ಕವಿತೆ ಎಂದರೆ.. ಅರ್ಥ ಇರಲೆಬೇಕೇನು?
ಕವನ
ಕವಿತೆ ಎಂದರೆ
ಅರ್ಥ ಇರಲೆಬೇಕೇನು?
ಎಷ್ಟೋ ಜೀವಕ್ಕೆ ಅರ್ಥವೆ ಇಲ್ಲ..
ಕವಿತೆ ಎಂದರೆ
ಬಣ್ಣ ಬಣ್ಣದ ಕನಸು
ಒಸಿ ಮುನಿಸು, ಪಿಸು ಮಾತು
ತುಸು ಪ್ರೀತಿ, ಇಷ್ಟೇ ಆಯತದಲ್ಲಿ
ಆಯ ತಪ್ಪಿದ ನಿನ್ನ ಹುಡುಕುವುದೇನು?
ಎಷ್ಟೋ ಹೆಣ್ಣಿನ ಮೌನ ದಾಖಾಲಾಗಲೆ ಇಲ್ಲ..
ಪ್ರಶ್ನೆ ಏಳಲೆ ಇಲ್ಲ..
ಕವಿತೆ ಎಂದರೆ
ಅಸ್ತಿತ್ವ, ಸನ್ಮಾನ, ಬಹುಮಾನ
ತೃಣ, ಕಲ್ಪಕಾಯಗಳ
ಸಂಕಲ್ಪ ಬಿಂದು..
ಶೇಷ ಅವಶೇಷಗಳ ಸುಟ್ಟು
ಮೆತ್ತಿಕೊಂಡ ಬೂದಿ..
ಸಾರ, ವಿಸ್ತಾರ ಗಡಿ ಬೇಲಿ ದಾಟಿ
ಎಲ್ಲರನು ಮುಟ್ಟಬೇಕೇನು?
ಎಷ್ಟೋ ಅವ್ವಂದಿರು
ಅಡುಗೆ ಮನೆಯನ್ನೂ ದಾಟಿಲ್ಲ..
ಶಿವಪ್ರಸಾದ್ ಎ ಸ್.ಪಿ.ಎಸ್
Comments
ಉ: ಕವಿತೆ ಎಂದರೆ.. ಅರ್ಥ ಇರಲೆಬೇಕೇನು?
ಉ: ಕವಿತೆ ಎಂದರೆ.. ಅರ್ಥ ಇರಲೆಬೇಕೇನು?
ಉ: ಕವಿತೆ ಎಂದರೆ.. ಅರ್ಥ ಇರಲೆಬೇಕೇನು?