ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಆಸು ಹೆಗ್ಡೆಯವರ ಅಪ್ಪಯ್ಯ ಹೇಳಿದ ಕತೆ - ೧೧ (ಈ ಕೊಂಡಿಯನ್ನು ನೋಡಿ : http://sampada.net/blog/%E0%B2%B8%E0%B3%8A%E0%B2%B8%E0%B3%88%E0%B2%9F%E0%B2%BF-%E0%B2%85%E0%B2%95%E0%B3%8D%E0%B2%95%E0%B2%BF/17/06/2012/37092 ) ಓದುತ್ತಿರಬೇಕಾದರೆ ನೆನಪಾದದ್ದೇ ಮಿತ್ರನೊಬ್ಬನಿಂದ ಕೇಳಿದ್ದ ಇನ್ನೊಬ್ಬ ಸ್ವಾಮೀಜಿಯ ಸ್ವಾರಸ್ಯಕರವಾದ ಈ ಕೆಳಗಿನ ಕಥೆ.
ಒಂದು ಊರಿಗೆ ಸ್ವಾಮಿಗಳೊಬ್ಬರು ಭೇಟಿ ಇತ್ತರಂತೆ, ಎರಡು ದಿನ ಕಳೆದರೂ ಇವರಿಗೆ ಅನ್ನ ನೀರು ಕೊಡುವುದಿರಲಿ ಅವರನ್ನು ಮಾತನಾಡಿಸುವ ಗೋಜಿಗೇ ಆ ಊರಿನವರ್ಯಾರೂ ಹೋಗಲಿಲ್ಲವಂತೆ. ಆಗ ಆ ಸ್ವಾಮಿಗಳು, ಈ ಊರಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಲಿ, ಈ ಊರಿನವರಾರಿಗೂ ರೋಗ-ರುಜಿನಗಳು ಭಾದಿಸದೇ ಇರಲಿ ಎಂದು ಆಶೀರ್ವದಿಸಿ ಮುಂದಿನ ಊರಿಗೆ ಹೊರಟರಂತೆ. ಮುಂದೆ ಸಿಕ್ಕ ಊರಿನ ಜನ ಇವರನ್ನು ಚೆನ್ನಾಗಿ ಮಾತನಾಡಿಸಿ ಗೌರವಿಸಿದ್ದೇ ಅಲ್ಲದೆ ಒಳ್ಳೇ ಊಟ-ಉಪಚಾರಗಳನ್ನೂ ಒದಗಿಸಿ ತಮ್ಮ ಊರಿನಲ್ಲಿ ಇನ್ನೂ ನಾಲ್ಕಾರು ದಿವಸ ಇದ್ದು ಹೋಗುವಂತೆ ಬೇಡಿಕೊಂಡರಂತೆ. ಆಗ ಈ ಸ್ವಾಮಿಗಳು, ಆ ಊರಿನವರಿಗೆ ಒಂದು ಶಾಪ ಹಾಕಿ ಹೊರಟರಂತೆ, ಅದೇನೆಂದರೆ, "ಈ ಊರಿನಲ್ಲಿ ಸರಿಯಾಗಿ ಮಳೆ-ಬೆಳೆಯಾಗದೆ ಬರ ಬಿದ್ದು ಹೋಗಲಿ ಮತ್ತು ಈ ಊರಿನ ಜನ ಜಡ್ಡು-ಜಾಪತ್ರೆಗಳಿಂದ ತೊಳಲಾಡುವಂತಾಗಲಿ". ಇದನ್ನೆಲ್ಲಾ ಗಮನಿಸುತ್ತಿದ್ದ ಅವರ ಶಿಷ್ಯನೊಬ್ಬ ಗುರುಗಳ ಈ ವಿಚಿತ್ರ ವರ್ತನೆಗೆ ಕಾರಣವೇನೆಂದು ಕೇಳಿದ? ಆಗ ಗುರುಗಳು, "ಮೊದಲನೇ ಊರಿನವರು ಬಹಳ ಕೆಟ್ಟ ಜನ, ಅವರು ಎಲ್ಲಿಗೇ ಹೋದರೂ ಕೆಟ್ಟದ್ದನ್ನೇ ತಮ್ಮೊಂದಿಗೆ ಒಯ್ಯುತ್ತಾರೆ ಹಾಗಾಗಿ ಅವರು ಎಲ್ಲಿಗೂ ಹೋಗದೆ ಇದ್ದ ಊರಲ್ಲೇ ಇರಬೇಕೆಂದರೆ ಅವರ ಊರಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಬೇಕು. ಅದೇ ಇನ್ನೊಂದೂರಿನ ಜನ ಮಳೆ-ಬೆಳೆಯಾಗದೇ, ರೋಗ-ರುಜಿನಗಳಿಗೆ ತುತ್ತಾದರೆ ಅವರು ಬೇರೆ-ಬೇರೆ ಊರುಗಳಿಗೆ ಹೋಗುತ್ತಾರೆ; ಹಾಗೆ ಬೇರೆ ಬೇರೆ ಕಡೆ ಹೋದ ಆ ಎರಡನೇ ಊರಿನ ಜನ ಅಲ್ಲೆಲ್ಲಾ ಒಳ್ಳೆಯ ತನವನ್ನು ಪಸರಿಸುತ್ತಾರೆ" ಎಂದರಂತೆ.
(ಯಾರಾದರೂ ನಮಗೆ ಇನ್ನು ಮುಂದೆ ಶಾಪ ಹಾಕಿದರೆ ಬೇಸರಿಸುವುದು ಬೇಡ ಬಹುಶಃ ಅವರು ನಮ್ಮ ಒಳ್ಳೆಯತನವನ್ನು ನೋಡಿ ಅವರು ಹಾಗೆ ಹೇಳಿದ್ದಾರೆಂದು ಕೊಂಡರೆ ಆಯಿತಲ್ಲವೆ. )
Comments
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
In reply to ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ by Prakash Narasimhaiya
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
In reply to ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ by Chikku123
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
In reply to ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ by sathishnasa
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
In reply to ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ by veena wadki
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
In reply to ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ by sathishnasa
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ:@ಶ್ರೀಧರ್ ಜೀ-
In reply to ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ:@ಶ್ರೀಧರ್ ಜೀ- by venkatb83
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ:@ಶ್ರೀಧರ್ ಜೀ-