ಗಜಲ್
ಕವನ
ಎದೆಗವಚಿಕೊಂಡಿವೆ ಅದೆಷ್ಟೋ ಚಿಟ್ಟೆಗಳು ಹಾರಲಾಗದೆ
ಹ್ರುದಯಕ್ಕಂಟಿಕೊಂಡಿವೆ ಅದೆಷ್ಟೋ ಕನಸುಗಳು ಹಾರಲಾಗದೆ.
ಮುತ್ತಿನ ಕನಸು ಕಂಡವೆಷ್ಟೋ ಹಗಲುಗಳು
ಚಿಪ್ಪಿಗಂಟಿಕೊಂಡಿವೆ ಅದೆಷ್ಟೋ ಮನಸುಗಳು ಹಾರಲಾಗದೆ.
ಒಳನೋಟಕ್ಕೆಲ್ಲಾ ತಳಕು ಹಾಕುವ ಪಾತ್ರಗಳೆ
ನೆಲಕ್ಕಂಟಿಕೊಂಡಿವೆ ಅದೆಷ್ಟೋ ಭಾವಗಳು ಹಾರಲಾಗದೆ.
ಅನಿವಾರ್ಯತೆಗಷ್ಟೇ ಬೆಳಕಿನ ಕಿಂಡಿಗಳು ನಿಜ.
ಮನಸಿಗಂಟಿಕೊಂಡಿವೆ ಅದೆಷ್ಟೋ ಮುನಿಸುಗಳು ಹಾರಲಾಗದೆ.
ಶೂನ್ಯಕ್ಕೆಂದೆಂದೂ ಗೊಮ್ಮಟನೆ ಸರಿ ಅಂದುಕೊಂಡಿದ್ದಿದೆ.
ಧ್ಯಾನಕ್ಕಂಟಿಕೊಂಡಿವೆ ಅದೆಷ್ಟೋ ಅನುಭವಗಳು ಹಾರಲಾಗದೆ.
Comments
ಉ: ಗಜಲ್
ಉ: ಗಜಲ್
ಉ: ಗಜಲ್
ಉ: ಗಜಲ್