ಒಂದು ಕೊಲೆಯ ಸುತ್ತ,, ಪ್ರತಿಕ್ರಿಯೆಗಳು.. ವಂದನೆ,, ಇತ್ಯಾದಿ

ಒಂದು ಕೊಲೆಯ ಸುತ್ತ,, ಪ್ರತಿಕ್ರಿಯೆಗಳು.. ವಂದನೆ,, ಇತ್ಯಾದಿ

  ಒಂದು ಕೊಲೆಯ ಸುತ್ತ , ಒಂದು ನಿಜ ಘಟನೆಯನ್ನು ವಸ್ತುವಾಗಿಟ್ಟುಕೊಂಡು, ಸುದ್ದಿ ಪತ್ರಿಕೆಗಳ ಸುದ್ದಿಯನ್ನು ಸಂಗ್ರಹಿಸಿ, ಜೊತೆಗೆ ಕಲ್ಪನೆಯನ್ನು ಬೆರೆಸಿ ರಚಿಸಿದ ಕತೆ. ಪ್ರಸ್ತುತದಲ್ಲಿರುವ ವಸ್ತು ಒಂದನ್ನು ತೆಗೆದುಕೊಂಡು ಕತೆ ಬರೆಯುವುದು ಒಂದು ಸಾಹಸವೆ ಆಗುತ್ತದೆ ಎಂದು ಅರಿವಾಗಿದ್ದು ಈ ಕತೆಯನ್ನು ಬರೆಯುವಾಗ, ಎಲ್ಲರಿಗೆ ಹೆಚ್ಚುಕಡಿಮೆ ಎಲ್ಲ ವಿಷಯವು ತಿಳಿದಿರುತ್ತದೆ ಹಾಗಿದ್ದರು ಕತೆಯಲ್ಲಿ ಕುತೂಹಲ ಕಾಯ್ದುಕೊಳ್ಳುವುದು ಒಂದು ಸಾಹಸ. 

 
  ಹಾಗಿದ್ದು ಮೊದಲ ಬಾಗದಿಂದ ಕಡೆಯ ಮೂರನೆ ಬಾಗದವರೆಗು ಹೆಚ್ಚು ಕಡಿಮೆ ಒಂದೆ ತರ ಹಿಟ್ಸ್  ( ~= ೧೨೦) ಬಂದಿರುವುದು, ಕಂಡು ಆಶ್ಚರ್ಯವಾಯಿತು ಅಂದರೆ ಮೊದಲ ಬಾಗ ಓದಿದವರು ಮೂರನೆ ಬಾಗದವರೆಗು ಓದಿದ್ದಾರೆ ಎಂದು ಅರ್ಥಮಾಡಿಕೊಂಡೆ,  
 
 ಸಾಮಾನ್ಯವಾಗಿ ಕತೆ ಬರೆಯುವಾಗ ನಾನು ಒಮ್ಮೆಲೆ ಪೂರ್ಣ ಕತೆಯನ್ನು ಬರೆದು ನಂತರ ಅದನ್ನು ಅಗತ್ಯಬಿದ್ದರೆ ಬಾಗವಾಗಿ ಪ್ರಕಟಿಸುವುದು ನನ್ನ ಪದ್ದತಿ. ಆದರೆ ಸಪ್ತಗಿರಿಯವರು ಹೇಳುತ್ತಾರಲ್ಲ, 'ಬರೆದುದ್ದನ್ನು ಪ್ರಕಟಿಸುತ್ತ ನಂತರ ಉಳಿದುದ್ದನ್ನು ಟೈಪಿಸುತ್ತ ಹೋಗುತ್ತೇನೆ' ಎಂದು , ನಾನು ಈ ಕತೆಯನ್ನು ಅದೇ ರೀತಿ ಪ್ರಯತ್ನಿಸಿದೆ, ಮೊದಲ ಬಾಗ ಬರೆದ ನಂತರ ಪ್ರಕಟಿಸಿಬಿಟ್ಟೆ ಆಗಿತ್ತು ಮುಂದಕ್ಕೆ ಬರೆದೆ ಇರಲಿಲ್ಲ. ಸರಿ ಒತ್ತಡ ಪ್ರಾರಂಬವಾಯಿತು ಮನಸಿಗೆ, ಸಂಜೆ ಮನೆಗೆ ಬಂದ ನಂತರ ಪ್ರತಿರಾತ್ರಿ ಕುಳಿತು ಮುಂದಿನ ಬಾಗ ಟೈಪಿಸೋದು, ಪ್ರಕಟಿಸೋದು. ನನಗೆ ಈ  ಕತೆ ಬರೆಯುವಾಗ ಅರ್ಥವಾಯಿತು ಈ ಪದ್ದತಿ ನನಗೆ ಒಗ್ಗೋದು ಕಷ್ಟ ಎಂದು. 
 
 ಕಥಾವಸ್ತು ಆರಿಸಿಕೊಳ್ಳುವಾಗ ಇದು ಇಷ್ಟೊಂದು ದೊಡ್ಡದಾಗಿ ಬೆಳೆಯಬಹುದೆಂಬ ಕಲ್ಪನೆ ಇರಲಿಲ್ಲ, ನಾಲಕ್ಕು ಬಾಗಕ್ಕೆ ಬೆಳೆಯಿತು. ಕಡೆಯಲ್ಲಿ ಸ್ವಲ್ಪ ಪ್ರಯತ್ನ ಪಟ್ಟು ಬೇಗ ಮುಗಿಸಿದೆ ಇಲ್ಲದಿದ್ದರೆ ಮತ್ತೊಂದು ಬಾಗಕ್ಕೆ ಎಳೆಯುವ ಪರಿಸ್ಥಿಥಿ ಇತ್ತು.  ಅಲ್ಲದೆ ಈ ರೀತಿ ಬರೆಯುತ್ತ ಟೈಪಿಸುತ್ತ ಕುಳಿತಾಗ , ಮೊದಲ ಬಾಗಗಳಿಗೆ ಪ್ರತಿಕ್ರೆಯೆಗಳನ್ನು ನೀಡಿದವರಿಗೆ , ಉತ್ತರ ನೀಡಲೆ ಆಗುತ್ತಿರಲಿಲ್ಲ! ಅದು ಬೇಜಾರು ಆಗುತ್ತಿತ್ತು, ಹಾಗಾಗಿ ಎಲ್ಲರಿಗೆ ಒಂದು ವಂದನೆ ಹೇಳೋಣ ಹಾಗು ನನ್ನ ಭಾವನೆ ಹೇಳೋಣ ಅಂತ ಈ ಬ್ಲಾಗ್ ಬರಹವನ್ನು ಬರೆಯುತ್ತಿರುವೆ. 
 
ಈ ಕತೆಯ ಮೊದಲ ಬಾಗದಿಂದ ಕಡೆಯವರೆಗು ಪ್ರತಿಕ್ರಿಯೆ ನೀಡುತ್ತ ಬಂದ  ಪ್ರಭುಕುಮಾರ್, ಸಪ್ತಗಿರಿ, ಚೇತನ್, ಜಯಂತ್ ರಾಮಚಾರ್, ಪ್ರತೀಕ್, ಗಣೇಶ್ , ರಾಮಮೋಹನ್ , ಸತೀಶ್ , ರಮೇಶ್ ಕಾಮತ್ ಎಲ್ಲರಿಗು ನನ್ನ ಹೃತ್ಪೂರ್ವಕ ವಂದನೆಗಳು
 
 ಮತ್ತೆ ಕತೆಯ ಬಗ್ಗೆ ಪೋಲಿಸ್ ಇಲಾಖೆಯ ಕಾರ್ಯವೈಖರಿ ನನಗೆ ಅಷ್ಟೊಂದು ಪರಿಚಿತವಲ್ಲ.  ಮತ್ತೆ ಅಲ್ಲಿ ಸಮಾನ ಸ್ಥಾಯಿಯಲ್ಲಿ ಕೆಲಸ ಮಾಡುವುದು ಕಷ್ಟ ಅಂತ ನನಗೆ ಗೊತ್ತಿದೆ, ಅಲ್ಲದೆ ಹೈರಾರ್ಕಿ , ಮತ್ತೆ ಸಬಾರ್ಡಿನೇಶನ್ ಗಳ ಪ್ರಭಾವ ಜಾಸ್ತಿ, ಆದರು ಯಾವುದೊ ಆದರ್ಶವನ್ನು  ಕತೆಯಲ್ಲಿ ಕಲ್ಪಿಸಿ ಬರೆದಿದ್ದೀನಿ. ಮತ್ತೆ ಮಾಧ್ಯಮಗಳು ಪೋಲಿಸರ ಮೇಲೆ ಮತ್ತೊಬ್ಬರ ಮೇಲೆ ತಮ್ಮ ಒತ್ತಡ ಹಾಕುತ್ತವೆ ಅನ್ನುವುದು ನಿಜವಾದರು, ಒಂದು ರೀತಿ ಅದರಿಂದೆ ಕೆಲವೊಮ್ಮೆ ಒಳ್ಳೆಯದೆ ಆಗುತ್ತದೆ, ಇಲ್ಲದಿದ್ದರೆ, ಮಹಾಂತೇಶರ ಕೇಸು ಹತ್ತರಲ್ಲಿ ಹನ್ನೊಂದಾಗಿ, ಉಳಿದು, ಕಡೆಗೆ ಬಿ-ರಿಪೋರ್ಟ್ ಪಡೆದು ಮುಚ್ಚಿಹೋಗುವ ಸಾದ್ಯತೆಯು ಇತ್ತು. 
-------------------------------------------------------------------------------------------------------------------------
 
ಆದರು ಪ್ರಭು ಕುಮಾರ್ ರವರ ಪ್ರತಿಕ್ರಿಯೆ ನೋಡಿ
"ಅಬ್ಬ...ನಿಮ್ಮ ಲೇಖನ ಒದುತಿದ್ದರೆ ಹಾಡಹಗಲೇ ದುಷ್ಟರಿಂದ ಹತ್ಯೆಯಾದ ಮಹಾಂತೇಶ್ ರವರ ಶಾಂತಿ ಸಿಗದ ಅತೃಪ್ತ ಆತ್ಮ ವೇ ತನ್ನ ನೋವನ್ನು ನಿಮ್ಮ ಮೂಲಕ ಬರೆಸಿರುವಂತಿದೆ.ಹತ್ಯೆ ಮಾಡಿದ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಈ ಲೇಖನದ ಆಶಯವಾಗಲಿ.""
 
 ನಿಜ ಪ್ರಭುಕುಮ್ರಾರ್ ರವರೆ, ಈ ಕತೆಯನ್ನು ಒಬ್ಬ ಮಹಾಂತೇಶ್ , ಕಾಡಿನಲ್ಲಿ ಕೊಲೆಯಾದ ಮತ್ತೊಬ್ಬ ನಾಯಕ್, ರಾಜಕೀಯದವರ ದಾಳವಾಗಿ ವೀರಪ್ಪನ್ ಕೈಲಿ ಸಿಕ್ಕು ಮರಣಹೊಂದಿದ್ದ ಶ್ರೀನಿವಾಸ್ ಇಂತವರಿಗೆಲ್ಲ ಅರ್ಪಣೆ ಎಂದು ಎಲ್ಲ ಓದುಗರು ಬಾವಿಸಿದರೆ ಅದಕ್ಕಿಂತ ನನಗೆ ಬಾಗ್ಯವಿಲ್ಲ. ಖಂಡೀತ ಇಂತವರನ್ನು ಕೊಲೆಮಾಡಿದವರಷ್ಟೆ ಅಲ್ಲ ಕೊಲೆಮಾಡಲು ಪ್ರೇರೆಪಿಸಿ ಹಿಂದೆ ಉಳಿದಿರಬಹುದಾದವರಿಗು ಶಿಕ್ಷೆಯಾಗಲಿ ಎಂಬುದೆ ನನ್ನ ಆಶಯ. 
 
---------------------------------------------------------------------------------------------------------------
 
  ಮನಸಿನ ಮಾತು: 
ಅದೇನೊ, 'ಇಲ್ಲವಾಗುತ್ತಲೆ ಎಲ್ಲವಾಗುವ ' ಎನ್ನುವ ಒಂದು ಕತೆ ಬರೆದಾಗ ಮನಸಿಗೆ ಎಂತದೋ ಒಂದು ನೆಮ್ಮದಿ ಕೊಟ್ಟಿತ್ತು. ಆದರೆ ಅದೇನೊ ಈ ಕತೆ ಬರೆಯುವ ಕಾಲದ ಉದ್ದಕ್ಕು ಅದೆಂತದೊ ಒಂದು ಅಶಾಂತಿ ನನ್ನನ್ನು ಕಾಡಿತು.  ನಾನು ಏತಕ್ಕಾಗಿ ಬರೆಯುತ್ತಿರುವೆ ಎನ್ನುವ ಪ್ರಶ್ನೆ ನನ್ನ ಎದುರಿಗೆ ನಿಂತಿತು. ಅದಕ್ಕೆ ಉತ್ತರ ಸಿಗಲೇ ಇಲ್ಲ, ಸಿಕ್ಕ ಒಂದು ಉತ್ತರವೆಂದರೆ, ನನ್ನ ಇಗೋವನ್ನು ತೃಪ್ತಪಡಿಸಲು ಎನ್ನುವುದು. 
 
 ಅಲ್ಲದೆ  ಬರೆಯುತ್ತ ಕುಳಿತಂತೆ, ಸಂಪದದಲ್ಲಿ ಬರುವ ಉಳಿದ ಬರಹಗಳನ್ನು ಲೇಖನಗಳನ್ನು ಓದಲು ಸಾದ್ಯವಾಗುತ್ತಲೆ ಇರಲಿಲ್ಲ, ಒಮ್ಮೆ ಓದಿದರು ಅದಕ್ಕೆ ಪ್ರತಿಕ್ರಿಯೆ ನೀಡಲು ಸಾದ್ಯವಾಗುತ್ತಿರಲಿಲ್ಲ, 
 
 ಅದೇನೊ ಅನ್ನಿಸಿದೆ ಸ್ವಲ್ಪ ಕಾಲ ಎಲ್ಲ ಬರಹಗಳನ್ನು ಓದುತ್ತ, ಸಾದ್ಯವಾದುದ್ದಕ್ಕೆ ಪ್ರತಿಕ್ರಿಯೆ ನೀಡುತ್ತ, ಆರಾಮವಾಗಿರಬೇಕು ಎಂದು, ಸ್ವಲ್ಪ ಕಾಲ (?) ಬರೆಯುವ ಈ ಚಟವನ್ನು ಬಿಟ್ಟು ಓದುತ್ತ ಎಂಜಾಯ್ ಮಾಡುವ ಅನ್ನಿಸಿದೆ, 
 
 ಎಲ್ಲರಿಗು ವಂದನೆಗಳನ್ನು ಅರ್ಪಿಸುತ್ತ, 
ಪಾರ್ಥಸಾರಥಿ
 
Rating
No votes yet

Comments