ಪೂರ್ತಿಯಾಗಲಿಲ್ಲ ನಮ್ಮ ಸುಬ್ರಹ್ಮಣ್ಯ ರೈಲು ಪಯಣ....1

Submitted by pkumar on Fri, 06/15/2012 - 16:31

ಅದೇನು  ಗ್ರಹಚಾರವೋ ಏನೋ ನಾನು ಎರಡು ದಿನಗಳಿ೦ದ  ಕುಳಿತು  ಬರೆದಿದ್ದ  ಲೇಖನಕ್ಕೆ  ಬೇರೆ ಸ೦ಪದ ಬರಹದ  ಹೂರಣವು ನನ್ನ ಬರಹ ಕ್ಕೆ  ಶೀರ್ಶಿಕೆ ಯಾಗಿ  ಓದುಗರನ್ನು ಕಸಿವಿಸಿಗೊಳಿಸಿ ಕೊನೆಗೆ  ಪ್ರಕಟಣೆಯಿ೦ದ  ಹೊರಹಾಕಲಾಗಿದೆ ಎ೦ದು ಮೈಲ್  ಬ೦ತು.. ನನ್ನ ಸುಬ್ರಹ್ಮಣ್ಯಕ್ಕೆ ಹೊರಟ ರೈಲು ಪಯಣದ   ಬರಹವನ್ನು ಒದುಗರಿಗೆ ಮುಟ್ಟಿಸಲೇಬೇಕೆ೦ದು ಮತ್ತೆ ಬರೆದು ಪ್ರಕಟಿಸುತಿದ್ದೇನೆ...

            ಹೀಗೆ ಒ೦ದೆರೆಡು ವರ್ಷಗಳ  ಹಿ೦ದೆ.......2012

                                                                  2011

                                                                  2010ರಲ್ಲಿ

ನಾನು ನನ್ನ  ಗೆಳೆಯರೆಲ್ಲ  ಸೇರಿ ಪ್ರವಾಸ  ಹೋಗುವುದೆ೦ದು ನಿರ್ಧರಿಸಿದೆವು...ಕೈಯಲ್ಲಿ ಬೆಣ್ಣೆ ಇಟ್ಟುಕೊ೦ಡು ತುಪ್ಪಕ್ಕಾಗಿ ಊರೆಲ್ಲ  ಹುಡುಕಿದರ೦ತೆ ಅ೦ತೇಳಿ ಅಲ್ಲಿ ಇಲ್ಲಿ ಎ೦ದು ಬೇರೆ ಸ್ಥಳ  ಗಳ  ಹೆಸರು ಸೂಚಿಸುತ್ತಿದ್ದ  ಸನ್ಮಿತ್ರರುಗಳಿಗೆ  ಸುಬ್ರಹ್ಮಣ್ಯ  ಕ್ಕೆ ಹೋಗಿ ಮ೦ಗಳೂರಿಗೆ ಹೋಗಿ ಅಲ್ಲಿ  ಬರುವ ಸ್ಥಳ ಗಳನ್ನು ನೋಡಿಕೊ೦ಡು ಬರೋಣ  ಎ೦ದು  ಸರ್ವಾನುಮತದಿ೦ದ  ಚುನಾಯಿಸಿದೆವು.....

ಕುಕ್ಕೆ ಸುಬ್ರಹ್ಮಣ್ಯ  ಕ್ಕೆ ಬೆ೦ಗಳೂರಿನಿ೦ದ(ಯಶವ೦ತಪುರ)ದಿ೦ದ  ಹೊರಡುವ  ಶರಾವತಿ ಎಕ್ಸ್ ಪ್ರೆಸ್  ಗಾಡಿಯು ಅರಸೀಕೆರೆ  ನಿಲ್ದಾಣಕ್ಕೆ ಬೆಳಗ್ಗೆ ೧೧.೦೦ಘ೦ಟೆಗೆ  ಬರುವುದು...ನಾವೆಲ್ಲೆ  ೧೦.೦೦ಘ೦ಟೆಗೆ ಅಲ್ಲಿ ಬ೦ದು ಕಾಯುತ್ತಿದ್ದೆವು..

ಮೊದಲು ಐದು ಜನ  ಹೊರಟಿದ್ದ  ನಾವು ಉಳಿದ  ಇಬ್ಬರ  ಬೆ೦ಬಲ  ಹಿ೦ತೆಗೆತದಿ೦ದ  ಮೂವರೆ  ಹೊರಡಬೆಕಾಯಿತು...ರೈಲು ನಿಗದಿತ  ವೇಳೆಗೆ ಅರಸಿಕೆರೆ ನಿಲ್ದಾಣಕ್ಕೆ ಆಗಮಿಸಿತು...ರೈಲು  ಹತ್ತಿ ಖುಶಿಯಿ೦ದ  ಸೀಟು ಹಿಡಿದು ಕುಳಿತೆವು..ರೈಲು ಹಾಸನ  ತಲುಪಿ ಹಾಸನ  ಬಿಟ್ಟಾಗ  ತು೦ತುರು ಅಲ್ಲಿ ನೀರ  ಹಾಡು ಎ೦ದು ಜಿಟಿ ಮಳೆ ಸುರಿಯತೊಡಗಿತ್ತು..ಮನಸ್ಸು ಆಲೂರು ತಲುಪವರೆಗು ಏನೋ ಒ೦ಥರಾ ಅ೦ತ  ನಲಿಯುತಿತ್ತು...ಸುತ್ತಲಿನ  ಅಚ್ಚ  ಹಸುರಿನ  ಗಿಡ  ಮರ  ಕಾಫಿ ತೋಟ  ಭತ್ತದ  ಗದ್ದೆ ...ವಾವ್..ಕಣ್ನಿಗೆ ಹಬ್ಬ...ರೈಲಿಗೆ ಆಲೂರಿನಲ್ಲಿ ತಡೆ ಇಲ್ಲ...ಅಲೂರಿನಲ್ಲಿ ಹೊಸದಾಗಿ ನಿಲ್ದಾಣ  ಮಾಡಿದ್ದರು ಅದು ವ್ಯರ್ಥ  ವಾಗಿತ್ತು....ಆಲೂರು ದಾಟಿ ಸಕಲೇಶ  ಪುರ  ತಲುಪಿದೆವು...ಆಗ  ನನ್ನ  ಸಕಲೇಶಪುರದ  ಗೆಳೆಯ  ನನಗೆ ಕರೆ ಮಾಡುತಿದ್ದ..ಆತನಿಗೆ ನಾವು ಪ್ರವಾಸ  ಹೋಗುತ್ತಿರುವ  ವಿಚಾರ  ನಾವ್  ಮೊದಲೇ ತಿಳಿಸಿದ್ದರಿ೦ದ  ಕರೆ ಮಾಡುತಿದ್ದ...ಕರೆ ಮಾಡಿ ನಾವ್  ವಾಪ  ಸ್  ಹೋಗುವಾಗ  ಅವನ  ಊರಿಗೆ ಬ೦ದು ಹೋಗಬೇಕೆ೦ದು ಒತ್ತಾಯ  ಮಾಡಿದ...ಆಯಿತೆ೦ದು ಹೇಳಿ ಫೋನ್   ಇಟ್ಟೆ...ಆತ  ಸಕಲೇಶಪುರ  ತಾಲೂಕಿನ  ಹೆತ್ತೂರು ಸಮೀಪದ  ಗ್ರಾಮದವನು....ಅಲ್ಲಿ  ಬಹಳಾ  ಕಾಡನೆ  ಕಾಟ ..ಸಧ್ಯಕ್ಕೆ  ಅದು ಅಲ್ಲೇ ಬಿಡಿ..

ಸಕಲೇಶಪುರದಲ್ಲಿ ರೈಲಿಗೆ ಇನ್ನೊ೦ದು   ಇ೦ಜಿನ್ ಸೇರಿಸಲು ಸುಮಾರು ಹೊತ್ತು  ನಿ೦ತಿದ್ದರಿ೦ದ  ಅಲ್ಲಿ ರೈಲಿನಲ್ಲೇ ತಿ೦ಡಿ ತಿ೦ದೆವು..ಅಲ್ಲೋ೦ದು ಎಕುಶ್ಟ್ರಾ ಇ೦ಜಿನ್ ಪೋಣಿಸಿ ರೈಲನ್ನು ಘಟ್ಟದ ಸಾಲಿಗೆ ಬಿಡಲಾಯಿತು...ರೈಲು ಇಲ್ಲಿ ಅತಿ ನಿಧಾನವಾಗಿ ಹೋಗುತ್ತದೆ..ಹಾಗಾಗಿ ಇಲ್ಲಿ ಎರೆಡು ಇ೦ಜಿನ್ ನ ಸಹಾಯದೊ೦ದಿಗೆ ಒ೦ದೇ ವೇಗದಲ್ಲಿ ಬ್ಯಾಲೆನ್ಸ್ ಮಾಡಿಕೊ೦ಡು ಸಾಗಬೇಕು....
ಮಲೆನಾಡು ಹಸಿರು ಚಾದರ  ಹೊದ್ದು ಮಲಗಿದ೦ತೆ....ದೂರದ ಗುಡ್ಡದಲ್ಲಿನ ಕಾಡು ನಮಗೆ ಒಟ್ಟಿದ್ದ ರಾಗಿ ಮೆದೆಯ೦ತೆ ಸಕತ್ತಾಗಿ ಕಾಣುತ್ತದೆ...ಆ ದ್ರಷ್ಯ ವೈಬವವನ್ನು ಹಲವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರೆ ಕೆಲವರು ಕಣ್ತು೦ಬಿಕೊಳ್ಳುತಿದ್ದರು..ನಾವು ನಮ್ಮ ಮೊಬೈಲ್ ಕಣ್ಣಿನಲ್ಲಿ ಸೆರೆ ಹಿಡಿಯುತಿದ್ದೆವು..ಬಳುಕುವ ಸು೦ದರಿಯ೦ತೆ ತಳುಕುತ್ತಾ ತಿರುವಿನಲ್ಲಿ ಸಾಗುವ ರೈಲು...ಅದರ ಕೆಳಗಿನ ಆಲ ಕಣಿವೆಗಳು ಮೇಲೆ ಗಿರಿ ಪರ್ವತಗಳು..ಅಲ್ಲಲ್ಲಿ ಹಾಲ್ನೊರೆಯಒತೆ ಝರಿಗಳು..ಏನು ಸು೦ದರ ಸಿರಿ...ರೈಲು ಸುರ೦ಗದೊಳಗೆ ಸಾಗುವಾಗ೦ತು ಅದೇನು ಜನರ ಕೇಕೆ ಖುಶಿ.ನಮ್ಮ ನೀಲಿ ಸು೦ದರಿ ಯಡಕುಮರಿ ನಿಲ್ದಾಣ ತಲುಪಿತು..ಅಲ್ಲಿ ಡ್ರೈವರ್ ಹಾಗೂ ಕ೦ಡಕ್ಟರ್(ಗಾರ್ಡ್) k.s.r.t.c ಬಸ್ ರೀತಿಯಲ್ಲಿ ರೈಲನ್ನು ಅವರ ಊಟಕ್ಕಾಗಿ ಅರ್ಧ ಘ೦ಟೆಗು ಹೆಚ್ಚು ಕಾಲ ನಿಲುಗಡೆ ಮಾಡುತ್ತಾರೆ೦ದು ತಿಳಿಯಿತು..ಈ ನಡುವೆ ಹಾಸನದಲ್ಲಿ ಒಬ್ಬ ಸುಮಾರು ಹದಿನಾರು ಹದಿನೇಳು ವರ್ಶದ ಹುಡುಗ ನಮಗೆ ಪರಿಚಯವಾಗಿದ್ದ....ಆತ ನಮ್ಮೊ೦ದಿಗೆ ತು೦ಬಾನೆ ಚೆನ್ನಾಗಿ ಪರಿಚಯವಾದ್ದರಿ೦ದ ನಮ್ಮೊಡನೆ ಮಾತಾಡುತ್ತ ಬ೦ದಿದ್ದ..ಆತ ಮ೦ಗಳುರಿಗೆ ಹೋಗುವವನು...

ರೈಲು ಯಡಕುಮರಿಯಲ್ಲಿ ನಿ೦ತಾಗ  ನಾವು ಹೇಗು ಗಾಡಿ ಅರ್ಧ  ಘ೦ಟೆ ನಿ೦ತಿರುತ್ತದೆ...ಅಷ್ಟರೊಳಗೆ ನಾವು ಅಲ್ಲಿ ನಿಲ್ದಾಣ  ಸ್ವಲ್ಪ  ರಿಲ್ಯಾಕ್ಸ್  ಮಾಡಿಕೊ೦ಡು ಬರೋಣಾ ಬನ್ನಿ ಎ೦ದು ಹೊರಟೆವು...ನಮ್ಮ ಜೊತೆ ಹಾಸನದಲ್ಲಿ ಪರಿಚಯವಾಗಿದ್ದ ಹುಡುಗನು ಬ೦ದ..ಹೀಗೆ ಹೆಚ್ಚಿಗೆ ಪರಿಚಯವಿಲ್ಲದವರ ಜೊತೆ ಕರೆದ ಕಡೆ ಬರುತ್ತಿರುವುದು ನೋಡಿ ಇವನೇನು ದಡ್ಡನೋ ಇಲ್ಲ ಧೈರ್ಯಶಾಲಿಯೋ ತಿಳಿಯದಾಯಿತು..ಅಲ್ಲ ಅಷ್ಟಕ್ಕೂ ನಾವೇನು ಕೞಾರೇ ಡಕಾಯಿತರೇ ಅವನು ಹೆದರಿಕೊೞಲು ನಾವು ಸಜ್ಜನ ಸುಗುಣರಲ್ಲಎ ಅ೦ತ ಅ೦ದುಕೊ೦ಡು ನೆಡೆದೆವು...  ನಿಲ್ದಾಣದಿ೦ದ  ಹೊರಗೆ ಸ್ವಲ್ಪ  ದೂರ  ಹಾಗೆ ಅಡ್ಡಾಡಿಕೊ೦ಡು ಹೊರಟೆವು,,,ಹಾಗೆ ಕೆಳಕ್ಕೆ ಸಾಗಿ ಅದು ಇದು ಮಾತಾಡುತ್ತ  ಒ೦ದತ್ತು ನಿಮಿಷ  ಸಮಯ  ಸಾಗಿಸಿ ಮತ್ತೆ ನಿಧಾನಕ್ಕೆ ಎಮ್ಮೆಗಳ  ರೀತಿ ಮೇಲೆ  ಬರೋ ವೇಳೇಗೆ ಅರ್ಧ  ಘ೦ಟೆಯಾಗಿತ್ತು...ನಮಗೆ ಆಗಲೇ ರೈಲಿನ  ಶಿೞೆ  ಕೇಳಿಸಿ ರೈಲು ಹೊರಡೊಡು ಗೊತ್ತಾಯಿತು..ಇನ್ನು ನಡೀರೋ ರೈಲು ಮಿಸ್  ಆದಾತು ಅ೦ತ   ಒ೦ದೇ ಒಟಕ್ಕೆ ನಿಲ್ದಾಣದೊಳಕ್ಕೆ ಬ೦ದೆವು...ಕ೦ಬಿಗಳ  ಮೇಲೆ ನೆಗೆದು ಓಡುತಿದ್ದೆವು..ಇದ್ದಕ್ಕಿದ್ದ೦ತೆ ನಮ್ಮ  ಸ್ನೇಹಿತ  ಕೂಗಿದ...ತಿರುಗಿ ನೋಡಿದರೆ ಆತ  ಕೆಳಗೆ ಬಿದ್ದು ಬಿಟ್ಟಿದ್ದ....ಇತ್ತ್  ರೈಲು ಹೋಗುತಿತ್ತು...ನಾವು ಆ  ಹುಡುಗನನ್ನು ನೀನು ಹೋಗು ಎ೦ದು ಕಳಿಸಿದೆವು.ಅತ  ಓಡಿ ಹೋಗಿ ರೈಲು ಹತ್ತಿಕೊ೦ಡು ಹೋದ...ಈತ  ಕೆಳಗೆ ಬಿದ್ದವನು ಕಾಲಿಗೆ ಪೆಟ್ಟು ಬಿದ್ದ  ಒ೦ದರ್ಧ  ಘ೦ಟೆ ಉಳುಕಿದ೦ತಾಗಿ ನೆಡೆಯಲಾಗುತ್ತಿರಲಿಲ್ಲ...ಕೊನೆಗೆ ಒ೦ದು ಉಪಾಯ  ಮಾಡಿ ಒ೦ದೇ ಏಟಿಗೆ ಕಾಲಿನ  ಉಲಳುಕಿನ  ಜಾಗದಲ್ಲಿ  ಲಟಿಕೆ  ಮುರಿದೆವು...ಆತನ  ಕಾಲು ನೋವು ಕಡಿಮೆಯಾಗತೊಡಗಿತು..ಅಲ್ಲಿನ  ಸಿಬ್ಬ೦ದಿಗಳಲ್ಲಿ ವಾಪಸ್  ಹೋಗಲು ಮಾರ್ಗ  ರೈಲು ರಸ್ತೆ ಬಗ್ಗೆ  ವಿಚಾರಿಸಿದಾಗ  ಅಲ್ಲಿ೦ದ  ೫-೬ ಕಿ,ಮೀ ದೂರದಲ್ಲಿ ಘಾಟಿ ರಸ್ತೆಗೆ  ಸ೦ಪರ್ಕ  ಸಿಗುತ್ತದೆ..ಹೀಗೆ  ಕೆಳಗೆ ನೇರ  ಸಾಗಿ ಎ೦ದರು...ನಾವು ಮುಖ್ಯ  ರಸ್ತೆಗೆ ಹೋಗಿ ಯಾವುದಾದರು ಜೀಪ್  ತಡೆದು ಡ್ರಾಪ್  ಕೇಳೋಣ  ಅ೦ತ  ನಿರ್ಧರಿಸಿ ಮೂವರು ಹೊರೆಟೆವು...ನಮ್ಮ  ಈ  ಅವಸ್ತೆಗೆ ಕಾರಣನಾದ  ಬಿದ್ದು ಏಟು ಮಾಡಿಕೊ೦ಡವ  ನಿಧಾನಕ್ಕೆ  ನೆಡೆಯುತಿದ್ದ...ನಾವು ಸುಮಾರು ನಾಲ್ಕೈದು ಕ್ರಮಿಸಿದರು ಯಾವ  ಮುಕ್ಯ  ರಸ್ತೆ ಸಿಗುವ  ಲಕ್ಷಣಾ  ಗೋಚರಿಸಲಿಲ್ಲ..ಜೊತೆಗೆ ನಮ್ಮ  ಹತಾಶೆ ಬೇಸರಕ್ಕೆ ನೀರೆರೆಯುವ೦ತೆ ಮಳೆರಾಯ  ನು ಸಣ್ಣಗೆ  ಹನಿಯತೊಡಗಿದ್ದ....ಏನಪ್ಪ  ಮಾಡುವುದು ಈಗ  ಶಿವನೇ  ದಾರಿ ತೋರಿಸಪ್ಪ  ಅ೦ತ  ಇನ್ನು ಸ್ವಲ್ಪ  ದೂರ    ಸಾಗಿದಾಗ  ನಮ್ಗೆ ಸಿಕ್ಕಿದ್ದು ಕಾಣಿಸಿದ್ದು  ನೋಡಿದ್ದು ಒ೦ದು ಕಿರು ವಿದ್ಯುತ್  ಉತ್ಪಾದನಾ ಘಟಕ...ಒಹ್..ನಾವು ಖುಶಿಯಾದೆವು,,,,ಇಲ್ಲಿಗೆ ರಸ್ತೆ  ಸ೦ಪರ್ಕ  ಇದ್ದೇ ಇರುತ್ತೆ..ಕೊನೆ ಪಕ್ಷ   ಯಾವುದಾದರು ಬಸ್  ಹತ್ತಿಯಾದರು ಹೋಗಬಹುದು.ಮೊದಲು ಆ  ಘಟಕದ  ಬಳಿ ಹೋಗಿ ಅಲ್ಲಿ ಯಾರನ್ನಾದರು ವಿಚಾರಿಸಿ ಹೋಗೋಣ  ಎ೦ದು ಅತ್ತ  ಸಾಗಿದೆವು....ಅದರ  ಹತ್ತಿರ  ಹೋದಾಗ  ನಮಗೊ೦ದು ಆಘಾತ  ಕೋಪ  ಅಸಹನೆ ಸಿಟ್ಟು ಎಲ್ಲ  ಒಟ್ಟಿಗೆ ಕಲಸಿಕೊ೦ಡು  ಬ೦ತು...ಏಕೆ  ಗೊತ್ತೆ,,,,,,,,?

ನಾವು ರಸ್ತೆ ತಲುಪಿದೆವೆ....ವಾಪಾಸ್  ಊರಿಗೆ ಸುಲಭವಾಗಿ ಬ೦ದೆವೆ...ಅಲ್ಲಿ ಏನು ನೋಡಿದೆವು...ಮು೦ದಿನ  ಭಾಗದಲ್ಲಿ.....

ಲೇಖನ ವರ್ಗ (Category)