ಬಿಕ್ಷುಕ

ಬಿಕ್ಷುಕ



 ಬಿಕ್ಷುಕನೊಬ್ಬ ರಸ್ತೆಬದಿಯಲ್ಲಿ ಒಂದು ಕಲ್ಲಿನ ಚಪ್ಪಡಿಯಮೇಲೆ ಕುಳಿತು ಬಿಕ್ಷೆ ಬೇಡುತ್ತಿದ್ದಾನೆ. ಅದೇ ದಾರಿಯಲ್ಲಿ ಸನ್ಯಾಸಿಯೊಬ್ಬ ಬರುತ್ತಾನೆ.ಬಿಕ್ಷುಕನನ್ನು ನೋಡಿ -
 
"ಏನ್ ಮಾಡ್ತಾ ಇದೀಯಾ?"
 
-."ಬಿಕ್ಷೆ ಬೇಡ್ತಾ ಇದೀನಿ ಸ್ವಾಮಿ, ಮೂರು ದಿನಗಳಿಂದ ಹೊಟ್ಟೆಗಿಲ್ಲ.
 
-  ಮೂರು ದಿನಗಳಿಂದ ಇಲ್ಲೇ ಇದ್ದೀಯಾ? "
 
- ಹೌದು ಸ್ವಾಮಿ ಇಲ್ಲೇ ಪಕ್ಕದಲ್ಲಿ ರಾತ್ರಿಹೊತ್ತು ಮಲಗುವೆ. ಬೆಳಿಗ್ಗೆ ಬಿಕ್ಷೆ ಎತ್ತುವೆ."-
 
-  ನೀನು ಕುಳಿತಿದ್ದೀಯಲ್ಲಾ ಕಲ್ಲು ಅದನ್ನು ಜರುಗಿಸಿದ್ದೀಯಾ?"
 
-ಇಲ್ಲಾ ಸ್ವಾಮಿ, ನಾನೇಕೇ ಜರುಗಿಸಲಿ?
 
-ಇಲ್ಲೆಲ್ಲಾ  ಕಸ ಬಿದ್ದಿದೆಯಲ್ಲಾ, ಅದನ್ನು ಜರುಗಿಸಿ ಕಸ ತೆಗೆಯಬಾರದಿತ್ತಾ?
 
-ಕಸ ಇರ್ಲೀ ಬಿಡಿ ಸ್ವಾಮಿ, ಅದೇನ್ ಮಾಡೀತು?
 
-ಸ್ವಲ್ಪ ಕಲ್ಲು ಜರುಗಿಸುತ್ತೀಯಾ?
 
-ಯಾಕ್ ಸ್ವಾಮಿ?
 
-ಕಸ ಇದೆಯಲ್ಲಾ, ಅದೆಲ್ಲಾ ಎತ್ತಿ ಹಾಕೋಕೆ....ಎಂದ ಸನ್ಯಾಸಿ ತಾನೇ ಕಲ್ಲನ್ನು ಜರಗಿಸುತ್ತಾನೆ.  ಬಿಕ್ಷುಕನಿಗೆ ಆಶ್ಚರ್ಯ ಕಾದಿರುತ್ತೆ.  ತಾನು ಕುಳಿತಿದ್ದ ಕಲ್ಲಿನ ಕೆಳಗೆ  ಹಣದ ಪೆಟ್ಟಿಗೆ!!
 
ಹೌದು, ಆ ಬಿಕ್ಷುಕ ಮಾತ್ರವಲ್ಲಾ, ನಾವೂ ಕೂಡ ನಮ್ಮ  ಒಳಗಿರುವ ಐಶ್ವರ್ಯದ  ಪಟ್ಟಿಗೆಯ ಬಾಗಿಲನ್ನು ತೆರೆದೇ ಇಲ್ಲ.ಪೆಟ್ಟಿಗೆ ಬಾಗಿಲು ತೆರೆಯದೆ ,ತೆರೆಯಲು ಗೊತ್ತಾಗದೆ ಮನುಷ್ಯ ಅದೆಷ್ಟು  ಸಂಕಟ  ಪಡುತ್ತಾನೆ, ತನ್ನೊಳಗೇ ಇರುವ ಆನಂದವನ್ನು ಕಂಡುಕೊಳ್ಳಲಾರ! ತನ್ನೊಳಗಿರುವ  ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರವೆಂಬ ಕಸವನ್ನು ಗುಡಿಸಲಿಲ್ಲ.  ಪೆಟ್ಟಿಗೆಯ ಬಾಗಿಲು  ತೆರೆದು ಬಿಟ್ಟರೆ ಮನತಣಿಸುವ  ಆತ್ಮಾನಂದ!!ನಮ್ಮೊಳಗಿರುವ ಆನಂದವನ್ನು  ಕಂಡುಕೊಳ್ಳುವ ದಾರಿ ನಮಗೆ ಗೊತ್ತಿಲ್ಲ. ಅದಕ್ಕಾಗಿ  ಈ ಸನ್ಯಾಸಿಯಂತಹ ಗುರುವಿನ ಅವಶ್ಯಕತೆ ಇದೆ.

 

Rating
No votes yet

Comments