ಚುಟುಕುಗಳು ( ಭಾಗ 2 )

ಚುಟುಕುಗಳು ( ಭಾಗ 2 )

ಕವನ

 


ಸಂಬಂಧವಿಲ್ಲದ್ದು


ಈ ಜಗದಲ್ಲಿ


ಯಾವುದೂ ಇಲ್ಲ


ಇಂದು


ನಿನ್ನೆಯ ಮುಂದುವರಿಕೆ


ನಾಳೆ


ಇಂದಿನ ಮುಂದುವರಿಕೆ


 


               ***


 


ನೆತ್ತರದ ಕಡಲಿಂದ


ಮಿಂದು ಬರುತಿಹ ಸೂರ್ಯ


ಕ್ಷಣಕೊಂದು ರೂಪ


ಗಗನದಲಿ ಚಿತ್ತಾರ


ಸೂರ್ಯ !


ನೀನೊಂದು ಬಣ್ಣಗಳ


ಕುಲುಮೆಯೆ ?


ಇಲ್ಲ


ಬಣ್ಣ ಬದಲಿಸುವ


ಊಸರವಳ್ಳಿಯೆ ?


 


      ***


 


ಹೂವರಳಿಸುವ ಬಳ್ಳಿ


ಫಲಬಿಡುವ ಮರ


ಅಂಕುರಗೊಳ್ಳುವ ಬೀಜ


ಬಿರಿದು ಅರಳುವ ಕವನ


ಇವೆಲ್ಲ ಸಹಜ


ಸೃಷ್ಟಿ ಕ್ರಿಯೆಗಳು


ಇದು ಬರಿ


ವೇದನೆ ಮಾತ್ರವೆ ಅಲ್ಲ


ಅದೊಂದು ಧನ್ಯತೆ


 


    ***

Comments