ಸಂಪದಿಗರಿಬ್ಬರ ವಿಶೇಸಮ್ಮಿಲನ@ಮೆಜೆಸ್ಟಿಕ್: 'ಅವರು' ಯಾರು?

ಸಂಪದಿಗರಿಬ್ಬರ ವಿಶೇಸಮ್ಮಿಲನ@ಮೆಜೆಸ್ಟಿಕ್: 'ಅವರು' ಯಾರು?



ಕೆಲ ದಿನಗಳ ಹಿಂದೆ ನಾ ಸಂಪದಿಗರಿಬ್ಬರ ವಿಶೇಷಮ್ಮಿಲನ@ಮೆಜೆಸ್ಟಿಕ್ ಎಂಬ ಬರಹ ಬರೆದಿದ್ದೆ(ಎರಡು ಭಾಗಗಳಲ್ಲಿ)- ...

 

ಸಂಪದಿಗರಿಬ್ಬರ ವಿಶೇಸಮ್ಮಿಲನ @ ಮೆಜೆಸ್ಟಿಕ್..ಭಾಗ-೧ | ಸಂಪದ - Sampada http://sampada.net/%E0%B2%B8%E0%B2%82%E0%B2%AA%E0%B2%A6%E0%B2%BF%E0%B2%97%E0%B2%B0%E0%B2%BF%E0%B2%AC%E0%B3%8D%E0%B2%AC%E0%B2%B0-%E0%B2%B5%E0%B2%BF%E0%B2%B6%E0%B3%87%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8-%E0%B2%AE%E0%B3%86%E0%B2%9C%E0%B3%86%E0%B2%B8%E0%B3%8D%E0%B2%9F%E0%B2%BF%E0%B2%95%E0%B3%8D%E0%B2%AD%E0%B2%BE%E0%B2%97-%E0%B3%A7
 
 
ಸಂಪದಿಗರಿಬ್ಬರ ವಿಶೇಸಮ್ಮಿಲನ @ ಮೆಜೆಸ್ಟಿಕ್-ಕೊನೆಯ ಭಾಗ... | ಸಂಪದ - Sampada http://sampada.net/%E0%B2%B8%E0%B2%82%E0%B2%AA%E0%B2%A6%E0%B2%BF%E0%B2%97%E0%B2%B0%E0%B2%BF%E0%B2%AC%E0%B3%8D%E0%B2%AC%E0%B2%B0-%E0%B2%B5%E0%B2%BF%E0%B2%B6%E0%B3%87%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8-%E0%B2%AE%E0%B3%86%E0%B2%9C%E0%B3%86%E0%B2%B8%E0%B3%8D%E0%B2%9F%E0%B2%BF%E0%B2%95%E0%B3%8D-%E0%B2%95%E0%B3%8A%E0%B2%A8%E0%B3%86%E0%B2%AF-%E0%B2%AD%E0%B2%BE%E0%B2%97
 
ನಾ ಭೇಟಿ ಮಾಡಿದ್ದು ಯಾರನ್ನ?
ಎಂದು ಗುಟ್ಟು ಬಿಟ್ಟು ಕೊಡದೇ ಬರಹ ಮುಗಿಸಿದ್ದೆ...
ಆ ಎರಡು ಬರಹಗಳಿಗೆ ಹಲವರು ಪ್ರತಿಕ್ರಿಯಿಸಿ- ಅವರು ಯಾರು ಇರಬಹುದು ಎಂದೆಲ್ಲ ಊಹಿಸಿ ಪ್ರತಿಕ್ರಿಯಿಸಿದ್ದರು....
ಕೆಲವೇ ಜನ ಮಾತ್ರ ಅವರು ಇವರೇ ಅಂತ ಸರಿಯಾಗಿ ಊಹಿಸಿದ್ದರು....
ಇನ್ನೂ ಕೆಲವರು ಕೊನೆಯ ಭಾಗದಲ್ಲಿ(೨ ನೇ ಭಾಗವೇ ಕೊನೆಯದು) ಆ ಗುಟ್ಟು ರಟ್ಟು ಮಾಡಬಹುದು ಅಂತ ಕಾದಿದ್ದರು ಅವರಿಗೂ ನಿರಾಶೆ ಆಯ್ತು.....

 

 

 

ಮೆಜೆಸ್ಟಿಕ್ ಅತಿಥಿ ಯಾರು?....
ಖಂಡಿತ ಗಣೇಶ್ ಅಣ್ಣ ಅವ್ರೆ....
ಸಾರಿ.........:((
'ಅವರು' - 'ಅವರಲ್ಲ' ??????
'ಅವರು' ಗಣೇಶ್ ಅಣ್ಣ -ಅಲ್ಲವೇ ಅಲ್ಲ...!!
ಮತ್ತೆ?
'ಅವರು' ನಮ್ಮ ಶ್ರೀಧರ್ ಜೀ... !!
 
ನನಗೋ ಒಂದು ದಿಗಿಲು ಇತ್ತು-ಅದು ಗಣೇಶ್ ಅಣ್ಣ...!!
ಹೌದು, ಒಂದೊಮ್ಮೆ ಗಣೇಶ್ ಅಣ್ಣ ಮಾಮೂಲಿನಂತೆ ರಾತ್ರಿ(ಮಧ್ಯ ರಾತ್ರಿ..!!) ಬಂದು ಆ ಬರಹ ನೋಡಿ-(ಅವರು ನೋಡಿದರು- ಓದಿದರು ಆದರೆ ಅದರ ಕುತೂಹಲ ಕಾಯ್ದುಕೊಳ್ಳಲು ಆ ಬಗ್ಗೆ ಪ್ರತಿಕ್ರಿಯಿಸಲಿಲ್ಲ...!!)ನಾವವರಲ್ಲ್ ಅಂದು ಬಿಟ್ಟರೆ ಅಂತ...:())) ಆದರೆ ಹಾಗೆ ಆಗಲಿಲ್ಲ....
 
ಕೆಲ ದಿನಗಳ ಬಳಿಕವಾದರೂ ಶ್ರೀಧರ್ ಜೀ ಅಥವಾ ಗಣೇಶ್ ಅಣ್ಣ ಇಬ್ಬರಲ್ಲಿ ಒಬ್ಬರು ಹೇಳಬಹುದು ಅಂತ ಕಾದರೆ(ನಾನು ಮತ್ತು ನೀವು) ಇಬ್ಬರೂ ಬಹು ದಿನಗಳವರೆಗೆ ಸಂಪದದಲ್ಲಿ ಕಾಣಿಸದೇ- ಆ ಕುತೂಹಲ ಮಟ್ಟ ಮತ್ತಸ್ತು ಹೆಚ್ಚುವ ಹಾಗೆ ಮಾಡಿದರು....!! ಕೊನೆಗೂ ಶ್ರೀಧರ್ ಜೀ ಅವರು ಒಂದು ಗುಟ್ಟು ಬಿಟ್ಟುಕೊಟ್ಟರು...  ಆದರೆ ಅದನ್ನು ಗಮನಿಸಿದವರು ಕಡಿಮೆ--- ಅವರು ಇವರೇ ಇರಬಹುದಾ? ಅಂತ ಸರಿಯಾಗಿ ಗುರುತಿಸಿದವರಲ್ಲಿ ಗುರುಗಳು (ಪಾರ್ಥ ಸಾರಥಿ ಅವರು) ಅತಿ ಸಮೀಪ.... ಅವರು ಯಾರು ಅಂತ ಗೊತ್ತಿದ್ದೂ ಇದ್ಯಾವ  ಟೆಂಷನ್ ಇಲ್ಲದೇ  ಆರಾಮಾಗಿ ಇದ್ದವರಲ್ಲಿ ಮತ್ತು ಇದ್ದ  ಒಬ್ಬೇ ಒಬ್ಬ ಸಂಪಾದಿಗ ಅಂದ್ರೆ-ಪ್ರತೀಕ್ ಜ್ಯೂನಿಯರ್.... ಒಬ್ಬರೇ....!!
ನಾ ಅವರಿಗೆ ಮೊದಲೇ ಫೆಸ್ಬುಕ್ ಮತ್ತು ಮೇಲ್ ನಲ್ಲಿ ಹೇಳಿದ್ದರಿಂದ ಅವರು ಈ ವಿಷ್ಯ ಗೊತ್ತಿದ್ದೂ ಕುತೂಹಲ ಉಳಿಸುಕೊಳ್ಳಲು ಕಾರಣರಾದರು....
ಅವರಿಗೆ ನನ್ನಿ...
ಎರಡು ಭಾಗಗಳಲ್ಲಿ ಬಂದ ಆ ಕುರಿತ ಬರಹವನ್ನು ಓದಿ- ಕುತೂಹಲಿಗಳಾಗಿ- ಊಹಿಸಿ ಪ್ರತಿಕ್ರಿಯಿಸಿದ  ಎಲ್ಲ ಸಂಪದಿಗರಿಗೂ-ಓದುಗರಿಗೂ ನನ್ನಿ..
 
ಬೇಕೂಂತಲೇ- ಗಣೇಶ್  ಅಣ್ಣ ಮತ್ತು ಶ್ರೀಧರ್ ಜೀ ಅವರ ಬಗ್ಗೆ- ಎಲ್ಲಿಯೂ ಆಸ್ಟಾಗಿ ಬರೆದಿರಲಿಲ್ಲ. ಅದಕ್ಕೆ ಕಾರಣ ಕುತೂಹಲವನ್ನು ಕಾಯ್ದುಕೊಳ್ಳುವುದು...!!
 
ಗಣೇಶ್ ಅಣ್ಣ ಅವರ ನಿಗೂಡತೆ ಬಗ್ಗೆ ಅವರು ತಮ್ಮ ಬಗ್ಗೆ ಪೂರ್ತಿಯಾಗಿ ಗುಟ್ಟು ಬಿಟ್ಟು ಕೊಡದಿದ್ದರ ಬಗ್ಗೆ, ಅವರು ಹೇಗಿರಬಹುದು ಎಂಬ ಬಗ್ಗೆಯೂ ನಾ ಮತ್ತು ಶ್ರೀಧರ್ ಜೀ ಡಿಸ್ಕಸ್ಸ್ ಮಾಡಿದೆವು...
ಸರಿ - ಶ್ರೀಧರ್ ಜೀ ಹೇಗಿರುವರು?
ಈಗೀಗ ಅಧ್ಯಾತ್ಮ ವಿಚಾರಗಳ ಬರಹಗಳನ್ನು ಮತ್ತು ಮೊದಲಿಂದಲೂ(ಕೆಲ ಬೀ ಚೀ ಅವರ ಜೋಕ್ಸ್ ಬರಹ ಬಿಟ್ಟು) ಬೇರೆಲ್ಲರಿಗಿಂತ ತುಸು ಭಿನ್ನವಾಗಿ ಪ್ರತಿಕ್ರಿಯಿಸುತ್ತಾ- ಬರಹ ಬರೆಯುವ ಅವರು ನಮ್ಮ ಊಹೆಯಂತೆ ಇರುವರೆ?
 
ನಾ ಅವರನ್ನು ಭೇಟಿ ಮಾಡುವುದಕ್ಕೆ  ಕೆಲ ಕ್ಷಣಗಳ ಮುಂಚೆ -ಅವರು ಬರೆವ ಬರಹಗಳು ಮತ್ತು ಪ್ರತಿಕ್ರಿಯೆಗಳು-ಬರಹಗಳಲ್ಲಿ ಇರುವ ದೋಷ- ವಿಶೇಷತೆ ಬಗ್ಗೆ ಅವರು ಗುರುತಿಸಿ ಹೇಳುವುದು ಇತ್ಯಾದಿ ಯೋಚಿಸಿ- ಅವರು ಹೇಗಿರಬಹುದು ಎಂಬ ಕಲ್ಪನೆ ಮಾಡಿಕೊಂಡಿದ್ದೆ- ಮತ್ತು ಅವರನ್ನು ನೇರವಾಗಿ ನೋಡಿ ಮಾತಾಡಿದ ಮೇಲೆ ನಾ ಊಹಿಸಿದ್ದರಲ್ಲಿ ಕೊಂಚ ಮಾತ್ರ  ನಿಜವಾಯ್ತು....!!
ಬಾಕಿ ಎಲ್ಲ....
ಅಚ್ಚರಿ....!!!
 
ನಾ ಶ್ರೀಧರ್ ಜೀ ಅವರ ಫೋಟೋ ತೆಗೆಯಲು ಕೊನೆಃಗೂ ಆಗಲಿಲ್ಲ...:(( ಅವರು ತಮ್ಮ ಫೋಟೋ ಮೇಲ್ ಮೂಲಕ ಕಳಿಸುವುದಾಗಿ ಹೇಳಿದರು.....
ಕಳಿಸಬಹುದು ......!!
ಆಗ ನೀವೆಲ್ಲ ಅವರನ್ನು ಕಾಣುವಿರಿ...
 
ಗಣೇಶ್ ಅಣ್ಣ  ಅವರು ರಾತ್ರಿ ಮಾತ್ರ(ತೀರಾ ಅಪರೂಪಕ್ಕೆ  ಹಗಲಲ್ಲಿಯೂ/..!!) ಬರಹ ಬರೆವದು-ಪ್ರತಿಕ್ರಿಯಿಸುವುದರ ಬಗ್ಗೆ- ಪಂಚಿಂಗ್  ಪ್ರತಿಕ್ರಿಯೆ ನೀಡುವುದರ ಬಗ್ಗೆ- ಸಖತ್ ಬರಹಗಳನ್ನು ಬರೆವ ಬಗ್ಗೆ...
ಇತ್ಯಾದಿ
 ಇತ್ಯಾದಿ....
 ಈಗ ಶ್ರೀಧರ್ ಜೀ ಮತ್ತು ನಿಮಗಾರಿಗೂ ಗೊತ್ತಿರದ ನನ್ನ ಒಂದು ಊಹೆ ಬಗ್ಗೆ ಹೇಳಲೇ?....
ನನಗೆ
ನನಗೆ
ನನಗೆ.........
ಶ್ರೀಧರ್ ಜೀ ನೇ- ಆ ಗಣೇಶ್ ಅಣ್ಣ  ಇರಬಹುದಾ? 
ದ್ವಿಪಾತ್ರಾಭಿನಯವೇ? ಅನ್ನಿಸಿತ್ತು....!!
 
ಆದ್ಕಾಗಿ ಮಾತಾಡುವಾಗ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ...... !!
ಆದರೆ  ಅವರು -ಇವರಲ್ಲ ಅನ್ನಿಸಿತು.... :()))
ಈಗ ಗಣೇಶ್ ಅಣ್ಣ ಅವರೇ ಹೇಳಬೇಕು....
ಇಲ್ಲವಾದರೆ........???
ಉಗ್ರ ಓರಾಟ ಮಾಡಿ ಸ್ಕಾಟ್ಲ್ಯಾಂಡ್ ಯಾರ್ಡ್‌ನವರ ಸಹಾಯ ಪಡೆದು(ನಮ್ಮವರ  ಮೇಲೆ ನಂಬಿಕೆಯಿಲ್ಲವೆ...!!) ಹುಡುಕುವೆವು....
ಅಪ್ ಟು -ಗಣೇಶ್ ಅಣ್ಣ...!!
 
-------------------ಶುಭವಾಗಲಿ-------------------
 

 

Rating
No votes yet

Comments