ಕನ್ನಡ ಎಂದದ್ದಕ್ಕೆ

ಕನ್ನಡ ಎಂದದ್ದಕ್ಕೆ

ನಾವು ಇಲ್ಲಿ ವೆಬ್ ಸೈಟ್‌ನಲ್ಲಿ ಕನ್ನಡದ ಪರವಾಗಿ ಹೋರಾಟ ತೀವ್ರವಾಗಿ ನಡೆಸುತ್ತಿದ್ದರೆ. ಮೊನ್ನೆ ನಮ್ಮ ಸಂಸ್ಥೆಯಲ್ಲಿ ಕನ್ನಡ ಎಂದಿದ್ದಕ್ಕೆ ಆದ ಘಟನೆ ಕೇಳಿ(ಓದಿ)

ಮೂನ್ನೆ ನಮ್ಮ ಸಂಗೀತ ಕ್ಲಾಸ್‌ಗೆ ಬರುವ ಪುಟಾಣಿಯೊಬ್ಬಳು ಬಂದು ವಿಚಾರಿಸಿದಳು. "ಮಿಸ್ ಟುಡೆ, ಡು ವಿ ಹ್ಯಾವ್ ಮ್ಯೂಸಿಕ್ ಕ್ಲಾಸ್?" ನಾನು ಅಲ್ಲೇ ಓಡಾಡುತ್ತಿದ್ದೇನಾದ್ದರಿಂದ (ಅದೇನು ಗ್ರಹಚಾರ ಕೆಟ್ಟಿತ್ತೋ ನನಗೆ) ಆಕೆಯನ್ನು ಕರೆದು ಕೇಳಿದೆ ." ನಿಮ್ಮ ಮನೇಲಿ ಯಾವ ಭಾಷೆ ಮಾತನಾಡುತ್ತೀರ ? " " ಮಮ್ಮಿ ಡ್ಯಾಡಿ ಎಲ್ಲ ಕನ್ನಡ ಮಾತಾಡ್ತಾರೆ."
"ಮತ್ತೆ ನೀನು"
"ಮಮ್ಮಿ ಹೇಳಿದಾರೆ ಇಂಗ್ಲೀಷ್‌ನಲ್ಲಿ ಮಾತಾಡು ಅಂತ. ಸ್ಕೂಲ್‌ನಲ್ಲೂ ಇಂಗ್ಲೀಷೆ ಮಾತಾಡೋದು" ಆಕೆ ಮುದ್ದು ಮುದ್ದಾಗಿ ಹೇಳಿದಾಗ ಅದೇನೋ ಉಪದೇಶ ಮಾಡೊ ಮೂಡು ಬಂತು ನನಗೆ. ಅವಳಿಗೆ ಕನ್ನಡದಲೇ ಮಾತಾಡುವಂತೆ ಹೇಳಿ ಮನವೊಲಿಸಿ ಕಳಿಸಿದೆ.

ರಾತ್ರಿಯಾಗುತಿದ್ದಂತೆ ನಂಗೆ ಫೋನ್ ಬಂತು. ಅದು ಆ ಮಗುವಿನ ತಾಯಿಯದು. "ಏನು ಮೇಡಮ್ ಇಂಗ್ಲೀಶ್ ಎಲ್ಲ ನಿಮ್ಮವರ ಗಂಟಾ. ನೀವು ಮಾತ್ರ ಹೀಗೆ ಮೇಲೆ ಬಂದಿದೀರ ನಮ್ಮ ಮಕ್ಕಳು ಕೂಡ ನಿಮ್ಮ ಹಾಗೆ ಆಗಬಾರದಾ?. ನಮ್ಮ ಸ್ವಪ್ನಂಗೆ ಇಂಗ್ಲಿಷ್ನಲ್ಲಿ ಮಾತಾಡೋದೆ ಬೇಡ ಅಂತೀರಂತೆ ನೀವು. ನಿಮ್ಮಂತಹವರು ಹೀಗೆ ಹೇಳಿಕೊಡಬಾರದು. "
ನನ್ನ ಯಾವ ಮಾತು ಅವಳ ಕಿವಿಗೆ ಬೀಳಲಿಲ್ಲ.

ಕೊನೆಗೊಮ್ಮೆ ಇನ್ನೊಮ್ಮೆ ಹೀಗೆ ಮಾಡಿದರೆ ಮಗಳನ್ನು ಕ್ಲಾಸ್ ಬಿಡಿಸುವುದಾಗಿ ಹೇಳಿ ಫೋನ್ ಕುಕ್ಕಿದಳು.

ಕನ್ನಡಕ್ಕಾಗಿ ಕೊರಳೆತ್ತಿದರೆ ಉರಳು ಎಂದುಕೊಂಡರೂ
ಹೋಗಲಿ ನನ್ನ ಮಗಳ ಬಾಯಾಲ್ಲಾದರೂ ಅಮ್ಮ ಅಪ್ಪ ಎಂದು ಕನ್ನಡವೇ ಬರುತ್ತದೆಯಲ್ಲ ಎಂದು ಖುಶಿ ಪಟ್ಟೆ.

Rating
No votes yet

Comments