ಮಾಲ್ಗುಡಿ ಡೇಸ್ ಕನ್ನಡದಲ್ಲಿ ಪ್ರಸಾರವಾಗಲಿ

ಮಾಲ್ಗುಡಿ ಡೇಸ್ ಕನ್ನಡದಲ್ಲಿ ಪ್ರಸಾರವಾಗಲಿ

ಕರ್ನಾಟಕದ ಹೆಮ್ಮೆಯ ನಟ, ನಿರ್ದೇಶಕ ಶಂಕರನಾಗ್ ಅವರು ನಿರ್ದೇಶಿಸಿ ನಟಿಸಿದ ಮೂಲವಾಗಿ ಹಿಂದಿಯಲ್ಲಿ ತಯಾರಾಗಿದ್ದ ಮಾಲ್ಗುಡಿ ಡೇಸ್ ಅನ್ನೋ ದಾರಾವಾಹಿ ಜನಶ್ರಿ ಕನ್ನಡ ಸುದ್ದಿ ವಾಹಿನಿಯಲ್ಲಿ ಇದೇ ಜೂನ್ ೧೬ ರಿಂದ ಪ್ರಸಾರವಾಗಲಿದೆ. ಇದು ಖುಶಿ ಪಡುವ ವಿಚಾರವಾದರೂ, ಇದರ ಹಿಂದೆ ಬೇಸರ ಅಡಗಿದೆ. ಯಾಕಂದ್ರೆ, ಇದು ಕನ್ನಡ ಸಬ್ ಟೈಟಲಿನೊಂದಿಗೆ ಹಿಂದಿಯಲ್ಲೇ ಪ್ರಸಾರವಾಗಲಿದೆ ಎಂದು ಜನಶ್ರೀ ಹೇಳಿಕೊಂಡಿದೆ. ಕನ್ನಡಿಗರೇ ನಟಿಸಿರುವ ಕನ್ನಡ ನಾಡಿನಲ್ಲೇ ತಯಾರಾಗಿರುವ ಕನ್ನಡ ಸಂಸ್ಕ್ರುತಿಯನ್ನೇ ಬಿಂಬಿಸುವ ಒಂದು ದಾರಾವಾಹಿಯನ್ನು ಕನ್ನಡದ ಸುದ್ದಿ ವಾಹಿನಿಯಲ್ಲೇ ಬೇರೊಂದು ಭಾಷೆಯಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿರುವುದು ಕನ್ನಡಿಗರ ದೌರ್ಬಾಗ್ಯವೇ ಎನ್ನಬೇಕು. ಕರ್ನಾಟಕದಲ್ಲಿ ಡಬ್ಬಿಂಗಿಗೆ ಯಾವುದೇ ನಿಷೇದ ಇಲ್ಲದಿದ್ದರೂ, ಡಬ್ಬಿಂಗ್ ಎಂಬುದು ಸಂವಿಧಾನಾತ್ಮಕ ಕ್ರಮವಾದರೂ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡದೇ ಬೇರೊಂದು ಭಾಷೆಯಲ್ಲಿ ಕೇವಲ ಕನ್ನಡ ಸಬ್ ಟೈಟಲ್ಲಿನಲ್ಲಿ ಪ್ರಸಾರ ಮಾಡುತ್ತಿರುವುದು ಅದನ್ನು ಕನ್ನಡದಲ್ಲಿ ನೋಡಬೇಕೆಂದು ಬಯಸುವ ಕೋಟ್ಯಂತರ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದೆ. ಆದಕಾರಣ ಈ ವಿಷಯದ ಕುರಿತಾಗಿ ಜನಶ್ರೀ ವಾಹಿನಿಯ ಗಮನ ಸೆಳೆಯಲು ಮತ್ತು ಆ ಮೂಲಕ ಕನ್ನಡ ಪ್ರೇಕ್ಷಕರ ಬೇಡಿಕೆಯನ್ನು ಪರಿಗಣಿಸಿ ದಾರಾವಾಹಿಯನ್ನು ಕನ್ನಡದಲ್ಲೇ ಪ್ರಸಾರ ಮಾಡುವಂತೆ ಕೋರಲು ಒಂದು ಮಿಂಬಲೆ ಮನವಿಯನ್ನು (ONLINE PETITION) ಸಲ್ಲಿಸಲಾಗುತ್ತಿದೆ. ತಾವೂ ಕೂಡ ಇದಕ್ಕೆ ತಮ್ಮ ಸಹಿ ಮಾಡುವುದರ ಮೂಲಕ ಕನ್ನಡ ಪ್ರೇಕ್ಷಕರ ಆಗ್ರಹಕ್ಕೆ ಬೆಂಬಲ ಸೂಚಿಸಬೇಕೆಂದು ಕೇಳಿಕೊಳ್ಳುತ್ತೇವೆ.

http://www.change.org/petitions/janashree-news-telecast-kannada-version-of-malgudi-days

 

 

Rating
No votes yet

Comments