ಕೊನೆಯ ದಿನಗಳು ! ಮದುವೆಗಿನ್ನು ಕೆಲವೇ ದಿನಗಳು !

ಕೊನೆಯ ದಿನಗಳು ! ಮದುವೆಗಿನ್ನು ಕೆಲವೇ ದಿನಗಳು !

ಕವನ

  ನೀವು   ಒಮ್ಮೆ ಮದುಮಗರಾಗಿ

 

ಮೈ ಮಾತ್ರ ಹಸಿಯಾಗಿದೆ ಬೆಣ್ಣೆಯಂತೆ

ಕನಸಿನ್ನೂ ಬಿಸಿಯಾಗಿದೆ ಬೆಂಕಿಯಂತೆ

ಪಕ್ಕಕ್ಕಿಟ್ಟರೆ ಸಾಕು ಕರಗುವಂತೆ,

ಕೊನೆಗೊಳ್ಳುತ್ತಿದೆ ಒಂಟಿತನ

ಹತ್ತಿರವಾಗುತ್ತಿದೆ ಜಂಟಿತನ

ಮೌನಿಯಂತಿರುವಳೊ!

ಮಾರಿಯಂತಿರುವಳೊ!

ತೊಚದಂತಾಗಿದೆ ಜೀವನ

ಬಾಚುವಂತಾಗಿದೆ ತಲೇನ,

ಮರುಕಳಿಸದಾಗಿದೆ ಕೊನೆಯ ದಿನಗಳು

ಮರುಕಳಿಸುತ್ತಿವೆ ಕೆಲವು ಪದಗಳು

ಮೊದಲ ನೋಟ, ಮೊದಲ ಬೇಟಿ

ಮೊದಮೊದಲಾದ ಹಗಲುರಾತ್ರಿಗಳು

ಕೃಷ್ಣನಂತಿದ್ದವನು ರಾಮನಂತಾಗಬೆಕಾಗಿದೆ,

 

  ಒಂಟಿ ಜೀವ ಎಷ್ಟು ತಳ್ಲಿದರೂ

  ಮುನ್ನುಗ್ಗದ ಬಂಡಿ ಕೊಟ್ಟಿರುವೆ

   ಒಂಟಿಗೀಗ ಜಂಟಿಯಿಡುತ್ತಿರುವೆ

   ಬಂಡಿ ತಳ್ಳಲೊ 

  ಒಳಗೆ ಕೂತು ತಳ್ಳು ಎನ್ನಲೊ

  ತಿಳಿಯದೆ ಕಳೆಯುತಿರುವೆ

   ಕೊನೆಯ ದಿನಗಳ

    ಮದುವೆಗುಳಿದ ಕಲವೇ ದಿನಗಳ.

Comments