ಅರಿವಿನ ಮಿತಿ (ಶ್ರೀ ನರಸಿಂಹ 37)

ಅರಿವಿನ ಮಿತಿ (ಶ್ರೀ ನರಸಿಂಹ 37)

ಕೊಡ ತನ್ನಗಾತ್ರಕ್ಕೆ ತಕ್ಕಂತೆ ನೀರ ತುಂಬಿಸಿಕೊಳುವಂತೆ
ನಮ್ಮ ಬುದ್ದಿ ಶಕ್ತಿಗನುಗುಣವಾಗಿ ಜ್ಞಾನವನು ಪಡೆವೆವಂತೆ
ಹಿಡಿಸದದು ಹೆಚ್ಚಾಗಿ ಸುರಿವ ನೀರು ತುಂಬಿರುವ ಕೊಡಕೆ
ಬುದ್ದಿಶಕ್ತಿಗೆ ಮೀರಿ ಅರಿವಾಗದು ಹೆಚ್ಚಿನ ಜ್ಞಾನವು ಮನಕೆ
 
ಎಲ್ಲ ಅರಿತಿಹೆನು ನಾನೆನುವ ಅಹಮಿಕೆಯನು ಇರಿಸದಿರು
ದೇವ ಸೃಷ್ಟಿಸಿಹ ಈ ಜಗದಿ ನೀ ಸಣ್ಣ ಕಣ ಮರೆಯದಿರು
ಅರಿಯಲು ಆಗದಿಹ  ಹಲವು ವಿಷಯಗಳಿಹವು ಜಗದಲ್ಲಿ
ಎಲ್ಲವನು ತಿಳಿಸುವ  ಶ್ರೀನರಹರಿಯೂ ಕೃಪೆ ತೋರಿದಲ್ಲಿ
 
ಜ್ಞಾನವೆನುವ ಸಾಗರದಿ ಹನಿ ನೀರ ಕುಡಿದಂತೆ ನಿನ್ನ ಜ್ಞಾನದರಿವು
ಶರಣಾಗು ಶ್ರೀನರಸಿಂಹನಿಗೆ ಪಡೆಯುವೆ ನೀ ಎಲ್ಲ ಜ್ಞಾನದ ತಿಳಿವು

 

Rating
No votes yet

Comments