"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೬)
ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೫)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%E0%B2%A4-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AE-%E0%B3%AB/16/06/2012/37074
ಭಾಸ್ಕರ
ಶಂಕರರ ವೇದಾಂತ ಶಾಖೆಯ ಮುಂದುವರಿದ ಭಾಗವಾದರೂ ಶಂಕರರ ಛಾಪಿನ ಅದ್ವೈತ ಸಿದ್ಧಾಂತವಾದ ಈ ಜಗತ್ತು ಮಿಥ್ಯೆಯೆನ್ನುವ ಮಾಯಾವಾದವನ್ನು ಒಪ್ಪಿಕೊಳ್ಳದಿರುವುದು ಭಾಸ್ಕರರ ಸಿದ್ಧಾಂತ. ಅವರು ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಬಗ್ಗೆ ತೆಳೆದ ನಿಲುವಿನಿಂದಾಗಿ ಅವರನ್ನು ವೇದಾಂತದ ನಿಷ್ಟ ಅನುಯಾಯಿ ಎನ್ನಬಹುದು. ಅವರ ನಿಲುವೇನು ಎನ್ನುವುದು ಅವರು ಬ್ರಹ್ಮಸೂತ್ರಗಳಿಗೆ ಬರೆದ ಭಾಷ್ಯದಿಂದ ವಿದಿತವಾಗುತ್ತದೆ.
ಭಾಸ್ಕರರು ಉಪನಿಷತ್ತುಗಳ ಎಲ್ಲಾ ಪಂಕ್ತಿಗಳ ನೇರವಾದ ಅರ್ಥವನ್ನು ಯಾವುದೇ ಭೇದವಿಲ್ಲದೆ ಸ್ವೀಕರಿಸಬೇಕೆಂದು ಪ್ರತಿಪಾದಿಸುತ್ತಾರೆ. ಅವರು ಬ್ರಹ್ಮನಿಗೆ ಅನಂತ ಮಂಗಳಕರ ಗುಣಗಳಿವೆಯೆಂದು ಅಭಿಪ್ರಾಯಪಟ್ಟರೂ ಕೂಡ ಅವನಿಗೆ ಯಾವುದೇ ನಿರ್ಧಿಷ್ಟವಾದ ಆಕಾರವಿಲ್ಲವೆನ್ನುತ್ತಾರೆ. ಅವನಿಗೆ 'ದ್ವಿಗುಣ'ವಾದ ಶಕ್ತಿಯಿದೆ ಅದೆಂದರೆ 'ಭೋಕ್ತೃ' (ಭೋಗಿಸುವವನ ಶಕ್ತಿ ಅಥವಾ ಅನುಭವಿಸುವವನ ಶಕ್ತಿ) ಮತ್ತು 'ಭೋಗ್ಯಶಕ್ತಿ' (ಅನುಭವಿಸಲ್ಪಟ್ಟವನ ಶಕ್ತಿ ಅಥವ ಭೋಗಿಸಲ್ಪಟ್ಟವನ ಶಕ್ತಿ). ಈ ಶಕ್ತಿಯಿಂದಾಗಿ ಬ್ರಹ್ಮನು ಅಚೇತನವಾದ ಜಡವಸ್ತುವಾಗಿ ಮತ್ತು ಚೇತನಾರೂಪಿಗಳಾದ ಜೀವಿಗಳಾಗಿ ರೂಪಾಂತರವನ್ನು ಹೊಂದುತ್ತಾನೆ. ಈ ಬದಲಾವಣೆಯು ಸತ್ಯವಾದುದಾದರೂ ಕೂಡ ಅದು ಅವನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು. ಮೂಲರೂಪದಲ್ಲಿ ಜೀವಿಗಳ ಸ್ವಭಾವವು ಬ್ರಹ್ಮದ ಗುಣದಂತೆ ಒಂದೇ ರೀತಿಯಾಗಿರುತ್ತದೆ. ಆದರೆ ಉಪಾಧಿಗಳಿಂದಾಗಿ ಅವು ಬಂಧನದ ಸ್ಥಿತಿಯಲ್ಲಿ ಬ್ರಹ್ಮನಿಂದ ಪ್ರತ್ಯೇಕವಾದ ಗುಣವನ್ನು ಹೊಂದುತ್ತವೆ. ಉಪಾಧಿಯೆಂದರೆ ಮಿತಿಗೆ ಒಳಪಡಿಸುವ ವಸ್ತುಗಳು - ನಿಜವಾದ ದೇಹ ಮತ್ತು ಮನಸ್ಸುಗಳು. ಈ ಉಪಾಧಿಗಳು ನಿಜವಾದರೂ ಕೂಡ ಅವು ನಿತ್ಯವಲ್ಲ. ಆವುಗಳನ್ನು ಅನುಭವಿಸುವುದರಿಂದ ಅವನ್ನು ನಿಜವೆಂದು ತಿಳಿಯತಕ್ಕದ್ದು. ಆದರೆ ಮುಕ್ತಸ್ಥಿತಿಯಲ್ಲಿ ಜೀವರು ಬ್ರಹ್ಮನೊಂದಿಗೆ ಹರಿಯುವ ನದಿಗಳು ಸಮುದ್ರವನ್ನು ಸೇರಿ ಒಂದಾಗುವಂತೆ ಏಕವಾಗುತ್ತವೆ.
ಭಾಸ್ಕರರು ಈ ಪ್ರಪಂಚವು ಬ್ರಹ್ಮನ ಕಾರ್ಯರೂಪ ಅಥವಾ ಪರಿಣಾಮವಾಗಿರುವುದರಿಂದ ಇದೂ ಕೂಡ ಸತ್ಯವೆಂದು ಭಾವಿಸುತ್ತಾರೆ.
ಸಾಧನೆಗಳ ವಿಷಯಕ್ಕೆ ಬಂದರೆ ಭಾಸ್ಕರರು ಶಾಸ್ತ್ರಗಳಲ್ಲಿ ವಿಧಿಸಲ್ಪಟ್ಟಿರುವು ಕ್ರಿಯೆಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಕೈಗೊಳ್ಳಬೇಕೆನ್ನುತ್ತಾರೆ ಮತ್ತು ಬ್ರಹ್ಮನ ಕುರಿತಾಗಿ ಜೀವಿಗಳು ಧ್ಯಾನವನ್ನು ಕೈಗೊಂಡು ಅವನೊಂದಿಗೆ ಒಂದಾಗಬೇಕೆನ್ನುತ್ತಾರೆ. ಇವರು ಯಾವುದೇ ವ್ಯಕ್ತಿಗತ ಭಗವಂತನನ್ನು ಒಪ್ಪಿಕೊಳ್ಳುವುದಿಲ್ಲವಾದ್ದರಿಂದ 'ದೈವ ಕೃಪೆ'ಯ ಬಗ್ಗೆ ಈ ಪದ್ಧತಿಯಲ್ಲಿ ಆಸ್ಕಾರವಿಲ್ಲ.
ನಿಂಬಾರ್ಕ
ನಿಂಬಾರ್ಕನ ದ್ವೈತಾದ್ವೈತವು ಭಾಸ್ಕರರ ಸಿದ್ಧಾಂತದೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಆದರೆ ನಿಂಬಾರ್ಕನು ಸಗುಣ ಮತ್ತು ಸಾಕಾರ ಬ್ರಹ್ಮನ ಇರುವಿಕೆಯನ್ನು ಮತ್ತು ಭಕ್ತಿಯ ಮಾರ್ಗವನ್ನು ಒಪ್ಪಿಕೊಳ್ಳುವುದರಿಂದ, ಅವನ ಸಿದ್ಧಾಂತವು ರಾಮಾನುಜರ ಸಿದ್ಧಾಂತಕ್ಕೆ ಹೆಚ್ಚು ಸಮೀಪದಲ್ಲಿದೆ ಎನ್ನಬಹುದು.
ನಿಂಬಾರ್ಕರ ಮುಖ್ಯವಾದ ಕೃತಿಯು 'ವೇದಾಂತ-ಪಾರಿಜಾತ-ಸೌರಭ'ವಾಗಿದ್ದು ಇದು ಬ್ರಹ್ಮಸೂತ್ರಗಳಿಗೆ ಬರೆದ ವ್ಯಾಖ್ಯಾನ ಗ್ರಂಥವಾಗಿದೆ. ನಿಂಬಾರ್ಕರು ಈ ಕೃತಿಯಲ್ಲಿ ಕಾವ್ಯಾತ್ಮಕ ಭಾಷೆಯನ್ನು ಬಳಸದೆ ಅದನ್ನು ವಿದ್ವತ್ಪೂರ್ಣತೆಯಿಂದ ಕೂಡಿದ ಸಂಕ್ಷಿಪ್ತ ಗ್ರಂಥವಾಗಿ ಹೊರಹೊಮ್ಮಿಸಿದ್ದಾರೆ.
ಅವರ ಪ್ರಕಾರ, ನಿಜವಾದ ಹಾಗೂ ಸಮಾನತೆಯಿಂದ ಕೂಡಿದ ಮೂರು ರೀತಿಯ ತತ್ವಗಳು ಅಥವಾ ಸಿದ್ಧಾಂತಗಳು ಇವೆ; ಬ್ರಹ್ಮ, ಚಿತ್ ಮತ್ತು ಅಚಿತ್. ಬ್ರಹ್ಮನು 'ನಿಯಂತೃ', ಚಿತ್ (ಚೇತನಾರೂಪಿಯಾದ ಜೀವ ಅಥವಾ ಆತ್ಮ) - 'ಭೋಕ್ತೃ'(ಸಂತೋಷವನ್ನು ಪಡೆಯುವವನು) ಮತ್ತು ಅಚಿತ್ (ಜಡವಾದ ಪ್ರಕೃತಿ)-'ಭೋಕ್ತ' (ಅನುಭವಿಸಲ್ಪಟ್ಟವನು).
'ಅಚಿತ್' ಎನ್ನುವುದು ಮೂರು ವಿಧವಾದದ್ದು; 'ಪ್ರಾಕೃತ' ಅಂದರೆ ಪ್ರಕೃತಿಯಿಂದ ಅಥವಾ ಮೂಲದಲ್ಲಿ ಜಡವಾದ ಭೌತ ವಸ್ತುವಿನಿಂದ ಪಡೆದದ್ದು, 'ಅಪ್ರಾಕೃತ' ಅಂದರೆ "ಪ್ರಕೃತಿಯಿಂದ ಪಡೆಯದ್ದು" ಆದರೆ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಜಗತ್ತಿಗೆ ಸಂಭಂದಿಸಿದ ಭೌತಿಕವಲ್ಲದ ವಸ್ತುವಿನಿಂದ ಪಡೆದದ್ದು, ಮತ್ತು ಮೂರನೆಯದು 'ಕಾಲ' ಅಥವಾ ಸಮಯ.
ಬ್ರಹ್ಮ, ಚಿತ್ ಮತ್ತು ಅಚಿತ್; ಈ ಮೂರು ವಸ್ತುಗಳು ತಮ್ಮ ಸ್ವರೂಪದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಆದರೆ ಚಿತ್ ಮತ್ತು ಅಚಿತ್ ಇವುಗಳು ಪರತಂತ್ರ ತತ್ವಗಳು, ಅಂದರೆ ಒಂದಕ್ಕೊಂದು ಅವಲಂಭಿಸಿರುವ ವಾಸ್ತವಗಳು.
ನಿಂಬಾರ್ಕರು, ಭೇದ(ವ್ಯತ್ಯಾಸ) ಮತ್ತು ಅಭೇದ (ಅವ್ಯತ್ಯಾಸ) ಎರಡೂ ಸಮಾನವಾದ ವಾಸ್ತವಗಳು ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ. ಅವು ಯಾವಗಲೂ ಒಟ್ಟಾಗಿ ಇದ್ದರೂ ಕೂಡ ಒಂದಕ್ಕೊಂದು ವ್ಯತಿರೇಕವಲ್ಲ. ಅದು ಸ್ವಲ್ಪ ಹೆಚ್ಚು ಕಡಿಮೆ ಸಮುದ್ರಕ್ಕೂ ಅದರ ಅಲೆಗಳಿಗೂ ಅಥವಾ ಸೂರ್ಯನಿಗೂ ಅವನ ಕಿರಣಗಳಿಗೂ ಇರುವ ಸಂಭಂದದಂತೆ. ಚಿತ್ ಮತ್ತು ಅಚಿತ್, ಆತ್ಮಗಳು ಮತ್ತು ಈ ವಿಶ್ವ, ಇವೆಲ್ಲವೂ ಬ್ರಹ್ಮನಲ್ಲಿ ಚಿರಕಾಲದಿಂದಲೂ ಒಳಗೊಂಡಿವೆ ಮತ್ತು ಇವು ಅವನಿಂದ ಯಾವಾಗಲೂ ಬೇರ್ಪಡುವುದಿಲ್ಲ ಅದು ಕಾರಣಪೂರ್ವಕ (ಅವ್ಯಕ್ತವಾದ) ಸ್ಥಿತಿಯಾಗಿರಲಿ ಅಥವಾ ಅನಾವರಣದ (ವ್ಯಕ್ತವಾದ) ಸ್ಥಿತಿಯಾಗಿರಲಿ.
ಚಿತ್ ಮತ್ತು ಅಚಿತ್ ಇವುಗಳು ತಮ್ಮ ಪ್ರತ್ಯೇಕತೆಯನ್ನು ಮುಕ್ತಿಯ ನಂತರವೇ ಆಗಲಿ ಅಥವಾ ಪ್ರಪಂಚದ ಪ್ರಳಯಕಾಲದಲ್ಲೇ (ವಿನಾಶ ಕಾಲದಲ್ಲೇ) ಆಗಲಿ ಉಳಿಸಿಕೊಳ್ಳುತ್ತವೆ.
ಬ್ರಹ್ಮನು ವ್ಯಕ್ತಿಗತನಾಗಿದ್ದು, ಅವನಿಗೆ ಅಲೌಕಿಕವಾದ ದೇಹವಿದೆ ಮತ್ತು ಅವನು ಅನಿರ್ವಚನೀಯ ಸೌಂದರ್ಯ ಮತ್ತು ಮೋಹಕತೆಯನ್ನು ಹೊಂದಿದ್ದಾನೆ. ನಿಂಬಾರ್ಕನು ಈ ರೀತಿಯಾದ ಬ್ರಹ್ಮನನ್ನು ಕೃಷ್ಣನಲ್ಲಿ ಗುರುತಿಸಿ ಅವನ ಸಹವರ್ತಿ(ಸಂಗಾತಿ)ಯಾಗಿ ಅಥವಾ ಶಕ್ತಿಯಾಗಿ ರಾಧೆಯನ್ನು ಆ ಸ್ಥಾನದಲ್ಲಿ ಇರಿಸುತ್ತಾರೆ; ರಾಮಾನುಜರು ವಿಷ್ಣು-ನಾರಾಯಣನಿಗೆ ಲಕ್ಷ್ಮಿಯನ್ನು ಸಹವರ್ತಿಯಾಗಿರಿಸಿದಂತೆ.
ಬ್ರಹ್ಮನು ಸರ್ವಾಂತರಯಾಮಿ ಮತ್ತು ಪ್ರಪಂಚದ ಸೃಷ್ಟಿ, ಸ್ಥಿತಿ, ಲಯಗಳಿಗೆ ಮೂಲ ಕಾರಣನು. ಅವನು ಸರ್ವಶಕ್ತನು, ಆದರೂ ಕೂಡ ಕರುಣಾಮೂರ್ತಿ. ಅವನು ಭಕ್ತರ ಮೇಲೆ ಕೃಪೆತೋರಿ ಅವರಿಗೆ ಅವನ ನೈಜ ಸ್ವರೂಪವನ್ನು ತಿಳಿಯಲು ಸಹಾಯ ಮಾಡುತ್ತಾನೆ.
ಜೀವಗಳು ಅಣುಗಾತ್ರದಲ್ಲಿದ್ದು ಅವು ಅನಂತ ಸಂಖ್ಯೆಯಲ್ಲಿವೆ. ಪ್ರತಿಯೊಂದು ಪ್ರತ್ಯೇಕತೆಯ ರೂವಾರಿಯಾಗಿದ್ದು, ಅವು ಮಾಡುವ ಕರ್ಮಗಳ, ಜ್ಞಾತೃ (ತಿಳಿಯುವವನು), ಕರ್ತೃ (ಕಾರ್ಯವೆಸಗುವವನು) ಮತ್ತು ಭೋಕ್ತೃ(ಅನುಭವಿಸುವವನು) ಆಗಿವೆ. ಅವು ಒಂದು ಕೋಣೆಯಲ್ಲಿಟ್ಟ ಚಿಕ್ಕ ದೀಪವು ಇಡೀ ಕೋಣೆಯನ್ನು ಪ್ರದೀಪ್ತಗೊಳಿಸುವಂತೆ ತಾವು ಹೊಂದಿದ ದೇಹಗಳನ್ನು ಚೇತನಗೊಳಿಸುತ್ತವೆ.
ಜೀವಿಗಳಿಗೆ ಮೂರು ಅಂತ್ಯ ಸ್ಥಾನಗಳಿವೆ, ಅವೆಂದರೆ ಪಾಪಿಗಳಿಗೆ ನರಕ, ಪುಣ್ಯವಂತರಿಗೆ ಸ್ವರ್ಗ ಮತ್ತು ಜ್ಞಾನಿಗಳಿಗೆ ಅಪವರ್ಗ ಅಥವಾ ಮುಕ್ತಿ. ಅಪವರ್ಗವೆಂದರೆ ಬ್ರಹ್ಮಲೋಕವನ್ನು ಸೇರಿ ಅಲ್ಲಿಂದ ಹಿಂದಿರುಗದೇ ಇರುವುದು.
ಜೀವಿಯ ಅಂತರ್ಭಾಗದಲ್ಲಿ ಇರುವ ಆತ್ಮನನ್ನು ಬ್ರಹ್ಮವೆಂದು ತಿಳಿದು ಅದರ ಮೇಲೆ ನಿರಂತರ ಧ್ಯಾನವನ್ನು ಕೈಗೊಳ್ಳುವುದರಿಂದ ಬ್ರಹ್ಮಲೋಕದಲ್ಲಿರುವ ಬ್ರಹ್ಮವನ್ನು ಹೊಂದಲು ಸಾಧ್ಯವಾಗುತ್ತದೆ. ಅಲ್ಲಿ ಅವನಿಗೆ ಸೃಷ್ಟಿ ಮಾಡುವ ಶಕ್ತಿಯೊಂದನ್ನು ಹೊರತುಪಡಿಸಿ; 'ಬ್ರಹ್ಮ-ಸ್ವರೂಪ-ಲಾಭ' ಅಂದರೆ ಬ್ರಹ್ಮನಿಗೆ ಸಮಾನವಾದ ಸ್ವಭಾವವುಂಟಾಗುತ್ತದೆ.
ಆದೇಶಿಸಲ್ಪಟ್ಟಿರುವ ಇತರ ಸಾಧನೆಗಳೆಂದರೆ; ಶಾಸ್ತ್ರವಿಧಿತ ಕರ್ಮ ಮಾಡುವಿಕೆ, ಜ್ಞಾನ, ದೇವರಲ್ಲಿ ಭಕ್ತಿ ಮತ್ತು ಶರಣಾಗತಿ ಮತ್ತು ಆಧ್ಯಾತ್ಮಿಕ ಗುರುವಿನಲ್ಲಿ ನಿಷ್ಠೆಯಿಂದ ಕೂಡಿದ ವಿಧೇಯತೆ.
================================
ವಿ.ಸೂ.:ಇದು ಸ್ವಾಮಿ ಹರ್ಷಾನಂದ ವಿರಚಿತ "The six systems of Hindu Philosophy - A Primer"ಯಲ್ಲಿಯ Vedanta Darshanaನದ ೧೦೦.೬ ರಿಂದ ೧೦೪ನೆಯ ಪುಟದ ಅನುವಾದದ ಭಾಗ.
=============================
Comments
ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by makara
ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by venkatesh

In reply to ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by ಗಣೇಶ

In reply to ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by partha1059
ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by makara
ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ...
In reply to ಉ: "ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ... by venkatb83