ವಾರಾಂತ್ಯಕ್ಕೊಂದು ಸಿನೆಮಾ - ೧
ನಮ್ಮವರು ಕಾಣೆಯಾದಾಗ ಹುಡುಕಿ ಸಿಗದಿದ್ದಾಗ ಬಹುಶಃ ಸ್ವಲ್ಪ ದಿನ ಅವರದೇ ನೆನಪಿನಲ್ಲಿರುತ್ತೇವೆ, ಆಮೇಲೆ ನಮ್ಮ ಕೆಲಸ ಕಾರ್ಯಗಳ ಗುಂಗಿನಲ್ಲಿ ನಿಧಾನವಾಗಿ ಮರೆತುಬಿಡುತ್ತೇವೆ. ಕೆಲವೊಮ್ಮೆ ಹಳೆಯ ಆಲ್ಬಮ್ ತೆಗೆದಾಗಲೋ, ಅಥವಾ ನಮ್ಮ ಬಂಧುಗಳು ಅವರನ್ನು ನೆನಪಿಸಿಕೊಂಡಾಗಲೋ ನಮ್ಮ ನೆನಪಿಗೆ ಬರುತ್ತಾರೆ ಅದಾದ ನಂತರ ಮತ್ತೆ ಅದರದೇ ಪುನರಾವರ್ತನೆ.
ಆದರೆ ಇಲ್ಲೊಂದು ನಾಯಿ, ಕೆಲಸಕ್ಕೆ ಹೋದ ತನ್ನ ಒಡೆಯನನ್ನು ೯ ವರ್ಷಗಳ ಕಾಲ ಅಂದರೆ ತಾನು ಸಾಯುವವರೆಗೂ ನಿರೀಕ್ಷೆ ಮಾಡುತ್ತಿತ್ತು ಎಂದರೆ ಅವರಿಬ್ಬರ ಬಾಂಧವ್ಯ ಎಷ್ಟಿತ್ತು ಎಂದು ಊಹಿಸಲಸಾಧ್ಯ. ಆ ನಾಯಿಯ ಹೆಸರು ಹಚಿಕೋ, ಅದು ಹುಟ್ಟಿದ್ದು ೧೯೨೩ ಜಪಾನಿನಲ್ಲಿ, ಅಕಿತಾ ಆ ನಾಯಿಯ ಸಂತತಿ. ಅದಕ್ಕೆ ಕೇವಲ ೨ ತಿಂಗಳಾಗಿದ್ದಾಗ ಅಂದರೆ ೧೯೨೪ರಲ್ಲಿ ಅದು ಪ್ರೊಫೆಸರ್ ಉಯೆನೋ ಮನೆಗೆ ಬಂತು. ಉಯೆನೋ ಅವರು ಟೋಕಿಯೋ ವಿಶ್ವವಿದ್ಯಾಲಯದ ಕೃಷಿ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದರು. ಪ್ರತಿ ದಿನವೂ ಉಯೆನೋ ಮನೆಯಿಂದ ಕಾಲೇಜಿಗೆ ರೈಲಿನಲ್ಲಿ ಹೋಗಬೇಕಾಗಿತ್ತು. ಹಚಿಕೋ ಬಂದಂದಿನಿಂದ ಅದು ತನ್ನ ಒಡೆಯ ಮನೆ ಬಿಟ್ಟ ತಕ್ಷಣ ಆತನ ಜೊತೆ ಹೊರಟು ಶಿಬುಯಾ ರೈಲು ನಿಲ್ದಾಣದ ಬಾಗಿಲ ಬಳಿ ಬಿಟ್ಟು ಮನೆಗೆ ಹಿಂದಿರುಗುತ್ತಿತ್ತು. ಸಂಜೆ ಉಯೆನೋ ಬರುವ ಸಮಯಕ್ಕೆ ಸರಿಯಾಗಿ ನಿಲ್ದಾಣದ ಬಾಗಿಲ ಬಳಿ ಬಂದು ನಿಲ್ಲುತ್ತಿತ್ತು. ಸುಮಾರು ೧ ವರ್ಷಗಳ ಕಾಲ ಹಚಿಕೋ ತನ್ನ ಒಡೆಯನನ್ನು ಬೆಳಗ್ಗೆ ಕಳುಹಿಸಿ ಸಂಜೆ ಸ್ವಾಗತಿಸುತ್ತಿತ್ತು. ರೈಲು ನಿಲ್ದಾಣಕ್ಕೆ ಬಂದು ಹೋಗುತ್ತಿದ್ದ ಪ್ರಯಾಣಿಕರಿಗೂ, ಅಲ್ಲಿದ್ದ ಅಂಗಡಿಯವರಿಗೂ ಹಚಿಕೋ ಚಿರಪರಿಚಿತವಾಗಿ ಹೋಗಿತ್ತು
ಆ ದಿನ ಮೇ ೧೯೨೫ರಂದು ಹಚಿಕೋ ಎಂದಿನ ಹಾಗೆ ರೈಲು ನಿಲ್ದಾಣದವರೆಗೆ ತನ್ನ ಒಡೆಯನ ಜೊತೆ ತೆರಳಿ ಮನೆಗೆ ಹಿಂದಿರುಗಿತ್ತು. ಸಂಜೆ ಎಂದಿನಂತೆ ತನ್ನ ಒಡೆಯನ ಜೊತೆ ಹಿಂದಿರುಗಲು ಕಾತರತೆಯಿಂದ ರೈಲು ನಿಲ್ದಾಣದ ಕಡೆ ತನ್ನ ಹೆಜ್ಜೆಯನ್ನು ಹಾಕಿತ್ತು. ತಾನು ಯಾವಾಗಲೂ ಕುಳಿತಿರುತ್ತಿದ್ದ ಜಾಗಕ್ಕೆ ಬಂದು ತನ್ನ ಒಡೆಯನ ಆಗಮನಕ್ಕೆ ಕಾಯುತ್ತಿತ್ತು. ಎಷ್ಟು ಹೊತ್ತು ಕಾದರೂ ಉಯೆನೋ ಬರಲೇ ಇಲ್ಲ. ಕಾಯ್ದು ಕಾಯ್ದು ಹಚಿಕೋ ಮನೆಗೆ ಹಿಂದಿರುಗಿತು. ವಿಶ್ವವಿದ್ಯಾಲಯದಲ್ಲಿ ಉಯೆನೋ ಹೃದಯಾಘಾತದಿಂದ ಮೃತಪಟ್ಟಿದ್ದ.
ಎಷ್ಟು ದಿನವಾದರೂ ಮನೆಯಲ್ಲಿ ತನ್ನ ಒಡೆಯನ ಸುಳಿವೇ ಇಲ್ಲದ್ದರಿಂದ ಹಚಿಕೋ ಮತ್ತೆ ಶಿಬುಯಾ ರೈಲು ನಿಲ್ದಾಣದ ಬಾಗಿಲ ಬಳಿ ಬಂದು ಕಾಯುತ್ತಾ ಕುಳಿತಿತ್ತು. ಹೀಗೆ ಪ್ರತಿದಿನ ಹಚಿಕೋ ಸಂಜೆ ಆದ ತಕ್ಷಣ ತನ್ನೊಡೆಯನ ನಿರೀಕ್ಷೆಯಲ್ಲಿ ಅಲ್ಲಿಗೆ ಬಂದಿರುತ್ತಿತ್ತು. ಸಂಜೆಯ ಹೊತ್ತು ಹಚಿಕೋ ಬಂದು ಪ್ರೋಫೆಸರ್ಗೆ ಕಾಯುತ್ತಾ ಕುಳಿತಿರುವುದು ನೋಡಿದ್ದ ಪ್ರಯಾಣಿಕರಿಗೆ ಪ್ರೊಫೆಸರ್ ಮರಣವಾದ ನಂತರವೂ ಅದು ಬರುತ್ತಿದ್ದದ್ದನ್ನ ನೋಡಿ ಆಶ್ಚರ್ಯವಾಗುತ್ತಿತ್ತು, ತಮ್ಮ ಹತ್ತಿರವಿದ್ದ ಚಾಕಲೇಟ್, ಸ್ವೀಟನ್ನು ಹಚಿಕೊಗೂ ಕೊಟ್ಟು ಹೋಗುತ್ತಿದ್ದರು.
ಹಚಿಕೋ ಬಗ್ಗೆ ಕೇಳಿ ತಿಳಿದ ಮತ್ತು ಅತಿಕಾ ನಾಯಿಯ ಸಂತತಿಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದ ಉಯೆನೋ ವಿದ್ಯಾರ್ಥಿಯೊಬ್ಬ ಅದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅದನ್ನು ಹಿಂಬಾಲಿಸಿದನು. ಎಲ್ಲಾ ವಿಷಯ ಅರಿತು ಹಚಿಕೋ ಬಗ್ಗೆ ತುಂಬಾ ಲೇಖನಗಳನ್ನು ಬರೆದನು. ಅಲ್ಲದೆ ಟೋಕಿಯೋದ ರಾಷ್ಟ್ರೀಯ ಪತ್ರಿಕೆಯಲ್ಲೂ ಸಹ ಹಚಿಕೋ ಬಗ್ಗೆ ಲೇಖನ ಬಂದಾಗ ಹಚಿಕೋ ಜಪಾನಿನ ಒಂದು ತಾರೆಯಂತೆ ಕಂಗೊಳಿಸಿತು. ಕುಟುಂಬ ಮತ್ತು ನಂಬಿಕೆಗೆ ಹಚಿಕೋ ಒಂದು ಉದಾಹರಣೆಯಾಗಿ ಜಪಾನಿನ ಜನರಿಗೆ ಗೋಚರಿಸಿತು.
ಸುಮಾರು ಒಂಬತ್ತು ವರ್ಷಗಳ ಕಾಲ ಮಳೆ, ಚಳಿ ಗಾಳಿಯನ್ನು ಲೆಕ್ಕಿಸದೆ ಹಚಿಕೋ ಪ್ರತಿದಿನವೂ ಉಯೆನೋ ನಿರೀಕ್ಷೆಯಲ್ಲಿತ್ತು. ವಯಸ್ಸಾದರೂ ಅದು ಕಾಯುತ್ತಾ ಕೊನೆಗೂ ತನ್ನ ಒಡೆಯ ಬಾರದೇ ಇದ್ದಾಗ ಒಂದು ದಿನ ಶಿಬುಯಾ ರಸ್ತೆಯಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿತ್ತು. ಒಂಬತ್ತು ವರುಷಗಳ ತರುವಾಯ ಅದು ತನ್ನ ಒಡೆಯ ಸೇರಿದ್ದ ಜಾಗವನ್ನು ತಲುಪಿತು.
ಹಚಿಕೋ ಸೇರಿ ಕೇವಲ ೩೦ರಷ್ಟಿದ್ದ ಅತಿಕಾ ನಾಯಿಯ ಸಂತತಿಯನ್ನು ಜಾಸ್ತಿ ಮಾಡಲು ಜಪಾನಿನವರಿಗೆ ಒಂದು ಮಾರ್ಗದರ್ಶನವಾಯಿತು ಹಚಿಕೋ. ಜಪಾನಿನ ಸರ್ಕಾರ ಹಚಿಕೋದ ಮೂರ್ತಿಯನ್ನು ಅದು ಯಾವಾಗಲೂ ಕುಳಿತುಕೊಳ್ಳುತ್ತಿದ್ದ ಶಿಬುಯಾ ರೈಲು ನಿಲ್ದಾಣದ ಜಾಗದಲ್ಲಿ ಪ್ರತಿಷ್ಠಾಪಿಸಿದೆ.
ಚಿತ್ರವನ್ನು ನೋಡುವಾಗ ಮನಸ್ಸಿನಲ್ಲಿ ಬಂದುಹೋಗುವ ಭಾವಗಳು, ಆ ಮೂಕ ಪ್ರಾಣಿಯ ಅಭಿನಯ, ಅದರ ಕಾಯುವಿಕೆ, ಉಯೆನೋ ಪಾತ್ರಧಾರಿ ಮತ್ತು ಆತನ ಪತ್ನಿಯ ಅಭಿನಯ, ಸ್ಟೇಶನ್ ಮಾಸ್ಟರ್, ಅಂಗಡಿಯಾತ, ಹಿನ್ನೆಲೆ ಸಂಗೀತ ಇವೆಲ್ಲವೂ ಚಿತ್ರ ನೋಡಿ ಎಷ್ಟೋ ದಿನಗಳ ನಂತರವೂ ನಿಮ್ಮ ಮನಸ್ಸನ್ನು ಬಿಟ್ಟು ಕದಲಲಾರವು.
ಚಿತ್ರದ ಹೆಸರು: ಹಚಿಕೋ: ಎ ಡಾಗ್ಸ್ ಸ್ಟೋರಿ
ನಿರ್ದೇಶಕ: ಲಸ್ಸೇ ಹಾಲ್ ಸ್ಟ್ರಾಂ
Comments
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
In reply to ಉ: ವಾರಾಂತ್ಯಕ್ಕೊಂದು ಸಿನೆಮಾ - ೧ by partha1059
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
In reply to ಉ: ವಾರಾಂತ್ಯಕ್ಕೊಂದು ಸಿನೆಮಾ - ೧ by venkatb83
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
In reply to ಉ: ವಾರಾಂತ್ಯಕ್ಕೊಂದು ಸಿನೆಮಾ - ೧ by partha1059
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
In reply to ಉ: ವಾರಾಂತ್ಯಕ್ಕೊಂದು ಸಿನೆಮಾ - ೧ by Manjegowda Sos…
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
In reply to ಉ: ವಾರಾಂತ್ಯಕ್ಕೊಂದು ಸಿನೆಮಾ - ೧ by swara kamath
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
In reply to ಉ: ವಾರಾಂತ್ಯಕ್ಕೊಂದು ಸಿನೆಮಾ - ೧ by H A Patil
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
In reply to ಉ: ವಾರಾಂತ್ಯಕ್ಕೊಂದು ಸಿನೆಮಾ - ೧ by makara
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
ಉ: ವಾರಾಂತ್ಯಕ್ಕೊಂದು ಸಿನೆಮಾ - ೧
In reply to ಉ: ವಾರಾಂತ್ಯಕ್ಕೊಂದು ಸಿನೆಮಾ - ೧ by kavinagaraj
ಉ: ವಾರಾಂತ್ಯಕ್ಕೊಂದು ಸಿನೆಮಾ - ೧