ಕಾಣದಂತೆ ಮಾಯವಾಯಿತೋ

ಕಾಣದಂತೆ ಮಾಯವಾಯಿತೋ

ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿರುವ ಹಿನ್ನಲೆಯಲ್ಲಿ "ಕಾಣದಂತೆ ಮಾಯವಾದನೋ ನಮ್ಮ ಶಿವ" ಹಾಡಿನ ಸಾಹಿತ್ಯ ಬದಲಿಸಿ ಈ ಹಾಡನ್ನು ಬರೆದಿದ್ದೇನೆ.

ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ...

ಟೈಮಿನಲ್ಲಿ ಬರದೆ...ಯಾವಾಗಲೋ ಬಂದು...ಟೈಮಿನಲ್ಲಿ ಬರದೆ...ಯಾವಾಗಲೋ ಬಂದು...

ಕೈಯ್ಯ ಕೊಟ್ಟು ಮರೆಯಾಯಿತೋ..

ಹೊಲಗಳೆಲ್ಲ ಉತ್ತು ನಿಂತನೋ ನಮ್ಮ ರೈತ...ನೀರಿಗಾಗಿ ಕಾದು ನಿಂತನೋ...

ನಡುವೆ ನೀ ಒಮ್ಮೆ ಬಂದು ಆಸೆ ಚಿಗುರುವಂತೆ ಮಾಡಿ..

ಕಾಣದಂತೆ...ಮಳೆ... ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ...

ಕೆರೆಗಳೆಲ್ಲ ಖಾಲಿಯಾದವೋ, ನಮ್ಮ ಹೊಲ ನೀರಿಲ್ಲದೆ ಒಣಗಿ ಹೋದವೋ...

ಸಾಲ ಗೀಲ ಮಾಡಿಕೊಂಡು ಮಳೆಯ ನಂಬಿ ಕಾಯುವಾಗ

ಕಾಣದಂತೆ...ಮಳೆ... ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ...

ಬೋರಿನಲ್ಲು ನೀರೆ ಇಲ್ಲವೋ..ಅಂತರ್ಜಲ..ಎಷ್ಟು ದಿನ ಅಂತ ಬರುವುದೋ...

ಹೋಮ, ಹವನ, ಪೂಜೆ ಎಲ್ಲ ಮಾಡಿ ಕಾದು ಕುಂತ್ರು

ಕಾಣದಂತೆ...ಮಳೆ... ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ...

ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ...

ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ...

ಟೈಮಿನಲ್ಲಿ ಬರದೆ...ಯಾವಾಗಲೋ ಬಂದು...ಟೈಮಿನಲ್ಲಿ ಬರದೆ...ಯಾವಾಗಲೋ ಬಂದು...

ಕೈಯ್ಯ ಕೊಟ್ಟು ಮರೆಯಾಯಿತೋ..

ಕಾಣದಂತೆ ಮಾಯವಾಯಿತೋ..ಮುಂಗಾರು ಮಳೆ..ಮೋಡದಲ್ಲಿ ಮರೆಯಾಯಿತೋ...

Rating
No votes yet

Comments