ ದಿನ ಲೇವ್ಸನ್ ಮಾಲ್ ನಲ್ಲಿ ಜೂರಿಸ್ ಭೇಟಿ ಮಾಡಿದ.ಹೆಚ್ಚು ಸಲುಗೆಯಿಂದ ಮಾತಾಡಿಸಿ ಬಂದ.ಇದು ಹೀಗೆ ದಿನವೂ ನೆಡೆಯತೊಡಗಿತ್ತು.ರೆಸ್ಟೋರೆಂಟ್ ಪಾರ್ಕ ಸಿನಿಮಾ ಅಂತ ಸುತ್ತತೊಡಗಿದರು.ಅಮರ ಪ್ರೇಮ ಕಾವ್ಯದಲ್ಲಿ ಮುಳುಗಿದ್ದ ರೇವ್ಸನ್ ಅಗ್ರಗಣ್ಯ ವ್ಯವಾಹಾರ ಡಲ್ ಆಗತೊಡಗಿತು.ಇದನ್ನು ಲೂಯಿಸ್ ಗಮನಿಸುತ್ತಲೇ ಇದ್ದ.ಅತನ ವರ್ತನೆ ನೆಡೆತೆ ಈಕ ಪ್ರೀತಿಯ ಮೋಹಜಾಲದಲ್ಲಿ ಬಿದ್ದಿದ್ದಾನೆಂದು ಆತ ಅರಿತ...ಇಷ್ಟೆಲ್ಲದರ ನಡುವೆ ಜೂರಿಸ್ ಗಾಗಿ ಲೇವ್ಸನ್ ಸಾವಿರಾರು ಡಾಲರ್ ಖರ್ಚು ಮಾಡಿಬಿಟ್ಟಿದ್ದ...ಜೂರಿಸ್ ಈಗ ಮಾಲ್ ನಲ್ಲಿ ಕೆಲಸಬಿಟ್ಟು ಪ್ರಿಯಕರ ಕೊಡಿಸಿದ ಭವ್ಯ ಬಂಗಲೆ ಕಾರು ಐಷಾರಾಮಿ ಜೀವನ ಸವಿಯತೊಡಗಿದ್ದಳು.ಆಕೆಯ ಖರ್ಚು ವೆಚ್ಚಕ್ಕೆ ಬೇಕಾದಷ್ಟು ಹಣ ಸಿಗುತಿತ್ತು...

ಒಂದು ದಿನ ಲೇವ್ಸನ್ ಜೂರಿಸಳ ಎದುರಿಗೆ ನಿಂತು ತನ್ನ ಕೈಲಿದ್ದ ಕೆಂಪು ಗುಲಾಬಿ ಹೂ ನಿಡುತ್ತ ಐ ಲವ್ ಯೂ ನಾವಿಬ್ಬರು ಶೀಘ್ರದಲ್ವೇ ಮದುವೆಯಾಗೋಣ ಎಂದು ಹೇಳಿದ.ಮನೆಗೆ ಬಂದ ಜೂರಿಸ್ ಗೆ ಇದು ಚಿಂತೆಗೀಡು ಮಾಡಿತ್ತು.ಆರೇಳು ತಿಂಗಳಿನಿಂದ ಸುಖವಾಗಿ ಲೇವ್ಸನ್ ನೀಡುವ ಹಣದಲ್ಲಿ ಜೀವನ ಸಾಗಿಸುತಿದ್ದವಳಿಗೆ ಮದುವೆಯೆಂದೊಡನೆ ಅವಳು ಚಿಂತೆಗೀಡಾಗಿದ್ದಳು.......,

         ಕಾರಣ.......?ಕಾರಣ ಇಷ್ಟೇ ಲೇವ್ಸನ್ ಜೂರಿಸ್ ರೂಪ ಲಾವಣ್ಯಕ್ಕೆ ಮಾರುಹೋಗಿ ಪ್ರೀತಿಸುತಿದ್ದವನು.ಜೂರಿಸ್ ಇದನ್ನೇ ಕೆಲಕಾಲ ಉಪಯೋಗಿಸಿ ಲೇವ್ಸನ್ ನಿಂದ ಹಣ ಗಳಿಸಿ ಜೀನ್ ಬರ್ಗ್ ಎಂಬ ತನ್ನ ಬಾಲ್ಯ ಕಳೆದ ಊರಿಗೆ ಹೋಗಿ ಅಲ್ಲೊಂದು ಮನೆ ಭೂಮಿ ಕೊಂಡು ಕುರಿ ಸಾಕಾಣಿಕೆ ಫಾರ್ಮ  ತೆರೆದು ಆಯಾಗಿ ಜೀವನ ನೆಡೆಸುವ ದೂರಾಲೊಚನೆ ಮಾಡುತಿದ್ದಳೀ.ಇವಳು ಲೇವ್ಸನ್ ನನ್ನೇ ಮದುವೆಯಾಗಬಹುದಿತ್ತು.ಅಂತಹ ಶ್ರೀಮಂತ ವ್ಯಕ್ತಿ ಮದುವೆಗೆ ಹುಡುಗಿಯರು ಯಾರು ಒಲ್ಲೆ ಎನ್ನರು.ಆದರೆ ಜೂರಿಸ್ ಲೇವ್ಸನ್ ಮದುವೆಗೆ ಒಲ್ಲೆ ಎನಲು ಕಾರಣ ಆಕೆಯ ಪ್ರಿಯಕರ ಜಸ್ಸಿಗೋಲ್..ಆತ ಒಬ್ಬ ವ್ಯಸನಿ.ಆದರೆ ಅವನನ್ನು ಜೂರಿಸ್ ಮೆಚ್ಚಿದ್ದಳು.ಜಸ್ಸಿ ತಾನೆ ಏಕೆ ಬೇಡ ಎಂದಾನು ಇವನಿಗೆ ಅವಳಿಂದ ತನ್ನ ವ್ಯಸನವ್ಯಯಕ್ಕಾಗಿ ಸಾಕಷ್ಟು ಹಣ ದೊರೆಯುತಿತ್ತು ಹಾಗಾಗಿ ಆಕೆಯನ್ನು ಪ್ರೀತಿಸುವ ನಾಟಕದಲ್ಲಿದ್ದ.ಜೂರಿಸ್ ಇಷ್ಟು ದಿನ ತನ್ನ ಲೇವ್ಸನ್ ನ ಒಡನಾಟವನ್ನು ಜಸ್ಸಿಗೆ ತಿಳಿಸಿರಲಿಲ್ಲ.........

     ------------------------------------------------------------------------------------------------------------------------------------------------------------------------------------------------------------------------------

ಜಸ್ಸಿ ಆ ದಿನ ರಾತ್ರಿ ಜೂರಿಸ್ನ ರೂಮ್  ಬಳಿ ಬಂದ..... ಅದನ್ನು ಆಕೆ ಖಾಲಿ ಮಾಡಿ ದೊಡ್ಡ ಬ೦ಗಲೆಯಲ್ಲಿದ್ದಳು...ಆ ರೂಮನ್ನು ಈಕೆಯೆ ಕೊ೦ಡು ಖಾಲಿ ಬಿಟ್ಟು ಅಲ್ಲಿ ಒಬ್ಬ ವ್ಯಕ್ತಿಯನ್ನು ಕಾವಲಿಗೆ ನೇಮಿಸಿ ಜಸ್ಸಿ ಅಲ್ಲಿಗೆ ಬ೦ದಾಗ ತನಗೆ  ತಿಳಿಸಬೇಕೆ೦ದು ಆದೇಶಿಸಿದ್ದಳು..ಅದೊ೦ದು  ದಿನ್   ಕುಡಿದು ಮತ್ತಿನಲ್ಲಿ ಜೂರಿಸ್ ರೂಮ್ ಗೆ ಜಸ್ಸಿ ರಾತ್ರಿ ವೇಳೆ ಬ೦ದ.   ಆ ರೂಮ್ ಬೀಗ ಜಡಿದು ಕೊ೦ಡು ಇತ್ತು...ಕಾವಲುಗಾರ ಜಸ್ಸಿಯನ್ನು ನೋಡಿ ಜೂರಿಸ್ ಗೆ ಫೋನಾಯಿಸಿ ವಿಷಯ ತಿಳಿಸಿದ..ತಕ್ಷಣ  ಜೂರಿಸ್ ಹಳೆಯ ರೂಮ್ ಗೆ ಬ೦ದದಳು....ಬಾಗಿಲಿನಲ್ಲಿ ಕುಡಿದು  ಬದ್ದಿದ್ದ ಆತನನ್ನು ಜೂರೀಸ್ ಮಲಗಿಸಿದಳು.ಬೆಳಗ್ಗೆ ಎದ್ದಾಗ ಜೂರೀಸ್ ಜಸ್ಸಿಗೆ ತನ್ನ ಮೋಹಪರವಶಕ್ಕೆ ಶ್ರೀಮಂತ ವ್ಯಕ್ತಿಯೊಬ್ಬ ಬಿದ್ದಿದ್ದು ತಾನು ಆತನಿಂದ ಈ ತನಕ ಬಂಗಲೆ ಕಾರು ಸಾವಿರಾರು ಡಾಲರ್ ಹಣ ಮಾಡಿರುವುದಾಗಿಯು ಅದನೆಲ್ಲ ನಾನು ವಿವಾಹವಾಗಿ ಅನುಭವಿಸೋಣ ಆದರೆ ಆತ ಈಗ ನನ್ನನ್ನು ಮದುವೆಯಾಗಲು ಒತ್ತಾಯಿಸುತಿದ್ದಾನೆ. ನಾನು ಈ ದಿನ ಆತನೊಂದಿಗೆ ಸಂಬಂಧ ಕಡಿದುಕೊಳ್ಳುವುದಾಗಿ ನಂತರ ತನ್ನ ಮುಂದಿನ ಯೋಜನೆಯಂತೆ  ನಾವಿಬ್ಬರು  ಹಳ್ಳಿಗೆ ಹೋಗಿ ನೆಲೆಸುವುದೆಂದು ತಿಳಿಸಿದಳು...ಈ ವರೆಗೆ ಆಕೆಯ  ಮಾತನ್ನು  ತದೇಕ  ಚಿತ್ತದಿ೦ದ  ಕೇಳುತಿದ್ದ  ಜಸ್ಸಿಗೆ ಆಕೆ ಆತನೊ೦ದಿಗೆ ಸ೦ಬ೦ದ  ಕಡಿದುಕೊೞುತ್ತೆನೆ೦ದೊಡನೆ ಪಿತ್ತ  ನೆತ್ತಿಗೇರಿತು...ಆಕೆಯ  ಮೂತಿಗೆ ಗುದ್ದಿದ..ಜೂರಿಸಿ ನೋವಿನಿ೦ದ  ಮುಖ  ಕಿವುಚಿದಳು......ಈಗ  ಜಸ್ಸಿ ಜೂರಿಸ್  ನಾನು ಹೇಳುವದನ್ನು ಕೇಳಿದರೆ ಇಬ್ಬರು ಕೋಟ್ಯಾಧಿಷ್ವರಾಗಿ  ಹಾಯಾಗಿ ಇರಬಹುದು ಎ೦ದು ತನ್ನ  ಯೋಜನೆಯನ್ನು

ಹೇಳತೊಡಗಿದ.......

      ಜೂರಿಸ್ & ಜಸ್ಸಿ ಸೇರಿ ಮು೦ದೇನು ಮಾಡಿದರು.....ಮು೦ದಿನ ಭಾಗದಲ್ಲಿ..... 

 

 

Comments